ಗಣಿಯಲ್ಲಿ ಕೆಲಸ ಮಾಡುವ ಸುಮಾರು 20 ಸಾವಿರ ನಿವೃತ್ತ ಕೆಲಸಗಾರರು ವಾಸವಾಗಿರುವ ವಸತಿ ಗೃಹಗಳನ್ನು ಅವರ ಹೆಸರಿಗೆ ಮಾನ್ಯ ಮಾಡಲು ಮನವಿ

ನಮ್ಮೆಲ್ಲರ ನೆಚ್ಚಿನ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ದಲಿತ ಕಾರ್ಮಿಕ ವರ್ಗದವರಿಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದಾರೆ . ಪ್ರಧಾನ ಮಂತ್ರಿಗಳ ಕಛೇರಿಯು ಕೋಲಾರ ಕೋಲ್ಡ್ ಮೈನ್ 2005 ರಲ್ಲಿ ಮುಚ್ಚಲ್ಪಟ್ಟ ಸಮಯದಲ್ಲಿ ಕಂಪನಿಯ ಸೇವೆಯಲ್ಲಿದ್ದ ಎಲ್ಲಾ ಕಾರ್ಮಿಕರಿಗೆ ನಿವೃತ್ತಿಯ ಸೌಲಭ್ಯಗಳು ದೊರಕಿಸಿಕೊಡುವಂತೆ ಕೇಂದ್ರ ಸರ್ಕಾರದ ಗಣಿ ಇಲಾಖೆಯ ಕಾರ್ಯದರ್ಶಿಗಳಿಗೆ ಆದೇಶ ನೀಡಿದ್ದಾರೆ .

ನಾವುಗಳು ಕೋಲಾರದ ಗಣಿಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ವಸತಿ ಗೃಹಗಳನ್ನು ಮಾನ್ಯ ಮಾಡುವಂತೆ ಕೋರಿಕೊಳ್ಳುತ್ತೇವೆ . ಸುಮಾರು 33 ಸಾವಿರ ನಿವೃತ್ತ ಬಿ.ಜಿ.ಎಂ.ಎಲ್ ಕಾರ್ಮಿಕರ ನಿವೃತ್ತಿ ಹಾಗೂ ಸೇವಾ ಸೌಲಭ್ಯಗಳು 22 ವರ್ಷಗಳಿಂದ ತೀರ್ಮಾನವಾಗದೆ ಉಳಿದಿದ್ದು , ಇವರಲ್ಲಿ ಸುಮಾರು 800 ಕಾರ್ಮಿಕರು ನಿವೃತ್ತಿ ಹಾಗೂ ಸೇವಾ ಸೌಲಭ್ಯಗಳನ್ನು ಪಡೆಯದೇ ಮೃತರಾಗಿರುತ್ತಾರೆ .

ಗಣಿಯಲ್ಲಿ ಕೆಲಸ ಮಾಡುವ ಸುಮಾರು 20 ಸಾವಿರ ನಿವೃತ್ತ ಕೆಲಸಗಾರರು ವಾಸವಾಗಿರುವ ವಸತಿ ಗೃಹಗಳನ್ನು ಅವರ ಹೆಸರಿಗೆ ಮಾನ್ಯ ಮಾಡಬೇಕೆಂದು ಈ ವಿಷಯದ ಬಗ್ಗೆ ಕೇಂದ್ರ ಗಣಿ ಇಲಾಖೆಯ ಸಚಿವರಾದ ಶ್ರೀ ಪ್ರಹ್ಲಾದ ಜೋಷಿಯವರು ಬಹಳಷ್ಟು ಕಾಳಜಿ ಉಳ್ಳವರಾಗಿದ್ದಾರೆ .

ಜನಪ್ರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಯಡಿಯೂರಪ್ಪ , ಮಾಜಿ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರರವರುಗಳು ಬಹಳ ಶ್ರಮ ವಹಿಸಿ ಬಿ.ಜಿ.ಎಂ.ಎಲ್ ಸಂಸ್ಥೆಯ 35 ಸಾವಿರ ಎಕರೆ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ . ಇಲ್ಲಿ ಕೈಗಾರಿಕಾ ಸಂಕೀರ್ಣವನ್ನು ಸ್ಥಾಪಿಸಲು ತೀರ್ಮಾನಿಸಿರುತ್ತಾರೆ .

ಕೇಂದ್ರ ಸರ್ಕಾರದ ಗಣಿ ಇಲಾಖೆಯು ಬಿ.ಜಿ.ಎಂ.ಎಲ್ 12 ಸಾವಿರ ಎಕರೆ ಜಮೀನನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿದೆ . ಕರ್ನಾಟಕದ ಮುಖ್ಯಮಂತ್ರಿಯಾದ ಶ್ರೀ ಬಸವರಾಜ ಬೊಮ್ಮಾಯಿಯವರು ದಲಿತರ ಉದ್ಧಾರಕ್ಕೋಸ್ಕರ ಬಿ.ಜಿ.ಎಂ.ಎಲ್ ಸಂಸ್ಥೆಯ ಬಿ.ಜಿ.ಎ.ಎಲ್ . ಟೌನ್‌ಪ್ ಹಾಗೂ ಕೈಗಾರಿಕಾ ಸಂಕೀರ್ಣವನ್ನು ( ಕಾರಿಡಾರ್ ) ಕೂಡಲೇ ಸ್ಥಾಪಿಸುವುದು ಬಹಳ ಸೂಕ್ತವಾದದ್ದು . ಈ ಮಹತ್ ಕಾರ್ಯದಿಂದ ಕೋಲಾರದಲ್ಲಿ ವಾಸವಾಗಿರುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಲಿದೆ .

– ಡಾ . ಕೆ . ಸುಂದರಮೂರ್ತಿ

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.