
ಬೆಂಗಳೂರು , 19 ಜುಲೈ 2022 : ಕ್ಯಾನ್ಸರ್ ಚಿಕಿತ್ಸೆಯ ನಂತರ ಸಕಾರಾತ್ಮಕ ಜೀವನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಭಾರತದ ಅತ್ಯುತ್ತಮ ಖಾಸಗಿ ಕ್ಯಾನ್ಸರ್ ಆಸ್ಪತ್ರೆಗಳು ಮತ್ತು ವಿಶ್ವದ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದು ಎನಿಸಿರುವ ಅಪೊಲೊ ಕ್ಯಾನ್ಸರ್ ಸೆಂಟರ್ಸ್ ( ACC ) , ಅವು ‘ ಕ್ಯಾನ್ಸರ್ ನಂತರದ ಜೀವನ ‘ ಎಂಬ ಕಾರ್ಯಕ್ರಮವನ್ನು ಆಚರಿಸುತ್ತಿವೆ . ಇತ್ತೀಚಿನ ಉಪಕ್ರಮವಾದ ‘ ಪೀಕ್ ಟು ಪೀಕ್ – ವಿನ್ನಿಂಗ್ ಓವರ್ ಕ್ಯಾನ್ಸರ್ ‘ – ಕ್ಯಾನ್ಸರ್ ಪೀಡಿತರಾಗಿ ಬದುಕುಳಿದವರು ಮತ್ತು ಆರೈಕೆ ಮಾಡಿಸಿಕೊಳ್ಳುತ್ತಿರುವವರೊಂದಿಗೆ ಜೂನ್ 2022 ರಂದು , 5 – ದಿನಗಳ ಚಾರಣದ ಮೂಲಕ ಡೆಹ್ರಾಡೂನ್‌ನಿಂದ ಪ್ರಾರಂಭವಾದ ಈ ಉಪಕ್ರಮವು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಯಾವುದೇ ರೋಗಿಯು ಹೊಂದಿರಬಹುದಾದ ನಕಾರಾತ್ಮಕ ಭಾವನೆಗಳನ್ನು ಪರಿಹರಿಸುವತ್ತ ಕೇಂದ್ರೀಕೃತವಾಗಿದೆ . ದೇಶದ ವಿವಿಧ ಭಾಗಗಳಿಂದ ಬಂದಿದ್ದ , ಕ್ಯಾನ್ಸರ್ ಅನ್ನು ಜಯಿಸಿದ್ದ ಎಂಟು ಜನ ಜೂನ್ 4 , 2022 ರಂದು ಡಹಾಡೂನ್‌ನಿಂದ ಪಯಣವನ್ನು ಆರಂಭಿಸಿ , ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸುವಾಸನೆಯ ಹಸಿರು ಹುಲ್ಲುಗಾವಲುಗಳು ಮತ್ತು ಶ್ರೀಮಂತ ಭೂದೃಶ್ಯಗಳನ್ನು ಹೊಂದಿರುವ 11,830 ಅಡಿ ಎತ್ತರದಲ್ಲಿರುವ ದಯಾರಾ ಬುಗ್ಯಾಲ್‌ವರೆಗೂ ಪ್ರಯಾಣವನ್ನು ಕೈಗೊಂಡರು . ಉಪಕ್ರಮದ ಭಾಗವಾಗಿದ್ದ , ಕ್ಯಾನ್ಸರ್ ಅನ್ನು ಜಯಿಸಿದ್ದ , ಬೆಂಗಳೂರಿನ , 50 ವರ್ಷ ವಯಸ್ಸಿನ ಅರ್ಚನಾ ಹೊಸಂಗಡಿ ಉತ್ತರಾಖಂಡದಲ್ಲಿ 11,830 ಅಡಿ ಎತ್ತರವನ್ನು ಏರಿದ್ದರು .

ಅಪೋಲೋ ಕ್ಯಾನ್ಸರ್ ಸೆಂಟರ್ – ಸೈನಿಕ್ ಆಂಕಾಲಜಿಯಲ್ಲಿ ಪ್ರಮುಖ ಶಸ್ತ್ರಚಿಕಿತ್ಸಾ ಸಮಾಲೋಚಕರಾಗಿದ್ದ ಡಾ.ರಾಣಿ ಅಖಿಲ್ ಭಟ್ ಅವರಿಗೆ ಚಿಕಿತ್ಸೆ ನೀಡಿದ್ದರು . ಅಪೊಲೊ ಕ್ಯಾನ್ಸರ್ , ಕೇಂದ್ರಗಳ ಪ್ರಮುಖ ಶಸ್ತ್ರಚಿಕಿತ್ಸಕರಾದ ಡಾ.ಜಯಂತಿ ತುಮ್ಮಿ ಅವರು ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅಗಾಧವಾದ ಪ್ರಗತಿಯಾಗಿದೆ ಎಂದು ತಿಳಿಸಿದರು .
