
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡುಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ದಿನ ಹಬ್ಬದ ವಾತಾವರಣದ ಸಡಗರ ವಿಶೇಷವಾಗಿ ಮಂತ್ರಾಲಯ ಮಠಾಧೀಶರಾದ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ್ತ ರಾದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥಶ್ರೀಪಾದರ ದಶಮಾನೋತ್ಸವದ ಅಂಗವಾಗಿ ಶ್ರೀಮಠದಲ್ಲಿಬೆಳಗಿನಜಾವದಲ್ಲಿ ಹೋಮ ಹವನ ಪೂಜೆಗಳು ಜಪ ತಪ ಪಾರಾಯಣಾದಿಗಳು ಅನೇಕ ಪಂಡಿತ ವಿದ್ವಾಂಸರಿಂದ ನೆರವೇರಿತು.ತದನಂತರ ವ್ಯಾಸ ಪೂರ್ಣಿಮಾ ಪ್ರಯುಕ್ತ ಪರಮ ಪೂಜ್ಯಶ್ರೀಪಾದರು ಸಂಸ್ಥಾನದ ಶ್ರೀಮನ್ಮೂಲರಾಮಚಂದ್ರ ದೇವರ ಪೂಜೆಯನ್ನು ಪ್ರಾತಃ ಕಾಲದಲ್ಲಿ ನೆರವೇರಿಸಿ, ನಂತರ ಶ್ರೀ ಗುರು ಸಾರ್ವಭೌಮ ವಿದ್ಯಾ ಪೀಠದ ವಿದ್ಯಾರ್ಥಿಗಳ ಪರೀಕ್ಷೆ ಯನ್ನು ಹಲವಾರು ಪಂಡಿತರ ಸಮ್ಮುಖದಲ್ಲಿ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಗಳಿಗೆ ಫಲ “ಮಂತ್ರಾಕ್ಷತೆ”ಯೊಂದಿಗೆ ಬಂಗಾರದ ಉಂಗುರವನ್ನು ಆಶೀರ್ವಾದ ಪೂರ್ವಕ ಅನುಗ್ರಹಿಸಿ ಆಶೀರ್ವದಿಸಿದರು. ನಂತರ ವಿದ್ವಾಂಸರಿಗೂ ಸಂಭಾವನೆ ಶೇಷವಸ್ತ್ರ ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು ಅನಂತರ ಹಲವಾರು ರಾಯರ ಗ್ರಂಥದ ಪುಸ್ತಕ ಬಿಡುಗಡೆ ಗೊಳಿಸಿದರು ಪಂಡಿತರಿಗೂ ಭಕ್ತರಿಗೂ ಪಂಚರತ್ನ ಮಂಡಿಗೆ ಸಹಿತ ತೀರ್ಥಪ್ರಸಾದದ ವ್ಯವಸ್ಥೆಯನ್ನು ಮಾಡಿಸಿದ್ದರು ಪ್ರತಿಯೊಬ್ಬ ಭಕ್ತರು ಪ್ರಸಾದ ವನ್ನು ಸ್ವೀಕರಿಸಿ ಗುರುಗಳನ್ನು ಅನುಗ್ರಹಕ್ಕೆ ಪಾತ್ರರಾದರು ,

ಗುರುಗಳ ಪಟ್ಟಾಭಿಷೇಕೋತ್ಸ ವದ ನಿಮಿತ್ತ ಪರಮಪೂಜ್ಯ ಶ್ರೀ ಪಾದರಿಗೆ “ಮುತ್ತು ನವರತ್ನಗಳ” ಅಭಿಷೇಕ” ಬಂಗಾರದ ಕಿರೀಟ, ಬಿನ್ನವತ್ತಳೆ ಸಮರ್ಪಣೆ ಹಾಗೂ ವೇದಮಂತ್ರ ಚಂಡೆ ವಾದನ ದೊಂದಿಗೆ, ಪುಷ್ಪವೃಷ್ಟಿ ನೆರವೇರಿತು, ಇತರೆ ಸಂಘ ಸಂಸ್ಥೆಗಳಿಂದ ಮತಗಳಿಂದ ಶ್ರೀಗಳಿಗೆ ಮಾಲಾರ್ಪಣೆ ಸಲ್ಲಿಸಿ ಗೌರವ ಸಲ್ಲಿಸಿದರು

ನಂತರ ಶ್ರೀಪಾದರು ಅನುಗ್ರಹದ ಆಶೀರ್ವಾದದಲ್ಲಿ ಇದೆಲ್ಲವೂ ಭಕ್ತರು ನಮಗೆ ಸಮರ್ಪಿಸಿದ್ದಾರೆ ಆದರೆ ಇದೆಲ್ಲವೂ ನಮ್ಮ ಮುಖಾಂತರ ಶ್ರೀರಾಮ ದೇವರಿಗೆ ಸಮರ್ಪಣೆ ಮಾಡಿದ್ದಾರೆ ಎಂಬ ಭಾವನೆ ಯೊಂದಿಗೆ ನಾವು ಸ್ವೀಕರಿಸಿ ಭಕ್ತಾದಿಗಳಿಗೆ ಶ್ರೀಹರಿ- ವಾಯುಗುರುಗಳ ಅನುಗ್ರಹ ಸದಾ ಇರಲಿ ಎಂದು ಆಶೀರ್ವದಿ ಸಿದರು,
City Today News
9341997936