ಒದಿಶಾ ರಾಜ್ಯದಲ್ಲಿ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲು ಮತ್ತು ಓದಿಶಾದಲ್ಲಿ ತಯಾರಿಸಿ ಶೃಂಗಸಭೆ 22, ಭುವನೇಶ್ವರದಲ್ಲಿ ನವಂಬರ್ 30ರಿಂದ ಡಿಸಂಬರ್ 4, 2022ರವರೆಗೆ

ಒದಿಶಾ ರಾಜ್ಯದಲ್ಲಿ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲು ಮತ್ತು ಓದಿಶಾದಲ್ಲಿ ತಯಾರಿಸಿ ಶೃಂಗಸಭೆ 22(ಮೇಕ್ ಇನ್ ಒದಿಶಾ ಕಾನ್‌ಕ್ಷೇವ್‌ 22) ದ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆಯನ್ನು ಆಹ್ವಾನಿಸಲು ಬೆಂಗಳೂರಿನಲ್ಲಿ ಹೂಡಿಕೆದಾರರ ಸಭೆ ಆಯೋಜಿಸಿದ ಒಡಿಶಾ

ಬೆಂಗಳೂರು, ಸೆಪ್ಟೆಂಬರ್ 28, 2022: ಓದಿಶಾ ಸರ್ಕಾರವು, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿಯ(ಎಫ್ ಐಸಿಸಿಐ)ದ ಸಹಯೋಗದೊಂದಿಗೆ, ಬೆಂಗಳೂರಿನಲ್ಲಿ ಸೆಪ್ಟೆಂಬರ್ 28, 2022ರಂದು ಒದಿಶಾ ಹೂಡಿಕೆದಾರರ ಸಭೆಯನ್ನು ನಡೆಸಿಕೊಟ್ಟಿತು.

ಓದಿಶಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ನವೀನ್ ಪಟ್ನಾಯಕ್, ಒದಿಶಾ ಸರ್ಕಾರದ ಕೈಗಾರಿಕೆಗಳು, ಎಮ್ ಎಸ್‌ಎವ ಇಗಳು ಹಾಗೂ ಶಕ್ತಿ ಇಲಾಖೆಯ ಸನ್ಮಾನ್ಯ ಸಚಿವರಾದ ಶ್ರೀ ಪ್ರತಾಪ್ ಕೇಶರಿ ದೇಬ್, ಒದಿಶಾ ಸರ್ಕಾರದ ಕೈಗಾರಿಕೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಐಡಿಸಿಒ ಮತ್ತು ಐಪಿಐಸಿಒಎಲ್ ಚೇರ್ಮನ್ ಶ್ರೀ ಹೇಮಂತ್ ಶರ್ಮ, ಓದಿಶಾ ಸರ್ಕಾರದ ಇ ಮತ್ತು ಐಟಿ ಇಲಾಖೆಯ ಕಾರ್ಯದರ್ಶಿ ಶ್ರೀ ಮನೋಜ್ ಕುಮಾರ್ ಮಿಶ್ರ, ಸ್ಟಾರ್ಟ್ ಅಪ್ ಒದಿಶಾದ ಎಕ್ಸಿಕ್ಯೂಟಿವ್ ಚೇರ್ಮನ್ ಡಾ. ಓಂಕಾ‌ ರೈ, ಎಫ್‌ಐಸಿಸಿಐದ ಕರ್ನಾಟಕ ರಾಜ್ಯ ಪರಿಷತ್ತಿನ ಚೇರ್ಮನ್ ಶ್ರೀ ಕೆ ಉಲ್ಲಾಸ್ ಕಾಮತ್, ಹಾಗೂ ಕೈಗಾರಿಕೆಗಳ ಇಲಾಖೆ ಮತ್ತು ಐಪಿಐಸಿಒಎಲ್‌ನ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 400ಕ್ಕಿಂತ ಹೆಚ್ಚಿನ ಪ್ರತಿನಿಧಿಗಳು, ದೇಶಾದ್ಯಂತದಿಂದ ವಿವಿಧ ಉದ್ದಿಮೆಗಳನ್ನು ಪ್ರತಿನಿಧಿಸಿದ್ದರು.

ಎಫ್‌ಐಸಿಸಿಐದ ಕರ್ನಾಟಕ ರಾಜ್ಯ ಪರಿಷತ್ತಿನ ಚೇರ್ಮನ್ ಶ್ರೀ ಕೆ ಉಲ್ಲಾಸ್ ಕಾಮತ್, ಗಣ್ಯರನ್ನು ಸ್ವಾಗತಿಸುತ್ತಾ ಒದಿಶಾ ಹೂಡಿಕೆದಾರರ ಸಭೆಯನ್ನು ಆರಂಭಿಸಿ, ಬೆಂಗಳೂರಿನಲ್ಲಿ ಒದಿಶಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ನವೀನ್ ಪಟ್ನಾಯಕ್ ಅವರ ನೇತೃತ್ವದ ಒದಿರಾ ತಂಡವು, ಆ ರಾಜ್ಯದ ಪ್ರಧಾನ ಹೂಡಿಕೆ ಶೃಂಗಸಭೆಯಾದ ಒದಿರಾದಲ್ಲಿ ತಯಾರಿಸಿ ಶೃಂಗಸಭೆ 22 ಕುರಿತು ಪ್ರತಿಯೊಬ್ಬರಿಗೂ ತಿಳಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸುವುದಕ್ಕಾಗಿ ಬಂದಿದೆ ಎಂದು ತಿಳಿಸಿದರು.

ಗೌರವಾನ್ವಿತ ಅತಿಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಒದಿಶಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ನವೀನ್ ಪಟ್ನಾಯಕ್ ಪ್ರತಿನಿಧಿಗಳಿಗೆ ಹಾರ್ದಿಕ ಶುಭಾಶಯ ಬಯಸುತ್ತಾ, “ಒದಿಶಾ, ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುಮರ್ಥಿಕತೆಗಳ ಪೈಕಿ ಒಂದಾಗಿದ್ದು ಕಳೆದ ಒಂದೂವರೆ ದಶಕಗಳಿಂದ ಸತತವಾಗಿ ಕಯ ಸರಾಸರಿಗಿಂತ ಅಧಿಕ ಬೆಳವಣಿಗೆ ಕಂಡಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳ ಸೌಲಭ್ಯ ಮತ್ತು ಪ್ರಮುಖ ಪ್ರದೇಶಗಳಿಂದಾಗಿ ನಾವು ಅತಿವೇಗವಾಗಿ ಭಾರತದ ಪ್ರಮುಖ್ಯ ಕೈಗಾರಿಕಾ ಗಮ್ಯವಾಗಿ ಬೆಳೆಯುತ್ತಿದ್ದೇವೆ. ಒದಿಶಾದ ಸಮೃದ್ಧ ನೈಸರ್ಗಿಕ ಸಂಪನ್ಮೂಲಗಳು, ಕುಶಲ ಹಾಗೂ ಉತ್ಪಾದಕತೆಯಿರುವ ಮಾನವ ಸಂಪನ್ಮೂಲಗಳು, ಪ್ರಗತಿಪರ ನೀತಿಗಳು ಮತ್ತು ಪ್ರಬಲವಾದ ಫಲಿತಾಂಶ-ಕೇಂದ್ರಿತ ಆಡಳಿತವು ವಿಶಿಷ್ಟವಾದ ಆರ್ಥಿಕಪರಿಸರ ವ್ಯವಸ್ಥೆ ಒದಗಿಸುತ್ತದೆ. ನೇರ ಉತ್ಪಾದನಾ ಹೂಡಿಕೆಗಳ ವಿಷಯದಲ್ಲಿ ಇಂದು ಒದಿಶಾ ರಾಜ್ಯದಲ್ಲಿ ಅಗ್ರಶ್ರೇಯಾಂಕದ ರಾಜ್ಯಗಳ ಪೈಕಿ ಒಂದಾಗಿದ್ದು ಇತ್ತೀಚೆಗೆ ಭಾರತ ಸರ್ಕಾರದಿಂದ ಬಿಡುಗಡೆಯಾದ ವ್ಯವಹಾರ ಕೈಗೊಳ್ಳುವ ಸೌಕರ್ಯದ ಶ್ರೇಯಾಂಕದಲ್ಲಿ ಸಾಧಕರ ಸ್ಥಾನ ಗಳಿಸಿದೆ. ವ್ಯಾಪಾರ ನಾಯಕತ್ವ ಮಾತುಕತೆಗಳು, ವಿಭಾಗೀಯ ಅಧಿವೇಶನಗಳು, ಸ್ಟಾರ್ಟ್-ಅಪ್ ಅಧಿವೇಶನಗಳು, ಮತ್ತು ಮಹಿಳಾ ಉದ್ಯಮಶೀಲತೆ ಅಧಿವೇಶನಗಳಿಂದ ಕೂಡಿ, 5 ದಿನಗಳವರೆಗೆ ನಡೆಯಲಿರುವ ಮೇಕ್ ಇನ್ ಒಡಿಶಾ ಕಾನ್‌ಕ್ಷೇವ್’22ದಲ್ಲಿ ಹೂಡಿಕೆದಾರರು ಮತ್ತು ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಜೊತೆಗೆ ಇನ್ನೂ ಅನೇಕ ಚಟುವಟಿಕೆಗಳೂ ಇರುತ್ತವೆ.”ಎಂದು ಹೇಳಿದರು.

