ಬೆಂಗಳೂರಿನಲ್ಲಿ ತನ್ನ 18ನೇ ನವೀನತಾ ಶೃಂಗ ಸಭೆ-ಇನ್ನೋವರ್ಜ್ 2022-ಇಂಜಿನಿಯರಿಂಗ್ ಇಮೇಜಿನೇಷನ್‌ಗೆ ಆತಿಥ್ಯ ವಹಿಸಲಿರುವ ಸಿಐಐ

ಬೆಂಗಳೂರು, ಆಗಸ್ಟ್ 19, 2022 :- ಸಿಐಐನ ಪ್ರಮುಖ ಭಾರತೀಯ ನವೀನತಾ ಶೃಂಗದ 18ನೇ ಆವೃತ್ತಿಯನ್ನು ಇನ್ನೋವರ್ಜ್’ ಎಂದುಇಂಜಿನಿಯರಿಂಗ್ ಕಲ್ಪನೆ’ಯೊಂದಿಗೆ ಪುನರ್ ರೂಪಿಸಲಾಗಿದೆ. ಉನ್ನತಮಟ್ಟದ ನವೀನತೆಗಳ ಕಾಲ್ಪನಿಕ ಜಗತ್ತುಗಳು ಮತ್ತು ಭವಿಷ್ಯಾತ್ಮಕ ಚಿಂತನೆಗಳನ್ನು ಕುರಿತು ತೊಡಗಿಸಿಕೊಳ್ಳಲು, ಹಂಚಿಕೊಳ್ಳಲು, ಅರ್ಥ ಮಾಡಿಕೊಳ್ಳಲು ಮತ್ತು ಕಲಿತುಕೊಳ್ಳಲು ವಿವಿಧ ವರ್ಗಗಳ ಪಾಲುದಾರರನ್ನು ಒಂದುಗೂಡಿಸುವುರೊಂದಿಗೆ ಈ ಶೃಂಗ ಸಭೆ ಸಹಭಾಗಿತ್ವ ಮತ್ತು ಚಿಂತನೆ ಕೈಗೊಳ್ಳುವುದಕ್ಕೆ ಸ್ಫೂರ್ತಿ ತುಂಬಲಿದೆ. ಸಿಐಐ ಇನ್ನೋವರ್ಜ್ 2022 ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಆಗಸ್ಟ್ 25-27, 2022ರವರೆಗೆ ನಡೆಯಲಿದೆ. ಭಾರತೀಯ ಕೈಗಾರಿಕೆಯ ವಿಕಾಸಕ್ಕೆ ವೇಗ ನೀಡಿರುವ ನವೀನತೆಯಿಂದ ಚಾಲಿತವಾದ ಬೆಳವಣಿಗೆ ಯೋಜನೆಗಳನ್ನು ಈ ಶೃಂಗ ಸಾದರಪಡಿಸಲಿದೆ. ಇದರೊಂದಿಗೆ ಭಾರತೀಯ ಕಂಪನಿಗಳು ಜಾಗತಿಕ ನಾಯಕರಾಗಲು ನೆರವಾಗುವುದಲ್ಲದೆ, ಈ ಸಂಸ್ಥೆಗಳು ಡಿಜಿಟಲ್ ಯುಗಕ್ಕೆ ಚಾಲನೆ ನೀಡಲು ವೇಗವನ್ನು ಸೃಷ್ಟಿಸಲಿವೆ.
ಕರ್ನಾಟಕ ಸರ್ಕಾರ ಈ ಶೃಂಗದ ಪಾಲುದಾರ ರಾಜ್ಯವಾಗಿದ್ದು, ಕರ್ನಾಟಕ ಸರ್ಕಾರದ ಐಟಿ ಬಿಟಿ ಮತ್ತು ಎಸ್&ಟಿ, ಉನ್ನತ ಶಿಕ್ಷಣ, ಕೌಶಲ್ಯ ಉದ್ಯಮಶೀಲತೆ ಮತ್ತು ಜೀವನಾಧಾರ ಇಲಾಖೆಯ ಗೌರವಾನ್ವಿತ ಸಚಿವರಾದ ಡಾ. ಸಿ.ಎನ್. ಅಶ್ವಥ್‌ನಾರಾಯಣ್, ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಗೌರವಾನ್ವಿತ ಸಚಿವರಾದ ಡಾ. ಮುರುಗೇಶ್ ರುದ್ರಪ್ಪ ನಿರಾಣಿ, ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳು, ಐಟಿಬಿಟಿ ಮತ್ತು ಎಸ್&ಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಐಎಎಸ್ ಅವರು ಈ ಶೃಂಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಿಐಐ ಇನ್ನೋವರ್ಜ್ 2022 ಇಂದಿನ ಆವೃತ್ತಿಗಳ ವಿಸ್ತೃತ ರೂಪವಾಗಿರಲಿದ್ದು, ಇನ್ನೋವರ್ಜ್ 2022 ಪ್ರದರ್ಶನದ ಮೂಲಕ ನವೀನತೆಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಹಲವಾರು ವರ್ಗಗಳಲ್ಲಿ ಮುಂಚೂಣಿಯ ನವೀನತೆಗಳ ಪ್ರಾತ್ಯಕ್ಷಿಕೆಗಳನ್ನು ಅನುಭವಿಸಲು ಸಭೆಯಲ್ಲಿ ಹಾಜರಾದವರಿಗೆ ಇದು ಅವಕಾಶವನ್ನು ಪೂರೈಸಲಿದೆ.

ಆಕ್ಸಿಲಾರ್ ವೆಂರ‍್ಸ್ನ ಚರ‍್ಮನ್ ಮತ್ತು ಇನ್ಫೋಸಿಸ್‌ನ ಸಹಸ್ಥಾಪಕರಾದ ಹಾಗೂ ಸಿಐಐನ ಮಾಜಿ ಅಧ್ಯಕ್ಷರಾದ ಕ್ರಿಸ್ ಗೋಪಾಲಕೃಷ್ಣನ್ ಅವರು ಮಾತನಾಡಿ, “ಜಾಗತಿಕ ನವೀನತೆಯ ಕೇಂದ್ರವಾಗಲು ಭಾರತಕ್ಕೆ ಸಾಮರ್ಥ್ಯ ಮತ್ತು ಸಂಪನ್ಮೂಲಗಳಿವೆ. ಇದಕ್ಕಾಗಿ ತನ್ನ ಮೂಲ ವ್ಯೂಹರಚನೆಯ ಭಾಗವಾಗಿ ದೃಢವಾದ ನವೀತಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಅಗತ್ಯ ಭಾರತಕ್ಕೆ ಇರುತ್ತದೆ. ನವೀನತೆಯ ಮೇಲೆ ಆಳವಾಗಿ ಗಮನ ಕೇಂದ್ರೀಕರಿಸುವುದರಿಂದ ಪ್ರಸ್ತುತ ಅಸ್ತಿತ್ವದಲ್ಲಿರುವ ವಲಯಗಳು ಮತ್ತು ಗಡಿನಾಡಿನ ವಲಯಗಳಿಗೆ ಚಾಲನೆ ನೀಡಲು ದಾರಿಯಾಗಲಿದೆ. ಇದರಿಂದ ಮುಂದಿನ ಆರ್ಥಿಕ ಬೆಳವಣಿಗೆಗೆ ಚಾಲನೆ ಲಭಿಸಲಿದೆ. ಉತ್ಪಾದನೆ ಮತ್ತು

ತಯಾರಿಕೆಗಳಿಗೆ ಜೋಡಿಸಿದ್ದಲ್ಲಿ ಈ ನವೀನತಾ ಇಂಜಿನ್‌ಗಳು ಆರ್ಥಿಕ ಬೆಳವಣಿಗೆಗೆ ಇಂಧನವಾಗುವುದಲ್ಲದೆ, ಭಾರತದಲ್ಲಿ ಹಿಂದೆAದೂ ಇಲ್ಲದ ಮತ್ತು ನವೀನ ಮಾರ್ಗಗಳಲ್ಲಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾಗಿದೆ’’ ಎಂದರು.
