12 ಜೂನ್ ದಿಂದ ಗೋವಾದಲ್ಲಿ 10 ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ !

ದೇಶದ 350 ಹಿಂದೂ ಸಂಘಟನೆಗಳ 1000 ಕ್ಕೂ ಅಧಿಕ ಪ್ರತಿನಿಧಿಗಳ ಸಹಭಾಗ ಗೋವಾದಲ್ಲಿ ಕಳೆದ 10 ವರ್ಷಗಳಿಂದ ನಡೆಯುತ್ತಿರುವ ‘ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ದೇಶದಲ್ಲಿ ಹಿಂದೂ ರಾಷ್ಟ್ರದ ಚರ್ಚೆಯು ಆರಂಭವಾಯಿತು ಮತ್ತು ಹಿಂದೂ ರಾಷ್ಟ್ರದ ಧೈಯವನ್ನಿಟ್ಟು ವಿವಿಧ ಕ್ಷೇತ್ರಗಳಲ್ಲಿ ಕಾರ್ಯವು ಆರಂಭವಾಯಿತು . ಈ 10 ನೇ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ಕಾರ್ಯಪದ್ಧತಿ , ‘ ಹಿಂದೂ ರಾಷ್ಟ್ರದಲ್ಲಿ ಆದರ್ಶ ರಾಜ್ಯ ವ್ಯವಹಾರ ಹೇಗಿರಬೇಕು ? ಎನ್ನುವುದರ ಬಗ್ಗೆ ಹಿಂದೂ ರಾಷ್ಟ್ರ ಸಂಸತ್ತನ್ನು ಆಯೋಜಿಸಲಾಗಿದೆ . ಅಧಿವೇಶನದಲ್ಲಿ 3 ದಿನ ‘ ಹಿಂದೂ ರಾಷ್ಟ್ರ ಸಂಸತ್ತು ‘ ನಡೆಯಲಿದ್ದು ಮತ್ತು ಅದರಲ್ಲಿ ‘ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಸದೀಯ ಮತ್ತು ಸಂವಿಧಾನಿಕ ಮಾರ್ಗ ‘ , ‘ ದೇವಸ್ಥಾನಗಳ ಸುವ್ಯವಸ್ಥಾಪನೆ ‘ ಮತ್ತು ‘ ಹಿಂದೂ ಶೈಕ್ಷಣಿಕ ಧೋರಣಿಗಳನ್ನು ಹೇಗೆ ಅವಲಂಬಿಸಬೇಕು ? ‘ ಈ ಬಗ್ಗೆ ತಜ್ಞ ಗಣ್ಯರಿಂದ ವಿಸ್ತಾರವಾಗಿ ಚರ್ಚೆಯಾಗಲಿದೆ . ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡಲು ಈ ವರ್ಷ 12 ರಿಂದ 18 ಜೂನ್ 2022 ಈ ಕಾಲಾವಧಿಯಲ್ಲಿ ‘ ಶ್ರೀ ರಾಮನಾಥ ದೇವಸ್ಥಾನ , ಫೋಂಡಾ ಗೋವಾದಲ್ಲಿ 10 ನೇ ‘ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಆಯೋಜಿಸಲಾಗಿದೆ . ಎಂಬ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ , ಮೋಹನ ಗೌಡ ಇವರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು . ಬೆಂಗಳೂರಿನಲ್ಲಿ ಆಯೋಜಿತ ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಶ್ರೀ : ಪ್ರಶಾಂತ ಸಂಬರ್ಗಿ , ಸನಾತನ ಸಂಸ್ಥೆಯ ಸೌ ಶಾರದಾ ಯೋಗಿಶ ಇವರು ಉಪಸ್ಥಿತರಿದ್ದರು . ಶ್ರೀ . ಮೋಹನ ಗೌಡ ಇವರು ಮಾತನಾಡುತ್ತಾ , ‘ ಜಮೀಯತ್ ಉಲೆಮಾ – ಎ – ಹಿಂದ್’ನ ಮೌಲಾನಾ ಮಹಮೂದ್ ಮದನಿಯು ‘ ಸಮಾನ ನಾಗರಿಕ ಕಾಯದೆಯ ಆಧಾರದಲ್ಲಿ ಶರಿಯತ್‌ನಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದಿಲ್ಲ ಮತ್ತು ಹಿಂದೂಗಳಿಗೆ ಮುಸಲ್ಮಾನರು ಇಷ್ಟವಾಗದಿದ್ದರೆ , ಹಿಂದೂಗಳು ಭಾರತವನ್ನು ಬಿಟ್ಟು ಹೋಗಬೇಕು ‘ ಎಂದು ಬಹಿರಂಗವಾಗಿ ಬೆದರಿಕೆ ನೀಡಿದ್ದಾರೆ . ಭಾರತದ ಬಹುಸಂಖ್ಯಾತ ಹಿಂದೂಗಳು ಮುಸಲ್ಮಾನರಿಗೆ ಅಲ್ಪಸಂಖ್ಯಾತರ ವಿಶೇಷ ರಿಯಾಯಿತಿ ನೀಡಿದರೂ ಬಂಧುತ್ವವನ್ನು ಕಾಪಾಡಿಕೊಂಡಿದ್ದಾರೆ , ಎಂಬುದನ್ನು ಗಮನದಲ್ಲಿಡಬೇಕು . ಇಂದಿನ ಭಾರತ ಗಾಂಧಿಗಿರಿ ಮಾಡುವುದಿಲ್ಲ , ಬದಲಾಗಿ ಛತ್ರಪತಿ ಶಿವಾಜಿ ಮಹಾರಾಜರನ್ನು ಆದರ್ಶವೆಂದು ನಂಬಿ ಸ್ವರಾಜ್ಯ ರಕ್ಷಣೆಯನ್ನು ಮಾಡಲಿದೆ . ಎಂದು ಅವರು ಗಮನದಲ್ಲಿಡಬೇಕು ‘ ಎಂದು ಹೇಳಿದರು . ಕೊರೊನಾದಿಂದ ಕಳೆದ ಎರಡು ವರ್ಷಗಳ ಕಾಲ ಈ ಅಧಿವೇಶನವನ್ನು ಪ್ರತ್ಯಕ್ಷವಾಗಿ ನಡೆಸಲು ಸಾಧ್ಯವಾಗಲಿಲ್ಲ . 2020 ನೇ ಇಸವಿಯಲ್ಲ ‘ ಆನ್‌ಲೈನ್‌ ‘ ಅಧಿವೇಶನವನ್ನು ನಡೆಸಲಾಯಿತು . ಈ ವರ್ಷ ಪ್ರತ್ಯಕ್ಷ ಅಧಿವೇಶನ ನಡೆಯುತ್ತಿರುವುದರಿಂದ ದೇಶದಾದ್ಯಂತದ ಹಿಂದುತ್ವನಿಷ್ಠರಲ್ಲಿ ಅತ್ಯಂತ ಉತ್ಸಾಹವಿದೆ . ಈ ಅಧಿವೇಶನಕ್ಕೆ ಅಮೇರಿಕಾ , ಇಂಗ್ಲೆಂಡ್ , ಹಾಂಗ್ ಕಾಂಗ್ , ಸಿಂಗಾಪುರ , ಫಿಜಿ , ನೇಪಾಳ ಈ ದೇಶಗಳ ಸಹಿತ ಭಾರತದ 26 ರಾಜ್ಯಗಳಲ್ಲಿನ 350 ಕ್ಕಿಂತ ಹೆಚ್ಚು ಹಿಂದೂ ಸಂಘಟನೆಗಳ 1000 ಕ್ಕಿಂತ ಹೆಚ್ಚು ಪ್ರತಿನಿಧಿಗಳನ್ನು ಆಮಂತ್ರಿಸಲಾಗಿದೆ . ಈ ಅಧಿವೇಶನದಲ್ಲಿ ಪ್ರಮುಖವಾಗಿ ‘ ಕಾಶಿಯಲ್ಲನ ಜ್ಞಾನವಾಪಿ ಮಸೀದಿ ‘ , ‘ ಮಥುರಾ ಮುಕ್ತಿ ಆಂದೋಲನ , ‘ ಫೆಸೆಸ್ ಆಫ್ ವರ್ಶಿಪ್ ಆ್ಯಕ್ಟ್ ‘ , ‘ ಕಾಶ್ಮೀರಿ ಹಿಂದೂಗಳ ನರಮೇಧ ‘ , ‘ ಮಸೀದಿಗಳಲ್ಲಿ ಧ್ವನಿವರ್ಧಕದಿಂದ ಆಗುವ ಶಬ್ದ ಮಾಲಿನ್ಯ ‘ , ‘ ಹಿಜಾಬ್ ಆಂದೋಲನ ‘ , ‘ ಹಲಾಲ್ ಸರ್ಟಿಫಿಕೆಟ್ ಒಂದು ಆರ್ಥಿಕ ಜಿಹಾದ್ ‘ , ‘ ಹಿಂದೂಗಳ ಸಂರಕ್ಷಣೆ ‘ , ‘ ಮಂದಿರ – ಸಂಸ್ಕೃತಿ – ಇತಿಹಾಸ ಇವುಗಳ ರಕ್ಷಣೆ , ‘ ಮತಾಂತರ ‘ ಮುಂತಾದ ವಿವಿಧ ವಿಷಯಗಳ ಚರ್ಚೆಯನ್ನು ಮಾಡಲಾಗುವುದು ‘ ಎಂದು ಹೇಳಿದರು . ಸನಾತನ ಸಂಸ್ಥೆಯ ಸೌ , ಶಾರದಾ ಯೋಗಿಶ್ ರವರು ಮಾತನಾಡುತ್ತಾ ಕೇಂದ್ರದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ಹಿಂದೂಪರ ಸರಕಾರ ಇರುವುದರಿಂದ ರಾಮಮಂದಿರ ನಿರ್ಮಾಣ , ಲವ್ ಜಿಹಾದ್ ಮತ್ತು ಮತಾಂತರ ಇವುಗಳ ವಿರುದ್ಧದ ಕಾಯದಗಳನ್ನು ಜಾರಿಗೆ ತರುವುದು ಮತ್ತು ಕಲಮ್ 370 ನ್ನು ರದ್ದು ಮಾಡುವುದು , ಇತ್ಯಾದಿಗಳ ಬಗ್ಗೆ ಸಕಾರಾತ್ಮಕ ಕಾರ್ಯಗಳು ನಡೆದಿದ್ದರೂ , ಕಾಶಿ – ಮಥುರಾದೊಂದಿಗೆ ಹಿಂದೂಗಳ ಅನೇಕ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳ ಮುಕ್ತಿಯಾಗುವುದು ಬಾಕಿ ಇದೆ . ಓವೈಸಿ ‘ ಬಾಬರಿಯನ್ನು ತೆಗೆದುಕೊಂಡಿದ್ದೀರಿ , ಆದರೆ ಜ್ಞಾನವಾಪಿ ಮಸೀದಿಯನ್ನು ತೆಗೆದುಕೊಳ್ಳಲು ಬಿಡುವುದಿಲ್ಲ ‘ ಎಂದು ಹೇಳುತ್ತಿದ್ದಾರೆ . ದೇಶದಾದ್ಯಂತ ಹಿಂದೂಗಳ ಮೆರವಣಿಗೆ ಮತ್ತು ಧಾರ್ಮಿಕ ಉತ್ಸವಗಳ ಮೇಲೆ ಭೀಕರ ಹಲ್ಲೆ ನಡೆಯುತ್ತಿವೆ . ಮಿಶನರಿಗಳಿಂದ ಬಲವಂತದಿಂದಾಗುತ್ತಿರುವ ಮತಾಂತರದಿಂದ ಲಾವಣ್ಯಾಳಂತಹ ಹಿಂದೂ ಹುಡುಗಿಯರು ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕಾಗುತ್ತಿದೆ . ಕಾಶ್ಮೀರಿ ಹಿಂದೂಗಳ ನರಮೇಧಕ್ಕೆ 32 ವರ್ಷಗಳಾಗಿದ್ದರೂ ಕಾಶ್ಮೀರಿ ಹಿಂದೂಗಳ ಹತ್ಯೆ ಇಂದಿಗೂ ನಿಂತಿಲ್ಲ . ಒಟ್ಟಾರೆ ಹಿಂದೂಗಳು ಎಲ್ಲೆಡೆ ಅಸುರಕ್ಷಿತರಿದ್ದಾರೆ . ಆದುದರಿಂದ ಹಿಂದೂಗಳು ಸಾಂವಿಧಾನಿಕ ಅಧಿಕಾರಗಳಗಾಗಿ ಸಂಘಟಿತರಾಗುವುದು ಆವಶ್ಯಕವಾಗಿದೆ . ಹಿಂದೂಗಳ ವ್ಯಾಪಕ ಸಂಘಟನೆಗಾಗಿ ಈ ಅಧಿವೇಶನ ಮಾರ್ಗದರ್ಶಕವಾಗಲಿದೆ ‘ ಎಂದು ಹೇಳಿದರು . ಈ ಅಧೀವೇಶನಕ್ಕೆ ಪ್ರಮುಖವಾಗಿ ‘ ಸಿಐ’ನ ಮಾಜಿ ನಿರ್ದೇಶಕರಾದ ಶ್ರೀ . ನಾಗೇಶ್ವರ ರಾವ್ , ಕಾಶಿಯ ಜ್ಞಾನವಾಪಿ ಮಸೀದಿಯ ವಿರುದ್ಧ ಕಾನೂನು ಹೋರಾಟ ಮಾಡುವ ವಕೀಲರಾದ ನ್ಯಾಯವಾದಿ ( ಪೂ . ) ಹರಿಶಂಕರ ಜೈನ್ , ನ್ಯಾಯವಾದಿ ವಿಷ್ಣು ಶಂಕರ ಜೈನ್ , ಭಾಗ್ಯನಗರದ ಶಾಸಕರಾದ ಟಿ . ರಾಜಾಸಿಂಹ , ಯುವ ಬ್ರಿಗೇಡ್‌ನ ಶ್ರೀ . ಚಕ್ರವರ್ತಿ ಸುಲಿಬೆಲೆ , ಪನೂನ್ ಕಾಶ್ಮೀರನ ಶ್ರೀ . ರಾಹುಲ ಕೌಲ್ , ಝಾರಖಂಡನ ತರುಣ ಹಿಂದೂ ಸಂಘಟನೆಯ ಅಧ್ಯಕ್ಷರಾದ ಶ್ರೀ . ನೀಲ ಮಾಧವ ದಾಸ , ತಮಿಳುನಾಡಿನ ಹಿಂದೂ ಮಕ್ಕಲ ಕತ್ಥಿ ಅಧ್ಯಕ್ಷ ಶ್ರೀ . ಅರ್ಜುನ ಸಂಪಥ , ಅರುಣಾಚಲಪ್ರದೇಶದ ‘ ಬಾಂಸ ಸಂಸಾಧನ ಮತ್ತು ವಿಕಾಸ ಏಜೆನ್ಸಿ’ಯ ಉಪಾಧ್ಯಕ್ಷ ಶ್ರೀ . ಕುರು ಥಾಯಿ , ಭಾರತ ಸೇವಾಶ್ರಮ ಸಂಘದ ಸ್ವಾಮಿ ಸಂಯುಕ್ತಾನಂದಜಿ ಮಹಾರಾಜರು , ಇಂಟರನ್ಯಾಶನಲ್ ವೇದಾಂತ ಸೋಸೈಟಿ’ಯ ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜರು , ಛತ್ತೀಸಗಢನ “ ಶದಾಣಿ ದರಬಾರ’ನ ಡಾ . ಯುಧಿಷ್ಠಿರಲಾಲ ಮಹಾರಾಜ , ಹೀಗೆ ನೂರಾರು ಹಿರಿಯ ನ್ಯಾಯವಾದಿಗಳು , ಉದ್ಯಮಿಗಳು , ವಿಚಾರವಂತರು , ಲೇಖಕರು , ಪತ್ರಕರ್ತರು , ದೇವಸ್ಥಾನಗಳ ವಿಶ್ವಸ್ಥರು , ಸಮವಿಚಾರಿ ಸಾಮಾಜಿಕ , ರಾಷ್ಟ್ರೀಯ ಮತ್ತು ಆಧ್ಯಾತ್ಮಿಕ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತ ಇರಲಿದ್ದಾರೆ . ಈ ಅಧಿವೇಶನಕ್ಕೆ ಇಂದಿನವರೆಗೆ ದೇಶದಾದ್ಯಂತದ 45 ಕ್ಕಿಂತ ಹೆಚ್ಚು ಹಿಂದೂ ಸಂಘಟನೆಗಳು ಸಮರ್ಥನಾ ಪತ್ರಗಳನ್ನು ನೀಡಿದ್ದಾರೆ . ಈ ಹಿಂದೂ ರಾಷ್ಟ್ರ ಅಧಿವೇಶನ’ದ ನೇರ ಪ್ರಸಾರವನ್ನು ` HinduJagruti ‘ ಈ ಯೂ – ಟ್ಯೂಬ್ ಚಾನೆಲ್ , ಜಾಲತಾಣದಿಂದ ಮಾಡಲಾಗುತ್ತದೆ ಎಂದು ರಾಜ್ಯ ವಕ್ತಾರರು , ಹಿಂದೂ ಜನಜಾಗೃತಿ ಸಮತಿಯ , ಶ್ರೀ . ಮೋಹನ ಗೌಡರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

ಹಿಂದೂ ಜನಜಾಗೃತಿ ಸಮತಿ , ಸಂಪರ್ಕ ಕ್ರಮಾಂಕ : 7204082609

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.