ರಾಸಾಯನಿಕ ಗೊಬ್ಬರವನ್ನೇ ಅವಲಂಬಿಸಿರುವುದರಿಂದ ರೈತನ ಖರ್ಚು ಹೆಚ್ಚಾಗಿ , ಮಾರುಕಟ್ಟೆಯ ದರಗಳ ಏರು – ಇಳಿತಗಳಿಂದಾಗಿ ಸಾಲದ ಸುಳಿಗೆ ಸಿಕ್ಕಿ ಒದ್ದಾಡುತ್ತಿದ್ದಾನೆ

ನಮ್ಮ ಭಾರತ ಕೃಷಿ ಆಧಾರಿತ ದೇಶ ಶೇಕಡ 70 ಕ್ಕಿಂತಲೂ ಹೆಚ್ಚು ಜನ ವ್ಯವಸಾಯವನ್ನೇ ಅವಲಂಬಿಸಿರುತ್ತಾರೆ . ದಿನೇ ದಿನೇ ರಾಸಾಯನಿಕ ಕೃಷಿಯಿಂದಾಗಿ ಭೂಮಿ ಬರಡಾಗುತ್ತಿದೆ . ಇಳುವರಿ ಗಣನೀಯವಾಗಿ ಇಳಿಮುಖವಾಗುತ್ತಿದೆ . ಇಳುವರಿಗಾಗಿ ರೈತರು ಹೆಚ್ಚು ಹೆಚ್ಚಾಗಿ ರಾಸಾಯನಿಕ ಗೊಬ್ಬರವನ್ನೇ ಅವಲಂಬಿಸಿರುವುದರಿಂದ ರೈತನ ಖರ್ಚು ಹೆಚ್ಚಾಗಿ , ಮಾರುಕಟ್ಟೆಯ ದರಗಳ ಏರು – ಇಳಿತಗಳಿಂದಾಗಿ ಸಾಲದ ಸುಳಿಗೆ ಸಿಕ್ಕಿ ಒದ್ದಾಡುತ್ತಿದ್ದಾನೆ . ಇದನ್ನು ಏದುರಿಸಲಾಗದೆ ಯುವಜನತೆ ನಗರಗಳತ್ತ ವಲಸೆ ಹೋಗುತ್ತಿದ್ದಾರೆ .

ಈ ನಡುವೆ ಕೇಂದ್ರ ಸರ್ಕಾರ ರಸಗೊಬ್ಬರಗಳ ಸಹಾಯಧನವನ್ನು ಹೆಚ್ಚಿಸಲು ಹೊರಟಿದೆ . ಇದರಿಂದಾಗಿ ದೇಶಕ್ಕೆ ಇನ್ನಷ್ಟು ಹೊರೆಯಾಗುತ್ತಿದೆ ಹಾಗೂ ರಾಸಾಯನಿಕ ಗೊಬ್ಬರಗಳ ಕಂಪನಿಗಳಿಗೆ ಹಾಲು ಅನ್ನ ಉಂಡಂತಾಗಿದೆ . ರಸಗೊಬ್ಬರ ಸಹಾಯಧನದಿಂದಾಗಿ ದರದಲ್ಲಿ ಇಳಿಕೆಯಾಗಿ ಒಳಸುರಿಗಳು ಹೆಚ್ಚಾಗುವ ಸಾಧ್ಯತೆ ಇದೆ . ಉದಾಹರಣೆಗೆ ಒಂದು ಎಕರೆ ಕಬ್ಬಿನ ಬೆಳೆಗೆ ಕಡಿಮೆ ಎಂದರೆ 20 ಚೀಲ ರಸಗೊಬ್ಬರವನ್ನು ರೈತ ಇಂದು ಬಳಸುತ್ತಿದ್ದಾನೆ . 20 ಚೀಲಕ್ಕೆ ಸರಾಸರಿ 40,000 / – ದಿಂದ 50,000 / -ರೂಪಾಯಿಗಳು ರೈತರ ಹೆಸರಿನಲ್ಲಿ ಕಂಪನಿಗಳ ಪಾಲಾಗುತ್ತಿದೆ . ಇದರ ಬದಲು ರಸಗೊಬ್ಬರವನ್ನು ಮುಕ್ತ ಮಾರುಕಟ್ಟೆಗೆ ಬಿಟ್ಟು , ಸಹಾಯಧನವನ್ನು ರೈತನಿಗೆ ನೇರವಾಗಿ ಕೃಷಿ ಉತ್ಪನ್ನಗಳ ಮಾನದಂಡದ ಆಧಾರದ ಮೇಲೆ ಕೊಡುವುದು ಒಳ್ಳೆಯದು . ಇದರಿಂದಾಗಿ ರೈತನಿಗೆ ರಸಗೊಬ್ಬರಗಳ ಹೊರೆ ಗೊತ್ತಾಗುತ್ತದೆ . ಇದನ್ನು ಪರಿಗಣಿಸಿ ರೈತರ ಈ ದುಬಾರಿ ರಸಗೊಬ್ಬರದ ಬದಲಾಗಿ ನೈರ್ಸಗಿಕ ಕೃಷಿಗೆ ಕ್ರಮೇಣ ಆಕರ್ಷಿತನಾಗುತ್ತಾನೆ . ಏಕೆಂದರೆ , ಯಾವುದೇ ಮನುಷ್ಯನಿಗೆ ಸಹಾಯಧನದ ರೂಪದಲ್ಲಿ ಸಿಕ್ಕಂತಹ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಲು ಹಿಂಜರಿಯುತ್ತಾನೆ . ಇದು ಮನುಷ್ಯ ಸಹಜ ಗುಣ , ಅವನಿಗೆ ಹಣದ ಮೌಲ್ಯ ಗೊತ್ತು ತನ್ನ ಜೇಬಿನಿಂದ ಹಣ ನಿರುಪಯುಕ್ತವಾಗಿ ಹರಿಯುವುದನ್ನು ಮನುಷ್ಯ ಸಾಮಾನ್ಯವಾಗಿ ಸಹಿಸುವುದಿಲ್ಲ . ಆಗ ರೈತ ರಸಗೊಬ್ಬರಗಳನ್ನು ಮಿತವಾಗಿ ಬಳಸಲು ಶುರುಮಾಡಿ ಶೂನ್ಯ ಬಂಡವಾಳವಾದ ನೈಸರ್ಗಿಕ ಕೃಷಿಯತ್ತ ದಿನೇ ದಿನೇ ಆಕರ್ಷಿತನಾಗುತ್ತಾನೆ . ಇದರಿಂದಾಗಿ ಸಮಾಜಕ್ಕೆ ವಿಷಮುಕ್ತ ಆಹಾರ ಸಿಕ್ಕಂತಾಗುತ್ತದೆ . ಹಾಗೂ ರಸಗೊಬ್ಬರಗಳ ಸಹಾಯಧನ ಕಂಪನಿಗಳ ಪಾಲಾಗದಂತೆ ದೇಶಕ್ಕೆ ಉಳದು ವಿದೇಶಿ ವಿನಿಮಯ ಉಳಿದಂತಾಗುತ್ತದೆ . ಇದೇ ಹಣವನ್ನು ನೈಸರ್ಗಿಕ ಕೃಷಿಗೆ ಪ್ರಮುಖವಾಗಿ ಬೇಕಾದಂತಹ ದೇಶಿತಳಿ ಗೋವುಗಳನ್ನು ಕೊಳ್ಳಲು ರೈತನಿಗೆ ಸಹಾಯಧನವಾಗಿ ಕೊಡಬಹುದು ಹಾಗೂ ಗೋಶಾಲೆಗಳ ಅಭಿವೃದ್ಧಿಗೆ ಬಳಸಬಹುದು . ಎಲ್ಲಿ ದೇಶಿ ಗೋವುಗಳ ಸಂಖ್ಯೆ ಹೆಚ್ಚಾಗುವುದೋ ಅಲ್ಲಿ ಒಳ್ಳೆಯ ಪರಿಸರ , ಒಳ್ಳೆಯ ಗಾಳಿ ಮತ್ತು ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ . ಈಗಾಗಲೇ ಕಳೆದ 20 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಸಾವಿರಾರು ರೈತರು ನೈಸರ್ಗಿಕ ಕೃಷಿಯಿಂದ ಭತ್ತ , ಕಬ್ಬು , ಬಾಳೆ , ರಾಗಿ ಹಾಗೂ ತೋಟಗಾರಿಕಾ ಬೆಳೆಗಳು , ವಾಣಿಜ್ಯ ಬೆಳೆಗಳು ಹೀಗೆ ಎಲ್ಲಾ ತರಹದ ಕೃಷಿ ಉತ್ಪನ್ನಗಳಿಗೆ ಯಾವುದೇ ರಸಗೊಬ್ಬರ , ಕಳೆನಾಶಕ , ಕೀಟನಾಶಕಗಳನ್ನು ಬಳಸದ ಹೆಚ್ಚಿನ ಇಳುವರಿಯನ್ನು ಪಡೆಯುತ್ತಿದ್ದಾರೆ . ಇಂತಹ ರೈತರಿಗೆ ಸರ್ಕಾರದಿಂದ ಯಾವುದೇ ಸಹಾಯ ಸಹಕಾರ ಸಿಗುತ್ತಿಲ್ಲ . ಆ ರೈತರನ್ನು ಗುರುತಿಸಿ ಸಹಾಯಧನವನ್ನು ಕೊಟ್ಟರೆ ಬಹಳ ಅನುಕೂಲವಾಗುತ್ತದೆ . ಇದನ್ನು ಹಲವಾರು ರೈತರು ಗುರುತಿಸಿ ನೈಸರ್ಗಿಕ ಕೃಷಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ .

