ಒಂದು ದಿನದ ಜ್ಯೋತಿಷ ಉಪನ್ಯಾಸ “ಶ್ರೀ ಸೂರ್ಯನಿಲ್ಲದ ಜಗತ್ತು ಶೂನ್ಯ”

ಶ್ರೀ ಸೂರ್ಯನಿಲ್ಲದ ಜಗತ್ತು ಶೂನ್ಯ . ಪ್ರಪಂಚದಲ್ಲಿ ಸೂರ್ಯನಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಅಸಾಧ್ಯ . ಜಗತ್ ಸಾಕ್ಷಿ , ಚಕ್ಷು , ಆತ್ಮವಾಗಿ ಸೃಷ್ಟಿ , ಸ್ಥಿತಿ , ಲಯಗಳಿಗೆ ಕಾರಣೀಭೂತನಾಗಿರುವ ರವಿಯು ನಮಸ್ಕಾರ ಪ್ರಿಯನಾಗಿದ್ದು ರವಿಗೆ ಪ್ರಪಂಚಾದ್ಯಂತ ಎಲ್ಲರೂ ಒಂದಲ್ಲೊಂದು ರೀತಿಯಲ್ಲಿ ಗೌರವವನ್ನು ಸೂಚಿಸುತ್ತಾರೆ . ದೇವಾನು ದೇವತೆಗಳೊಳಗೊಂಡಂತೆ ಎಲ್ಲರೂ ರವಿಯ ಪ್ರಭಾವದಿಂದ ಪ್ರಕಾಶಿಸುತ್ತಿದ್ದಾರೆ . ಸಾಕ್ಷಾತ್ ಮಹಾವಿಷ್ಣುವು ಸೂರ್ಯನಾರಾಯಣನಾಗಿ ಆರಾಧಿಸಲ್ಪಡುತ್ತಾನೆ . ಎಲ್ಲಾ ಕಾಲದಲ್ಲಿಯೂ ಒಂದಲೊಂದು ರೂಪದಿಂದ ಜಗತ್ತನ್ನು ಬೆಳಗುತ್ತಿರುತ್ತಾನೆ . ದೈನಂದಿನ ಚಟುವಟಿಕೆಗಳು ಸೂರ್ಯೋದಯದಿಂದಲೇ ಪ್ರಾರಂಭವಾಗುತ್ತದೆ . ವೇದಾಗಮ ಶಾಸ್ತ್ರಮರಾಣಾದಿಗಳಲ್ಲಿ ವಿವಿಧ ರೂಪಗಳಿಂದ ಸ್ತುತಿಸಲ್ಪಟ್ಟಿದ್ದಾನೆ . ಜ್ಯೋತಿಷ ಶಾಸ್ತ್ರಕ್ಕೆ ಇವನೇ ಪ್ರಧಾನ ಗ್ರಹ .

