ಪತ್ರಿಕಾ ಪ್ರಕಟಣೆ

ಇಡೀ ರಾಜ್ಯಾದ್ಯಂತ ವೈದ್ಯಕೀಯ ಶಿಕ್ಷಣ , ಆರೋಗ್ಯ ಇಲಾಖೆಯಲ್ಲಿ ಹಾಗೂ ಪಾರ್ಮಸಿ ಇಲಾಖೆ ಮತ್ತು ನರ್ಸಿಂಗ್ ಈ ಎಲ್ಲಾ ಶಿಕ್ಷಣದಲ್ಲಿ ಆಗಿರುವ ಅವ್ಯವಹಾರ ನ್ಯೂನತೆಗಳನ್ನು ತಮ್ಮ ಮುಂದೆ ಇಡಲು ಬಯಸುತ್ತೇನೆ . 01 ) ನೀಟ್ ವ್ಯವಸ್ಥೆಯನ್ನು ರದ್ದು ಪಡಿಸಬೇಕು 02 ) ಮೊದಲು ಸಿ.ಇ.ಟಿ ಇತ್ತು ಇದರ ಮುಂದುವರೆದ ಭಾಗ ಅಂದರೆ ಉತ್ತರ ಭಾರತದಲ್ಲಿ ಪಿ.ಎಂ.ಟಿ ಪ್ರೀ ಮೆಡಿಕಲ್ ಟೆಸ್ಟ್ ಇತ್ತು ಅದರ ಮುಂದುವರೆದ ಭಾಗವನ್ನೇ ನೀಟ್ ಆಗಿದೆ . ನಮ್ಮ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಸಿಗುವುದಿಲ್ಲ ಬರೀ ಹೊರ ರಾಜ್ಯದವರಿಗೆ ಅನುಕೂಲವಾಗುತ್ತಿದೆ . ನೀಟ್ ಅನ್ನು ಈಗಾಗಲೇ ತಮಿಳುನಾಡು ರಾಜ್ಯದಲ್ಲಿ ರದ್ದು ಪಡಿಸಿದ್ದಾರೆ . 03 ) ಡೆಂಟಲ್ ಕಾಲೇಜುಗಳಲ್ಲಿ ಬಹಳಷ್ಟು ಸೀಟ್‌ಗಳು 2 ವರ್ಷದಿಂದ ಖಾಲಿ ಇವೆ . 04 ) ಏಕೈಕ ಇರುವಂತ ಸರ್ಕಾರಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರ ಹುದ್ದೆ ಒಬ್ಬ ಆಯೋಗ್ಯ ಮತ್ತು Ineligible ಆದ ಪ್ರಾಂಶುಪಾಲರು ಔಷದ ವಿಜ್ಞಾನ ಮಹಾವಿದ್ಯಾಲಯದಲ್ಲಿ ಇವರಿಗೆ ತಾತ್ಕಾಲಿಕವಾಗಿ ನೇಮಿಸಿ ಕಾಲೇಜಿನ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ . ಈಗಾಗಲೇ ಒಂದು ವರ್ಷದಿಂದ ಸರ್ಕಾರ ಎರಡೂ ಸಲ ಡಿ.ಪಿ.ಸಿ ಮಾಡಿ ಸೂಕ್ತ ವ್ಯಕ್ತಿಯ ಹೆಸರನ್ನು ಸರ್ಕಾರಕ್ಕೆ ಪ್ರಸ್ತಾಪ ಮಾಡಿರುತ್ತಾರೆ . ಮತ್ತು ಕೆ.ಎ.ಟಿ ಆದೇಶ ಮಾಡಿರುತ್ತಾರೆ . 05 ) ಡಿ ಪಾರ್ಮಸಿ ಬೋರ್ಡ ನಿಂದ ನಿಗದಿತ ಸಮಯದಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲ ನಡೆದರೂ 6 ಮತ್ತು 7 ತಿಂಗಳಿಗೆ ಫಲಿತಾಂಶ ನೀಡುತ್ತಾರೆ . 02 ) ಪಾರ್ಮಸಿ ಇಲಾಖೆಯಲ್ಲಿ ಪರೀಕ್ಷೆಗಳು 9 ಗಂಟೆಗೆ ಇದ್ದರೆ 12 ಗಂಟೆಯಾದರೂ ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ ರವಾನಿಸಿರುವುದಿಲ್ಲ 5 ಗಂಟೆಯವರೆಗೂ ನಡೆಸುತ್ತಾರೆ . 06 ) ಆಯುಷ್ ಇಲಾಖೆಯಲ್ಲಿ 10-15 ವರ್ಷ ಕಾಲೇಜಿಗೆ ಅನುಮತಿ ಕೊಟ್ಟಿದ್ದು 2-3 ತಿಂಗಳಾದರೂ ಸಹ ಜಿ.ಒ ಮಾಡಲಿಕೆ ಅಡಚಣೆ ಮಾಡುತ್ತಿದೆ . 07 ) ಬಿಹೆಚ್ಎಂಎಸ್ ಮತ್ತು ಬಿಯುಎಂಎಸ್ ಪರಿಸ್ತಿತಿಯೂ ಹೀಗೆ ಇದೆ . 08 ) ನರ್ಸಿಂಗೆ ಕೆ.ಇ ಯಿಂದ ಸರ್ಕಾರಿ ಪೀ 6200 ರೂ ಇದೆ ಆದರೆ ಸಂಸ್ಥೆಗಳು 25000 ದಿಂದ 75000 ರೂವರೆಗೆ ಹಣವನ್ನು ವಸೂಲಿ ಮಾಡುತ್ತಿವೆ . ಸರ್ಕಾರ ಈ ಕೂಡಲೇ ಕ್ರಮಕೈಗೊಳ್ಳಬೇಕು . 