ದೆಹಲಿಯ ನೂತನ ಸಂಸತ್ತ ಭವನಕ್ಕೆ ಅನುಭವ ಮಂಟಪ ನಾಮಕರಣ ಮಾಡಲು ಆಗ್ರಹ.

ಪ್ರಪ್ರಥಮವಾಗಿ ವಿಶ್ವ ಮಟ್ಟದಲ್ಲಿ ಪ್ರಜಾಪ್ರಭುತ್ವದ ಹುಟ್ಟು ಮತ್ತು ಸಂಸತ್ತು ಸ್ಥಾಪಿಸಿದ್ದು ಭಾರತದ ಬಸವಕಲ್ಯಾಣದಲ್ಲಿ ಎಂಬ ಮಹತ್ವದ ವಿಷಯವನ್ನು ಪ್ರಚಾರಪಡಿಸಿ ಇಡೀ ವಿಶ್ವದ ಗಮನ ಭಾರತದತ್ತ ಕೇಂದ್ರೀಕರಿಸುವಂತೆ ಮಾಡಿದ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರನ್ನು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪ್ರಶಂಶಿಸಿ ಹರ್ಷ ವ್ಯಕ್ತ ಪಡಿಸುತ್ತದೆ.

ಅನುಭವ ಮಂಟಪದ ಮುಖಾಂತರ ಬಸವಾದಿ ಶರಣರು 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ವಿಶ್ವದ ಪ್ರಪ್ರಥಮ ಸಂಸತ್ತನ್ನು ಪ್ರಾರಂಭಿಸಿ ವಿಶ್ವಕ್ಕೆ ಪ್ರಜಾಪ್ರಭುತ್ವ ಸಂಸತ್ತಿನ ಕಲ್ಪನೆ ಕೊಟ್ಟ ದೇಶ ಭಾರತ. ಆದ್ದರಿಂದ ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಯವರು ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂಬ ಹೆಸರನ್ನು ನಾಮಕರಣ ಮಾಡಿ ಜಗತ್ತಿಗೆ ಪ್ರಪ್ರಥಮ ಪ್ರಜಾಪ್ರಭುತ್ವ ಸಂಸತ್ತಿನ ಕಲ್ಪನೆ ಮಾಡಿಕೊಟ್ಟಿದ್ದು ಭಾರತ ಎಂದು ತಿಳಿಯುವಂತೆ ಮಾಡಬೇಕೆಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಆಗ್ರಹಪೂರ್ವಕ ಮನವಿ ಮಾಡುತ್ತದೆ. ಹಾಗೂ ಕರ್ನಾಟಕ ರಾಜ್ಯ ಸರ್ಕಾರವು ಈ ಬಗ್ಗೆ ಒಂದು ನಿರ್ಣಯ ಕೈಗೊಂಡು ಸಂಘಟನೆಯ ಬೇಡಿಕೆಗೆ ಒತ್ತಾಸೆಯಾಗಿ ನಿಲ್ಲುವುದರ ಜತೆಗೆ ಕೇಂದ್ರಕ್ಕೆ ಈ ಬಗ್ಗೆ ಶಿಫರಸು ಮಾಡುವಂತೆ ಜನಪರ ಮುಖ್ಯಮಂತ್ರಿ ಶ್ರೀಯುತ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸುತ್ತೇವೆ. ಇದು ಕೇವಲ ಸಂಘಟನೆಯ ಕನಸು ಮಾತ್ರವಲ್ಲ, ಇಡೀ ಭಾರತ ದೇಶದ ಪ್ರತಿಯೊಬ್ಬರ ಆಸೆಯಾಗಿದ್ದು, ತಕ್ಷಣವೇ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಜನತೆಗೆ ಸಂತೋಷದ ವಿಷಯವನ್ನು ಕೊಡಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರದೀಪ ಕಂಕಣವಾಡಿ
ರಾಷ್ಟ್ರೀಯ ಅಧ್ಯಕ್ಷರು
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.