ಚಿಕಿತ್ಸೆಯ ಯೋಜನೆ ಮಾತ್ರವಲ್ಲದ ಕ್ಯಾನ್ಸರ್ ಚಿಕಿತ್ಸೆಯ ನಂತರದ ಜೀವನದ ಗುಣಮಟ್ಟವೂ ಮುಖ್ಯವಾಗಿರುತ್ತದೆ . ಆಕೆಯು ( ಅರ್ಚನಾ ತನ್ನ ಸ್ತನಕ್ಕೆ ಮಾತ್ರ ಸೀಮಿತವಾದ ರೋಗವನ್ನು ಹೊಂದಿದ್ದರು ಹಾಗೂ ಹಲವಾರು ಇತರ ಅಂಶಗಳನ್ನು ಪರಿಗಣಿಸಿ , ನಾವು ಸಂಟಿನ ನೋಡ್ ಬಯಾಪ್ಸಿ ಮತ್ತು ಸ್ಥಳೀಯ ಅಂಕೊಪ್ಲಾಸ್ಟಿಕ್ ಸರ್ಜರಿಯೊಂದಿಗೆ ಸ್ತನ ಸಂರಕ್ಷಣಾ ಶಸ್ತ್ರಚಿಕಿತ್ಸೆಯನ್ನು ಯೋಜಿಸಿದ್ದವು . ಅವರು ಶಸ್ತ್ರಚಿಕಿತ್ಸೆಯಿಂದ ಚೆನ್ನಾಗಿ ಚೇತರಿಸಿಕೊಂಡಿದ್ದಾರೆ ಹಾಗೂ ಅವರ ಅಂತಿಮ ಹಿಸ್ಕೋಪಾಥಾಲಜಿ ವರದಿಯು ಇದನ್ನು ಹಂಚಿ 2 , ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ( TNBC ) ಎಂದು ತೋರಿಸಿರುತ್ತದೆ . TNBC ಆಕ್ರಮಣಕಾರಿ ಮಾದರಿಯಾಗಿರುತ್ತದೆ , ಆದ್ದರಿಂದ ವೈದ್ಯಕೀಯ ತಂಡವು ಮೂರು ವಾರದ ಮಧ್ಯಂತರಗಳಲ್ಲಿ ಎಂಟು ಚಕ್ರಗಳ ಕಿಮೊಥೆರಪಿಯನ್ನು ನೀಡಲು ಯೋಜಿಸಿತ್ತು . ಇದರ ನಂತರ 25 ಸಿಟ್ಟಿಂಗ್‌ಗಳ ವಿಕಿರಣ ಚಿಕಿತ್ಸೆಯು ಕೂಡ ನಡೆಯಿತು . ಈ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಪ್ರದೇಶದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ . ಮನೀಷ್ ಮಟ್ಟೂ , ” ಈ ತಂತ್ರಜ್ಞಾನ ಯುಗದಲ್ಲಿ , ಸಕಾಲದಲ್ಲಿ ರೋಗಸ್ಥಿತಿಯು ತಪಾಸಣೆಯಾದರೆ , ತಂತ್ರಜ್ಞರ ಸರಿಯಾದ ಜ್ಞಾನದ ಮೂಲಕ ಕ್ಯಾನ್ಸರ್ ಅನ್ನು ಗೆಲ್ಲಲು ಸಾಧ್ಯವಿದೆ , ನಾನು ನಮ್ಮ ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಮತ್ತು ಉತ್ತಮ ಚಿಕಿತ್ಸೆಯನ್ನು ನೀಡುವುದು ಬಹಳ ಮುಖ್ಯ ಎಂದು ಹೇಳಿದರು . “ ಸ್ವಲ್ಪ ತೊಂದರೆಗಳು ಯಾವಾಗಲೂ ಎದುರಾಗುತ್ತವೆ , ಆದರೆ ಭಯವನ್ನು ಹೋಗಲಾಡಿಸುವಲ್ಲಿ ಮತ್ತು ಅದರಿಂದ ಹೊರಬರುವಲ್ಲಿ ಮನುಷ್ಯನ ಶಕ್ತಿಯು ಅಡಗಿದೆ . ಪೀಕ್ – ಟು – ಪೀಕ್ ಉಪಕ್ರಮದ ಮೂಲಕ ಆರೋಗ್ಯವಾಗಿರುವ ಹಾಗೂ ಜೀವನದ ಸಾಹಸಗಳನ್ನು ಉತ್ಸಾಹದಿಂದ ಗ್ರಹಿಸಿ ಬದುಕಲು ಬಯಸುವ ಕ್ಯಾನ್ಸರ್ ಯೋಧರು ಹೊಂದಿರುವ ಆಧಾರವಾಗಿರುವ ಶಕ್ತಿಯನ್ನು ನಾವು ಪ್ರದರ್ಶಿಸುತ್ತಿದ್ದೇವೆ . ” ಫೀಕ್ ಟು ಪೀಕ್ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ ಡಾ . ರಾಣಿ ಭಟ್ , ಹಿರಿಯ ಸ್ತ್ರೀರೋಗ ಅಂಕಾಲಜಿಸ್ಟ್ , ” ಅಪೊಲೊ ಕ್ಯಾನ್ಸರ್ ಕೇಂದ್ರಗಳಲ್ಲಿ ನಾವು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದು ಪ್ರಯಾಣದ ಒಂದು ಭಾಗ ಮಾತ್ರ ಎಂದು ನಂಬುತ್ತೇವೆ , ನಮ್ಮಿಂದಾಗಿ ಬದುಕುಳಿದವರ ಕಡೆಗಣಿಸಲ್ಪಟ್ಟ ಅಗತ್ಯತೆಗಳನ್ನು ನಾವು ಪರಿಹರಿಸಲು ಬಯಸುತ್ತೇನೆ . ನಮ್ಮಿಂದಾಗಿ ಕ್ಯಾನ್ಸರ್ನಿಂದ ಬದುಕುಳಿದವರು ಕ್ಯಾನ್ಸರ್ ಚಿಕಿತ್ಸೆಯ ನಂತರವೂ ಸಹ ಸಾಮಾನ್ಯ ಜೀವನವನ್ನು ನಡೆಸಬಹುದು ಎನ್ನುವುದನ್ನು ಅರಿತುಕೊಳ್ಳಬೇಕೆಂದು ನಾವು ಬಯಸಿದ್ದೇವೆ , ಹೀಗಾಗಿ ‘ ಪೀಕ್ ಟು ಪೀಕ್ ಹುಟ್ಟಿದೆ , ನಾವು ಎಂಟು ಕ್ಯಾನ್ಸರ್ ಬದುಕುಳಿದವರನ್ನು ಹೊಂದಿದ್ದೇವೆ , ಅವರು ಉತ್ತರಾಖಂಡದ 11,840 ಅಡಿ ಎತ್ತರದಲ್ಲಿರುವ ದಯಾರಾ ಬುಗ್ಯಾಲ್‌ಗೆ ಟ್ರೆಕ್ಕಿಂಗ್ ಮಾಡಿದರು , ಮತ್ತು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು . ಈ ಘಟನೆಯು ಬದುಕುಳಿದವರಿಗೆ ಸಂಭ್ರಮಾಚರಣೆಯ ಸಂಕೇತವಾಗಿದೆ . ಇತ್ತೀಚೆಗೆ ರೋಗನಿರ್ಣಯ ಮಾಡಿದವರಿಗೆ ಒಂದು ಸ್ಪೂರ್ತಿಯಾಗಿದೆ . ಕುಟುಂಬಗಳಿಗೆ ಬೆಂಬಲದ ಕೂಟ ಮತ್ತು ಸಮುದಾಯಕ್ಕೆ ಔಟ್‌ರೀಚ್ ಆಗಿರುತ್ತದೆ . ಅಪೋಲೋ ಕ್ಯಾನ್ಸರ್ ಸೆಂಟರ್ , ಅರ್ಚನಾ ಹೊಸಂಗಡಿಯವರು ತಮ್ಮ ಪ್ರಯಾಣದ ಬಗ್ಗೆ ಅನುಭವವನ್ನು ಹಂಚಿಕೊಂಡರು , ” ನಾನು ಮೇ 2019 ರಲ್ಲಿ 2 ನೇ ಹಂತದ ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ರೋಗನಿರ್ಣಯಕ್ಕೆ ಒಳಗಾಗಿದ್ದೆ . ನಂತರ , ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ , ಎಂಟು ಚಕ್ರಗಳು ಮತ್ತು 25 ವಿಕಿರಣಗಳ ಅತ್ಯಂತ ತೀವ್ರವಾದ ಕೀಮೋಥೆರಪಿ , ಇದು ನಾನು ಅನಾರೋಗ್ಯದಿಂದ ಗುಣಮುಖಳಾಗಲು ಸಹಾಯ ಮಾಡಿದರೂ ಸಹ , ನನ್ನನ್ನು ದುರ್ಬಲಗೊಳಿಸಿತು ಹಾಗೂ ನನ್ನ ಎಲ್ಲಾ ಅತ್ಮವಿಶ್ವಾಸವನ್ನು ಬರಿದುಮಾಡಿತ್ತು . ನನ್ನ ಚಿಕಿತ್ಸೆಯ ಸ್ವಲ್ಪ ಸಮಯದ ನಂತರವೇ ನಾನು ಜಿಮಗೆ ಹಿಂತಿರುಗಿದೆ ಆದರೆ ಯಾವಾಗಲೂ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಿತ್ತಿದ್ದೆ . ಅವರ ಪ್ರಕಾರ , ಎಲ್ಲಾ ಎಂಟು ಬದುಕುಳಿದವರು ಉನ್ನತ ಆರೋಗ್ಯ ಸ್ಥಿತಿಯನ್ನು ಪಡೆಯಬಹುದನ್ನುವುದನ್ನು ವೀಕ್ಷಿಸುವುದು ಹಾಗೂ ಅನುಭವಿಸುವುದು ತೃಪ್ತಿಕರವಾಗಿತ್ತು . ನಮ್ಮ ಅನಾರೋಗ್ಯದ ಮೇಲಿನ ವಿಜಯವನ್ನು ಪರ್ವತದ ವಿಜಯದಂತೆ ಪರಿಗಣಿಸಿ ಉಪಕ್ರಮವನ್ನು ಪೀಕ್ ಟು ಪೇಕ್ ‘ ಎಂದು ಕರೆಯಲಾಯಿತು . ಪ್ರಯಾಣವನ್ನು ಕೊನೆಗೊಳಿಸಿದಾಗ ನಾನು ಅತ್ಯಂತ ಬಾವುಕಳಾಗಿದ್ದ ಹಾಗೂ ನನ್ನ ಭಯವನ್ನು ಗೆದ್ದಿದ್ದೇನೆ , ವಿಜಯಶಾಲಿಯಾಗಿದ್ದೇನೆ ಎನ್ನುವ ಭಾವನೆಯನ್ನು ಅನುಭವಿಸಿದೆ , ನನ್ನ ಆತ್ಮವಿಶ್ವಾಸ ಈಗ ಮರಳಿ ಬಂದಿದೆ ಹಾಗೂ ನಾನು ನಿಯಮಿತವಾಗಿ ಚಾರಣವನ್ನು ಮುಂದುವರಿಸಲು ಯೋಚಿಸುತ್ತಿದ್ದನೆ , ” ಎಂದು ಅರ್ಚನಾ ಅವರು ಸೇರಿಸಿದರು . ಧೈಯವಾಕ್ಯಕ್ಕೆ ಅನುಗುಣವಾಗಿ – ‘ ಕ್ಯಾನ್ಸರ್ ಅನ್ನು ಗೆಲ್ಲುವುದು ‘ , ACC ಕ್ಯಾನ್ಸರ್ ಬಗ್ಗೆ ಅದರ ಸುತ್ತಲೂ ಇರುವ ಭಯದ ವಾತಾವರಣವನ್ನು ಹೊರಹಾಕಲು ಮತ್ತು ಕ್ಯಾನ್ಸರ್ ಪೀಡಿತರಾಗಿ ಹಾಗೂ ಅದರಿಂದ ಬದುಕುಳಿದವರ ಕಥೆಯನ್ನು ಹಂಚಿಕೊಳ್ಳುವ ಮೂಲಕ ಪಾಸಿಟಿವಿಟಿಯನ್ನು ಹರಡುವ ಗುರಿಯನ್ನು ಹೊಂದಿದೆ . ಗೆಲ್ಲುವ ನಂಬಿಕೆಯ ಮುಖ್ಯ ಚಿಂತನೆಯು ಕ್ಯಾನ್ಸರ್ ಅನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಜಯಿಸುತ್ತದೆ .
City Today News- 9341997936