09 ) ನರ್ಸಿಂಗ್ ರಿಜಿಸ್ಟ್ರೇಷನ್ ಕೌನ್ಸಿಲಿಂಗ್ ಮಾಡಲಿಕ್ಕೆ ಬಡ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದು ಹೋಗುವುದು ಬಹಳ ಕಷ್ಟಕರವಾಗಿದ್ದು , ಉತ್ತರ ಕರ್ನಾಟಕ ಮತ್ತು ಮದ್ಯ ಕರ್ನಾಟಕದಲ್ಲಿ ಒಂದು ಕೆ.ಇ.ಎ ಸೆಂಟರ್ ಅನ್ನು ಮಾಡಬೇಕು . 10 ) ಎಂ.ಬಿ.ಬಿ.ಎಸ್ ಮುಗಿದ ತಕ್ಷಣ ಪಿ.ಜಿ ಸೀಟ್ ಗಳಿಗೆ ಅಂದರೆ DErmotology , Radiology , Artho , OBG ಈ ಮುಖ್ಯವಾದಂತಹ ಪಿ ಜಿ ಸೀಟ್ ಗಳನ್ನು ಸರ್ಕಾರ ಮಾರಾಟ ಮಾಡಿ ಸರ್ಕಾರದ ಕೋಟಾದಲ್ಲಿ ಅತ್ಯಂತ ಕಡಿಮೆ ಪಿ.ಜಿ ಆದಂತಹ ಅನಸ್ಥಿತೀಯ ಮೈಕ್ರೋಬಯಾಲಜಿ ಸರ್ಕಾರಿ ಕೋಟಾ ಇಟ್ಟುಕೊಂಡು ಮೇಲಿನ ಸೀಟ್ ಗಳನ್ನು ಕೋಟಿಗಟ್ಟಲೆ ವ್ಯವಹಾರಗಳನ್ನು ನಡೆಸಿ ತಮಗೆ ಬೇಕಾದಂತಹ ಕಾಲೇಜುಗಳಿಗೆ ಬಿಟ್ಟುಕೊಟ್ಟಿರುವುದು ಈಗಾಗಲೇ ಎದ್ದು ಕಾನುತ್ತಿದೆ ಸಂಬಂಧಪಟ್ಟಂತಹ ಮಂತ್ರಿಗಳಾದಂತಹ ಡಾ . ಕೆ.ಸುಧಾಕರ್ ರವರು , ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡನ್ನೂ ನಿಭಾಯಿಸುವ ಒಂದು ದೊಡ್ಡ ಅವ್ಯವಹಾರದ ಜಾಲವೇ ಮಂತ್ರಿಗಳಾಗಿದ್ದಾರೆ . 11 ) ಈ ಹಿಂದೆ ಮಾಜಿ ಸ್ಪೀಕರ್ ಮಾಜಿ ಮಂತ್ರಿಯಾದಂತಹ ರಮೇಶ್ ಕುಮಾರ್ ರವರು ಮತ್ತು ಶರಣ ಪ್ರಕಾಶ್ ಪಾಟೀಲ್ ರವರು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತಹ ಕಾಲೇಜುಗಳಿಗೆ ಅನುಮತಿ ಕೊಡುವುದಾಗಿರಬಹುದು ಅಥವಾ ಈ ಇಲಾಖೆಗೆ ಸಂಬಂಧಿಸಿದಂತಹ ಯಾವುದೇ ಹಗರಣವಿಲ್ಲದೆ ಯಶಸ್ವಿಯಾಗಿ ಈ ಇಲಾಖೆಯನ್ನು ನಡೆಸಿದರು . ಆದರೆ ಈಗಿರುವಂತಹ ಸಚಿವರು ಸಾವಿರಾರು ಕೋಟಿ ಹಗರಣವನ್ನು ಮಾಡುವ ನಿಟ್ಟಿನಲ್ಲಿ ಹೊರಟಿದ್ದಾರೆ . 12 ) ಉದಾಹರಣಗೆ ದಿವ್ಯ ಹಾಗರಗಿ ಇವರನ್ನು ರಾಜ್ಯ ನರ್ಸಿಂಗ್ ಕೌನ್ಸಿಲ್ ಮೆಂಬರ್ ಅನ್ನು ಮಾಡಿ ಸರ್ಕಾರಕ್ಕೆ ಹಣ ಹೊಡೆಯುವ ಒಂದು ತಂತ್ರವನ್ನು ರೂಪಿಸಿದ್ದಾರೆ . ಹೀಗೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಹಗರಣಗಳು ಎದ್ದು ಕಾಣುತ್ತಿವೆ . ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಗಮನ ಹರಿಸದಿದ್ದರೆ ಇಡೀ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ,
–
– ಮಹಾಂತೇಶ್ ಹಟ್ಟಿ,
ರಾಜ್ಯ ವಕ್ತಾರರು, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ
City Today News
9341997936