ನನ್ನ ಮೇಲೆ ಭಾರತ ರತ್ನ ಬಾಬಾ ಸಾಹೇಬ ಡಾ || ಬಿ.ಆರ್.ಅಂಬೇಡ್ಕರ್ ಪ್ರತಿಮೆ ವಿಚಾರದಲ್ಲಿ ವಿವಾದ ಸೃಷ್ಟಿಸಲಾಗಿದೆ – ಎನ್ . ಮೂರ್ತಿ

ಜಸ್ಟೀಸ್ ಸದಾಶಿವ ಆಯೋಗದ ವರದಿ ಜಾರಿಗೆ ನಿರ್ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿ ಹಾಗೂ ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷ್ಯ ತೋರಿದ ಹಿನ್ನಲೆಯಲ್ಲಿ ದ.ಸಂ.ಸ. “ ನೂತನ ರಾಜಕೀಯ ಪಕ್ಷ ಸ್ಥಾಪನೆಗೆ ಟಿ.ವಿ. ( ಮಾಧ್ಯಮ ) ತೆರೆಯಲು ಮುಂದಾಗಿದೆ . ಈ ಸುದ್ದಿ ತಿಳಿದ ಬೆನ್ನಲೆ ಅಸ್ಪೃಶ್ಯರಲ್ಲಿಯೇ ಎಡ – ಬಲ ( ಹೊಲೆಯ – ಮಾದಿಗ ) ಎಂದು ವಿಭಜಿಸಿ ಆ ಬೆಂಕಿಯಲ್ಲಿ ಸದಾ ಮೈ ಕಾಯಿಸಿಕೊಳ್ಳುವವರು ನನ್ನ ( ಎನ್ . ಮೂರ್ತಿ ) ತೇಜೋವಧೆಗೆ ಷಡ್ಯಂತರ ಮಾಡಿದ್ದಾರೆ .

ಕಳೆದ 2 ವರ್ಷದ ಹಿಂದೆ ಉದ್ಯಮಿ ಒಬ್ಬರ ಮೇಲೆ ನಾನು ಮಾಡಿದ ಆರೋಪವನ್ನು ನನ್ನ ಮೇಲೆ ತಿರುಗಿಸಿ ಭಾರತ ರತ್ನ ಬಾಬಾ ಸಾಹೇಬ ಡಾ || ಬಿ.ಆರ್.ಅಂಬೇಡ್ಕರ್ ಪ್ರತಿಮೆ ವಿಚಾರದಲ್ಲಿ ವಿವಾದ ಸೃಷ್ಟಿಸಲಾಗಿದೆ . ಅಲ್ಲದೇ ಎನ್ . ಮೂರ್ತಿ , ನಾಗರಭಾವಿಯಲ್ಲಿ ಸರ್ಕಾರಿ ಜಮೀನನ್ನು ಕಬಳಿಸಿದ್ದಾನೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದರು . ನಾನು ಸರ್ಕಾರದ ಯಾವುದೇ ಜಮೀನನ್ನು ಕಬಳಿಸಿಲ್ಲ . ಆಗಿದ್ದರೆ ಸರ್ಕಾರ ಮುಂದಾಗಿ ಈ ಕೂಡಲೇ ಸರ್ಕಾರದ ಜಮೀನಿಗೆ ಕಾಂಪೌಂಡ್ ಹಾಕಿಕೊಳ್ಳಲಿ .

ಸತ್ಯಾಸತ್ಯತೆಯನ್ನು ಜಾಗೃತವಾಗಿ ಹಾಗೂ ಸೂಕ್ಷ್ಮವಾಗಿ ಹರಿತ ಬೆಂಗಳೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಡಾ || ಬಿ.ಆರ್.ಅಂಬೇಡ್ಕರ್ ಪ್ರತಿಮೆ ವಿಚಾರವನ್ನು ಅತ್ಯಂತ ಗೌರವಿತವಾಗಿ ಅಂತ್ಯ ಮಾಡಲು ತೋರಿದ ದಕ್ಷತೆ ಹಾಗೂ ಪ್ರಾಮಾಣೀಕತೆಗೆ ದ.ಸಂ.ಸ. ಅಭಿನಂದನೆ ಸಲ್ಲಿಸಿದೆ .

ಕಳೆದ ಸುಮಾರು 45 ವರ್ಷಗಳಿಂದ ನಾನು ನನ್ನ ಕುಟುಂಬ ಭಾರತ ರತ್ನ ಬಾಬಾ ಸಾಹೇಬ ಡಾ || ಬಿ.ಆರ್.ಅಂಬೇಡ್ಕರ್ ಮತ್ತು ಶೋಷಿತರ ಅಭ್ಯದಯಕ್ಕೆ ಅವಿರತ ಶ್ರಮಿಸಿದ್ದೇವೆ . ಇದನ್ನರಿಯದ ಹೃದಯ ಹೀನರು ಹಾಗೂ ಕೆಲವು ಕಿಡಿಗೇಡಿ ಮತ್ತು ತಿಳಿಗೇಡಿ ಬೆಂಗಳೂರಿನ ಕೆಲವು ಮುಖಂಡರು ರೀತಿ ಎತ್ತಿಕಟ್ಟಿ ನನ್ನ ಬೆಳವಣಿಗೆಯಿಂದ ವಿಚಲಿತಗೊಂಡು ವಾಮಮಾರ್ಗ ಅನುಸರಿಸಿದ್ದಾರೆ ಅಲ್ಲದೇ ತೀವ್ರ ಅಸೂಹೆಯ ಇಂತಹ ಹಲವಾರು ಯತ್ನಗಳು ನನಗೆ ಹೊಸದೇನಲ್ಲ .

“ ಅಸ್ಪೃಶ್ಯತೆಯ ಅನುಭವದಲ್ಲಿ ಹೊಲೆ ಮಾದಿಗರು ಸಮಾನ ದುಃಖಿಗಳು ” ಬಾಬಾ ಸಾಹೇಬರ ತತ್ವ ಸಿದ್ಧಾಂತ ಅರಿವಿಲ್ಲದವರು ಇತಿಹಾಸದ ಗಂಧಾಹಾಳ ತಿಳಿಯದವರು ಇಂತಹ ಕುಕೃತ್ಯದಲ್ಲಿ ತೊಡಗಿದ್ದಾರೆ ಹಾಗೂ ಪ್ರಸಕ್ತ ಅಪಾಯಕಾರಿ ಸನ್ನಿವೇಶದಲ್ಲಿ ಜಾತಿವಾದಿ ರೀತಿಯ ಕುಚೋದ್ಯೆ ಮತ್ತು ಕೋಮುವಾದಿಗಳ ವಿದ್ಯಾಮಾನದ ಪರಿವಿಲ್ಲದವರು ಈ ಉಪಟಳದಲ್ಲಿ ತೊಡಗಿದ್ದಾರೆ . ನಾನು ಮತ್ತು ನನ್ನ ಸಂಘಟನೆ ಇಂತಹ ಗೊಡ್ಡ ಬೆದರಿಕೆಗೆ ಹಾಗೂ ಅಪಪ್ರಚಾರಕ್ಕೆ ಅಂಜುವುದಿಲ್ಲ . ಮತ್ತು ಹೋರಾಟದಿಂದ ವಿಮುಖವಾಗುವುದಿಲ್ಲ . ಮತ್ತಷ್ಟು ಚಳುವಳಿಯನ್ನು ತೀವ್ರಗೊಳಿಸಲಾಗುವುದು ಎಂದು ಎನ್ . ಮೂರ್ತಿ – ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.