ರಾಜ್ಯಮಟ್ಟದ “ ಕಾಯಕ ಯೋಗಿ ” ಪ್ರಶಸ್ತಿ ಪ್ರಧಾನ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉದ್ಘಾಟನೆ ೧ ರಂದು ಬೆಂಗಳೂರಿನಲ್ಲಿ -ಡಾ.ಹುಲಿಕಲ್ ನಟರಾಜ್

ಬೆಂಗಳೂರು : ಏ-28/2020 ಡಿಸೆಂಬರ್ 29 ರಂದು ಆರಂಭವಾದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು . ರಾಜ್ಯದಲ್ಲಿ ಮಾದರಿಯಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬಂದಿದ್ದು ಆದೇ ಮೇ 1ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದ ಸಭಾಂಗಣದಲ್ಲಿ ಕಾಯಕ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ “ ಕಾಯಕ ಯೋಗಿ ” ಪ್ರಶಸ್ತಿ ಪ್ರಧಾನ ಹಾಗೂ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಹೇಳಿದರು .

ಅವರು ಇಂದು ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಪರಿಷತ್ತು ಆರಂಭವಾಗಿ ಒಂದುವರೆ ವರ್ಷದಲ್ಲಿ ರಾಜ್ಯಾಧ್ಯಾಂತ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದು ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಹಂತದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು ನಿರಂತರವಾದ ಕಾರ್ಯಕ್ರಮಗಳನ್ನು ನಡೆಸುತ್ತ ಬರಲಾಗಿದೆ , ಈಗಾಗಲೇ ರಾಜ್ಯಾದ್ಯಂತ ೩೫ ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ್ದು ಆಧುನಿಕತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಸಂಸ್ಥೆಯನ್ನು ಸಂಘಟಿಸಲಾಗುತ್ತಿದೆ . ಆನ್‌ಲೈನ್ ಸದಸ್ಯತ್ವ , ಸಭೆ ಸಮಾರಂಭಗಳನ್ನು ನಡೆಸಲಾಗುತ್ತಿದೆ .

2021 , ಡಿಸೆಂಬರ್ 29 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಖ್ಯಾತ ಮೂಲಕ ವಿಜ್ಞಾನಿಗಳಾದ ಡಾ.ಎ.ಎಸ್.ಕಿರಣ್‌ಕುಮಾರ್‌ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ರಾಜ್ಯಮಟ್ಟದಲ್ಲಿ ಪ್ರಥಮ ಪ್ರತಿ ವೈಜ್ಞಾನಿಕ ಜಿಲ್ಲೆಗೊಬ್ಬರಂತೆ ಸಮ್ಮೇಳನದಲ್ಲಿ ಹೆಚ್‌ಎನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ , ಸಂಘಟಕರಿಗೆ ನಾಯಕತ್ವ ಕಾರ್ಯಗಾರವನ್ನು ನಡೆಸಲಾಗಿದೆ , ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬರಲಾಗಿದ್ದು ಮೇ ೧ ರಂದು ನಡೆಯುವ ಕಾಯಕ ದಿನಾಚರಣೆಯ ಕಾಯಕ ಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಣಿ ಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಇಸ್ರೋದ ಮಾಜಿ ಅಧ್ಯಕ್ಷರು ಹಾಗೂ ಹೆಸರಾಂತ ವಿಜ್ಞಾನಿಗಳಾದ ಡಾ.ಎ.ಎಸ್.ಕಿರಣ್‌ಕುಮಾರ್‌ ಉದ್ಘಾಟಿಸುವರು ,

ಸಂಸ್ಥೆಯ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಲಿದ್ದು , ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಎಸ್.ಪರಮಶಿವಯ್ಯ ಉದ್ಘಾಟಿಸಲಿದ್ದಾರೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಕಾಯಕಯೋಗಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ , ಖ್ಯಾತ ಹೃದಯ ತಜ್ಞ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಕಾರ್ಮಿಕ ದಿನದ ಕುರಿತು ಮಾತನಾಡುವರು .

