ಉದ್ಯೋಗದ ಹೊಸ ಭವಿಷ್ಯ ರೂಪಿಸುವಿಕೆ: ತಂತ್ರಜ್ಞಾನದಲ್ಲಿ ಉದ್ಯೋಗ

ಕೋವಿಡ್-19 ದೂರದಿಂದಲೇ ಕೆಲಸ ಮಾಡುವ ಹೊಸ ಯುಗಕ್ಕೆ ನಾಂದಿ ಹಾಡಿತು ಮತ್ತು ಉದ್ಯಮಗಳಿಗೆ ಎಂಟರ್ ಪ್ರೈಸ್ ಮೊಬಿಲಿಟಿ ಮ್ಯಾನೇಜ್‍ಮೆಂಟ್(ಇಎಂಎಂ) ಪರಿಹಾರಗಳಲ್ಲಿ ಹೂಡಿಕೆ ಮಾಡುವ ಅಗತ್ಯವನ್ನು ಹೆಚ್ಚಿಸಿತು. ಉತ್ಪಾದಕ ಕೆಲಸ ಎಂದರೆ ಅದು ಕಛೇರಿಗೆ ಸೀಮಿತವಾಗಿಲ್ಲ ಮತ್ತು ಕೆಲಸಗಾರರ ಸಂಖ್ಯೆ ಹೆಚ್ಚಾಗುವುದೆಂದರೆ ವಿಶ್ವದಾದ್ಯಂತ ದೂರದ ಪ್ರದೇಶಗಳಿಂದ ಇಂಟರ್ ನೆಟ್ ಲಭ್ಯತೆ ದೊರೆಯುವುದು ಎಂದರ್ಥವಾಗಿದೆ. ವಿಶ್ವದ ಅತ್ಯಂತ ವಿಶ್ವಾಸಾರ್ಹ ಮೊಬೈಲ್ ಹಾಗೂ ಐಒಟಿ ಡಿವೈಸ್ ಮ್ಯಾನೇಜ್‍ಮೆಂಟ್ ಪರಿಹಾರಗಳ ಪೂರೈಕೆದಾರ ಎಸ್‍ಒಟಿಐ ನೀಡಿರುವ ಜಾಗತಿಕ ವರದಿಯ ಪ್ರಕಾರ 2020 ಮತ್ತು 2021ರ ನಡುವೆ ಮೊಬೈಲ್ ತಂತ್ರಜ್ಞಾನ ಅಥವಾ ಮೊಬೈಲ್ ಭದ್ರತೆಗೆ ಶೇ.57ರಷ್ಟು ಉದ್ಯಮಗಳು ಹೂಡಿಕೆ ಮಾಡಿವೆ.
ಕೃತಕ ಬುದ್ಧಿಮತ್ತೆ(ಎಐ), ವೆಬ್3, ಸೈಬರ್ ಸೆಕ್ಯುರಿಟಿ, ಮೊಬೈಲ್ ಮ್ಯಾನೇಜ್‍ಮೆಂಟ್, ಬ್ಲಾಕ್‍ಚೈನ್ ಮತ್ತು ಕ್ಲೌಡ್ ಕಂಪ್ಯೂಟಿಂಗ್‍ಗಳು ಬೃಹತ್ ಕಂಪನಿಗಳಿಂದ ಸ್ಟಾರ್ಟಪ್‍ಗಳವರೆಗೆ ಪ್ರತಿ ಉದ್ಯಮದ ಒಳಗಡೆಯೂ ಅತ್ಯಂತ ಅಗತ್ಯವಾಗಿವೆ. ಈ ಬೇಡಿಕೆ ಮತ್ತು ಪೂರೈಕೆ ಸರಣಿಯ ಸಮತೋಲನವು ಉದ್ಯಮದ ಮಾಲೀಕರು, ನೀತಿ ನಿರೂಪಕರು ಮತ್ತಿತರೆ ಪಾಲುದಾರರಿಗೆ ಅವರ ಉದ್ಯಮದ ಗುರಿಗಳಲ್ಲಿ ತಾಂತ್ರಿಕ ಸುಧಾರಣೆಯನ್ನು ಮುಂಚೂಣಿಯಲ್ಲಿ ಇರಿಸುವಂತೆ ಮಾಡಿದೆ.
ಈ ಆಧಾರಪಡುವಿಕೆ ಮತ್ತು ತೆರೆದುಕೊಳ್ಳುವಿಕೆಯಿಂದ ಹಲವಾರು ಉದ್ಯಮಗಳು ಅವರ ಅತ್ಯಂತ ಪ್ರಮುಖ ಅಗತ್ಯಗಳಿಗೆ ಮೊಬೈಲ್ ತಂತ್ರಜ್ಞಾನವನ್ನು ಪ್ರಮುಖ ಅಂಶವಾಗಿಸಿಕೊಳ್ಳುವಂತೆ ಮಾಡಿದೆ. ಉದ್ಯಮಗಳು ಇಎಂಎಂ ಇಲ್ಲದೆ ಜೀವಿಸುವುದಿಲ್ಲ. ಉದ್ಯೋಗಿಯ ಉತ್ಪಾದಕತೆ ಅಲ್ಲದೆ ಇದು ಕಾರ್ಪೊರೇಟ್ ಡೇಟಾ ಸೆಕ್ಯುರಿಟಿ ಹೆಚ್ಚಿಸುತ್ತದೆ, ಕಾರ್ಪೊರೇಟ್ ಡೇಟಾದ ಅಳವಡಿಕೆ ಸುರಕ್ಷಿತಗೊಳಿಸುತ್ತದೆ ಮತ್ತು ಬಳಕೆದಾರ ಹಾಗೂ ಡಿವೈಸ್ ನಿರ್ವಹಣೆ ಸುಲಭಗೊಳಿಸುತ್ತದೆ.

