
ಇಸ್ರೋದಿಂದ ದಕ್ಷಿಣ ಭಾರತದಲ್ಲಿ ಮೊತ್ತಮೊದಲ ಸ್ಥಾವರ ನ್ಯಾನೊ ಯೂರಿಯಾ ( ದ್ರವ ) ಸ್ಥಾವರ ನಿರ್ಮಾಣ : ಮುಖ್ಯಮಂತ್ರಿಯಿಂದ ನಾಳೆ ಭೂಮಿಪೂಜೆ ಬೆಂಗಳೂರು : ಇಸ್ರೋ ಸಂಸ್ಥೆಯು ದಕ್ಷಿಣ ಭಾರತದಲ್ಲಿ ಮೊತ್ತಮೊದಲ ಬಾರಿಗೆ ನಿರ್ಮಿಸಲಿರುವ ಇ . ನಾನೊ ಯೂರಿಯಾ ( ದ್ರವ ) ಸ್ಥಾವರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ( ಜುಲೈ 14 , 2022 ) ಭೂಮಿಪೂಜೆ ನೆರವೇರಿಸಲಿದ್ದಾರೆ . ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ನರೇಂದ್ರ ತೋಮರ್ , ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಾ . ಮಾನುಖ್ ಮಾಂಡವೀಯ , ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ( ಭಾರತ ಸರ್ಕಾರ ) ರಾದ ಭಗವಂತ ಖೂಬಾ ಮತ್ತಿತರ ಸಂಸದರಾದ ಡಿ.ವಿ.ಸದಾನಂದ ಗೌಡ , ಬಚ್ಚೇಗೌಡ , ರಾಜ್ಯ ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ , ಸಹಕಾರ ಸಚಿವ ಎಸ್ಟಿ , ಸೋಮಶೇಖರ್ , ಕೃಷಿ ಸಚಿವ ಬಿ.ಸಿ. ಪಾಟೀಲ್ , ಆರೋಗ್ಯ ಸಚಿವ ಡಾ.ಕೆ.ಸುಧಾಕರ್ , ಇಫೊ ಅಧ್ಯಕ್ಷ ದಿಲೀಪ್ ಸಂಘಾನಿ , ವ್ಯವಸ್ಥಾಪಕ ನಿರ್ದೇಶಕ ಉದಯಶಂಕರ ಅವ ಮತ್ತಿತರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ . ಒಟ್ಟು 550 ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು , ನಿರ್ಮಾಣವನ್ನು 15 ತಿಂಗಳಲ್ಲಿ ಮುಗಿಸುವ ಕಾಲಮಿತಿ ಹಾಕಿಕೊಳ್ಳ ಲಾಗಿದೆ , ಘಟಕದ ವಾರ್ಷಿಕ ತಯಾರಿಕಾ ಸಾಮರ್ಥ್ಯವು 5 ಕೋಟಿ ಬಾಟಲಿಗಳಾಗಿರುತ್ತದೆ . ಇದು 5 ಕೋಟಿ ಚೀಲ ( ಅಂದರೆ , 22.5 ಲಕ್ಷ ಮೆಟ್ರಿಕ್ ಟನ್ ) ಸಾಮಾನ್ಯ ಯೂರಿಯಾಕ್ಕೆ ಸಮನಾಗಿರುತ್ತದೆ . ಕರ್ನಾಟಕ ಸರ್ಕಾರವು ದೇವನಹಳ್ಳಿ ಬಳಿ 12 ಎಕರೆ ಕೆಐಎಡಿಬಿ ಭೂಮಿಯನ್ನು ಇದಕ್ಕಾಗಿ ಮಂಜೂರು ಮಾಡಿದ್ದು , ಈ ಘಟಕ ನಿರ್ಮಾಣವು ರಸಗೊಬ್ಬರ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಸಹಕಾರಿಯಾಗಲಿದೆ . ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣವನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ . ದೇವನಹಳ್ಳಿ , ತಾಲೂಕು ನಾಗನಾಯಕನಹಳ್ಳಿ , 2 ನೇ ಹಂತದ ಹೈಟೆಕ್ ಡಿಫೆನ್ಸ್ ಮತ್ತು ಏರೋಟೆಕ್ ಪಾರ್ಕ್ ನ ಪ್ಲಾಟ್ 75 ರಲ್ಲಿ ಗುರುವಾರ ಸಂಜೆ 4 ರಿಂದ ರಾತ್ರಿ 8 ರವರೆಗೆ ಕಾರ್ಯಕ್ರಮಗಳು ನಡೆಯಲಿವೆ .
City Today News
9341997936