
ನಾನು ಕೇರಳ ಮೂಲದ ಸನಾತನ ಧರ್ಮ ಪ್ರಾಚಾರಕ ಸ್ವಾಮಿ ಭದ್ರಾನಂದ , ಕೇರಳ ಮತ್ತು ಕರ್ನಾಟಕದಲ್ಲಿ ನಾನು ಹೆಚ್ಚಿನ ಸಮಯ ಕಳೆಯುತ್ತೇನೆ . ಇತ್ತೀಚೆಗೆ ಮಂಗಳೂರಿನ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಮತ್ತು ಅದರ ನಂತರದಲ್ಲಿ ಕರ್ನಾಟಕ ಆಗುತ್ತಿರುವ ಬದಲಾವಣೆ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ . ಹಾಗೂ ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆ ಅತ್ಯುತ್ತಮವಾಗಿದೆ . ಯಾವುದೇ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ . ಆದರೆ ಪ್ರವೀಣ್ ನೆಟ್ಟಾರು ಹತ್ಯೆ ನಂತರ ಎಲ್ಲರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು ವಿಷಾದನೀಯ . ಕಳೆದ 10 ವರ್ಷ ಅವಧಿಯಲ್ಲಿ ಕೇರಳದಲ್ಲಿ ಆಗುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಹಿಂದೂಗಳ ಕಗ್ಗೋಲೆ ಮುಸ್ಲಿಂ ಮೂಲಭೂತವಾದಿಗಳಿಂದ ನಿರಂತರವಾಗಿ ನಡೆಯುತ್ತಿದೆ . ಕಳೆದ ಒಂದು ದಶಕದ ಅವಧಿಯಲ್ಲಿ 167 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗಿದೆ . ಆದರೆ ಅಲ್ಲಿನ ಪಿಣರಾಯಿ ವಿಜಯನ್ ಸರ್ಕಾರ್ ಹಿಂದೂಗಳಿಗೆ ರಕ್ಷಣೆ ನೀಡುವುದರಲ್ಲಿ ವಿಫಲವಾಗಿರುವುದಲ್ಲದೇ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಬೆನ್ನೆಲುಬಾಗಿ ನಿಂತಂತೆ ವರ್ತಿಸುತ್ತಿದೆ . ಕೇರಳ ಮತ್ತು ಕರ್ನಾಟಕವನ್ನು ತುಲನಾತ್ಮಕವಾಗಿ ನೋಡಿದರೆ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಮಾನ್ಯ ಪ್ರಧಾನಿ ಅವರ ಮಾರ್ಗದರ್ಶನದಲ್ಲಿ ಸರಿಯಾದ ಹೆಜ್ಜೆ ಇಡುತ್ತಿದೆ . ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಅದನ್ನು ಅತ್ಯುತ್ತಮವಾಗಿ ಬೊಮ್ಮಾಯಿ ಅವರು ನಿಭಾಸಿಸುತ್ತಿದ್ದಾರೆ . ಕೇರಳದಂತಹ ಇನ್ನೊಂದು ರಾಜ್ಯ ಹಿಂದೂ ಕಾರ್ಯಕರ್ತರ ಮೇಲೆ , ಹಿಂದೂ ಸಂಘಟನೆಗಳ ಮೇಲೆ ಸಾಕಷ್ಟು ಹಲ್ಲೆ ಮತ್ತು ಹತ್ಯೆಗಳು ನಡೆದಾಗಲೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಕ್ರಮ ಕೈಗೊಳ್ಳದೇನೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಿಗೆ ಪರೋಕ್ಷವಾಗಿ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿರುವ ಉದಾಹರಣೆಗಳಿವೆ . ಕರ್ನಾಟಕದಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇರುವಂತಹ ಪರಿಸ್ಥಿತಿ ಇಲ್ಲ . ಇಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಸುರಕ್ಷಿತ , ಪ್ರತಿ ದಿನ ಹಿಂದೂ ಕಾರ್ಯಕರ್ತರನ್ನ ಹೆಸರಿಸುವ , ಬೆದರಿಸುವ ಪ್ರಯತ್ನ ನಡೆಯುತ್ತಲೇ ಇದೆ .
ಇಂತಹ ಸರ್ಕಾರಗಳನ್ನು ನೋಡಿದಾಗ ಕರ್ನಾಟಕದ ಶ್ರೀನ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಈ ತರಹದ ಘಟನೆಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿವೆ . ಹಿಜಾಬ್ , ಹಲಾಲ್ , ಅಝಾನ್ ನಿರ್ಣಯಗಳನ್ನು ರಾಜ್ಯದಲ್ಲಿ ಶಾಂತ ರೀತಿಯಿಂದ ಅನುಷ್ಠಾನಗೊಸಿರುವುದು ಉಲ್ಲೇಖನೀಯ . ಕರ್ನಾಟದಲ್ಲಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿಯ ಯುವ ಕಾರ್ಯಕರ್ತರು ಭಾವೋದ್ವೇಗದಿಂದ ಪ್ರತಿಕ್ರಯಿಸುತ್ತಿರುವುದು ವಿಷಾದನೀಯ . ನಾವೆಲ್ಲ ಒಂದೆ ಕುಟುಂಬದ ಸನಾತನ ಧರ್ಮದ ಕುಟುಂಬ ಸದಸ್ಯರು . ನಮ್ಮ ನಮ್ಮ ನಡುವಿನ ವೈಯಕ್ತಿಯ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಹೊರ ಹಾಕುವುದು ಸೂಕ್ತವಲ್ಲ . ನಾವೆಲ್ಲರು ಸಂಯಮದಿಂದ ವರ್ತಿಸಬೇಕಾಗಿದೆ . ಸರ್ಕಾರಕ್ಕೆ ನಮ್ಮೆಲ್ಲರ ಬೆಂಬಲ ಅಗತ್ಯ . ೬ ನಮ್ಮ ಕುಟುಂಬ ಒಂದು ದೇಹ ಇದ್ದಂತೆ , ಭಿನ್ನಾಭಿಪ್ರಾಯಗಳ ಮೂಲಕ ನಮ್ಮ ದೇಹದ ಅಂಗಗಳನ್ನು ನಾವೇ ಕತ್ತರಿಸಿಕೊಂಡರೆ ನಮ್ಮ ದೇಹ ವಿಕಲಾಂಗವಾಗುತ್ತದೆ . ಕೊನೆಗೆ ದೇಹವೇ ಇಲ್ಲದಂತಾಗುತ್ತದೆ . ಧರ್ಮೋ ರಕ್ಷತಿ ರಕ್ಷಿತಃ , ಈ ತತ್ವವನ್ನು ಎಲ್ಲರೂ ಪಾಲಿಸೋಣ ಎಂದು ಸ್ವಾಮಿ ಭದ್ರಾನಂದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು . – 9341997937
City Today News – 9341997937