ಯುವಕರ ಕೌಶಲ್ಯ ಅಭಿವೃದ್ಧಿಗಾಗಿ ಆರ್ಥಿಕ ಪರಿಹಾರಗಳನ್ನು ಸಕ್ರಿಯಗೊಳಿಸಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದೊಂದಿಗೆ ಆವಾನ್ಸೆ  ಫೈನಾನ್ಶಿಯಲ್ ಸರ್ವಿಸಸ್ ಪಾಲುದಾರಿಕೆ

ಮುಂದಿನ 5 ವರ್ಷಗಳಲ್ಲಿ 8-10 ಲಕ್ಷ ಆಕಾಂಕ್ಷಿಗಳ ಕೌಶಲ್ಯ ಅಗತ್ಯಗಳನ್ನು ಪೂರೈಸಲು ಪಾಲುದಾರಿಕೆ

ಮುಂಬಯಿ 15 ಜೂನ್ 2022: ಆವಾನ್ಸೆ ಫೈನಾನ್ಶಿಯಲ್ ಸರ್ವೀಸಸ್ , ಭಾರತದ ಹೊಸ ಯುಗ, ತಾಂತ್ರಿಕವಾಗಿ ಮುಂದುವರಿದ ಶಿಕ್ಷಣ-ಕೇಂದ್ರಿತ NBFC ಆಗಿದ್ದು , ಇದು ತಮ್ಮ ಕೌಶಲ್ಯದ ಅವಶ್ಯಕತೆಗಳನ್ನು ಪೂರೈಸಲು ಆಸಕ್ತಿ ಹೊಂದಿರುವ ದೇಶದ ಯುವಕರಿಗೆ ಸುಲಭ, ವೇಗದ ಮತ್ತು ಕೈಗೆಟುಕುವ ಹಣಕಾಸು ಪರಿಹಾರಗಳನ್ನು ಒದಗಿಸಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದೊಂದಿಗೆ (NSDC) ಪಾಲುದಾರಿಕೆ ಹೊಂದಿದೆ. ಈ ಸಹಯೋಗವು ಆರ್ಥಿಕ  ಸಹಾಯದ ಅಗತ್ಯವಿರುವವರಿಗೆ  ಕೌಶಲ್ಯಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನುರಿತ ಕಾರ್ಯಪಡೆಯ ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸುವ ಪ್ರಗತಿಪರ ಹೆಜ್ಜೆಯಾಗಿದೆ.

ಕೌಶಲ್ಯಾಧಾರಿತ ಶಿಕ್ಷಣ ಅಥವಾ ವೃತ್ತಿಪರ ತರಬೇತಿಯು ಅತ್ಯಂತ ನಿರ್ಣಾಯಕವಾಗಿದೆ ಏಕೆಂದರೆ ಸಂಭಾವ್ಯ ಉದ್ಯೋಗಿಗಳು ಪ್ರಾಯೋಗಿಕ ಕೌಶಲ್ಯಗಳನ್ನು ಮತ್ತು ಶೈಕ್ಷಣಿಕ ಪದವಿಗಳೊಂದಿಗೆ ಅಗತ್ಯವಾದ ಪರಿಣತಿಯನ್ನು ಹೊಂದಿರುತ್ತಾರೆ ಎಂದು ಉದ್ಯೋಗದಾತರು ಸಹಜವಾಗಿ ನಿರೀಕ್ಷಿಸುತ್ತಾರೆ. ತಾಂತ್ರಿಕ ಮತ್ತು ಔದ್ಯೋಗಿಕ ಶಿಕ್ಷಣ ಮತ್ತು ತರಬೇತಿ (TVET) ಜನರಿಗೆ ಅಗತ್ಯವಾದ ಕೌಶಲ್ಯಗಳನ್ನು ಪಡೆಯಲು ಅನುವು ಮಾಡಿಕೊಡುವುದಲ್ಲದೇ ಅವರನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಈ ಅನನ್ಯ ಪಾಲುದಾರಿಕೆಯು ಉದ್ಯಮದ ಅಗತ್ಯಕ್ಕೆ ಅನುಗುಣವಾದ ಫಲಿತಾಂಶ-ಆಧಾರಿತ ಫ್ರೇಮ್  ಮೂಲಕ NSDC ಯೊಂದಿಗೆ ಸಂಯೋಜಿತವಾಗಿರುವ ಸಂಸ್ಥೆಗಳ ಸಹಾಯದಿಂದ ಭಾರತದಲ್ಲಿ ಸಶಕ್ತ ಉದ್ಯೋಗಿಗಳನ್ನು ರಚಿಸಲು ಆವಾನ್ಸೆ ಫೈನಾನ್ಸ್ ಸರ್ವೀಸಸ್  ಸಹಾಯ ಮಾಡುತ್ತದೆ.

