ಸಪ್ತಸ್ವರ ಸಂಗೀತ ವಿದ್ಯಾಲಯದ ದ್ವಿದಶಮಾನೋತ್ಸವ

ಸಪ್ತಸ್ವರ ಸಂಗೀತ ವಿದ್ಯಾಲಯದ ದ್ವಿದಶಮಾನೋತ್ಸವ , 7.8.2022 , ಭಾನುವಾರ ನಮ್ಮ ಸಪ್ತಸ್ವರ ಸಂಗೀತ ವಿದ್ಯಾಲಯ 20 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆ ಪ್ರಯುಕ್ತ ದಿನಾಂಕ 7.8.2022 , ಭಾನುವಾರ ಬನಶಂಕರಿಯ ಜೆ.ಎಸ್.ಎಸ್ . ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ವಿದ್ಯಾಲಯದ ದ್ವಿದಶಮಾನೋತ್ಸವ ಸಮಾರಂಭವನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಮ್ಮಿಕೊಂಡಿದ್ದೇವೆ . ಈ ಸಂದರ್ಭದಲ್ಲಿ ಗೌರವಾಭಿನಂದನೆ , ಸ್ಮರಣ ಸಂಚಿಕೆ ಲೋಕಾರ್ಪಣೆ , ಸಪ್ತಸ್ವರ ಸಂಗೀತೋತ್ಸವ ಸರಣಿ -12 , ಪ್ರತಿಭಾ ಪುರಸ್ಕಾರ , ಖ್ಯಾತ ಮಹಿಳಾ ಕಲಾವಿದೆಯರೊಂದಿಗೆ ಸ್ನೇಹ ಸಂವಾದ , ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ” ದೇಶ – ಗಣೇಶ – ಶ್ರೀಶ ” ಎಂಬ ವಿಶೇಷ ಗೀತಗುಚ್ಛ ಸಪ್ತಸ್ವರ ವೈವಿಧ್ಯ ಗೀತಗಾಯನ … ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಈ 20 ನೇ ವರ್ಷದ ಸಮಾರಂಭದ , ಉತ್ಸವದ ಭಾಗವಾಗಲಿವೆ . ಖ್ಯಾತ ಹಿರಿಯ ಕವಿ ಡಾ . ಎಚ್.ಎಸ್ . ವೆಂಕಟೇಶಮೂರ್ತಿ , ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಕಲಾಶ್ರೀ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ , ಬೆಂಗಳೂರು ಆಕಾಶವಾಣಿಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ , ಸಂಗೀತಜ್ಞ ಡಾ . ಎನ್ . ರಘು , ಖ್ಯಾತ ಹೋಮಿಯೋಪತಿ ವೈದ್ಯರಾದ ಡಾ . ಬಿ.ಡಿ. ಪಟೇಲ್ ಅವರು ವೇದಿಕೆಯನ್ನು ಅಲಂಕರಿಸಲಿದ್ದಾರೆ . ಈ ಸಂದರ್ಭದಲ್ಲಿ ಇನ್ನೂ ಅನೇಕ ಖ್ಯಾತ ಸಂಗೀತಗಾರರು , ಸಂಗೀತಜ್ಞರು , ಕಲಾಪೋಷಕರು ಪಾಲ್ಗೊಳ್ಳಲಿದ್ದಾರೆ . ಈ ಕಾರ್ಯಕ್ರಮದ ವಿವರಗಳನ್ನು ತಾವು ತಮ್ಮ ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟಿಸಿ ನಾಡು – ನುಡಿಗೆ ಸಂಗೀತದ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ನಮ್ಮ ಸಪ್ತಸ್ವರ ಸಂಗೀತ ವಿದ್ಯಾಲಯವನ್ನು ಪ್ರೋತ್ಸಾಹಿಸಬೇಕೆಂದು ಗೀತಾ ಸತ್ಯಮೂರ್ತಿ , ಅಧ್ಯಕ್ಷರು , ಸಪ್ತಸ್ವರ ಸಂಗೀತ ವಿದ್ಯಾಲಯ & ಅಚ್ಯುತ ಸಂಕೇತಿ ಮಾಧ್ಯಮ ಸಂಚಾಲಕರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.