
ಈ ಮೇಲಿನ ವಿಚಾರವನ್ನು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರು ಇತ್ತೀಚೆಗೆ ರಾಜ್ಯಸಭೆಯಲ್ಲಿ ಹೊರಗೆಡುಹಿರುತ್ತಾರೆ . ಜೊತೆಗೆ , ಇದಕ್ಕಿಂತಲೂ ಮಿಗಿಲಾದ ಪ್ರಮಾಣದ ಹಣ ಮರುಪಾವತಿಸದ “ ಉದ್ದೇಶಪೂರ್ವಕ ಸುಸ್ತಿದಾರ ” ಉದ್ಯಮಿಗಳು ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ . ಸಾರ್ವಜನಿಕ ಹಣವನ್ನು ಕೊಳ್ಳೆಹೊಡೆಯುವ ಈ ಆಘಾತಕಾರಿ ವಿಚಾರ ಬಹಿರಂಗಗೊಂಡಿದ್ದರೂ ಈ ನಿಟ್ಟಿನಲ್ಲಿ ಚರ್ಚೆ ಪ್ರತಿಕ್ರಿಯೆ ಪ್ರಕ್ರಿಯೆಗಳು ಸೂಕ್ತ ರೀತಿಯಲ್ಲಿ ನಡೆಯದೇ ಇರುವುದು ವಿಪರ್ಯಾಸ .
ದೇಶದ ರೈತರು , ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರು , ಚಿಕ್ಕ ಚಿಕ್ಕ ವ್ಯಾಪಾರಸ್ಥರು ಮತ್ತಿತರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ . ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ ( NSO ) ಯ ವರದಿಯ ಪ್ರಕಾರ ದೇಶದ ರೈತರ ಋಣ ಪ್ರಮಾಣ ಐದು ವರ್ಷದಲ್ಲಿ ಶೇಕಡಾ 60 ರಷ್ಟು ಅಧಿಕವಾಗಿರುತ್ತದೆ . ರಾಜ್ಯದ ರೈತ ಕುಟುಂಬದ ಸರಾಸರಿ ಋಣಭಾದೆ ಸುಮಾರು 1.25 ಲಕ್ಷದಷ್ಟು ಇರುತ್ತದೆ . ಋಣ ಬಾಧೆಗೆ ಒಳಗಾಗಿರುವ ಈ ಎಲ್ಲ ವರ್ಗಗಳ ಸಾಲ ಮನ್ನಾ ಮಾಡುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಂತ ಸೂಕ್ತವಾಗಿದ್ದರೂ ಈ ನಿಟ್ಟಿನಲ್ಲಿ ಚರ್ಚೆ , ಒತ್ತಡಗಳು ಇನ್ನೂ ಏಳಬೇಕಾಗಿದೆ .
ಈ ಹಿನ್ನಲೆಯಲ್ಲಿ ಮೇಲಿನ ಸುದ್ದಿಗೋಷ್ಠಿಯನ್ನು ದಿನಾಂಕ 06 / 8 / 2022 ರ ಶನಿವಾರ 12 ಗಂಟೆಗೆ ಕಬ್ಬನ್ ಪಾರ್ಕ್ ಪ್ರೆಸ್ ಕ್ಲಬ್ ನಲ್ಲಿ ಕರೆಯಲಾಯಿತು.
ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ , ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ , ರೈತ ಮುಖಂಡ ಬಡಗಲಪುರ ನಾಗೇಂದ್ರ , ಹಿರಿಯ ಕಾರ್ಮಿಕ ಮುಖಂಡ ಮೈಕೆಲ್ ಫರ್ನಾಂಡಿಸ್ , ದಲಿತ ಮುಖಂಡ ಬಿ ಗೋಪಾಲ್ , ವಿ ಗಾಯಿತ್ರಿ ಸಾಮಾಜಿಕ ಕಾರ್ಯಕರ್ತೆ ಹಾಗೂ ಜಿ . ವಿ ಸುಂದರ್ ಹಣಕಾಸು ವ್ಯವಹಾರ ತಜ್ಞ , ರೈತ ಮುಖಂಡರಾದ ಚಾಮರಸ ಮಾಲಿಪಾಟೀಲ್ , ಜಿ .ಜಿ ಹಳ್ಳಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು .
City Today News – 9341997936