ರಾಜ್ಯ ಮಟ್ಟದ ಸಿರಿಧಾನ್ಯ ಕಾವ್ಯ ಸಮ್ಮೇಳನದ ಪೂರ್ವಭಾವಿ ಪತ್ರಿಕಾಗೋಷ್ಠಿ
ದಿನಾಂಕ ೨೦/೧೧/9099 ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಂಕಹಳ್ಳಿ ಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಿರಿಧಾನ್ಯ ಕಾವ್ಯ ಸಮ್ಮೇಳನ ಕುರಿತು

ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು ತೆಂಕಹಳ್ಳಿಯಲ್ಲಿ ಆರ್ಗ್ ಶ್ರೀ ಸಿರಿಧಾನ್ಯ ತಿನಸಿನ ತಯಾರಿಕಾ ಕಾರ್ಖಾನೆ ಹೊಂದಿದ ಪ್ರತಿಶತ ನೂರು ಸಿರಿಧಾನ್ಯಗಳಿಂದ ಕ್ರಂಚಿಸ್, ಕುಕೀಸ್, ಬಿಸ್ಕೆಟ್ ಹಾಗೂ ಚಿಕ್ಕಿಗಳನ್ನು ತಯಾರಿಸಿ ರಾಜ್ಯಾದ್ಯಂತ ಮಾರುಕಟ್ಟೆಗೆ 2015 ರಿಂದಲೂ ತಲುಪಿಸುತ್ತಿದೆ. ವಿಶ್ವಕ್ಕೆ ಮೊಟ್ಟ ಮೊದಲು ಪ್ರತಿಶತ ನೂರರಷ್ಟು ಸಿರಿಧಾನ್ಯಗಳಿಂದಲೇ ಕ್ರಂಚಿಸ್ ಹಾಗೂ ಕುಕೀಸ್ ಪರಿಚಯಿಸಿದ ಕಂಪನಿ ಅರ್ಗ್ ಟೀ ಆಗಿದೆ.
2023 ರ ಅಂತರರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷದ ಹಿನ್ನೆಲೆಯಲ್ಲಿ ಪ್ರಾಚೀನ ಮತ್ತು ಮರೆತುಹೋದ ಸಿರಿ ಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಆರ್ಗ್ ಟ್ರೇ ಸಂಸ್ಥೆಯು ವಿವಿಧ ಉಪ ಕ್ರಮಗಳು ಮತ್ತು ನಿಯೋಜಿತ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ
ಈ ಅಭಿಯಾನಕ್ಕೆ ಪೂರಕವಾಗಿ ಸಿರಿಧಾನ್ಯಗಳ ಸಿರಿತನ ಸಾರುವ ಕವಿತೆಗಳು, ಹಾಡುಗಳು ಹಾಗೂ ಕವನಗಳಿಗಾಗಿ ಸ್ಪರ್ಧಾತ್ಮಕ ರಾಜ್ಯ ಮಟ್ಟದ ಸಿರಿಧಾನ್ಯ ಕಾವ್ಯ ಸಮ್ಮೇಳನವನ್ನು ನವಂಬರ್ 20, 2022ರ ಭಾನುವಾರದಂದು ಮಳವಳ್ಳಿ ತಾಲ್ಲೂಕಿನ ತೆಂಕಹಳ್ಳಿಯಲ್ಲಿ ಆಯೋಜಿಸಲಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೆಂಕಹಳ್ಳಿ ಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಿರಿಧಾನ್ಯ ಕಾವ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟನೆಯನ್ನು 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಯೋಜಿತ ಅಧ್ಯಕ್ಷರು ಹಾಗೂ ಸುಪ್ರಸಿದ್ಧ ಕವಿಗಳು, ಚಲನಚಿತ್ರ ರಚನಕಾರರು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ದೊಡ್ಡರಂಗೇಗೌಡರವರು ನೆರವೇರಿಸಲಿದ್ದು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಗ್ ಟ್ರೇ ಸಂಸ್ಥೆಯ ಸಂಸ್ಥಾಪಕರು ಹಾಗೂ ಮುಖ್ಯಸ್ಥರಾದ ಶ್ರೀಯುತ ಮಹೇಶ್ ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಳವಳ್ಳಿ ವಿಧಾನ ಸಭಾ ಸದಸ್ಯರಾದ ಡಾ. ಕೆ ಅನ್ನದಾನಿ, ಮೈಸೂರು ವಿಭಾಗದ ಮೈಸೂರು ಹೆಚ್ಚುವರಿ (ಆಡಳಿತ ಮತ್ತು ಅಭಿವೃದ್ಧಿ) ಆಯುಕ್ತರಾದ ಶ್ರೀ ಪಿ. ಶಿವರಾಜು ಕೆ.ಎ.ಎಸ್ ರವರು ಶ್ರೀ ಕ್ಷೇತ್ರ ಸುತ್ತೂರಿನ ಜೆಎಸ್ಎಸ್ ಸಂಸ್ಥೆಗಳ, ಸಂಯೋಜನಾಧಿಕಾರಿಗಳಾದ ಡಾ. ಜಿ.ಎಲ್ ತ್ರಿಪುರಾಂತಕ, ಚಲನ ಚಿತ್ರ ನಿರ್ದೇಶಕರಾದ ಹಿರಿಯ ಕವಿಗಳು ಹಾಗೂ ಚಿಂತಕರಾದ ಡಾ. ಕೆ.ಸಿ. ಶಿವಪ್ಪ, ಕಾವ್ಯ, ಕಥೆ, ಕಾದಂಬರಿ, ಖ್ಯಾತ ವಿಮರ್ಶಕರು, ಜಾನಪದ ವಿದ್ವಾಂಶರು ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡರು ಹಾಗೂ ಹಿರಿಯ ಕವಯತ್ರಿ, ಲೇಖಕಿ ಹಾಗೂ ಕರ್ನಾಟಕ ಲೇಖಕಿಯರ ಸಂಘ ಅಧ್ಯಕ್ಷರಾದ ಡಾ. ಹೆಚ್ ಎಸ್ ಪುಷ್ಪರವರು ಕವಿಗಳು ಹಾಗೂ ಲೇಖಕರಾದ ಡಾ.ರಾಮಲಿಂಗೇಶ್ವರ(ಸಿಸಿರಾ) ತೀರ್ಪುಗಾರರಾಗಿ ಆಗಮಿಸುತ್ತಿದ್ದಾರೆ.

ರಾಜ್ಯ ಮಟ್ಟದ ಸಿರಿಧಾನ್ಯ ಕಾವ್ಯ ಸಮ್ಮೇಳನ ಕವಿ ಗೋಷ್ಠಿಯಲ್ಲಿ ಕವಿ ಮನಗಳು ಕಾವ್ಯವಾಚಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ಆಯ್ಕೆಯಾದ ಮೂರು ಕವನಗಳಿಗೆ ಪ್ರಥಮ 25000, ದ್ವಿತೀಯ 15000, ತೃತೀಯ 10000, .ಬಹುಮಾನಗಳನ್ನು ನೀಡಲಾಗುತ್ತದೆ. ಸದರಿ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಕವಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು.
ಸಿರಿಧಾನ್ಯಗಳ ಮಹತ್ವ. ಸುಸ್ಥಿರ ಕೃಷಿಯಲ್ಲಿ ಇದರ ಪಾತ್ರ ಮತ್ತು ಇದರ ಉಪಯುಕ್ತತೆ ಹಾಗೂ ಶ್ರೇಷ್ಠ ಆಹಾರದ ಲಾಭಗಳ ಕುರಿತು ಜಾಗೃತಿ ಮೂಡಿಸುವ ವಿಶಿಷ್ಟ ಪ್ರಯತ್ನವಾಗಿದೆ.
ಡಾ.ರಾಜೇಂದ್ರಪ್ರಸಾದ್ ಪಿ. – ಸಂಸ್ಥಾಪಕರು, ಸೋಶಿಯಲ್ ವರ್ಕಸ್್ರ ಅಸೋಸಿಯೇಷನ್ ಫಾರ್ ಡೆವಲಪ್ಮೆಂಟ್
City Today News
9341997936