ಹಿಗಾಗಿ ವಿಶೇಷವಾಗಿ ರವಿಯನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ಉಪನ್ಯಾಸ ಸಂಕಿರಣಗಳು ನಡೆದಿರುವುದು ತೀರಾ ಅಪರೂ ಪ.ಕಾರ್ಯಕ್ರಮದ ದಿನದದಂದು ರವಿವಾರ , ೧ ನೇ ತಾರೀಕು ಜೊತೆಗೆ ಮೇಷರಾಶಿಯಲ್ಲಿ ಉಲ್ಟನಾಗಿರುತ್ತಾನೆ . ಒಂದು ರೀತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸರ್ವರಿಗೆ ಎಲ್ಲರೀತಿಯ ದೋಷಗಳೂ ನಿವಾರಣೆಯಾಗುವ ವಿಶೇಷ ದಿನ . ಈ ದಿಸೆಯಲ್ಲಿ ವಿಶ್ವಕರ್ಮ ಇನ್ಸಿಟ್ಯೂಟ್ ಆಫ್ ಅಸ್ಟ್ರಾಲ್ ಅಂಡ್ ರೀಸರ್ಚ , ಬೆಂಗಳೂರು ರವರ ವತಿಯಿಂದ ದಿನಾಂಕ ೧.೫.೨೦೨೨ ಭಾನುವಾರ ಮುಂಜಾನೆ ೯ ಗಂಟೆಯಿಂದ ಸಂಜೆ ೫ ರ ವರೆವಿಗೆ ವಿವಿಧ ಆಯಾಮಗಳಲ್ಲಿ ಜ್ಯೋತಿಷ ವಿದ್ವಾಂಸರುಗಳಿಂದ ರಾಜಕೀಯ , ಆರೋಗ್ಯ , ವಿವಾಹ , ಉದ್ಯೋಗ , ಪಿತೃದೋಷ , ಹಸ್ತಸಾಮುದ್ರಿಕ , ಮುಂತಾದ ವಿಚಾರಗಳನ್ನು ಜ್ಯೋತಿಷ ವಿದ್ವಾಂಸರುಗಳು ಪ್ರಸ್ತುತ ಪಡಿಸುತ್ತಾರೆ . ಕಾರ್ಯಕ್ರಮವನ್ನು ಆಸ್ಥಾನ ವಿದ್ವಾನ್ ಯೋಗಾನರಸಿಂಹರವರು ಉದ್ಘಾಟಿಸುತ್ತಾರೆ . ಇದರ ಸದುಪಯೋಗವನ್ನು ಜ್ಯೋತಿಷ ವಿದ್ಯಾರ್ಥಿಗಳಿಂದ ಹಿಡಿದು ಜಿಜ್ಞಾಸುಗಳ ವರೆಗೆ ಪ್ರತಿಯೊಬ್ಬರು ಪಡೆದುಕೊಳ್ಳಲು ಸದವಕಾಶ . ವಿಶೇಷವಾಗಿ ಆಗಮಿಸುವವರಿಗೆ ಉಚಿತ ಪ್ರವೇಶದೊಂದಿಗೆ ಲಘು ಭೋಜನದ ವ್ಯವಸ್ಥೆ ಇರುತ್ತದೆ . ಭಾಗವಹಿ ಸಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ . ಉಚಿತ ನೊಂದಣಿಯನ್ನು ಮೊಬೈಲ್ 7760526666 ಸಂಖ್ಯೆಯ ಮುಖಾಂತರ ಮಾಡಿಕೊಳ್ಳಬಹುದು . ಈ ವಿಚಾರವನ್ನು ಕಾರ್ಯದರ್ಶಿಗಳಾದ ಉದಯರವಿಯವರು ತಿಳಿಸಿರುತ್ತಾರೆ .

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಸಂಸ್ಥಾಪಕರು ಹಾಗೂ ಪ್ರಾಂಶುಪಾಲರು ಜ್ಯೋತಿರ್‌ವಿದ್ಯಾಸರಸ್ವತಿ ಡಾ ।। ಉದಯರವಿ 9945179646 , 7760526666

ಸ್ಥಳ : ಶ್ರೀ ರಾಮಾಂಜನೇಯ ಸ್ವಾಮಿ ದೇವಸ್ಥಾನ ( ಸಭಾಂಗಣ ) ವಿದಾನಸೌಧ , ಎಂ.ಇ.ಎಸ್.ಬಿಲ್ಡಿಂಗ್ ಪಕ್ಕ K.R. ಸರ್ಕಲ್ , ಬೆಂಗಳೂರು ಬೆಳಗ್ಗಿನ ಉಪಹಾರ : 7.30 ರಿಂದ 8.30 ಮಧ್ಯಾಹ್ನದ ಲಘು ಉಪಹಾರ : 1.00 ಗಂಟೆಗೆ ಬೆಳಗ್ಗೆ ಕಾಫಿ – ಟಿ : 11.30 ಮಧ್ಯಾಹ್ನ ಕಾಫಿ – ಟಿ : 03.30

ಪತ್ರಿಕಾ ಗೋಷ್ಠಿಯಲ್ಲಿ ಡಾ.ಯೋಗಾನರಸಿಂಹ, ಬಿ.ಆರ್.ಅಚ್ಚುತ ಪಟ್ಟಾಭಿರಾಮ ಬಟ್ಟರ್,ಬಿ.ಆರ್.ವೇಣುಗೋಪಾಲ ಬಟ್ಟರ್, ಡಾ. ಉದಯರವಿ.ಎಂ.ಎನ್ ಮತ್ತು ಗೋಪಿ ಸಮಾಜ ಸೇವಕರು ಉಪಸ್ತಿತರಿದ್ದರು.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.