ಈ ಬದಲಾವಣೆಯ ಗಮನಾರ್ಹ ಪರಿಣಾಮವನ್ನು ಉದ್ಯೋಗಿಗಳನ್ನು ನಿರೀಕ್ಷೆ ಮಾಡುತ್ತಿರುವ ಕಂಪನಿಗಳಲ್ಲಿ ವಿಕಾಸಗೊಳ್ಳುವುದನ್ನು ಕಾಣಬಹುದು. ಉದ್ಯೋಗದಾತರು ಅವರ ಉದ್ಯಮಗಳಿಗೆ ಉದ್ಯಮದ ಅಭಿವೃದ್ಧಿಗೆ ಅಗತ್ಯವಾದ ಸಾಫ್ಟ್‍ವೇರ್ ಅಭಿವೃದ್ಧಿ ಮತ್ತು ಎಂಜಿನಿಯರಿಂಗ್ ಕೌಶಲ್ಯಗಳ ಪ್ರತಿಭಾವಂತ ತಂತ್ರಜ್ಞಾನದ ಉತ್ಸಾಹಿಗಳನ್ನು ಬಯಸುತ್ತಿದ್ದಾರೆ. ಅರ್ಹ ವೃತ್ತಿಪರರು ಮತ್ತೊಂದೆಡೆ, ಹೊಸ ಆಲೋಚನೆಗಳನ್ನು ರೂಪಿಸುವ ಮತ್ತು ತಾಂತ್ರಿಕ ಸುಧಾರಣೆಯಲ್ಲಿ ಮುಂಚೂಣಿಯಲ್ಲಿರುವ ಹೊಸ ದೃಷ್ಟಿಕೋನವನ್ನೂ ಬಯಸುತ್ತಿದ್ದಾರೆ.

ಕೆನಡಾದ ಮಿಸ್ಸಿಸೌಗಾದಲ್ಲಿರುವ ಎಸ್‍ಒಟಿಐ ದಕ್ಷಿಣ ಭಾರತದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ಉದ್ಯಮಗಳಿಗೆ ಅವರ ಸಂಸ್ಥೆಗಳನ್ನು ಸಂಘಟಿಸಲು ಮತ್ತು ಮೊಬಿಲಿಟಿ ಹೂಡಿಕೆಗಳನ್ನು ಹೆಚ್ಚಿಸಲು ನೆರವಾಗಿದೆ. ವಿಶ್ವದಾದ್ಯಂತ ಕಂಪನಿಗಳು ಎಸ್‍ಒಟಿಐ ಅನ್ನು ಅವರ ಕಾರ್ಯಾಚರಣೆಯ ಅತ್ಯಂತ ಪ್ರಮುಖ ಆಯಾಮಗಳ ನಿರ್ವಹಣೆಗೆ ನಂಬುತ್ತವೆ.

ಎಸ್‍ಒಟಿಐ ಎಂಟರ್ ಪ್ರೈಸ್ ಮೊಬಿಲಿಟಿ ಮತ್ತು ಐಒಟಿ(ಇಂಟರ್ ನೆಟ್ ಆಫ್ ಥಿಂಗ್ಸ್) ನಿರ್ವಹಣೆಯಲ್ಲಿ ಪೂರ್ವಸಿದ್ಧವಾದ ಆವಿಷ್ಕಾರಕ ಮತ್ತು ಉದ್ಯಮದ ನಾಯಕನಾಗಿದೆ. ಜಾಗತಿಕವಾಗಿ ತಮ್ಮ ಮೊಬೈಲ್ ಡಿವೈಸ್‍ಗಳು, ಅಪ್ಲಿಕೇಷನ್‍ಗಳು, ಕಂಟೆಂಟ್ ಮತ್ತು ಐಒಟಿ ಎಂಡ್‍ಪಾಯಿಂಟ್‍ಗಳ ಕಾರ್ಯತಂತ್ರಗಳನ್ನು ಸನ್ನದ್ಧಗೊಳಿಸಲು 17,000ಕ್ಕೂ ಹೆಚ್ಚು ಕಂಪನಿಗಳು ಎಸ್‍ಒಟಿಐ ಅನ್ನು ಆಧರಿಸಿವೆ.
ಹೆಚ್ಚು ಕಂಪನಿಗಳು ಮೊಬಿಲಿಟಿ ಪರಿಹಾರಗಳ ಬಳಕೆ, ನಿರ್ವಹಣೆ ಮತ್ತು ಅಳವಡಿಕೆಯನ್ನು ಬಯಸುತ್ತಿರುವುದರಿಂದ ಎಸ್‍ಒಟಿಐ ದಕ್ಷಿಣ ಭಾರತದಾದ್ಯಂತ ಉಜ್ವಲ ಮನಸ್ಸುಗಳು ಮತ್ತು ಟೆಕ್ ಉತ್ಸಾಹಿಗಳನ್ನು ಕ್ಯಾಂಪಸ್‍ಗಳಿಂದ ಸೇರಿಸಿಕೊಳ್ಳಲು ಹುಡುಕಾಟದಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳತ್ತ ಕಾರ್ಯ ನಿರ್ವಹಿಸುವುದೇ ಅಲ್ಲದೆ ಅಭ್ಯರ್ಥಿಗಳು ಜಾಗತಿಕ ಕಾರ್ಯಪಡೆಯ ತಿಳಿವಳಿಕೆಯನ್ನೂ ಪಡೆಯುತ್ತಾರೆ. ಶ್ರೇಷ್ಠ ಪ್ರತಿಭೆಗಳನ್ನು ಆಕರ್ಷಿಸಲು ಎಸ್‍ಒಟಿಐ ತನ್ನ ನೆಕ್ಸ್‍ಟ್ ಜೆನ್ ರೋಡ್‍ಶೋದ ದಕ್ಷಿಣ ಭಾರತ ಆವೃತ್ತಿಗೆ ಚಾಲನೆ ನೀಡಿದೆ. ಈ ವರ್ಚುಯಲ್ ರೋಡ್‍ಶೋ ಎಸ್‍ಒಟಿಐನ ಒಟ್ಟಾರೆ ಪಕ್ಷಿನೋಟ ಮತ್ತು ಲಭ್ಯವಿರುವ ಹೊಸ ಹಾಗೂ ಇಂಟರ್ನ್‍ಶಿಪ್ ಅವಕಾಶಗಳ ಮಾಹಿತಿ ನೀಡುತ್ತದೆ.

ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: soti.net/india

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.