ವ್ಯವಹಾರ ಪ್ರಕ್ರಿಯೆಗಳು, ನವೀನತೆಗಳಿಗೆ ಯೋಜನೆ ಸೃಷ್ಟಿಸುವುದು, ವೆಬ್ 3.0 ಮತ್ತು ಕ್ವಾಂಟಮ್ ಇನ್ಫೊ ಸಿಸ್ಟಮ್‌ಗಳಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಉಪಕರಣಗಳನ್ನು ಅಳವಡಿಸುವುದು ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರಗಳಾದ ಆರೋಗ್ಯ ಸೇವೆ, ವಿದ್ಯುತ್, ಡಾಟಾ ವಿಜ್ಞಾನ, ಸ್ವಚ್ಛ ತಂತ್ರಜ್ಞಾನ, ಬಾಹ್ಯಾಕಾಶ, ಉತ್ಪಾದನೆ ಇತ್ಯಾದಿಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗೆ ಹೂಡಿಕೆ ಮಾಡುವಂತಹ ಹಸ್ತಕ್ಷೇಪಗಳನ್ನು ಕೈಗೊಳ್ಳಬೇಕು. ಮೌಲ್ಯ ಸೃಷ್ಟಿಗೆ ನೂತನ ಮಾರ್ಗಗಳನ್ನು ಸತತವಾಗಿ ನವೀನತೆಯೊಂದಿಗೆ ಕಂಡುಹಿಡಿಯುವAತಹ ವ್ಯಕ್ತಿಗಳು, ತಂಡಗಳು ಮತ್ತು ಮೈತ್ರಿಗಳನ್ನು ಬೆಳೆಸುವ ಅಗತ್ಯ ಪ್ರತಿಯೊಂದು ಸಂಸ್ಥೆಗೆ ಇರುತ್ತದೆ.
ವೋಲ್ವೊ ಗ್ರೂಪ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧ್ಯಕ್ಷರು ಹಾಗೂ ಸಿಐಐ ಎಸ್‌ಆರ್‌ನ ಉಪ ಚರ‍್ಮನ್ ಡಾ. ಕಮಲ್ ಬಾಲಿ ಅವರು ಮಾತನಾಡಿ, ನವೀನತೆಗಳ ಮೇಲೆ ಹೆಚ್ಚಿನ ಹೂಡಿಕೆ ಮತ್ತು ಹೆಚ್ಚಿನ ಗಮನಹರಿಸುವುದರ ಪ್ರಾಮುಖ್ಯತೆ ಕುರಿತು ಸಿಐಐ ಪ್ರತಿಪಾದನೆ ಮಾಡುತ್ತಲೆ ಇದೆ. ನವೀನತೆಯ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು, ಪ್ರಸ್ತುತವನ್ನು ಮೀರಿ ವೀಕ್ಷಿಸಲು ಹಾಗೂ ಭವಿಷ್ಯ ಕುರಿತು ಚರ್ಚಿಸಲು ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ನವೀನತಾ ಶೃಂಗ ಮುಂಚೂಣಿಯ ವೇದಿಕೆಗಳಲ್ಲಿ ಒಂದಾಗಿದೆ’’ ಎಂದರು. ನವೀನತೆ ಮತ್ತು ತಂತ್ರಜ್ಞಾನದೊAದಿಗೆ ನಗರದ ದೃಢವಾದ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮುಖ ಶೃಂಗವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಸಂಸ್ಥೆಗಳು ಮತ್ತು ಭವಿಷ್ಯದ ತಂತ್ರಜ್ಞಾನ ಆಧಾರಿತ ಕಂಪನಿಗಳು