ಈ ಸಹಯೋಗದ ಪ್ರಾರಂಭದಲ್ಲಿ, ಆವಾನ್ಸೆ  ಫೈನಾನ್ಷಿಯಲ್ ಸರ್ವಿಸಸ್‌ನ ಎಂಡಿ ಮತ್ತು ಸಿಇಒ ಆದ ಶ್ರೀ. ಅಮಿತ್ ಗೈಂಡಾ ಅವರು ಈ ರೀತಿ ಹೇಳಿದರು, “ಕೌಶಲ್ಯ ಅಭಿವೃದ್ಧಿಯು ಅತ್ಯಂತ ನಿರ್ಣಾಯಕವಾಗಿದೆ, ಏಕೆಂದರೆ ಇದು ಉದ್ಯೋಗ ಮತ್ತು ಕಾರ್ಮಿಕ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ರಚನಾತ್ಮಕ ರೂಪಾಂತರ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.  ಭಾರತವು ಹೆಚ್ಚು ಯುವ ಸಮೂಹವನ್ನು ಹೊಂದಿರುವ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಒಂದಾಗಿದೆ, ದುಡಿಯುವ ವಯಸ್ಸಿನ ಗುಂಪಿನಲ್ಲಿ 62% ಕ್ಕಿಂತ ಹೆಚ್ಚು ಜನಸಂಖ್ಯೆ ಮತ್ತು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಟ್ಟು ಜನಸಂಖ್ಯೆಯ 54% ಕ್ಕಿಂತ ಹೆಚ್ಚು ಜನರನ್ನು ಇದು ಹೊಂದಿದೆ. ಇದು ಅಭಿವೃದ್ಧಿಗೆ ಹೆಚ್ಚಿನ ಬಳಕೆಯಾಗದ ಸಾಮರ್ಥ್ಯವನ್ನು ಹೊಂದಿರುವ ಮಾನವ ಸಂಪನ್ಮೂಲಗಳ ದೊಡ್ಡ ಸಂಗ್ರಹವನ್ನು ಸೃಷ್ಟಿಸುತ್ತದೆ.

ಅವರು ಮುಂದುವರೆಯುತ್ತಾ ಈ ರೀತಿ ಹೇಳಿದರು  “NSDC ಯೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ ಏಕೆಂದರೆ ಇದು ಭಾರತದಲ್ಲಿ ಶಿಕ್ಷಣ ಮತ್ತು ಶೈಕ್ಷಣಿಕ ಆರ್ಥಿಕ ವ್ಯವಸ್ಥೆಯನ್ನು ಪ್ರಜಾಪ್ರಭುತ್ವಗೊಳಿಸುವ ನಮ್ಮ ಉದ್ದೇಶವನ್ನು ಬಲಪಡಿಸಲು ಅವಕಾಶವನ್ನು ನೀಡುತ್ತದೆ. ಇದು ಯಶಸ್ಸಿನ ಉತ್ತುಂಗವನ್ನು ತಲುಪಲು ಮತ್ತು ಅತ್ಯುತ್ತಮ  ಭವಿಷ್ಯಕ್ಕೆ ಸಿದ್ಧವಾಗಿರುವ ಯುವ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾದ ‘ಕುಶಲ ಭಾರತ’ವನ್ನು ಅಭಿವೃದ್ಧಿಪಡಿಸಲು ನಮಗೆ ಅನುವು ಮಾಡಿಕೊಡುತ್ತದೆ. ಈ ಪಾಲುದಾರಿಕೆಯು ನಮ್ಮ ವ್ಯಾಪ್ತಿಯನ್ನು ವರ್ಧಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ನಾವು ನಂಬುತ್ತೇವೆ ಮತ್ತು ಇದು  ಪ್ರತಿಯೊಬ್ಬ ಅರ್ಹ ಭಾರತೀಯ ವಿದ್ಯಾರ್ಥಿಗೆ  ಶೈಕ್ಷಣಿಕ ಹಣಕಾಸು ಸಹಾಯವು  ತಡೆರಹಿತವಾಗಿ ಕೈಗೆಟುಕುವಂತೆ  ಮಾಡುವ ನಮ್ಮ ಧ್ಯೇಯವನ್ನು ಪೂರೈಸುತ್ತದೆ.