ಸ್ಟಾರ್ಟ್-ಅಪ್‌ಗಳ ಬಗ್ಗೆ ಮಾತನಾಡುತ್ತಾ, ಅವರು ಒಹಬ್ ಮತ್ತು ಒದಿಶಾ ಇನೋವೇಶನ್ ಫಂಡ್ ಸ್ಥಾಪನೆಯ ಬಗ್ಗೆಯೂ ಮಾತನಾಡಿದರು. “ರಾಜ್ಯದಲ್ಲಿ ಇರುವ ಸ್ಟಾರ್ಟ್ ಅಪ್‌ಗಳಿಗೆ ವಿಶ್ವದರ್ಜೆ ಇನ್‌ಕ್ಯುಬೇಶನ್ ಮಸಹ ಕಾರ್ಯ ಸೌಲಭ್ಯ ಒದಗಿಸುವ ಸಲುವಾಗಿ ನಾವು ಭುವನೇಶ್ವರದಲ್ಲಿ ಓದಿಶಾ ಸ್ಟಾರ್ಟ್-ಅಪ್ ಹಬ್(ಒ-ಹಬ್) ಸ್ಥಾಪಿಸಿದ್ದೇವೆ. ಮೂಲತಃ ತಾಂತ್ರಿಕ ಪರಿಹಾರಗಳಾದ ಬೇರುಮಟ್ಟದ ಆವಿಷ್ಕಾರಗಳಿಗೆ ಬೆಂಬಲ ಒದಗಿಸಲು ಮವಿವಿಧ ಕ್ಷೇತ್ರಗಳ ಯುವಜನತೆಗೆ ಯಶಸ್ವೀ ವ್ಯಾಪಾರ ಮಾದರಿಗಳ ಅಭಿವೃದ್ಧಿಗಾಗಿ ನಾವು ಓದಿಶಾ ಯೂತ್ ಇನೋವೇಶನ್ ಫಂಡ್‌ನ ಸ್ಥಾಪನೆಯನ್ನೂ ಮಾಡಿದ್ದೇವೆ.’ಎಂದು ಅವರು ಹೇಳಿದರು.

ಮುಂದುವರಿದು, “ತಂತ್ರಜ್ಞಾನ ಹಾಗೂ ದೀರ್ಘಕಾಲ ಇರುವ ಸಿದ್ಧಾಂತದಲ್ಲಿ ಆಧುನಿಕತೆಯಿಂದ ಮುನ್ನಡೆಸಲ್ಪಡುತ್ತಿರುವ ಕೈಗಾರಿಕೀಕರಣದ ಹೊಸಯುಗಕ್ಕೆ ನಾವು ಪ್ರವೇಶಿಸುತ್ತಿದ್ದಂತೆ, ನಿರಂತರ ಬೆಳವಣಿಗೆಯನ್ನು ಖಾತರಿಪಡಿಸುವ ಸಲುವಾಗಿ, ಸರ್ಕಾರ, ಕೈಗಾರಿಕೆ ಮತ್ತು ಜನರ ಅವಶ್ಯಕವಾಗುತ್ತದೆ” ಎಂದೂ ಅವರು ಸೇರಿಸಿದರು. ನಡುವೆ ಸಹಯೋಗಾತ್ಮಕ ಪ್ರಯತ್ನಗಳು ಏರ್ಪಡಬೇಕಾದುದು