ಹಲವಾರು ಕ್ಷೇತ್ರಗಳಲ್ಲಿ ಇದ್ದು, ಇವುಗಳ ಮೂಲಕ ತಂತ್ರಜ್ಞಾನಚಾಲಿತ ಕ್ಷೇತ್ರಗಳಲ್ಲಿ ದೃಢವಾದ ಅಡಿಪಾಯವನ್ನು ಸ್ಥಾಪಿಸಲಾಗಿದೆ. ಜೊತೆಗೆ ಈ ನಗರ ಉತ್ಕೃಷ್ಟ ಸಂಪನ್ಮೂಲಗಳ ಲಭ್ಯತೆ ಹೊಂದಿರುವುದರಿಂದ ವಿವಿಧ ಕ್ಷೇತ್ರಗಳಲ್ಲಿ ನವೀನತೆಗೆ ಚಾಲನೆ ನೀಡುವುದನ್ನು ಮುಂದುವರಿಸಲು ಬೆಂಗಳೂರು ಉತ್ತಮ ಸ್ಥಾನವನ್ನು ಹೊಂದಿದೆ. ಸಿಐಐ ಕರ್ನಾಟಕದ ಮಾಜಿ ಚರ‍್ಮನ್ ಮತ್ತು 3ಎಂ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಮೇಶ್ ರಾಮದೊರೈ ಅವರು ಮಾತನಾಡಿ,ವ್ಯವಹಾರ ಫಲಿತಾಂಶಗಳನ್ನು ಗರಿಷ್ಟವಾಗಿಸಲು ಉನ್ನತಮಟ್ಟದ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಹಲವಾರು ಕ್ಷೇತ್ರಗಳು ಪ್ರವರ್ಧಮಾನಕ್ಕೆ ಬರುವಲ್ಲಿ ನವೀನತೆ ಮುಖ್ಯ ಅಂಶವಾಗಿರುತ್ತದೆ. ದಿ ಇಂಡಿಯಾ ಇನ್ನೋವೇಷನ್ ಸಮಿಟ್ ಆರೋಗ್ಯ ಸೇವೆ, ಸಾರಿಗೆ, ಚಲನಶೀಲತೆ, ಉತ್ಪಾದನೆ ಮತ್ತು ಇನ್ನು ಅನೇಕ ಹಲವಾರು ಕ್ಷೇತ್ರಗಳಲ್ಲಿ ಒಟ್ಟಾರೆ ಉನ್ನತೀಕರಣದ ಉತ್ಕೃಷ್ಟ ನೋಟದ ಪ್ರದರ್ಶನವನ್ನು ನೀಡಲಿದೆ’’ ಎಂದರು.
ಸಿಐಐ ಕರ್ನಾಟಕದ ಚರ‍್ಮನ್ ಮತ್ತು ಎನ್‌ಆರ್ ಸಮೂಹದ ನಿರ್ದೇಶಕರು ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ಎಂ ರಂಗಾ ಅವರು ಶೃಂಗ ಕುರಿತು ಮಾತನಾಡಿ, “ಜಾಗತಿಕವಾಗಿ

ಉದ್ಯಮ ಸಾರ್ವಕಾಲಿಕ ಉನ್ನತ ಪ್ರದರ್ಶನ ನೀಡುತ್ತಿದೆ. ಭಾರತದಲ್ಲಿ ಪ್ರಮುಖ ಉದ್ಯಮಗಳು ಅಪಾರ ವೇಗಕ್ಕೆ ಚಾಲನೆ ನೀಡುತ್ತಿವೆ. ಪ್ರಸ್ತುತ ಕ್ಷೇತ್ರ ಮತ್ತು ಭಾರತದಲ್ಲಿ ಪ್ರಸ್ತುತ ಹೂಡಿಕೆಗಳು ಹಾಗೂ ಪ್ರೋತ್ಸಾಹಗಳು, ಸಾಹಸಿ ಬಂಡವಾಳ ಕಾರ್ಯ ಮತ್ತು ಸ್ಟಾರ್ಟ್ಅಪ್ ಚಟುವಟಿಕೆಗಳು ಸೇರಿದಂತೆ ಭವಿಷ್ಯದ ಬೆಳವಣಿಗೆಯ ಕ್ಷೇತ್ರಗಳ ಮೇಲೆ ಗಮನಹರಿಸಲಿದೆ. ಅಲ್ಲದೆ, ಉದ್ಯಮ ಮತ್ತು ಶೈಕ್ಷಣಿಕ ಪಾಲುದಾರಿಕೆಗಳಿಗೆ ಚಾಲನೆ ನೀಡುವತ್ತ ಕೂಡ ಈ ಶೃಂಗ ಗಮನ ಕೇಂದ್ರೀಕರಿಸಲಿದೆ’’ ಎಂದರು.