ಶ್ರೀ ವೇದ್ ಮಣಿ ತಿವಾರಿ, COO ಮತ್ತು ಕಾರ್ಯನಿರ್ವಾಹಕ CEO, NSDC, ಪ್ರಕಾರ “ಶಿಕ್ಷಣ ಮತ್ತು ಕೌಶಲ್ಯಗಳ ಪ್ರಜಾಪ್ರಭುತ್ವೀಕರಣಕ್ಕೆ ಹಣಕಾಸಿನ ಪ್ರವೇಶವು ನಿರ್ಣಾಯಕವಾಗಿದೆ. ಆವಾನ್ಸೆ ಫೈನಾನ್ಶಿಯಲ್ ಸರ್ವೀಸಸ್‍ನಂತಹ NBFCಗಳೊಂದಿಗಿನ ಸಹಭಾಗಿತ್ವಗಳು NSDC ತನ್ನ ಪ್ರಮುಖ ಉದ್ದೇಶವಾದ ‘ಎಲ್ಲರಿಗೂ ಕೌಶಲ್ಯ, ಯಾವಾಗಲಾದರೂ, ಎಲ್ಲಾದರೂ’  ಕಡೆಗೆ ಒಂದು ಹೆಜ್ಜೆ ಸಾಗಲು  ಸಹಾಯ ಮಾಡುತ್ತವೆ.  ಮತ್ತು ಭಾರತದಲ್ಲಿ ಅಥವಾ ಸಾಗರೋತ್ತರದಲ್ಲಿ ಹೊಸ ಯುಗದ ಉದ್ಯೋಗ/ಉದ್ಯಮಶೀಲತೆಯ ಅವಕಾಶಗಳಿಗಾಗಿ ಕೌಶಲ್ಯಗಳನ್ನು ಪಡೆದುಕೊಳ್ಳಲು ಹಾಗೂ ನಮ್ಮ ಸಮಾಜದ ಹಿಂದುಳಿದ  ವರ್ಗಗಳ ಆರ್ಥಿಕ ಸೇರ್ಪಡೆಯನ್ನು ಸಾಧಿಸಲು ಇದು ಸಹಾಯ ಮಾಡುತ್ತದೆ.

ಆವಾನ್ಸೆ ಫೈನಾನ್ಶಿಯಲ್ ಸರ್ವೀಸಸ್ ಇದು  ~50 ದೇಶಗಳಲ್ಲಿ 3,000+ ಸಂಸ್ಥೆಗಳು ಮತ್ತು 22,000+ ಕೋರ್ಸ್‌ಗಳಲ್ಲಿ ~2.5 ಲಕ್ಷ ಶೈಕ್ಷಣಿಕ ಆಕಾಂಕ್ಷಿಗಳ ಶೈಕ್ಷಣಿಕ ಕನಸುಗಳನ್ನು ಪೂರೈಸಿದೆ. ಜೊತೆಗೆ ಸಂಸ್ಥೆಯು ~ 1K ಶಿಕ್ಷಣ ಸಂಸ್ಥೆಗಳಿಗೆ ಬೆಳವಣಿಗೆ ಮತ್ತು ಕಾರ್ಯ ಬಂಡವಾಳವನ್ನು ಒದಗಿಸಿದೆ ~ 5-6 ಲಕ್ಷ ವಿದ್ಯಾರ್ಥಿಗಳ ಕನಸನ್ನು ಸಾಕಾರಗೊಳಿಸಿದೆ.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.