ನಂತರ ಎರಡು ದಶಕಗಳಿಂದಲೂ ನಡೆಯುತ್ತಿರುವ ರಾಜ್ಯದ ಸ್ಥಿರವಾದ ಆಡಳಿತವನ್ನು ಎತ್ತಿಹಿಡಿಯುತ್ತಾ, ಸನ್ಮಾನ್ಯ ಮುಖ್ಯಮಂತ್ರಿಗಳು, ಇಒಡಿಬಿ ಶ್ರೇಯಾಂಕ, ವ್ಯಾಪಾರವನ್ನು ನಡೆಸುವುದಕ್ಕೆ ಸ್ಪರ್ಧಾತ್ಮಕ ವೆಚ್ಚಗಳು, ಹೂಡಿಕೆ ಸೌಲಭ್ಯಗಳ ಪ್ರಭಾವ, ವರ್ಗದಲ್ಲೇ ಅತ್ಯುತ್ತಮವಾದ ಪ್ರೋತ್ಸಾಹಧನ ಮತ್ತು ಆತಂತ ಕುಶಲ ಮಾನವ ಸಂಪನ್ಮೂಲಗಳಲ್ಲಿ ರಾಜ್ಯದ ಸ್ಥಾನವು, ಇತರ ರಾಜ್ಯಗಳಿಗಿಂತ ಹೆಚ್ಚು ವಿಶಿಷ್ಟವಾದ ಸ್ಪರ್ಧಾತ್ಮಕ ಲಾಭ ಸಾಧಿಸುವುದಕ್ಕೆ ನೆರವಾಗಿದೆ ಎಂದು ತಿಳಿಸಿದರು. ಭಾರತದ ಇತರ ಭಾಗಗಳಿಗಿಂತ ದೇಶದ ಪೌರ್ವಾತ್ಯ ಹಾಗೂ ಉತ್ತರ ಭಾಗಗಳಲ್ಲಿನ ಮಾರುಕಟ್ಟೆಗಳು ಹೆಚ್ಚು ವೇಗವಾದ ಬೆಳವಣಿಗೆ ಪಥದಲ್ಲಿದ್ದು ಈ ಮಾರುಕಟ್ಟೆಗಳ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿಘಟಕಗಳನ್ನು ಸ್ಥಾಪಿಸಲು ಒದಿಶಾ ಅತ್ಯುತ್ತಮ ಸೌಕರ್ಯಗಳನ್ನು ಕೈಗಾರಿಕೆಗಳಿಗೆ ಒದಗಿಸುತ್ತಿದೆ ಎಂದು ತಿಳಿಸಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಹಾಗೂ ಸಭೆಗೆ ಹಾಜರಿದ್ದ ಪ್ರತಿನಿಧಿಗಳಿಗೆ ಹಾರ್ದಿಕ ಆಹ್ವಾನ ನೀಡುತ್ತಾ,

