ಗ್ರಾಹಕರ ಸೇವೆಯಲ್ಲಿ ಎಸ್‌ಎಲ್‌ಎನ್ ಹೋಟೆಲ್ – ಚಾಮರಾಜಪೇಟೆಯಲ್ಲಿ ನೂತನ ಶಾಖೆ 3 & 4ನೇ ಮೇ 2022 ರಂದು

1960 ರಂದು ಧರ್ಮರಾಯಸ್ವಾಮಿ ವಾರ್ಡ್‌ದಲ್ಲಿ ಪ್ರಾರಂಭಗೊಂಡ ‘ ಮುದ್ದಪ್ಪ ಹೋಟೆಲ್ ‘ ಕಡಿಮೆ ದರದಲ್ಲಿ ತಿಂಡಿಗಳನ್ನು ನೀಡುತ್ತಾ ಬಂದಿರುತ್ತದೆ . ನಂತರ ಮಗ 1998 ರಲ್ಲಿ ಕಬ್ಬನ್ ಪೇಟೆಯಲ್ಲಿ ‘ ಎಸ್‌ಎಲ್‌ಎನ್‌ ಹೋಟೆಲ್ ‘ ಎಂದು ನಾಮಕರಣ ಮಾಡಿ ತಂದೆ ನಡೆಸಿಕೊಟ್ಟ ಮಾರ್ಗದರ್ಶನದಂತೆ ಹೋಟೆಲ್‌ನ್ನು ನಡೆಸಿಕೊಂಡು ಬರುತ್ತಿದ್ದಾರೆ . ಆ ಕಾಲದಲ್ಲೆ ತ್ರಿಮೂರ್ತಿ – ಚರ್ತುಮುಖಿ – ಪಂಚಮುಖಿ ‘ ಎನ್ನುವಂತೆ ‘ ಕಾಂಬೋ ಫುಡ್’ನ್ನು ರೂ .1.50 ಬೆಲೆಯಲ್ಲಿ ಶುರು ಮಾಡಿದ್ದು , ಅದು ಈಗ ಎಲ್ಲಾ ಕಡೆಗಳಲ್ಲಿ ಪ್ರಸಿದ್ದಿ ಪಡೆದುಕೊಂಡಿದೆ . ವಾಂಗಿಭಾತ್ , ತಟ್ಟೆಇಡ್ಲಿ , ಚಿತ್ರಾನ್ನ ಮತ್ತು ಪುಳಿಯೋಗಿರೆ ಹೆಚ್ಚು ಖ್ಯಾತಿಗೊಂಡಿದೆ . ಇಲ್ಲಿಗೆ ಬರುವವರು ಹೆಚ್ಚಾಗಿ ಇದನ್ನೆ ಬಯಸುತ್ತಾರೆ . ಕೆಲಸದವರು ಇಲ್ಲದೆ ಕುಟುಂಬದವರೇ ಸೇರಿಕೊಂಡು ಎಲ್ಲಾ ಕೆಲಸಗಳನ್ನು ಮಾಡುತ್ತಾ ಇಲ್ಲಿಯವರೆಗೂ ತಂದು ನಿಲ್ಲಿಸಿರುವುದು ವಿಶೇಷ .

ಅಪ್ಪ – ಅಮ್ಮನ ಹೆಸರಿನಲ್ಲಿ ಸೇವಾ ಟ್ರಸ್ಟ್ :  ತಂದೆ ಮುದ್ದಪ್ಪ , ತಾಯಿ ವೆಂಕಟಮ್ಮ ಹೆಸರಿನಲ್ಲಿ ಸೇವಾ ಟ್ರಸ್ಟ್‌ನ್ನು ತೆರೆಯಲಾಗಿದ್ದು ಇದರ ಮೂಲಕ ಅನೇಕ ಸೇವಾ ಸೌಲಭ್ಯಗಳನ್ನು ಗೌರವಾನ್ವಿತ ಗ್ರಾಹಕರುಗಳಿಗೆ ಒದಗಿಸುತ್ತಿದೆ . ಅದರಲ್ಲಿ ಮುಖ್ಯವಾಗಿ 14 ವರ್ಷದ ಒಳಗಿರುವವರು ಮತ್ತು 65 ವರ್ಷ ಮೇಲ್ಪಟ್ಟವರಿಗೆ ರೂ .15 ದರದಲ್ಲಿ ಯಾವುದಾದರೂ ತಿಂಡಿಗಳನ್ನು ಪಡೆಯಬಹುದಾಗಿದೆ . ವಿಶೇಷ ಖಾಯಿಲೆ ಇರುವ ರೋಗಿಗಳು ವೈದ್ಯಕೀಯ ಚೀಟಿ ತಂದು ತೋರಿಸಿದಲ್ಲಿ ಅವರಿಗೂ ವಯಸ್ಸಿನ ವಯೋಮಿತಿ ನೋಡದೆ , ಇವರುಗಳಿಗೂ ಅದೇ ದರದಲ್ಲಿ ಆಹಾರಗಳನ್ನು ನೀಡಲಾಗುವುದು . ಈಗಾಗಲೇ 45 ಕ್ಕೂ ಹೆಚ್ಚು ರೋಗಿಗಳು ಪ್ರತಿ ದಿನ ಸದರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ . ಮೇಲೆ ತಿಳಿಸಿದಂತೆ ಪ್ರಸಕ್ತ ಮಗ , ಮಕ್ಕಳು , ಸೊಸೆ ಅದರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತಿದ್ದಾರೆ . ಸಮಯ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರ ವರೆಗೆ ಇರುತ್ತದೆ .

ಚಾಮರಾಜಪೇಟೆಯಲ್ಲಿ ನೂತನ ಶಾಖೆ : ಇದೆಲ್ಲಾದರ ಪ್ರೇರಣೆಯಿಂದ ಗ್ರಾಹಕರ ಸೇವೆಯನ್ನು ವಿಸ್ತರಿಸುವ ಸಲುವಾಗಿ ‘ ಎಸ್‌ಎಲ್‌ಎನ್‌ ಹೋಟೆಲ್‌ ‘ ಚಾಮರಾಜಪೇಟೆಯ ಮೊದಲನೇ ಕ್ರಾಸ್ , ಬಾಟ ಷೋ ರೂಂ ಹತ್ತಿರ ಇಲ್ಲಿ ನೂತನ ಶಾಖೆಯನ್ನು ತೆರೆಯಲಾಗುತ್ತಿದೆ . ಇಲ್ಲಿಯೂ ಸಹ ಅದೇ ದರದಲ್ಲಿ ತಿಂಡಿಗಳನ್ನು ನೀಡಲಾಗುತ್ತದೆ . ಸಮಯ ಬೆಳಿಗ್ಗೆ 7 ರಿಂದ ಸಾಯಂಕಾಲ 7 ರ ವರೆಗೆ ತೆರೆದಿರುತ್ತದೆ . ಗ್ರಾಹಕರುಗಳು ಸಹ ಇಲ್ಲಿಯೂ ಸೇವೆಯನ್ನು ಸದುಪಯೋಗ  ಪಡಿಸಿಕೊಳ್ಳಬಹುದಾಗಿದೆ .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.