
ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷದ ಅಮೃತಮಹೋತ್ಸವ ದೇಶದಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾತಿ, ಕುಲ, ಮತ್ತು ಮತ ಬೇಧವಿಲ್ಲದೆ ಎಲ್ಲಾ ಭಾರತೀಯರು ಭಾಗವಹಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಮಹಾತ್ಮಾ ಗಾಂಧೀಜಿರವರು, ಸರ್ದಾರ್ ವಲ್ಲಭಾಯಿ ಪಟೇಲರು, ಸುಭಾಷ್ ಚಂದ್ರ ಬೋಸ್‌ರವರು, ಭಗತ್ ಸಿಂಗ್ ರವರು, ಮಂಗಲ್ ಪಾಂಡೆರವರು, ಲಾಲಾ ರಜಪತ್ರಾಯ್, ಜವಹರಲಾಲ್ ನೆಹರುರವರು, ಮೌಲಾನಾ ಆಜಾದ್ ರವರು ಹೀಗೆ ಅನೇಕ ಹಿರಿಯರು ಸ್ವಾತ್ರಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿರುತ್ತಾರೆ. ಲಕ್ಷಾಂತರ ಭಾರತೀಯರ ಬಲಿದಾನವಾಗಿರುವುದು ಇತಿಹಾಸ.

ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಬ್ರಾಹ್ಮಣರು ಹೋರಾಟವನ್ನು ಮಾಡಿದರಲ್ಲದೆ ಅನೇಕರು ಪ್ರಾಣ ತ್ಯಾಗ ಮಾಡಿರುತ್ತಾರೆ. ಮದನ್ನೋಹನ್ ಮಾಲ್ವಿಯ, ಗೋಪಾಲಕೃಷ್ಣ ಗೋಖಲೆ, ಚಂದ್ರಶೇಖ ಆಜಾದ್, ಬಾಲಗಂಗಾಧರ ತಿಲಕ್, ಬಂಕಿಮ್ ಚಂದ್ರ ಚಟರ್ಜೀ ಮಂಗಲ್ ಪಾಂಡೆ, ವಾಸುದೇವ ಬಲವಂತ ಘಡಕೆ, ವೀರಸೇನಾಪತಿ, ಚಾಪೇಕರ್, ಸುಬ್ರಮಣ್ಯ ಭಾರತಿ, ಸೇನಾಪತಿ ಬಾಪಟ್, ಹೆಚ್.ಎಸ್. ದೊರೆಸ್ವಾಮಿ, ಜಮಖಂಡಿ ಭೀಮರಾವ್, ಮುಂಡರಗಿ ಭೀಮರಾವ್ ಹಾಗೂ ಇನ್ನು ಅನೇಕ ಬ್ರಾಹ್ಮಣ ಮುಖಂಡರುಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರುತ್ತಾರೆ.
ಸುವರ್ಣ ಮಹೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಇವರೆಲ್ಲರಿಗೂ ಒಂದು ನಮನ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಮತ್ತು ಇವರುಗಳ ಹೋರಾಟದ ಮಾರ್ಗವನ್ನು ತಿಳಿದುಕೊಳ್ಳುವ ಮತ್ತು ಅದನ್ನು ಮುಂದಿನ ಯುವ ಪೀಳಿಗೆಯವರಿಗೆ ತಿಳಿಸಿಕೊಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎನ್. ಕುಮಾರ್ ರವರು ಅಧ್ಯಕ್ಷತೆಯನ್ನು ವಹಿಸಲ್ಲಿದ್ದಾರೆ ಹಾಗೂ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಹೆಚ್. ಎಸ್. ಸಚ್ಚಿದಾನಂದ ಮೂರ್ತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀ ಯೋಗಿ ನಾರೇಯೇಣ ಇಂಡೋಲಜಿ ಕೇಂದ್ರದ ನಿರ್ದೇಶಕರಾದ ಡಾ. ಶ್ರೀ ಬಾಬು ಕೃಷ್ಣಮೂರ್ತಿ ರವರು ದಿನಾಂಕ 09.10.2022 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಉಪನ್ಯಾಸ ಮಾಡಲಿದ್ದಾರೆ. ಗಾಯತ್ರಿ ದೇವಿ ಪಾರ್ಕ ಬಡಾವಣೆ, ವೈಯಾಲಿಕಾವಲ್ ಚೌಡಯ್ಯ ಹಾಲ್ ಹಿಂಭಾಗದಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಕೃಷ್ಣದೇವರಾಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ರಘುನಾಥ್. ಎಸ್ – ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News
9341997936