
ದುಬೈ / ಬೆಂಗಳೂರು , ಜುಲೈ 17, 2022 : ಬ್ಲಾಕ್‌ಚೈನ್ ಆಧಲತ ಟಿಕೆಟಂಗ್ ಪ್ಲಾಟ್‌ಫಾರಂ ಬ್ಲಾಕ್ ಕೆಟ್ಸ್ ಕನ್ನಡ ಸೂಪರ್‌ಸ್ಟಾರ್ ಕಿಚ್ಚ ಸುದೀಪ ಅವರ ಹೊಸ 3 ಡಿ ಚಲನಚಿತ್ರ ವಿಕ್ರಾಂತ್ ರೋಣದ ವಿಶೇಷ ಎನ್‌ಎಫ್‌ಟಿ ಪ್ರೀಮಿಯರ್ ಸದಸ್ಯತ್ವವನ್ನು ಪ್ರಾರಂಭಿಸುತ್ತಿದೆ . ಪ್ರಿಯಾ ಸುದೀಪ ಅವರು ಪ್ರಾರಂಭಿಸಿದ ಜಾಗತಿಕ ಹೂಡಿಕೆಯ ಕಂಪನಿ ಕಾಫಿ ಅಂಡ್ ಬನ್ಸ್ ಇನ್ನೊವೇಷನ್ ಎನ್‌ಎಫ್‌ಟಿ ಟಿಕೆಟಿಂಗ್ ಹಕ್ಕುಗಳನ್ನು ಬ್ಲಾಕ್‌ಟಿಕೆಟ್‌ಗಳಿಗೆ ನೀಡಿರುವುದನ್ನು ದೃಢಪಡಿಸಿದೆ . ಕಾಫಿ ಅಂಡ್ ಬನ್ ಇನ್ನೊವೇಷನ್‌ನ ಗ್ರೂಪ್ ಸಿಇಒ ಝಾರ್‌ಹುಸೇನ್ ಕಲೀಂಖಾನ್ ಇತರೆ ಪ್ಲಾಟ್‌ಫಾರಂಗಳಿಗೆ ಹೋಲಿಸಿದರೆ ಬ್ಲಾಕ್‌ಟಿಕೆಟ್‌ನ ತಾಂತ್ರಿಕ ಔನ್ನತ್ಯವು ಈ ಚಿತ್ರಕ್ಕೆ ಟಿಕೆಟಿಂಗ್ ಪ್ಲಾಟ್‌ಫಾರಂ ಆಗಿ ಆಯ್ಕೆ ಮಾಡಿಕೊಳ್ಳಲು ಕಾರಣ ಎಂದರು . ಇದು ವಿಶ್ವದಲ್ಲಿಯೇ ಮೊದಲ ಬಾಲಗೆ ಚಲನಚಿತ್ರವೇ ತನ್ನ ಪ್ರೀಮಿಯರ್ ಟಿಕೆಟ್‌ಗಳು ಮತ್ತು ಸದಸ್ಯತ್ವಗಳನ್ನು ಎನ್‌ಎಫ್‌ಟಿಗಳಾಗಿ ಬಿಡುಗಡೆ ಮಾಡುತ್ತಿರುವುದಾಗಿದೆ . ಅಭಿಮಾನಿಗಳು ಸಿಲ್ವರ್ , ಗೋಲ್ಡ್ , ಪ್ಲಾಟಿನಂ ಮತ್ತು ಡೈಮಂಡ್ ಎನ್‌ಎಫ್‌ಟಿ ಸದಸ್ಯತ್ವಗಳನ್ನು ಪಡೆಯುವುದಲ್ಲದೆ ಪ್ರೀಮಿಯರ್ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್‌ಗೆ ಪ್ರವೇಶ , ಚಲನಚಿತ್ರದ ಎನ್‌ಎಫ್‌ಟಿ ಲೋಗೊ , ವಿಶೇಷವಾದ ಪಾರ್ಟಿ ಆಹ್ವಾನಗಳು , ಮುಂಚೂಣಿಯ ನಟರೊಂದಿಗೆ ಛಾಯಾಚಿತ್ರಗಳ ಅವಕಾಶಗಳು ಮತ್ತು ತಾರೆಯರೊಂದಿಗೆ ನೇರ ಸಂವಹನದ ಅವಕಾಶ ಹೊಂದುತ್ತಾರೆ .

