
ಆನೇಕಲ್ ಕಲ್ಲು ಬಾಳು ಗ್ರಾಮದ ನಿಸರ್ಗ,ನಂದನವನ, ಸೇರಿದಂತೆ ಬಡಾವಣೆಗಳಲ್ಲಿ ಅಕ್ರಮವಾಗಿ ಪಾರ್ಕ್, ಸಿಎ ನಿವೇಶನಗಳ ಮಾರಾಟ: ನೂರಾರು ಕೋಟಿ ರೂ ಅವ್ಯವಹಾರ ಸಮಗ್ರ ತನಿಖೆಗೆ ಒತ್ತಾಯ ನಿರ್ಮಲ ನಗದ
ಬೆಂಗಳೂರು,ನ,3, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಕಲ್ಲು ಬಾಳು ಗ್ರಾಮಪಂಚಾಯತ್ ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ನಿವೇಶಗಳನ್ನು (10.5ಎಕರೆ) ನಿರ್ಮಾಣ್ ಶೆಲ್ಕರ್ ರಿಯಲ್ ಎಸ್ಟೇಟ್ ಸಂಸ್ಥೆ ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಿದೆ. ನಿವೇಶನ ಖರೀದಿಸಿದವರಿಗೆ 150 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟವಾಗಿದೆ ಎಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.
“ನೂರಾರು ಕೋಟಿ ರೂಪಾಯಿ ಅಕ್ರಮ ನಡೆದಿರುವ ಪ್ರಕರಣದ ಬಗ್ಗೆ ತಕ್ಷಣವೇ ಬಿ.ಎಂ.ಆರ್.ಡಿ.ಎ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕೂಡಲೇ ಎಫ್.ಐ.ಆರ್. ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲ್ಲುಬಾಳು ಗ್ರಾಮ ಪಂಚಾಯತ್ ಸದಸ್ಯ, ಸದಾನಂದ ಮತ್ತು ವಂಚನೆಗೊಳಗಾದ ನಿವೇಶನ ಮಾಲೀಕರು, ಸರ್ಕಾರದ ಉನ್ನತ ಅಧಿಕಾರಿಗಳು, ಇಡೀ ಆಡಳಿತ ವ್ಯವಸ್ಥೆ ಬಿಲ್ಕರ್ಸ್ ಗಳ ಜೊತೆ ಶಾಮೀಲಾಗಿದೆ. ಇದರಿಂದ ಜೀವನ ಪರ್ಯಂತ ಗಳಿಸಿದ ಸಾಮಾನ್ಯ ಜನತೆ ಇವರಿಂದ ಮೋಸ ಹೋಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೂರಿದರು.
ನಿಸರ್ಗ, ನಂದನವನ, ನಿರ್ಮಲ ನಗರ ಸೇರಿದಂತೆ ಐದು ಬಡಾವಣೆಗಳಲ್ಲಿ ಇಂತಹ ಭಾರೀ ವಂಚನೆ ನಡೆದಿದ್ದು, ಪ್ರತಿಯೊಂದು ಬಡಾವಣೆಗಳಲ್ಲಿ ಕನಿಷ್ಠ 25 ರಿಂದ 50 ಕೋಟಿ ರೂಪಾಯಿಯಷ್ಟು ವಂಚನೆಯಾಗಿದೆ. ಸರ್ವಮಾಡಿದ್ದು, ಒತ್ತುವರಿಯಾಗಿ, ಬಿಎಂಆರ್.ಡಿಎ ಪಂಚಾಯತ್ ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಮಾಡಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಉಮಾ ಮಹದೇವ್ ಮತ್ತು ಅತೀಕ್ ಅವರು ತನಿಖೆಗೆ ಆದೇಶ ನೀಡಿದ್ದು, ಇದರಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ಬಡಾವಣೆಗಳ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶದ ಸ್ಥಳಗಳನ್ನು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಲಾಗಿದೆ. ಇಂತಹ ಸುಮಾರು 10.5 ಎಕರೆ ಪ್ರದೇಶವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆನೇಕಲ್ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಇಂತಹ ನಿವೇಶನಗಳ ಖಾತೆ ವಜಾಗೊಳಿಸುವಂತೆ ಮನವಿ, ಇಂತಹ ನಿವೇಶನಗಳನ್ನು ಖರೀದಿಸಿರುವವರು ಬಹುತೇಕ ಮಂದಿ ಅಮಾಯಕರಾಗಿದ್ದು, ಇನ್ನೂ ಕೆಲವರು ವಿದೇಶದಲ್ಲಿದ್ದಾರೆ. ಸಿಎ ನಿವೇಶನ ಮಾರಾಟ ಮಾಡಿದ್ದಾರೆ. ಆದರೆ ಈ ಅಕ್ರಮದ ಬಗ್ಗೆ ತಾಲ್ಲೂಕು ಪಂಚಾಯತ್ ಇಒ ಅವರು ತಡೆಯಾಜ್ಞೆ ನೀಡಿ ಪ್ರಕರಣವನ್ನು ಪದೇ ಪದೇ ಮುಂದೂಡುತ್ತಿದ್ದರು. ಆದರೆ ಇದೀಗ ತಡೆಯಾಜ್ಞೆ ತೆರವುಗೊಂಡಿದೆ. ಇಂತಹ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೂ ಸಹ ಭಾರೀ ನಷ್ಟವಾಗಿದೆ. ನಿಜವಾಗಿ ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸದಾನಂದ – ಎಂದು ಸಧಸ್ಯರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .
City Today News – 9341997936