ಭಾರತೀಯ ಕಿಸಾನ್ ಸಂಘವು ದೇಶದಾದ್ಯಂತ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸದೃಢವಾಗಿ ಕಾರ್ಯನಿರ್ವಹಿಸುತ್ತಿದೆ . ಈಗಾಗಲೇ ಗ್ರಾಮಸಮಿತಿಗಳ ಮುಖಾಂತರ ದೇಶದ ಪ್ರತಿಯೊಂದು ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುತ್ತಿದೆ . ಸ್ವಾವಲಂಬ ರೈತ , ಸಮೃದಗ್ರಾಮ , ಸಮರ್ಥ ಭಾರತ ಎಂಬ ದ್ವೇಯೋದ್ದೇಶದಿಂದ ಕಾರ್ಯೋನ್ಮುಖವಾಗಿ ಕಾರ್ಯನಿರ್ವಹಿಸುತ್ತಿದೆ . ರೈತ ಸ್ವಾವಲಂಬಿಯಾದರೆ ಗ್ರಾಮ ಸದೃಢವಾಗುತ್ತದೆ . ಗ್ರಾಮ ಸದೃಢವಾದರೆ ದೇಶ ಸಮರ್ಥವಾಗುತ್ತದೆ . ಭಾರತ ಹಳ್ಳಿಗಳ ದೇಶ ಆದರಿಂದಾಗಿ ಸರ್ಕಾರಕ್ಕೆ ಈ ಬಗ್ಗೆ ಅರಿವು ಮೂಡಿಸಲು ದಿನಾಂಕ : 21-05-2022 ಈ ದಿನ ಭಾರತೀಯ ಕಿಸಾನ್ ಸಂಘ , ಕರ್ನಾಟಕ ದಕ್ಷಿಣ ಪ್ರಾಂತ್ಯವು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ತಮ್ಮಂತಹ ಮಾದ್ಯಮ ಮಿತ್ರರ ಮುಖಾಂತರ ಸರ್ಕಾರದ ಕಣ್ಣು ತೆರೆಸಲು ಈ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿದೆ . ಸಂವಿಧಾನದ ಮೂರನೇ ಕಣ್ಣಾದ ಮಾದ್ಯಮ ಇಂದು ಅತ್ಯಂತ ಸಮರ್ಥವಾಗಿದೆ . ಕೃಷಿ ಉಳಿವಿಗಾಗಿ ತಮ್ಮ ಸಹಕಾರ ಅತ್ಯಗತ್ಯ . ದಯವಿಟ್ಟು ಇದನ್ನು ಪರಿಗಣಿಸಿ ಸರ್ಕಾರದ ಕಣ್ಣ ತೆರೆಸಲು ವಿನಂತಿಸುತ್ತೇವೆ ಎಂದು ಹಾಡ್ಯ ರಮೇಶ್‌ರಾಜು,ನೈಸರ್ಗಿಕ ಕೃಷಿಕರು . ಕರ್ನಾಟಕ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸುವವರು : 1 ) ಸೋಮಶೇಖರ್ , ಪ್ರಾಂತ ಉಪಾಧ್ಯಕ್ಷರು . 2 ) ಪಾಡ್ಯ ರಮೇಶ್ ರಾಜು , ಪ್ರಾಂತ ಪ್ರಧಾನ ಕಾರ್ಯದರ್ಶಿ 3 ) ನಾರಾಯಣಸ್ವಾಮಿ , ಪ್ರಾಂತ ಸಂಘಟನಾ ಕಾರ್ಯದರ್ಶಿ 4 ) ಪಂಜಣ್ಣ , ಬೆಂಗಳೂರುನಗರ ಜಿಲ್ಲಾಧ್ಯಕ್ಷರು ಮತ್ತು ರೂಪಾ ಶೇಖರ್.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.