ವಿಕ್ರಾಂತ್ ರೋಣ ಚಲನಚಿತ್ರವು ಹಿಂದಿ , ಕನ್ನಡ , ತಮಿಳು , ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ . ವಿಕ್ರಾಂತ್ ರೋಣ ಫ್ಯಾಂಟಸಿ ಆ್ಯಕ್ಷನ್ – ಸಾಹಸದ ಥ್ರಿಲ್ಲರ್ ಆಗಿದ್ದು ಅನೂಪ್ ಭಂಡಾಲಿ ರಚಿಸಿ ನಿರ್ದೇಶಿಸಿದ್ದಾರೆ . ಜುಲೈ 26 , 2022 ರಂದು ಈ ಪ್ರೀಮಿಯರ್ ಕಾರ್ಯಕ್ರಮ ನಡೆಸಲಾಗುತ್ತದೆ . ಎನ್‌ಎಫ್‌ಟಿ ಸದಸ್ಯತ್ವ ಕೊಂಡ ಅಭಿಮಾನಿಗಳು ಅವುಗಳನ್ನು ಸ್ಮರಣಿಕೆಗಳಾಗಿ ಉಳಿಸಿಕೊಳ್ಳಬಹುದು . ಅಥವಾ ಬ್ಲಾಕ್‌ಚೈನ್‌ನಲ್ಲಿ ಸೆಕೆಂಡಲ ಮಾರುಕಟ್ಟೆಯಲ್ಲಿ ವಿಶೇಷ ಕಲೆಕ್ಟಿಬಲ್ಸ್ ಆಗಿ ಮಾರಾಟ ಮಾಡಬಹುದು . ಇದು ಅಭಿಮಾನಿಗಳು ವೈಯಕ್ತಿಕವಾಗಿ ಈ ಚಲನಚಿತ್ರದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಮೂಲಕ ತಲ್ಲೀನಗೊಲಿಸುವ ಅನುಭವ ಸೃಷ್ಟಿಸುತ್ತದೆ . ಕಿಚ್ಚ ಸುದೀಪ ಅವರಲ್ಲದೆ ‘ ವಿಕ್ರಾಂತ್ ರೋಣ’ದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ , ನಿರೂಪ್ ಭಂಡಾಲ , ನೀತಾ ಅಶೋಕ್ , ರವಿಶಂಕರ್ ಗೌಡ ಮತ್ತು ವಾಸುಕಿ ವೈಭವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ . “ ಇದು ದೊಡ್ಡ ಚಲನಚಿತ್ರ ನಮಗೆ ಸದಾ ದೊಡ್ಡ ಆಲೋಚನೆ , ದೊಡ್ಡ ಚಿಂತನೆ ಇತ್ತು . ಚಲನಚಿತ್ರವೊಂದಕ್ಕೆ ವಿಶ್ವದ ಮೊದಲ ಎನ್‌ಎಫ್ ಟಿ ಪ್ರೀಮಿಯರ್ ಸದಸ್ಯತ್ವ ಅಡುಗಡೆ ಮಾಡುವುದು ಹೊಸ , ಹೆಚ್ಚು ಸಂವಹನಪೂರ್ವಕ ಮತ್ತು ಸಕ್ರಿಯಗೊಳಿಸುವ ಅನುಭವವನ್ನು ನಮ್ಮ ಅಭಿಮಾನಿಗಳಿಗೆ ತರಲು ನೆರವಾಗಿದೆ . ಅಭಿಮಾನಿಗಳು ಈ ಅನುಭವವನ್ನು ದೀರ್ಘಕಾಲ ನೆನಪಿನಲ್ಲಿ ಇಲಿಸಿಕೊಳ್ಳಬೇಕು ಎನ್ನುವುದು ನನ್ನ ಬಯಕೆ , ವಿಶ್ವದಲ್ಲಿ ಮೊಟ್ಟಮೊದಲ ಬಾಲಗೆ ಬ್ಲಾಕ್‌ಕೆಟ್ ಜೊತೆಯಲ್ಲಿ ಸಹಯೋಗಕ್ಕೆ ನಾವು ಬಹಳ ಉತ್ಸುಕರಾಗಿದ್ದೇವೆ ” ಎಂದು ತಮ್ಮ ಚಿತ್ರದ ಎನ್‌ಎಫ್‌ಟಿ : ಸದಸ್ಯತ್ವ : ಬಿಡುಗಡೆ ಮಾಡಿದ ಕಿಚ್ಚ ಸುದೀಪ ಹೇಳಿದರು . ” ಈ ಸಾಂಕ್ರಾಮಿಕವು ಮನರಂಜನೆಯ ಉದ್ಯಮಕ್ಕೆ ಅದರಲ್ಲಿಯೂ ಚಲನಚಿತ್ರ ವಹಿವಾಟಿಗೆ ಬಹಳ ಕಠಿಣವಾಗಿತ್ತು . ಉದ್ಯಮವು ಮತ್ತೆ ಯಥಾಸ್ಥಿತಿಗೆ ಮರಳುತ್ತಿರುವಾಗ ಎನ್‌ಎಫ್‌ಟಿಕೆಟಿಂಗ್ ಅಭಿಮಾನಿಗಳ ಸಕ್ರಿಯತೆಯನ್ನು ಹೆಚ್ಚಿಸುವ ವಿಧಾನವಾಗಿದ್ದು , ಅವರಿಗೆ ಚಲನಚಿತ್ರದ ಇತಿಹಾಸದಲ್ಲಿ ತಮ್ಮದೇ ಆದ ಭಾಗವನ್ನು ಹೊಂದಲು ಅವಕಾಶ ನೀಡುತ್ತಿದೆ . ವಿಸ್ತಲಸುತ್ತಿರುವ ಮೆಟಾವರ್ಸ್ ಮತ್ತು ಎನ್‌ಎಫ್‌ಟಿಗಳ ಜಗತ್ತನ್ನು ಅವಿಷ್ಕರಿ ಸಲು ನಾವು ಬಹಳ ಉತ್ಸುಕರಾಗಿದ್ದೇವೆ ” ಎಂದು ಪ್ರಿಯಾ ಸುದೀಪ ಹೇಳಿದರು . ಎನ್‌ಎಫ್‌ಟಿಗಳು ಬ್ಲಾಕ್‌ಚೈನ್‌ನಲ್ಲಿ ರೂಪಿಸಲಾದ ಮಾಲೀಕತ್ವದ ಪ್ರಮಾಣಪತ್ರಗಳು ಅವು ಡಿಜಿಟಲ್ ಅಥವಾ ನೈಜ ಜಗತ್ತಿನ ಸಂಪತ್ತನ್ನು ಪ್ರತಿನಿಧಿಸುತ್ತವೆ ” ಟಿಕೆಟಿಂಗ್ ಉದ್ಯಮವು ಹಳೆಯ ಮಾದರಿಯ ಟಿಕೆಟಿಂಗ್ ಪದ್ಧತಿ ಹೊಂದಿದ್ದು ಅದು ದೋಷಯುತವಾಗಿತ್ತು ಮತ್ತು ಆವಿಷ್ಠಾರದ ಕೊರತೆ ಹೊಂದಿತ್ತು . ಬ್ಲಾಕ್‌ಟಿಕೆಟ್ ಪ್ರವೇಶದಿಂದ ಅದು ನಿರ್ಲಕ್ಷಿಸುತ್ತಿದ್ದ ಟಿಕೆಟ್‌ಗಳನ್ನು ಆನಂದದಾಯಕ ಅನುಭವಗಳಿಗೆ ಪಲವರ್ತಿಸುತ್ತಿದ್ದು ಸಂಘಟಕರು , ಕಲಾವಿದರು ಮತ್ತು ಗ್ರಾಹಕರಿಗೆ ಹೊಸ ದಿಗಂತಗಳನ್ನು ತೆರೆದಿದೆ ” ಎಂದು ಬ್ಲಾಕ್‌ಟಿಕೆಟ್‌ನ ಸಂಸ್ಥಾಪಕ ನಿಶಾಂತ್ ಚಂದ್ರ ಹೇಆದರು . ನಾವು ನಿಜಕ್ಕೂ ಕಿಚ್ಚ ಸುದೀಪ ಹಾಗೂ ವಿಕ್ರಾಂತ್ ರೋಣ ಜೊತೆಯಲ್ಲಿ ಸಹಯೋಗವು ಚಲನಚಿತ್ರೋದ್ಯಮಕ್ಕೆ ಮುಂದುವಲದ ಮೌಲ್ಯ ಸೃಷ್ಟಿಸುತ್ತದೆ ಎಂದು ನಂಬುತ್ತೇವೆ . ವಿಶ್ವದಲ್ಲಿ ಮೊಟ್ಟಮೊದಲ ಬಾಲಕೆ ಚಲನಚಿತ್ರವೊಂದು ಎನ್‌ಎಫ್‌ಟಿ ಸದಸ್ಯತ್ವಗಳನ್ನು ಪ್ರಾರಂಭಿಸುತ್ತಿದೆ . ಇದು ಚಿತ್ರ ನಿರ್ಮಾಪಕರಿಗೆ ಮತ್ತೊಂದು ಮಾರ್ಗದ ಲಭ್ಯತೆ ತೋರಿಸುತ್ತದೆ ಮತ್ತು ಅಭಿಮಾನಿಗಳಿಗೆ ಜೀವಿತಕಾಲದ ಅನುಭವ ಉಳಿಸುತ್ತದೆ ” ಎಂದು ಬ್ಲಾಕ್‌ಟಿಕೆಟ್ಸ್‌ನ ಸಂಸ್ಥಾಪಕ ಅಭಿನವ್ ಗಾರ್ಗ್ ಹೇಳಿದರು . ಬ್ಲಾಕ್‌ಟಿಕೆಟ್ ಭಾರತದಲ್ಲಿ ಎನ್‌ಎಫ್‌ಐ ಆಧಲತ ಟಿಕೆಟಿಂಗ್ ಅನುಭವದಲ್ಲಿ ಮುಂಚೂಣಿಯಲ್ಲದೆ ಮತ್ತು ಈಗಾಗಲೇ ಹಲವಾರು ಕಾರ್ಯಕ್ರಮಗಳಲ್ಲಿ ಸಹಯೋಗ ಹೊಂದಿದ್ದು ಮೆಟಾವರ್ಸ್‌ನಲ್ಲಿ ಮೊಟ್ಟಮೊದಲ ಹೋಲಿ ಹಬ್ಬ , ಎನ್‌ಎಫ್‌ಟಿ ಆಧಲತ ಮ್ಯೂಸಿಕಾಥಾನ್ ಆಯೋಜಿಸಿತ್ತು . ವೆಬ್‌ಗೆ ಅವರು ಯೂನಿಕಪ್‌ಒನ್ ಎಂಬ ಮಲ್ಟಚೈನ್ ವೆಬ್ ಪ್ಲಾಟ್‌ಫಾರಂ ಜೊತೆಯಲ್ಲಿ ಸಹಯೋಗ ಹೊಂದಿತ್ತು . ಬ್ಲಾಕ್‌ಟಿಕಟ್ ವಿಕ್ರಾಂತ್ ರೋಣ ಜೊತೆಯಲ್ಲಿನ ಸಹಯೋಗವು ಹಲವು ಇತರ ಸರಣಿಯಲ್ಲಿ ಹೊಚ್ಚಹೊಸದಾಗಿದೆ . ಈ ಅತ್ಯಂತ ನಿರೀಕ್ಷೆಯ ಚಲನಚಿತ್ರವು ಜುಲೈ 28 , 2022 ರಂದು ಚಿಡುಗಡೆಯಾಗದೆ .
City Today News – 9341997936