ಕ್ರೈಸ್ತ ಸಮುದಾಯಕ್ಕೆ ನೀಡುವ ಅನುದಾನದಲ್ಲಿ ಆಗುತ್ತಿರುವ ವಂಚನೆ

ಕ್ರೈಸ್ತ ಸಮುದಾಯಕ್ಕೆ ನೀಡುವ ಅನುದಾನದಲ್ಲಿ ಆಗುತ್ತಿರುವ ವಂಚನೆ

ರಾಜ್ಯ ಸರ್ಕಾರವು ಕ್ರೈಸ್ತ ಸಮುದಾಯಕ್ಕೆ ಬಿಡುಗಡೆ ಮಾಡುತ್ತಿರುವ ಅನುದಾನವನ್ನು ಚರ್ಚ್ ಮತ್ತು ಇನ್ನಿತರ ಕಾರ್ಯಗಳಲ್ಲಿ ಸರಿಯಾಗಿ ಬಳಕೆಯಾಗುತ್ತಿಲ್ಲ . ಅಲ್ಪಸಂಖ್ಯಾತ ಇಲಾಖೆಯಲ್ಲಿ ಮಧ್ಯವರ್ತಿಗಳ ( ದಲ್ಲಾಳಿಗಳ ) ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಚರ್ಚ್‌ಗಳ ವಿಷಯದಲ್ಲಿ ನ್ಯಾಯವಾಗಿ ಸಿಗಬೇಕಾದ ಅನುದಾನ ಸಿಗುತ್ತಿಲ್ಲ . ಕಾರಣ ಇಲ್ಲಿ ಪರ್ಸೆಟಿಜ್ ರೂಪದಲ್ಲಿ ಮಧ್ಯವರ್ತಿಗಳು ತುಂಬಾ ಮೋಸ ಮಾಡುತ್ತಿದ್ದು , ಈಗಾಗಲೇ ಕೆಲವರ ಮೇಲೆ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳಲಾಗಿದೆ . ಇಂತಹವರ ಮೇಲೆ ನಿಗಾ ಇಡಬೇಕು ಮತ್ತು ಇದರ ಜೊತೆಗೆ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ಇವರ ಜೊತೆಗೆ ಶಾಮಿಲಾಗಿ ಕೈ ಜೋಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದದ್ದು , ಇವರ ವಿರುದ್ಧವಾಗಿ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ಆಗ್ರಹಿಸುತ್ತೇವೆ . ಮತ್ತು ಕೂಡಲೇ ಇವರನ್ನು ವೃತ್ತಿಯಿಂದ ವಜಾಗೊಳಿಸಬೇಕು . ಹಾಗೂ ಇಂತಹ ಪರಿಸ್ಥಿತಿಯನ್ನು ಸರಿಮಾಡಬೇಕಾದರೆ ಪ್ರತಿ ಜಿಲ್ಲೆಯಲ್ಲಿಯೂ ಸಿಡಿಸಿ ಸದಸ್ಯರನ್ನು ಶೀಘ್ರವಾಗಿ ನೇಮಿಸಬೇಕು . ಹಾಗೂ ಕ್ರೈಸ್ತರ ಅಭಿವೃದ್ಧಿ ನಿಗಮ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ .

ಪ್ರಜ್ವಲ್ ಸ್ವಾಮಿ

ಸಂಸ್ಥಾಪಕ ಅಧ್ಯಕ್ಷರು

ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ನವ್ಯ ರಮೇಶ್, ಶಾಂತಕುಮಾರ್, ದೇವರಾಜ್, ಬೆಂಜಮಿನ್ ಮೆಂಡಿಸ್ ಮತ್ತು ಜಯ ಸೂರ್ಯ ಉಪಸ್ತಿತರಿದ್ದರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.