ವೇದಿಕೆಯಲ್ಲಿ ಮಲೈಮಹದೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಯವಿಭವ ಸ್ವಾಮಿ , ಬಿಬಿಎಂಪಿ ಮಾಜಿ ಮೇಯರ್ ಗಂಗಾಂಭಿಕೆ ಮಲ್ಲಿಕಾರ್ಜುನ , ಮ್ಯಾಕ್ಸ್ ಪ್ರಾಪರಿಸ್ ಕಾರ್ಯನಿರ್ವಹಕ ನಿರ್ದೇಶಕ ಎಸ್.ಪಿ.ದಯಾನಂದ , ಬೃಂದಾವನ ಕಾಲೇಜಿನ ಡಾ.ರಾಜಶೇಖರ್ ಪಾಟೀಲ್ , ಖ್ಯಾತ ವೈದ್ಯ ಡಾ.ಟಿ.ಹೆಚ್.ಆಂಜನಪ್ಪ , ಉದ್ಯಮಿ ಹೆಚ್.ಎನ್.ರಮೇಶ್ , ರಾಷ್ಟ್ರೀ ಯ ಬಸವ ಪ್ರತಿಷ್ಠಾನದ ಎಸ್.ಎಂ.ಸುರೇಶ್ , ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವೈ.ಎನ್.ಶಂಕರೇಗೌಡ , ಡಾ.ಜಿ.ಎಸ್.ಶ್ರೀಧರ್ , ಕೆ.ಗೋವಿಂದರಾವ್ , ಆರ್.ರವಿ ಬಳಿಶಿವಾಲಯ , ವಿ.ಟಿ.ಸ್ವಾಮಿ , ರಾಜ್ಯ ಸಮಿತಿಯ ಎಸ್.ಕೆ.ಉಮೇಶ್ , ಅಶೋಕಕುಮಾರ್ , ಮಧುರಾ ಸಾಲಿಮಠ , ಇಂದುಮತಿ ಡಾ.ಬಿ.ಕೆ.ಸಾಮ್ಯಮಣಿ , ಎಸ್.ರೂಪಶ್ರೀ , ಡಿ.ಟಿ.ಅರುಣ್ ಕುಮಾರ್ , ಪಲ್ಲವಿ ಮಣಿ , ವೈ.ಎಸ್.ಸಿದ್ದರಾಜ್ , ಶ್ರೀರಾಮಚಂದ್ರ , ದಾನಿ ಬಾಬುರಾವ್ , ಚಿಕ್ಕಹನುಮಂತೇಗೌಡ ಮೊದಲಾದವರು ಉಪಸ್ಥಿತರಿರುವರು.