ಜಾಗತಿಕ ನವೀನತೆಯ ಕ್ಷೇತ್ರ, ಉನ್ನತ ಉತ್ಪಾದನೆ ಮತ್ತು ಚಲನಶೀಲತೆ ಹಾಗೂ ಆರೋಗ್ಯ ಸೇವೆ, ಸುಸ್ಥಿರತೆ ಮತ್ತು ಶಿಕ್ಷಣದಂತಹ ಉದ್ಯಮದ ಭವಿಷ್ಯವಾದ ಕ್ಷೇತ್ರಗಳನ್ನು ಒಳಗೊಂಡಂತೆ 15 ಅಧಿವೇಶನಗಳನ್ನು ಉದ್ದೇಶಿಸಿ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಹಲವಾರು ಚಿಂತನಾ ನಾಯಕರು ಮಾತನಾಡಲಿದ್ದಾರೆ. ಜೊತೆಗೆ ಕೃತಕ ಬುದ್ಧಿವಂತಿಕೆ(ಎಐ) ಕುರಿತ ಮಾಸ್ಟರ್ ಕ್ಲಾಸ್ ಅಲ್ಲದೆ, ವಿಭಿನ್ನ ಕೈಗಾರಿಕೆಗಳಲ್ಲಿ ನವೀನತೆಯ ಪ್ರದರ್ಶನ ಇದರ ಕಾರ್ಯಸೂಚಿಯ ಭಾಗವಾಗಿರುತ್ತದೆ. ಪ್ರಾಸ್ತಾವಿಕ ಭಾಷಣಗಳು, ಪ್ರಕರಣ ಅಧ್ಯಯನಗಳು ಮತ್ತು ಸಮಿತಿಗಳ ಚರ್ಚೆಗಳು ಜೊತೆಗೆ ದೃಢವಾದ ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆಗಳ ಮಿಶ್ರಣವನ್ನು ಈ ಅಧಿವೇಶನಗಳು ಒಳಗೊಂಡಿರುತ್ತವೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉದ್ಯಮದ ಪರಿಣತರು ಮತ್ತು ಗಣ್ಯ ಶೈಕ್ಷಣಿಕ ತಜ್ಞರು ಶೃಂಗವನ್ನು ಉದ್ದೇಶಿಸಿ ಮಾತನಾಡುವರು.
ಸಂಸ್ಥೆಗಳ ಬೆಳವಣಿಗೆಗೆ ನವೀನತೆಗಳ ಬಳಕೆ ಕುರಿತು ಶೃಂಗಸಭೆ ಕಂಡುಕೊಳ್ಳಲಿದೆ. ಇದಕ್ಕೆ ಪ್ರತ್ಯೇಕ ತನ್ನ ರೀತಿಯ ವೇದಿಕೆ ಇದಾಗಲಿದ್ದು, ಭಾಗವಹಿಸುವವರು ನವೀನತೆಯಲ್ಲಿ ಹೂಡಿಕೆಗೆ ಅತ್ಯುತ್ತಮ ಮಾರ್ಗಗಳನ್ನು ಕುರಿತು ಪರಿಣತರಿಂದ ಕಲಿತುಕೊಳ್ಳಬಹುದಾಗಿದೆ. ಜೊತೆಗೆ ವ್ಯವಹಾರದ ಫಲಿತಾಂಶಗಳನ್ನು ಗರಿಷ್ಟವಾಗಿಸಲು ಉದ್ಯಮಗಳು ಯಾವ ರೀತಿಯಲ್ಲಿ ಉನ್ನತಮಟ್ಟದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿವೆ ಎಂಬುದನ್ನು ಕಲಿತುಕೊಳ್ಳಬಹುದು. ಶೃಂಗಸಭೆಯ ಕಾರ್ಯಕ್ರಮಗಳಲ್ಲಿ ಸಮ್ಮೇಳನ, ಪ್ರದರ್ಶನ, ಮಾಸ್ಟರ್ ಕ್ಲಾಸ್, ಫೈರ್‌ಸೈಡ್ ಮಾತುಕತೆ ಮತ್ತು ಖಾಸಗಿ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ ಮತ್ತು ನೀತಿ ರೂಪಿಸುವವರ ನಡುವೆ ಚಟುವಟಿಕೆಗಳು ಸೇರಿರುತ್ತವೆ.
ಇನ್ನೋವೇಷನ್ ಸಮಿಟ್ ಕುರಿತು ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ ಲಿಂಕ್ ಸಂದರ್ಶಿಸಿ : http://www.innovationsummit.co.in

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.