
- ಮುಂಬರುವ ವರ್ಷಗಳಲ್ಲಿ ಈ ಪ್ರಕರಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ
- ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ವೈದ್ಯರ ಎಚ್ಚರಿಕೆ
• ಇಂದಿರಾನಗರದ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ದೇಶದ ಮೊದಲ “ ಡ್ರೈ ಐ ಸ್ಪೆಷಾಲಿಟಿ ಕ್ಲಿನಿಕ್ ” ಉದ್ಘಾಟನೆ
*ಆಸ್ಪತ್ರೆಯಲ್ಲಿ ಆಗಸ್ಟ್ 15 ರವರೆಗೆ ಉಚಿತ ನೇತ್ರ ತಪಾಸಣೆ ಶಿಬಿರ
ಬೆಂಗಳೂರು , ಜುಲೈ 07 , 2022 : “ ಶಿಫಾರಸು ಮಾಡಿದ ಅವಧಿಗಳಿಗಿಂತ ಹೆಚ್ಚು ಸಮಯ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳ ಬಳಕೆಯಿಂದಾಗಿ ಡ್ರೈ ಐ ( ಒಣಕಣ್ಣು ) ಪ್ರಕರಣಗಳು ಪ್ರತಿದಿನ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಎಚ್ಚರಿಕೆ ಗಂಟೆಯಾಗಿದೆ . ಇದರೊಂದಿಗೆ ಮಧುಮೇಹ , ಥೈರಾಯ್ಡ್ ಸಮಸ್ಯೆಗಳು ಮತ್ತು ವಿಟಮಿನ್ ಎ ಕೊರತೆಯೂ ಸಹ ಒಣಕಣ್ಣು ಸಮಸ್ಯೆಗೆ ಕಾರಣವಾಗುತ್ತಿವೆ ” ಎಂದು ಬೆಂಗಳೂರಿನ ಇಂದಿರಾನಗರದ ಡಾ.ಅಗರ್‌ವಾಲ್ಸ್ ಐ ಹಾಸ್ಪಿ ಡಾ .ಸಂಜನಾ ವತ್ಸ ಎಚ್ಚರಿಕೆ ನೀಡಿದ್ದಾರೆ . ಮೊದಲ ಡ್ರೈ ಐ ಕ್ಲಿನಿಕ್ ಅನ್ನು ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಡಾ.ಸಂಜನಾ ವತ್ಸ ಅವರು ಈ ಎಚ್ಚರಿಕೆಯನ್ನು ನೀಡಿದ್ದಾರೆ . ಇಂದಿರಾನಗರದಲ್ಲಿರುವ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಈ ಕ್ಲಿನಿಕ್ ಆರಂಭವಾಗಿದೆ . ಈ ಹೊಸ ಕ್ಲಿನಿಕ್‌ನ ಉದ್ಘಾಟನಾ ಕೊಡುಗೆಯಾಗಿ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನಲ್ಲಿ 2022 ರ ಆಗಸ್ಟ್ 15 ರವರೆಗೆ ಉಚಿತ ಒಣಕಣ್ಣು ತಪಾಸಣೆ ಮತ್ತು ವೈದ್ಯರ ಕನ್ಸಲ್ವೇಶನ್ ಸೌಲಭ್ಯವನ್ನು ಬೆಂಗಳೂರಿನ ನಾಗರಿಕರಿಗೆ ಕಲ್ಪಿಸಲಾಗುತ್ತಿದೆ . ಬೆಂಗಳೂರು : ಭಾರತದ ಐಟಿ ರಾಜಧಾನಿಯಾಗಿದ್ದು , ಇಲ್ಲಿ ಲಕ್ಷಾಂತರ ಮಂದಿ ಐಟಿ ವೃತ್ತಿಪರರು ಮನೆಯಿಂದ / ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಲ್ಲಿ ಭಾಗಿಯಾಗುತ್ತಿದ್ದಾರೆ . ಇವರು ಅತಿಯಾಗಿ ಕಂಪ್ಯೂಟರ್ ಅಥವಾ ಮೊಬೈಲ್‌ಗಳನ್ನು ಬಳಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಒಣ ಕಣ್ಣಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿವೆ . ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಸರ್ಜನ್‌ಗಳ ಪ್ರಕಾರ , ಇತ್ತೀಚಿನ ದಿನಗಳಲ್ಲಿ ಈ ಒಣಕಣ್ಣು ಪ್ರಕರಣಗಳು ಶೇ .10 ರಿಂದ ಶೇ .30 ರಷ್ಟು ಹೆಚ್ಚಳವಾಗಿವೆ . ಈ ಹೊಸ ಡ್ರೈ ಐ ಕ್ಲಿನಿಕ್‌ನಲ್ಲಿ ಇತ್ತೀಚಿನ ಮತ್ತು ಅತ್ಯಾಧುನಿಕವಾದ ಡಯಾಗ್ನಾಸ್ಟಿಕ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ . ಕಣ್ಣಿನಲ್ಲಿ ಉತ್ಪತ್ತಿಯಾಗು ನೀರಿನ ಪ್ರಮಾಣ ಮತ್ತು ಗುಣಮಟ್ಟವನ್ನು ಸುಧಾರಣೆ ಮಾಡುವ “ ಇಂಟೆನ್ಸ್ ಪಲ್ಸ್ ಲೈಟ್ ಥೆರಪಿ ” ಸೇರಿದಂತೆ ಇನ್ನಿತರೆ ಚಿಕಿತ್ಸಾ ಆಯ್ಕೆಗಳನ್ನು ಈ ತಂತ್ರಜ್ಞಾನ ಹೊಂದಿದೆ . ಈ ಥೆರಪಿಯು ಗಣನೀಯ ಪ್ರಮಾಣದಲ್ಲಿ ಪ್ರಕರಣಗಳು ಒಣಕಣ್ಣಿನ ಲಕ್ಷಣಗಳು ಮತ್ತು ಸಮಸ್ಯೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ . ವಿಶೇಷವಾಗಿ ಕಣ್ಣಿನ ಡ್ರಾಪ್ಸ್ ಬಳಸಿದರೂ ಸಮರ್ಪಕ ಪರಿಹಾರ ಕಾಣದಿರುವ ರೋಗಿಗಳಿಗೆ ಇದು ಅನುಕೂಲವಾಗಲಿದೆ.
ಇಂದಿರಾನಗರದ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಕಾರ್ನಿಯಾ ಅಂಡ್ ರಿಫ್ರಾಕ್ಟಿವ್ ಸರ್ಜನ್ ಡಾ.ಸಂಜನಾ ವತ್ಸಾ ಅವರು ಮಾತನಾಡಿ , 20 ರಿಂದ 40 ವರ್ಷ ವಯೋಮಾನದವರಲ್ಲಿ ಈ ಒಣಕಣ್ಣು ಹೆಚ್ಚಳವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ . ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರಲ್ಲಿ ಬಹುತೇಕ ಜನರು ಐಟಿ ಉದ್ಯೋಗನಿರತ ವೃತ್ತಿಪರರು ಅಥವಾ ಆನ್‌ಲೈನ್‌ನಲ್ಲಿ ತರಗತಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ . ಎಲೆಕ್ಟ್ರಾನಿಕ್ ಸಾಧನಗಳನ್ನು ಹೆಚ್ಚಾಗಿ ಬಳಸುವುದರಿಂದ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ . ಇದು ಸಾಮಾನ್ಯವಾಗಿ ಒಣಕಣ್ಣು ಪ್ರಕರಣಗಳು ಕಾರಣವಾಗಿರುತ್ತದೆ . ಇದರ ಪರಿಣಾಮ ಇತ್ತೀಚಿನ ತಿಂಗಳುಗಳಲ್ಲಿ ಈ ಒಣಕಣ್ಣು ಶೇ .30 ರಷ್ಟು ಹೆಚ್ಚಳವಾಗಿದೆ . ಮುಂಬರುವ ವರ್ಷಗಳಲ್ಲಿ ಈ ಸಮಸ್ಯೆ ಪ್ರಮಾಣ ಇನ್ನೂ ಶೇ .15 ರಷ್ಟು ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಗಳಿವೆ ” ಎಂದು ಹೇಳಿದರು . ಈ ಒಣ ಕಣ್ಣು ಸಮಸ್ಯೆಯಿಂದ ಬಳಲದೇ ಇರಬೇಕಾದರೆ ಅತ್ಯುತ್ತಮವಾದ ಐ ಡ್ರಾಪ್ ಮತ್ತು ಜೆಲ್ ಅನ್ನು ಬಳಸಬೇಕು ಮತ್ತು ಇದರ ಮೂಲಕ ಕಣ್ಣುಗಳನ್ನು ತೇವಾಂಶ ಮತ್ತು ಒಣಗುವುದರಿಂದ ದೂರವಿಡಬೇಕು . ಕೆಲವು ಪ್ರಕರಣಗಳಿಗೆ ಐ ಡ್ರಾಪ್ಸ್ ಜೊತೆಗೆ ಕ್ರಮಬದ್ಧವಾದ ಮಾತ್ರೆಯಂತಹ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ . ಆದಾಗ್ಯೂ , ಗಂಭೀರ ಮತ್ತು ದೀರ್ಘಕಾಲೀನ ಪ್ರಕರಣಗಳಲ್ಲಿ ಐಡ್ರಾಪ್ಸ್ ಅಥವಾ ಕ್ರಮಬದ್ಧವಾದ ಔಷಧಿಗಳಿಗೆ ಪ್ರತಿಕ್ರಿಯೆ ನೀಡದಿದ್ದಾಗ “ ಇಂಟೆನ್ಸ್ ಪಲ್ಸ್ ಲೈಟ್ ಥೆರಪಿ ” ಯಂತಹ ಆಧುನಿಕ ಚಿಕಿತ್ಸೆಯನ್ನು ಪಡೆಯುವುದು ಸೂಕ್ತವಾಗಿದೆ . ಈ ಚಿಕಿತ್ಸೆಯು ಕಣ್ಣಿನ ಸುತ್ತಲಿನ ಗ್ರಂಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಗುಣಮಟ್ಟದ ಕಣ್ಣೀರನ್ನು ಸ್ರವಿಸಲು ಉತ್ತೇಜಿಸುತ್ತದೆ . ಇದು ಒಣ ಕಣ್ಣುಗಳ ಮುನ್ಸೂಚನೆಗಳು ಮತ್ತು ರೋಗಲಕ್ಷಣಗಳಲ್ಲಿ ಗಮನಾರ್ಹವಾದ ಸುಧಾರಣೆಗೆ ನೆರವಾಗುತ್ತದೆ . ಬೆಂಗಳೂರಿನ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಕ್ಲಿನಿಕಲ್ ಸರ್ವೀಸಸ್‌ನ ಪ್ರಾದೇಶಿಕ ಮುಖ್ಯಸ್ಥೆ ಡಾ.