ರಾಜ್ಯ ಮಟ್ಟದ “ ಕಾಯಕಯೋಗಿ ” ಪ್ರಶಸ್ತಿ ಪುರಸ್ಕೃತರು : ರಾಜ್ಯ ಮಟ್ಟದಲ್ಲಿ ಮೊದಲ ಬಾರಿಗೆ ನಮ್ಮ ಸಂಸ್ಥೆಯು ಶ್ರಮ ಜೀವಿಗಳನ್ನು ಗುರುತಿಸಿ : “ ಕಾಯಕ ಯೋಗಿ ಪ್ರಶಸ್ತಿಯನ್ನು ರಾಜ್ಯದ ಪ್ರತಿ ಶೈಕ್ಷಣಿಕ ಜಿಲ್ಲಾವಾರು ಆಯ್ಕೆಮಾಡಲಾಗಿದ್ದು ವಿಶೇಷವಾಗಿದೆ . ಮಾಧ್ಯಮ ವಿಭಾಗದಲ್ಲಿ ನ್ಯೂಸ್ ೧೮ ನಮಿತಾ ಸೈನ್ , ಪಬ್ಲಿಕ್ ಮೂವೀಸ್‌ನ ಪ್ರವೀಣ್ ಲಿಂಗಾಪುರ , ಟಿವಿ ನ ಗಣೇಶ್ ಪ್ರಸಾದ್‌ , ಸುವಣ್ ನ್ಯೂಸ್‌ನ ಚಿದಾನಂದ ಮುದ್ದಿ , ಪ್ರಜಾವಾಣಿಯ ಎನ್.ಎಂ.ನಟರಾಜ್ , ಪ್ರಜಾ ಪ್ರಗತಿಯ ಸಾ , ಚ.ರಾಜಕುಮಾರ್‌ , ಡೈಲಿ ನ್ಯೂಸ್ , ಡಾ.ಶಿವರಂಜನ್ ಸತ್ಯಂಪೇಟೆ , ಕನ್ನಡಪ್ರಭದ ಅಪ್ರೋಜ್ ಖಾನ್ ಹಾಗೂ ಸಾರ್ವಜನಿಕವಾಗಿ ಬೆಂಗಳೂರಿನ ಕನಕ ಲಕ್ಷ್ಮೀ , ಲೋಕೇಶ್ ಎನ್ , ಪತ್ರೆಪ್ಪ , ಮಹಾದೇವಮ್ಮ , ಸಿ.ಮುನಿಯಪ್ಪ , ಸರಿತಾ , ಮಹೇಶ್ ಎಂ , ಚಿಕ್ಕವೆಂಕಟ ಬೆಂಗಳೂರು ಗ್ರಾಮಾಂತರ , ಲಾವಣ್ಯ ಎನ್ ತುಮಕೂರು , ಆರ್.ಡಿ.ಪಿಲಿಪ್ ಕೋಲಾರ , ಪಿ.ಗುರುರಾಜ್ ಆಚಾರ್ ದಾವಣಗೆರೆ , ನಾಗರಾಜ್ ಶಿವಮೊಗ್ಗ , ಚೌಡಪ್ಪ ಚಿಕ್ಕಬಳ್ಳಾಪುರ , ಕೆ.ತಿಪ್ಪೇಸ್ವಾಮಿ , ಚಿತ್ರದುರ್ಗ , ಅಲ್ಲಾಬಕ್ಷ ಇಮಾಮ್ ಸಾಬ ಸಗರ ವಿಜಯಪುರ , ಗದಿಗೆಪ್ಪ ನಾಡ್ಲಿ ಬಾಗಲಕೋಟೆ , ಬಸವರೆಡ್ಡಪ್ಪ ಮಲ್ಲರೆಡ್ಡಪ್ಪ ಮೇಟಿ ಶಿರಸಿ , ಡಾ.ಈಶ್ವರಪ್ಪ ಉತ್ತರ ಕನ್ನಡ , ಯಲ್ಲಪ್ಪ ಪಕೀರಪ್ಪ ರಾಯಚೂರ್ ಬೆಳಗಾವಿ , ಸಿರೇಶ್ , ಪರಪ್ಪ ಕಾಡೇಶಗೋಳ ಚಿಕ್ಕೋಡಿ , ಜಯಪ್ಪ ಎಸ್ . ಬಣರಾದ್ ಹಾವೇರಿ , ಡಾ.ಬಸವರಾಜ್ ಶಿವಪ್ಪ ಮೇಟಿ ಗದಗ , ಸುರೇಶ್ ರುದ್ರಪ್ಪ ಕನೋಜ್ ಧಾರವಾಡ , ಲಕ್ಷ್ಮೀ ಕಲ್ಲಪ್ಪ ಕೆಂಗಾಪೂರ ಹುಬ್ಬಳ್ಳಿ , ಡಾ.ವಿ.ಎನ್.ಗುರುದಾಸ್ , ಬೆಂಗಳೂರು , ಡಾ.ರಾಜಶೇಖರ್ ಡಿ.ಪುಟ್ಟಸ್ವಾಮಿ , ಮೈಸೂರು , ಮೋಹನ್ ಚಾಮರಾಜನಗರ , ಕುಮಾರ್‌ ಹೆಚ್.ಎನ್ ಕೊಡಗು , ರಮೇಶ್ ವಿ . ತುಮಕೂರು , ಮಹಾರಾಜ್ ಡಿಗ್ನಿ ಇಬ್ರಾಹ್ಮಾಂ ಪುರ ಯಾದಗಿರಿ , ರಾಜಕುಮಾರ್ ನಾಗೇಶ್ವರ್ ಬೀದರ್ , ಡಾ.ರುದ್ರಗೌಡ ಪೊಲೀಸ್ ಪಾಟೀಲ್ ರಾಯಚೂರ್ , ಮಲ್ಲಿಕಾರ್ಜುನ ರೆಡ್ಡಿ ಕೊಪ್ಪಳ , ವಸಂತಮ್ಮ ವಿಜಯನಗರ , ಕಡಬ ಶ್ರೀನಿವಾಸ ರೈ ದಕ್ಷಿಣ ಕನ್ನಡ , ಗಣೇಶ್ ಖಾರ್ವಿ ಉಡುಪಿ , ಅಪ್ಪಿ ಚಿಕ್ಕಮಗಳೂರು , ಮುತ್ತುರಾಜ್ ಹಾಸನ , ಲಕ್ಷ್ಮಣ ಕೆ ಬಳ್ಳಾರಿ , ಮನೋಹರ್ ಸಿ.ಪಿ ಮಂಡ್ಯ , ಶರಣ ಅತನೂರು ಕಲಬುರ್ಗಿ , ರಾಜಣ್ಣ ಮಧುಗಿರಿ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು .

ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಲಿದ್ದು ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ , ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಕೋರಿದ್ದಾರೆ .

ಮೇ -1 ಮಧ್ಯಾಹ್ನ 3ಕ್ಕೆ ಇದೇ ಸಭಾಂಗಣದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆಯಲಾಗಿದ್ದು ಎರಡು ಸಮಿತಿಯವರು ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರು ಸಭೆಗೆ ಭಾಗವಹಿಸಲು ಕೋರಿದ್ದಾರೆ .

ಸುದ್ದಿಗೋಷ್ಠಿಯಲ್ಲಿ ಡಿ.ಟಿ.ಅರುಣ್ ಕುಮಾರ್ , ಮಧುರಾ ಅಶೋಕ್ ದಾನಿ ಬಾಬುರಾವ್ , ಕುಮಾರ್ , ಚಿಕ್ಕಹನುಮಂತೇಗೌಡ ವಿ.ಸುರೇಶ್ , ಲಯನ್ ನಿರಂಜನ್ , ಜಗದೀಶ್ ಬೆಂಗಳೂರು ಇವರು ಉಪಸ್ಥಿತರಿದ್ದರು .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.