ಸನ್ಮಾನ್ಯ ಮುಖ್ಯಮಂತಿಗಳು, ” ಮೇಕ್ ಇನ್ ಒಡಿಶಾ ಕಾನ್‌ಕ್ಷೇವ್‌’22(MIO 22), ಭುವನೇಶ್ವರದಲ್ಲಿ ನವಂಬರ್ 30ರಿಂದ ಡಿಸಂಬರ್ 4, 2022ರವರೆಗೆ ನಡೆಯಲಿದೆ ಎಂದು ತಿಳಿಸಿದರು. ಇಲ್ಲಿ ಹಾಜರಿರುವ ಎಲ್ಲಾ ಪ್ರತಿನಿಧಿಗಳು ಹಾಗೂ ಉದ್ದಿಮೆ ನಾಯಕರುಗಳಿಗೆ ಮೇಕ್ ಇನ್ ಒಡಿಶಾದಲ್ಲಿ ಪಾಲ್ಗೊಂಡು ಒದಿಶಾದ ಈ ಪರಿವರ್ತನೀಯ ಪಯಣದ ಭಾಗಿಯಾಗಿರುವಂತೆ ಕೋರಿದರು. ಮುಂಬರುವ ವರ್ಷಗಳಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಒಂದು ಮಾರ್ಗಪಥವನ್ನು ಚರ್ಚಿಸಲು, ಜಗತ್ತಿನಾದ್ಯಂತದಿಂದ ಕೈಗಾರಿಕಾ ನಾಯಕರುಗಳಿಗಾಗಿ ಒಂದು ವೇದಿಕೆ ಒದಗಿಸುವುದು MIO 22 ದ ಗುರಿಯಾಗಿದೆ. 2016ರಲ್ಲಿ ಚಿಕ್ಕವಾಗಿ ಒಂದು ಆರಂಭ ಮಾಡಿದೆವು ಅದರಲ್ಲಿ 18,500 ಮಂದಿ ಭಾಗವಹಿಸಿ, ರೂ. 2 ಲಕ್ಷ ಕೋಟಿಗಿಂತ ಹೆಚ್ಚಿನ ಮೌಲ್ಯದ 120 ಹೂಡಿಕೆ ಉದ್ದೇಶಗಳಿಗೆ ಕಾರಣರಾದರು. 2018ರಲ್ಲಿ ನಾವು 2ನೆ ಆವೃತ್ತಿಯನ್ನು ನಡೆಸಿದೆವು. ಇದು ಅದರ ಮಾನದಂಡವನ್ನು ಇನ್ನೂ ಎತ್ತರಕ್ಕೆ ಏರಿಸಿತು. ಇದರಲ್ಲಿ 45,000 ಜನರು ಭಾಗವಹಿಸಿ ರೂ. 4 ಲಕ್ಷ ಕೋಟಿಗಿಂತ ಹೆಚ್ಚಿನ ಮೌಲ್ಯದ ಹೂಡಿಕೆಗಳನ್ನು ಸ್ವೀಕರಿಸಿದ್ದೆವು. ಈ ವರ್ಷದ ಕಾರ್ಯಕ್ರಮವು ಅಮೋಘ ಯಶಸ್ಸು ಕಾಣುವುದಕ್ಕೆ ನಮಗೆ ನಿಮ್ಮ ಬೆಂಬಲ ಮತ್ತು ಸಹಕಾರದ ಅಗತ್ಯವಿದೆ. ಈ ಶೃಂಗಸಭೆಯ ಮೂಲಕ ನಾವು ನಿಮ್ಮೆಲ್ಲರೊಂದಿಗೆ ಹೊಸ ಸಂಬಂಧಗಳನ್ನು ರಚಿಸಿಕೊಂಡು, ಹಳೆಯ ಸಂಬಂಧಗಳನ್ನು ಬಲಪಡಿಸಿಕೊಳ್ಳುವ ಗುರಿ ಹೊಂದಿದ್ದೇವೆ. ನೀವೆಲ್ಲರೂ ಒದಿಶಾದ ಅಭಿವೃದ್ಧಿ ಕಥೆಯ ಭಾಗವಾಗಿರಬೇಕೆಂದು ನಾವು ಆಶಿಸುತ್ತೇವೆ.”ಎಂದರು.