ಅರ್ಚನಾ “ ಎಸ್ ಅವರು ಮಾತನಾಡಿ , “ ಒಣ ಕಣ್ಣು ಲಕ್ಷಣಗಳನ್ನು ನಿರ್ಲಕ್ಷಿಸದಿರುವುದು ಕಡ್ಡಾಯವಾಗಿದೆ . ಕಣ್ಣುಗಳಲ್ಲಿ ಸುಡುವ ಅನುಭವ , ಫಾರಿನ್ ಬಾಡಿ ಸೆನ್ಸೆಶನ್ , ತುರಿಕೆ , ಕೆಂಪು ಬಣ್ಣಕ್ಕೆ ತಿರುಗುವುದು , ದೃಷ್ಟಿ ಮಸುಕಾಗುವುದು , ಅಸ್ವಸ್ಥತೆ ಸೇರಿದಂತೆ ಇನ್ನಿತರೆ ಲಕ್ಷಣಗಳು ಕಂಡು ಬಂದ ತಕ್ಷಣ ನೇತ್ರ ತಜ್ಞರು ಅಥವಾ ಕಣ್ಣಿನ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು . ಇಂತಹ ರೋಗಲಕ್ಷಣಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ , ನೋವು ಹೆಚ್ಚಾಗಬಹುದು ಮತ್ತು ಕೆಲವ ಸಂದರ್ಭಗಳಲ್ಲಿ ದೃಷ್ಟಿ ದೋಷಕ್ಕೂ ಕಾರಣವಾಗಬಹುದು . ಈ ಹಿನ್ನೆಲೆಯಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ” ಎಂದು ಸಲಹೆ ನೀಡಿದರು . ಬೆಂಗಳೂರಿನ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಕ್ಲಿನಿಕಲ್ ಸರ್ವೀಸಸ್‌ನ ಪ್ರಾದೇಶಿಕ ಮುಖ್ಯಸ್ಥೆ ಡಾ.ತ್ರಿವೇಣಿ ವಿ ಅವರು ಮಾತನಾಡಿ , “ ಇಂದಿರಾನಗರದಲ್ಲಿರುವ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ನಮ್ಮ ಹಾಸ್ಪಿಟಲ್ ಚೇನ್‌ನ ರಿಫಾಕ್ಟಿವ್ ಹಬ್ ಆಗಿದೆ . ಈ ಕೇಂದ್ರದಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ಸಮಗ್ರ ಕಣ್ಣಿನ ಆರೈಕೆಯನ್ನು ಸಮಗ್ರ ರೀತಿಯಲ್ಲಿ ಒದಗಿಸಲು ಅತ್ಯಾಧುನಿಕ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ . ಎರಡು ಮಹಡಿಗಳಲ್ಲಿ ಸ್ಥಾಪಿತವಾಗಿರುವ ಈ ಆಸ್ಪತ್ರೆಯು 5,000 ಚದರಡಿ ಎಸ್ತೀರ್ಣವನ್ನು ಹೊಂದಿದೆ . ಇಲ್ಲಿ ರೋಗಿಗಳಿಗೆ 360 – ಡಿಗ್ರಿ ಸಮಗ್ರ ಕಣ್ಣಿನ ಆರೈಕೆಯನ್ನು ಒಂದೇ ಸೂರಿನಡಿಯಲ್ಲಿ ನೀಡಲಾಗುತ್ತದೆ . ಸಾಮಾನ್ಯ ನೇತ್ರ ವಿಜ್ಞಾನ , ಕಣ್ಣಿನ ಪೊರೆ ಸೇವೆಗಳು , ಲೇಸರ್ ಕಣ್ಣಿನ ಮೊರೆ ಶಸ್ತ್ರಚಿಕಿತ್ಸೆ , ರೆಟಿನಾ ಮತ್ತು ಕಾರ್ನಿಯಾ ಸೇವೆಗಳು , ಗ್ಲುಕೊಮಾ ಮತ್ತು ಆರ್ಬಿಟ್ , ರಿಫ್ರಾಕ್ಟಿವ್ ಸರ್ಜರಿ ಮತ್ತು ಮಕ್ಕಳ ನೇತ್ರ ಚಿಕಿತ್ಸಾ ಸೌಲಭ್ಯಗಳು ಇಲ್ಲಿವೆ ” ಎಂದು ವಿವರಿಸಿದರು .
City Today News
9341997936