
ಡಾ || ಎನ್.ಮೂರ್ತಿ , ಅಧ್ಯಕ್ಷರು , ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಬಿಂದು ವೆಂಚರ್ ಕಂಪನಿ , ಬೆಂಗಳೂರು ರವರು ವಿಶ್ವಜ್ಞಾನಿ , ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಅಪಮಾನವೆಸಗಿ ಅಗೌರವ ಉಂಟುಮಾಡಿರುವ ಮೂಲಕ ಭಾರತ ಸಂವಿಧಾನ ಮತ್ತು ದೇಶದ್ರೋಹ ಕೃತ್ಯವೆಸಗಿರುವ ಅಪರಾಧದ ಅಡಿಯಲ್ಲಿ ಸದರಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೂಡಲೇ ಕಾನೂನುಕ್ರಮ ಜರುಗಿಸಲು ಅಗ್ರಹಿಸಿ ಪತ್ರಿಕಾಗೋಷ್ಠಿ ,
ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾ ಗ್ರಾಮಕ್ಕೆ ಹೊಂದಿಕೊಂಡಂತಿರುವ ಸರ್ವೆ ನಂ .8712 ರಲ್ಲಿ ಸುಮಾರು 1.32 ಎಕರೆ / ಗುಂಟೆ ಪರಿಶಿಷ್ಠಜಾತಿಯವರ ಜಮೀನಿನಲ್ಲಿ ಡಾ | ಎನ್.ಮೂರ್ತಿ , ಕರ್ನಾಟಕ ದಲಿತ ಸಂಘರ್ಷ ಸಮಿತಿ ಇವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಸ್ವಯಂ ರಕ್ಷಣೆಗೆ ಅನುಮತಿ ಇಲ್ಲದೆ ಸ್ಥಾಪಿಸಿ , ತದನಂತರ ಬಿಂದು ವೆಂಚರ್ ಕಂಪನಿ ಬೆಂಗಳೂರು ಇವರಿಗೆ ಸದರಿ ಸ್ವತ್ತನ್ನು ಮಾರಾಟ ಮಾಡಿರುತ್ತಾರೆ . ಸದರಿ ಸ್ವತ್ತಿನಲ್ಲಿ ಸ್ಥಾಪನೆಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಡಾ || ಎನ್.ಮೂರ್ತಿ , ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಒಂದು ವೆಂಚರ್ ಕಂಪನಿ ಬೆಂಗಳೂರು ಇವರು ಜಂಟಿಯಾಗಿ ಸದರಿ ಸ್ವತ್ತಿನಲ್ಲಿ ಸ್ಥಾಪನೆಯಾಗಿದ್ದ ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿ ಸರ್ವ ನಂ .89 ರಲ್ಲಿ ಬಿಸಾಡಿರುತ್ತಾರೆ . ಆದರೆ ಬಾಬಾ ಸಾಹೇಬರ ಪ್ರತಿಮೆಯನ್ನು ಸ್ವಲಾಭಕ್ಕಾಗಿ ಬಳಸಿಕೊಂಡಿರುವುದು ನಂತರ ಅದನ್ನು ವಿರೂಪಗೊಳಿಸಿರುವುದು ದೇಶದ್ರೋಹದ ಕೃತ್ಯಕ್ಕೆ ಸಮಾನವಾದ ಕೃತ್ಯವಾಗಿರುತ್ತದೆ . ಹಾಗೆಯೇ ಭಾರತ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದ್ದು , ಇದೊಂದು ಶಿಕ್ಷಾರ್ಹ ಅಪರಾಧವಾಗಿರುತ್ತದೆ . ಹಾಗೆಯೇ ಇವರು ತಕರಾರು ಇರುವ ಜಮೀನುಗಳಲ್ಲಿ ಭಾಗವಹಿಸಿ ಆ ಜಮೀನುಗಳನ್ನು ಲಪಟಾಯಿಸುವ ಕೆಲಸ ಇವರ ನಿರಂತರ ವೃತ್ತಿಯಾಗಿದೆ . ಆದ್ದರಿಂದ ವಿಶ್ವಜ್ಞಾನಿ , ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಅಪಮಾನವಾಗಿ ಅಗೌರವ ಉಂಟುಮಾಡಿರುವ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಯ ವರದಿಯಂತೆ ಡಾ | ಎನ್.ಮೂರ್ತಿ , ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಬಿಂದು ವೆಂಚರ್ ಕಂಪನಿ , ಬೆಂಗಳೂರು ಇವರ ವಿರುದ್ಧ ಭಾರತ ಸಂವಿಧಾನ ಮತ್ತು ದೇಶದ್ರೋಹ ಕೃತ್ಯವೆಸಗಿರುವ ಅಪರಾಧದ ಅಡಿಯಲ್ಲಿ ಸದರಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೂಡಲೇ ಕಾನೂನುಕ್ರಮ ಜರುಗಿಸಲು ನಮ್ಮ ಸಂಘಟನೆ ಆಗ್ರಹಿಸುತ್ತದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಳಾದ ಸುರೇಶ್ ಚಿಕ್ಕಣ್ಣ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News
9341997936