ಕರ್ನಾಟಕದಲ್ಲಿ ಮಂಗಳಮುಖಿಯರ ಪುನರ್ವಸತಿ ಪ್ರಥಮ ಯೋಜನೆಗೆ ಚಾಲನೆ

ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿನ ಕೊಳಗೇರಿ ನಿವಾಸಿಗಳ ಹಕ್ಕುಗಳ ಹೋರಾಟವನ್ನು ಸಮತಾ ಸೈನಿಕ ದಳವು ಮುಂದುವರಿಸಿಕೊಂಡು ಬಂದಿದೆ . ಈ ಹೋರಾಡದ ಭಾಗವಗಾಗಿ ಲಕ್ಷಾಂತರ ಅಸಂಘಟಿತ ಕಾರ್ಮಿಕರ ಬದುಕು ಮತ್ತು ಬವಣೆಗಳನ್ನು ನೀಗಿಸುವ ಸುಧಾರಣ ಕ್ರಮಗಳನ್ನೂ ಸಹ ಜರುಗಿಸುತ್ತಾ ಬಂದಿದೆ . ಇಂತಹ ಅಸಂಘಟಿತ ಜನ ವರ್ಗಗಳ ಪೈಕಿ ಮಂಗಳಮುಖಿಯರ ಹೋರಾಟವೊ ಸಹ ಪ್ರಮುಖವಾದುದ್ದು , ತೃತೀಯ ಲಿಂಗಗಳನ್ನು ಅಗೌರವಿಸುವ ಶಬ್ದಗಳಿಂದ ಸಂಬೋಧಿಸುತ್ತಿದ್ದನ್ನು ಸಮತಾ ಸೈನಿಕ ದಳವು ತೀವುವಾಗಿ ವಿರೋಧಿಸಿತ್ತು , ಗೌರವಯುತ ಶಬ್ದದಿಂದ ಅವರನ್ನು ಕೆರೆಯುವಂತಾಗಬೇಂದು ಅವರ ಹೆಸರಿನ ‘ ಅನನ್ಯತೆ ‘ ಹುಡುಕಾಟ ನಡೆಸಿ ಅಂತಿಮವಾಗಿ ‘ ಮಂಗಳಮುಖಿ’ಎಂಬ ಹೆಸರಿನಿಂದ ಕರೆಯುವಂತಾಯಿತು . ಅಂದಿನ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಈ ಹೆಸರನ್ನು ಶಿಫಾರಸ್ಸು ಮಾಡಿಸಿ ಸರ್ಕಾರದ ಪಟ್ಟಿಯಲ್ಲಿ ಅದು ಬಂದಂತಾಗಿ ಇವರ ‘ ಅನನ್ಯತೆ’ಗೆ ರಾಜ್ಯ ಸರ್ಕಾರವೇ ಮುದ್ರೆ ಒತ್ತಿದಂತಾಗಿದೆ .

ಇತ್ಯಾಂದಿ ಹೆಸರುಗಳಿಂದ ಅವರನ್ನು ಸಂಬೋಧಿಸಿವುದು ತಪ್ಪಿತು . ‘ ಮಂಗಳಮುಖಿ’ಯರೆಂದು ಗೌರವಯುತವಾಗಿ ಕೆರೆಯುವಂತಾಗಿ ಇವರಿಗೆ ಸರ್ಕಾರಿ ಸೌಲಭ್ಯಗಳು ಲಭಿಸಲು ಅಧಿಕೃತವಾಗಿ ಅವಕಾಶಗಳು ಮುಕ್ತವಾಗಿವೆ , ಇಂತಹ ‘ ಅನನ್ಯತೆ’ಯ ಲಭ್ಯತೆಯಿಂದಾಗಿ ಇದೀಗ ಇವರ ಪುನರ್ವಸತಿ ಬೇಡಿಕೆ ಹೋರಾಟಕ್ಕೆ ಜಯ ಸಿಕ್ಕಿದಂದಾಗಿದೆ . ಕರ್ನಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಮಂಗಳಮುಖಿ’ಯರ ಪುನರ್ವಸತಿಯ ಪ್ರಥಮ ಯೋಜನೆಯು ಬೆಂಗಳೂರಿನಲ್ಲಿ ಸರ್ಕಾರ ಅನುಷ್ಠಾನಕ್ಕೆ ಬರುತ್ತಿದ್ದು ಕೆಂಗೇರಿ ಭೂಮಿಯಲ್ಲಿ ಅನುಷ್ಠಾನಕ್ಕೆ ಹೋಬಳಿಯ ಸುಮಾರು 200 ಮಾಳಿಗೊಂಡನಹಳ್ಳಿಯಲ್ಲಿನ ಫಲಾನುಭವಿಗಳಿಗೆ ಸುಮಾರು ಎರಡೂವರೆ ಎಕರೆ ಭೂಮಿಯು ಮಂಜೂರಾಗಿದ್ದು , ದಿನಾಂಕ 14-06 2022 ರ ಬೆಳಿಗ್ಗೆ 11.30 ಕ್ಕೆ ಈ ಯೋಜನೆಯ ಶಂಕುಸ್ಥಾಪನೆಯ ಅಡಿಗಲ್ಲು ಸಮಾರಂಭವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ನಡೆಯಲಿದೆ , ಸಮತಾ ಸೈನಿಕ ದಳವು ಇವರ ಬದುಕುವ ಹಕ್ಕು ರಕ್ಷಣೆಗಾಗಿ ಮತ್ತು ಅವರ ಜೀವನದ ಸುಧಾರಣೆಗಾಗಿ ನಿರಂತರ ಪ್ರಯತ್ನ ನಡಿಸಿ ಇದೀಗ ಪ್ರಥಮ ಹಂತದ ‘ ವಸತಿ ಯೋಜನೆ’ಯು ಅನುಷ್ಠಾನಗೊಳುತ್ತಿದೆ . ಇದೇ ತಿಂಗಳ 14 ರಂದು ನಡೆಯುವ ಅಡಿಗಲ್ಲು ಸಮಾರಂಭವನ್ನು ಮಾನ್ಯ ವಸತಿ ಸಚಿವರಾಂದ ವಿ.ಸೋಮಣ್ಣ ಅವರು ನೆರವೇರಿಸುವರು , ಈ ಪ್ರದೇಶದ ಶಾಸಕ ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮುಖ್ಯ ಅತಿಥಿಗಳಾಗಿ ಅಗಮಿಸುವರು , ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಮಹೇಶ ಈರನಗೌಡ ಕುಮಠಳ್ಳಿ ಅವರು ಅಧ್ಯಕ್ಷತೆ ವಹಿಸುವರು . ಮಂಡಳಿಯ ಆಡಳಿತ ಮಡಳಿಯ ಸದಸ್ಯರು .

ಅಧಿಕಾರಿಗಳು ವಿಶೇಷ ಅಹ್ವಾನಿತರಾಗಿ ಭಾಗವಹಿಸುವರು . ‘ ಮಂಗಳಮುಖಿ’ಯರ ಸಮವೇಶವೂ ಸಹ ಇದೇ ವೇದಿಕೆಯಲ್ಲಿ ನಡೆಯುವುದು ಎಂದು ಡಾ.ಎಂ.ವೆಂಕಟಸ್ವಾಮಿ ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.