ಪ್ರತಿವರ್ಷ ಧನಾತ್ಮಕ ಬೆಳವಣಿಗೆ ಪ್ರಮಾಣಗಳನ್ನು ದಾಖಲಿಸುತ್ತಾ ತೀವ್ರ ವೇಗದಲ್ಲಿ ಕೈಗಾರೀಕರಣ ಕೈಗೊಳ್ಳುತ್ತಾ ಅಭಿವೃದ್ಧಿಯ ವಿಷಯದಲ್ಲಿ ಓದಿಶಾ ಯಾವ ರೀತಿ ದೇಶದ ಪ್ರಮುಖ ಬ್ರೇಕ್ ಔಟ್ ರಾಜ್ಯಗಳ ಪೈಕಿ ಒಂದಾಗಿ ಬೆಳೆದು ಬಂದಿದೆ ಎಂಬುದನ್ನು ವಿವರಿಸುತ್ತಾ, ಶ್ರೀ ಕಾಮತ್ ಅವರು ಒದಿಶಾದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಿದರು.

ಓದಿತಾ ಸರ್ಕಾರದ ಕೈಗಾರಿಕೆಗಳು, ಕೌಶಲ್ಯ ಅಭಿವೃದ್ಧಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಐಡಿಸಿಒ ಮತ್ತು ಐಪಿಐಸಿಒಎಲ್ ಚೇರ್ಮನ್ ಶ್ರೀ ಹೇಮಂತ್ ಶರ್ಮ, ನೆರೆದಿದ್ದ ಪ್ರೇಕ್ಷಕರಿಗೆ ಒದಿಶಾದ ಕೈಗಾರಿಕ ಪರಿಸರ ವ್ಯವಸ್ಥೆ ಮತ್ತು ಮೇಕ್ ಇನ್ ಒದಿರಾ ಕಾನ್ ಕ್ಷೇಪ್ ’22ದ ಮಂಡನೆ ಪ್ರದರ್ಶಿಸಿದರು.

ಒದಿಶಾ ಸರ್ಕಾರದ ಆ ಮತ್ತು ಐಟಿ ಇಲಾಖೆಯ ಕಾರ್ಯದರ್ಶಿ ಶ್ರೀ ಮನೋಜ್, ಮಿತ್ರ, ರಾಜ್ಯದಲ್ಲಿ ಏಕಸನಗೊಳ್ಳುತ್ತಿರುವ ಐಟಿ/ಐಟಿಇಎಸ್ ಪರಿಸರ ವ್ಯವಸ್ಥೆಯ ಬಗ್ಗೆ ಮಾತನಾಡಿದರು. ಇಎಸ್‌ಡಿಎಮ್ ಮತ್ತು ಐಟಿ/ಐಟಿಇಎಸ್ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮತ್ತು ರಾಜ್ಯದೊಳಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸಲು ಒದಿಶಾ ಸರ್ಕಾರವು ಹೊರತಂದಿರುವ ಬೆಳವಣಿಗೆ-ಕೇಂದ್ರಿತ ಹಾಗೂ ಭವಿಷ್ಯ-ಕೇಂದ್ರಿತ ಐಟಿ ನೀತಿ, ಡಾಟಾ ಕೇಂದ್ರ ನೀತಿ, ಬಿಪಿಒ ನೀತಿ, ಮತ್ತು ಎಲೆಕ್ಟ್ರಾನಿಕ್ಸ್ (ವಿದ್ಯುನ್ಮಾನ) ನೀತಿಯ ಮೇಲೆ ಬೆಳಕುಚೆಲ್ಲಿದರು.
ಸ್ಟಾರ್ಟ್-ಆಪ್ ಒದಿಶಾದ ಎಕ್ಸಿಕ್ಯೂಟಿವ್ ಚೇರ್ಮನ್ ಡಾ. ಒಂಕಾರ್ ರೈ ಓದಿಶಾದಲ್ಲಿ ಸದಾ ಬೆಳೆಯುತ್ತಿರುವಸ್ಟಾರ್ಟ್ ಅಪ್ ಪರಿಸರವ್ಯವಸ್ಥೆಯ ಬಗ್ಗೆ ಗಮನ ಕೇಂದ್ರೀಕರಿಸಿದರು. ರಾಜ್ಯಗಳ ಶ್ರೇಯಾಂಕ 2018 ಮತ್ತು 2019ರಲ್ಲಿ ಕ್ರಮವಾಗಿ ಓದಿಶಾ, ಭಾರತ ಸರ್ಕಾರದ ಡಿಪಿಐಐಟಿಯಿಂದ “ಆಗ್ರಮಾನ್ಯ ಸಾಧಕ(ಟಾಪ್ ಅಚೀವರ್)” ಮತ್ತು ನಾಯಕ(ಲೀಡರ್) ಆಗಿ ಗುರುತಿಸಲ್ಪಟ್ಟಿತ್ತು ಎಂದು ಪ್ರೇಕ್ಷಕರಿಗೆ ತಿಳಿಸಿದರು.

