ಟಿ.ಬಿ. ಬಳಗಾವಿಯವರು ಶ್ರೀ ಸಿದ್ದರಾಮಯ್ಯರವರ ಬಗ್ಗೆ ಮಾತನಾಡಿ ಸಚಿವರಾದ ಶ್ರೀ ವಿ . ಸೋಮಣ್ಣರವರಲ್ಲಿ ಕ್ಷಮೆಯಾಚಿಸಬೇಕೆಂದು ಹೇಳಿಕೆ ನೀಡಿರುವುದನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ತೀವ್ರವಾಗಿ ಖಂಡಿಸುತ್ತೇವೆ

ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಟಿ.ಬಿ. ಬಳಗಾವಿಯವರು ದಿನಾಂಕ : 02-09-2022ರಂದು ಪತ್ರಿಕಾ ಗೋಷ್ಠಿಯಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ಬಗ್ಗೆ ಮಾತನಾಡಿ ಸಚಿವರಾದ ಶ್ರೀ ವಿ . ಸೋಮಣ್ಣರವರಲ್ಲಿ ಕ್ಷಮೆಯಾಚಿಸಬೇಕೆಂದು ಹೇಳಿಕೆ ನೀಡಿರುವುದನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ತೀವ್ರವಾಗಿ ಖಂಡಿಸುತ್ತೇವೆ . ಕರ್ನಾಟಕ ಪ್ರದೇಶ ಕುರುಬರ ಸಂಘವು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು , ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ವ್ಯಕ್ತಿಗಳ ಪರವಾಗಿ ಇರುವುದಿಲ್ಲ . ಆದರೆ ನಿರ್ದೇಶಕರಾದ ಬಳಗಾವಿರವರು ಕರ್ನಾಟಕ ಪ್ರದೇಶ ಕುರುಬರ ಸಂಘದ ಅನುಮತಿಯನ್ನು ಪಡೆಯದೇ ಪತ್ರಿಕಾ ಗೋಷ್ಠಿಯಲ್ಲಿ ಸಚಿವರಾದ ವಿ . ಸೋಮಣ್ಣರವರ ಪರವಾಗಿ ಹೇಳಿಕೆಗಳನ್ನು ನೀಡಿರುವುದು ಸಂಘದ ಬೈಲಾ ಪ್ರಕಾರ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ . ಆದ್ದರಿಂದ ಇವರನ್ನು ಸಂಘದ ಬೈಲಾ ನಿಯಮದಡಿಯಲ್ಲಿ ನಿರ್ದೇಶಕರ ಸ್ಥಾನದಿಂದ ವಜಾಗೊಳಸಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ . ನಿರ್ದೇಶಕರಾದ ಟಿ.ಚಿ. ಬಳಗಾವಿರವರು ಬಿ.ಜೆ.ಪಿ ಪಕ್ಷದ ಪರವಾಗಿ ಅಥವಾ ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ಪರವಾಗಿ ಹೇಳಿಕೆಗಳನ್ನು ನೀಡುವುದಾದರೆ ಸಂಘದ ನಿರ್ದೇಶಕರ ಸ್ಥಾನಕ್ಕೆ ರಾಜಿನಾಮೆ ನೀಡಿ ಯಾವುದಾದರು ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡು ರಾಜಕೀಯ ಹೇಳಿಕೆಗಳನ್ನು ನೀಡಬಹುದು . ಆದ್ದರಿಂದ ಟಿ.ಬಿ ಬಳಗಾವಿರವರು ನಮ್ಮ ಸಮಾಜದ ಸಮಾಜದ ನಾಯಕರಾದ ಶ್ರೀ ಸಿದ್ದರಾಮಯ್ಯರವರ ವಿರುದ್ಧ ನೀಡಿರುವ ಹೇಳಿಕೆಯನ್ನು ಕೂಡಲೇ ವಾಪಸ್ಸು ಪಡೆದು ಅವರಲ್ಲಿ ಕ್ಷಮೆ ಯಾಚಿಸಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಎಚ್ಚರಿಕೆಯನ್ನು ನೀಡುತ್ತಿದ್ದೇವೆ . ಇಲ್ಲವಾದಲ್ಲಿ ಸಂಘದ ಬೈಲಾನಿಯಮದಡಿಯಲ್ಲಿ ಕೂಡಲೇ ಬಳಗಾವಿರವರನ್ನು ಸಂಘದ ನಿರ್ದೇಶಕರ ಸ್ಥಾನದಿಂದ ವಜಾಗೊಳಿಸಲಾಗುವುದು ಎಂದು ಡಿ . ವೆಂಕಟೇಶ್ ಮೂರ್ತಿ ಪ್ರಧಾನ ಕಾರ್ಯದರ್ಶಿ & ದೇವರಾಜ ಸುಬ್ಬರಾಯಪ್ಪ ಖಜಾಂಚಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.