ಮುಂಬರುವ ವಿಧಾನಸಭೆ ಮತ್ತು ತದನಂತರದ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಷ್ಟ್ರ ಸಮಿತಿ , ಸಂಯುಕ್ತ ಜನತಾದಳ ಮತ್ತು ಪೆಟ್ಟೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ರಾಜ್ಯದಲ್ಲಿ ಒಟ್ಟಾಗಿ ಕೆಲಸ ಮಾಡಲು ತೀರ್ಮಾನ

ಕರ್ನಾಟಕ ರಾಜ್ಯ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದೆಂದೂ ಕಾಣದ ಅಧೋಗತಿಯನ್ನು ಮುಟ್ಟಿದೆ , ಕಳೆದ ಎರಡು ದಶಕಗಳ ರಾಜ್ಯಾಡಳಿತ ನಡೆಸಿದ ಜೆಸಿಬಿ ( ಜೆಡಿಎಸ್ , ಕಾಂಗ್ರೆಸ್ , ಬಿಜೆಪಿ ) ಪಕ್ಷಗಳ ಅನೀತಿಯುತ ರಾಜಕಾರಣ , ಭ್ರಷ್ಟಾಚಾರ , ದುರಾಡಳಿತ ಮತ್ತು ಅಕ್ರಮಗಳ ಕಾರಣ ಉದ್ಭವಿಸಿರುವ ಸ್ಥಿತಿ ಇದು . ಆಡಳಿತದ ಮೇಲೆ ಹತೋಟಿಯೇ ಇಲ್ಲವಾಗಿದ್ದು , ಕಾಮಗಾರಿಗಳಲ್ಲಿ ಅವ್ಯವಹಾರ , ಸರ್ಕಾರಿ ನೌಕರರ ನೇಮಕಾತಿಯಲ್ಲಿ ಅಕ್ರಮಗಳು ( ಉದಾ ಪಿಎಸ್‌ಐ ಹುದ್ದೆ ಹರಾಜು ) , ವರ್ಗಾವಣೆ ದಂಧೆ ( ಪೊಲೀಸ್‌ , ಆರ್ ಟಿ ಓ , ಇತ್ಯಾದಿ ) , ಕೋವಿಸ್ ನಿಯಂತ್ರಣದ ಹೆಸರಿನಲ್ಲಿ ಲೂಟಿ , ಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ದಾಖಲೆಗಳಿದ್ದರೂ ಏನೂ ಕ್ರಮ ಕೈಗೊಳ್ಳದಿರುವುದೂ ಸೇರಿದಂತೆ ಎಲ್ಲವೂ ಐತಿಹಾಸಿಕ ಮತ್ತು ಕುಪ್ರಸಿದ್ಧ . ಒಬ್ಬರನ್ನೊಬ್ಬರು ಕೀಳು ಮಟ್ಟದ ನಿಂದನೆಯೆ ರಾಜಕಾರಣ ಎಂದು ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರುಗಳು ವರ್ತಿಸುವಂತಹ ದುಸ್ಥಿಗೆ ತಲುಪಿದ್ದೇವೆ . ರಾಜ್ಯದ ಜನರ ಹಿತ ಬಯಸದೆ ಕೇವಲ ಸ್ವಹಿತಾಸಕ್ತಿಗೆ ಗಮನ ನೀಡುತ್ತಿದ್ದಾರೆ . ಈ ಹಂತದಲ್ಲಿ ರಾಜ್ಯದ ಜನತೆ ದಿಕ್ಕಟ್ಟು ಕುಳಿತಿರುವುದು ಮಾತ್ರ ವಾಸ್ತವ .