ಗೌರವಾನ್ವಿತ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಒದಿಶಾ ಸರ್ಕಾರದ ಕೈಗಾರಿಕೆಗಳು, ಎಮ್‌ಎಸ್‌ಎಮ್‌ಇಗಳು

ಹಾಗೂ ಶಕ್ತಿ ಇಲಾಖೆಯ ಸನ್ಮಾನ್ಯ ಸಚಿವರಾದ ಶ್ರೀ ಪ್ರತಾಪ್ ಕೇಶರಿ ದೇಬ್ ” ಸನ್ಮಾನ್ಯ ಮುಖ್ಯಮಂತ್ರಿಗಳ ಮಾರ್ಗದರ್ಶನದಡಿ ರಾಜ್ಯ ಸರ್ಕಾರವು, ನಾಗರಿಕರು ಹಾಗೂ ವ್ಯಾಪಾರಗಳಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ‘ಇಡಿಯಾಗಿ ಸರ್ಕಾರ’ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ. ಇಂದು ದೇಶಾದ್ಯಂತದ ಹೂಡಿಕೆದಾರರಿಗೆ ನಾವು ಆಯ್ಕೆಯ ಗಮ್ಯವಾಗುತ್ತಿದ್ದೇವೆ. ಎಲ್ಲಾ ಉದ್ದಿಮೆ ನಾಯಕರು, ಸಂಘಗಳು ಹಾಗೂ ಇಲ್ಲಿ ಹಾಜರಿರುವ ಅವರ ಪ್ರತಿನಿಧಿಗಳನ್ನು ನಾವು ಓದಿಶಾವನ್ನು ನಿಮ್ಮ ಮುಂದಿನ ಹೂಡಿಕೆ ಗಮ್ಯವನ್ನಾಗಿ ಶೋಧಿಸಲು ಆಹ್ವಾನಿಸುತ್ತಿದ್ದೇವೆ.”ಎಂದು ಹೇಳಿದರು. ದಿನದ ಆರಂಭದಲ್ಲಿ ಒದಿಶಾದ ಸನ್ಮಾನ್ಯ ಮುಖ್ಯಮಂತ್ರಿಗಳು ಒದಿಶಾಕ್ಕಾಗಿ ಅವರುಗಳಿಗೆ ಇರುವ ಯೋಜನೆಗಳ ಕುರಿತು ಚರ್ಚಿಸಲು ಮತ್ತು ಮೇಕ್ ಇನ್ ಒದಿಶಾ ಕಾನ್‌ವ್ 22ಕ್ಕೆ ಅವರನ್ನು ಖುದ್ದಾಗಿ ಆಹ್ವಾನಿಸಲು ವಿವಿಧ ಕ್ಷೇತ್ರಗಳಾದ್ಯಂತದ ಹಲವಾರು ಹಿರಿಯ ಉದ್ಯಮಿಗಳನ್ನು ಭೇಟಿಯಾದರು. ಈ ಚರ್ಚೆಗಳ ಸಮಯದ ಪಟ್ನಾಯಕ್ ಅವರು ತಮ್ಮ ಸರ್ಕಾರ ತೆಗೆದುಕೊಂಡ ಪ್ರಮುಖ ವ್ಯಾಪಾರಪರ ಪರಿವರ್ತನೆಗಳನ್ನು ಒತ್ತಿಹೇಳುತ್ತಾ ಒದಿಶಾವನ್ನು ಅವರ ವ್ಯಾಪಾರದ ಸಂಭಾವ್ಯ ಗಮ್ಯವಾಗಿರುವ ಶೋಧನೆ ಕೈಗೊಳ್ಳುವಂತೆ ಪ್ರೋತ್ಸಾಹಿಸಿದರು.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.