ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ “ಗೊರುಚ ಪ್ರಶಸ್ತಿ ಪ್ರದಾನ”

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ನೀಡುತ್ತಿರುವ ‘ ಗೊರುಚ ಶರಣ ಪ್ರಶಸ್ತಿ ‘ ಮತ್ತು ‘ ಗೊರುಚ ಜಾನಪದ ಪ್ರಶಸ್ತಿ ‘ ಪ್ರದಾನ ಸಮಾರಂಭ ಇದೇ ದಿನಾಂಕ 18.5.2022 ರ ಬುಧವಾರದಂದು ಚಿತ್ರದುರ್ಗದ ತ.ರಾ.ಸು. ರಂಗಮಂದಿರ , ಮದಕರಿ ನಾಯಕ ವೃತ್ತದಲ್ಲಿ ಬೆಳಗ್ಗೆ 11.00 ಕ್ಕೆ ನಡೆಯುತ್ತದೆ .

ಚಿತ್ರದುರ್ಗದ ಜಗದ್ಗುರು ಪೂಜ್ಯ ಡಾ . ಶ್ರೀ ಶಿವಮೂರ್ತಿ ಮುರುಘಾ ಶರಣರ ಮಹಾಸ್ವಾಮಿಗಳ ನೇತೃತ್ವದಲ್ಲಿ , ಚಿತ್ರದುರ್ಗದ ಶಾಸಕರಾದ ಶ್ರೀ ತಿಪ್ಪಾರೆಡ್ಡಿ ಅವರು ಮತ್ತು ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಎಸ್‌ . ಮನ್ನಿಕೇರಿ , ಭಾ.ಆ.ಸೇ. ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ . ಪರಿಷತ್ತಿನ ಅಧ್ಯಕ್ಷರಾದ ಪ್ರೊ . ಮಲೆಯೂರು ಗುರುಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ . ದತ್ತಿ ದಾನಿಗಳೂ , ಪರಿಷತ್ತಿನ ಗೌರವ ಸಲಹೆಗಾರರಾದ ನಾಡೋಜ ಡಾ . ಗೊ.ರು. ಚನ್ನಬಸಪ್ಪರವರು ಉಪಸ್ಥಿತರಿರುತ್ತಾರೆ .

2021 ರ ಸಾಲಿಗೆ ಶ್ರೀ ಜಿ.ಎ. ಶಿವಲಿಂಗಯ್ಯ , ಶ್ರೀ ಜೀನಹಳ್ಳಿ ಸಿದ್ಧಲಿಂಗಪ್ಪ , ಡಾ . ವಿಜಯಾದೇವಿ ಮತ್ತು ಡಾ . ಎನ್.ಎನ್ . ಚಿಕ್ಕಮಾದು ಅವರು ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ . ‘ ಗೊರುಚ ಶರಣ ಪ್ರಶಸ್ತಿ ಮತ್ತು ಗೊರುಚ ಜಾನಪದ ಪ್ರಶಸ್ತಿಗಳಿಗೆ ತಲಾ 25,000 / ರೂಪಾಯಿಗಳು ಮತ್ತು ಗ್ರಂಥ ಪ್ರಶಸ್ತಿಗೆ ತಲಾ 10,000 / -ರೂಪಾಯಿಗಳ ಗೌರವಧನದೊಂದಿಗೆ ಪ್ರಶಸ್ತಿ ಫಲಕ ನೀಡಲಾಗುತ್ತದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಎಸ್.ಬಿ. ಅಂಗಡಿ ಪ್ರಧಾನ ಕಾರ್ಯದರ್ಶಿಯವರು ತಿಳಿಸಿದರು

ಪತ್ರಿಕಾ ಗೋಷ್ಠಿಯಲ್ಲಿ ಎಸ್.ಬಿ.ಅಂಗಡಿ, ಬಸವರಾಜ ಕುರುವ ಮತ್ತು ಹೊಣ್ಣಲಿಂಗಯ್ಯ ನವರು ಉಪಸ್ತಿತರಿದ್ದರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.