ಇಂತಹ ಪರಿಸ್ಥಿತಿಯಲ್ಲಿ , ಕರ್ನಾಟಕ ರಾಷ್ಟ್ರ ಸಮಿತಿ , ಸಂಯುಕ್ತ ಜನತಾದಳ ಮತ್ತು ಪೆಟ್ಟೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ರಾಜ್ಯದಲ್ಲಿ ಒಟ್ಟಾಗಿ ಕೆಲಸ ಮಾಡಲು ತೀರ್ಮಾನಿಸಿದ್ದು , ಮುಂಬರುವ ಚುನಾವಣೆಗಳಲ್ಲಿ ಈ ಮೈತ್ರಿಕೂಟದ ಮೂಲಕ ಸ್ಪರ್ಧಿಸಲಾಗುತ್ತದೆ . ಈ ಬಗ್ಗೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು , ಮುಂದಿನ ದಿನಗಳಲ್ಲಿ ಇನ್ನೂ ಹಲವು ಸಮಾನ ಮನಸ್ಕ ಪಕ್ಷಗಳನ್ನು ಈ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲಾಗುವುದು . ಈ ಬಗ್ಗೆ ಇತರ ಕೆಲವು ಪಕ್ಷಗಳೊಂದಿಗೆ ಮಾತುಕತೆ ಮುಂದುವರೆದಿದೆ .

ಈ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆ.ಆರ್.ಎಸ್ . ಮತ್ತು ಸಂಯುಕ್ತ ಜನತಾ ದಳ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸಿದ್ದವು ಮತ್ತು ರಾಜ್ಯದಲ್ಲಿ ನಡೆದ ಹಲವಾರು ಉಪಚುನಾವಣೆಗಳಲ್ಲಿ ಜಂಟಿಯಾಗಿ ಪ್ರಚಾರ ಕಾರ್ಯ ನಡೆಸಲಾಗಿತ್ತು . ಮುಂಬರುವ ಬಿಬಿಎಂಪಿ , ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಸ್ಥಾನ ಹೊಂದಾಣಿಕ , ಜಂಟಿ ಪ್ರಚಾರ ಹಾಗು ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳ ( Common Minimum : Programme ) ಮೂಲಕ ಈ ಮೈತ್ರಿಕೂಟವನ್ನು ಮುನ್ನಡೆಸಲಾಗುವುದು . ಈ ಮೈತ್ರಿಕೂಟವು ಮುಂಬರುವ ವಿಧಾನಸಭೆ ಮತ್ತು ತದನಂತರದ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು , ರಚಿಸಲಾಗಿದ್ದು , ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ .

ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಭ್ರಷ್ಟ , ಲಂಚಕೋರ , ಸಮಯಸಾಧಕ , ನಾಟಕೀಯ ರಾಜಕಾರಣಿಗಳನ್ನು ನೋಡಿರುವ ಜನರು ದೋಸಿ ಹೋಗಿ , ಬದಲಾವಣೆಯನ್ನು ಅರಸುತ್ತಿದ್ದಾರೆ . ಇಂತಹ ಸಮಯದಲ್ಲಿ , ಮೌಲ್ಯಾಧಾರಿತ ರಾಜಕಾರಣ , ಸಾಮಾಜಿಕ ನ್ಯಾಯ , ದಕ್ಷ ಆಡಳಿತ ಮತ್ತು ಸಮಾಜವಾದಿ ಅಶಗಳನ್ನು ಮುನ್ನೆಲೆಗೆ ತರುವ ಅವಶ್ಯಕತೆಯಿದ್ದು , ಅದನ್ನು ಈ ಮೈತ್ರಿಕೂಟವು ಮಾಡಲಿದೆ ಎಂದು ಮಹಿಮಾ ಜಿ , ಪಟೇಲ್ ರಾಜ್ಯಾಧ್ಯಕ್ಷರು ಸಂಯುಕ್ತ ಜನತಾ ದಳ, ರವಿ ಕೃಷ್ಣಾರೆಡ್ಡಿ , ರಾಜ್ಯಾಧ್ಯಕ್ಷರು ಕೆ.ಆರ್‌.ಎಸ್‌ . ಪಕ್ಷ, ತಾಹಿರ್ ಹುಸೇನ ರಾಜ್ಯಾಧ್ಯಕ್ಷರು WPI ಪತ್ರಿಕಾ ಗೋಷ್ಠಿಯಲ್ಲಿ ಅಂದರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.