ಕೇವಲ ಐ ವಿ ಸೆಡೇಷನ್ ಉಪಯೋಗಿಸಿ ಹೃದ್ರೋಗಿಗೆ ಯುನೈಟೆಡ್‌ ಆಸ್ಪತ್ರೆ ವೈದ್ಯರಿಂದ ಹೈ ರಿಸ್ಕ್‌ ಕಿಡ್ನಿ ಕಲ್ಲು ಶಸ್ತ್ರಚಿಕಿತ್ಸೆ

  • ಹೃದ್ರೋಗಿಗೆ ಮೂತ್ರಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ ಜಯನಗರದ ಯುನೈಟೆಡ್‌ ಆಸ್ಪತ್ರೆ ವೈದ್ಯರ ತಂಡ
  • ಐ ವಿ ಸೆಡೇಷನ್ ಮೂಲಕ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನೆರೆವೇರಿಸಿದ ಹೆಗ್ಗಳಿಕೆ

ಬೆಂಗಳೂರು ನವೆಂಬರ್‌ 21: ಹುಟ್ಟಿನಿಂದಲೇ ಹೃದ್ರೋಗ ಸಮಸ್ಯೆ ಹೊಂದಿದ್ದ ಅಸ್ಸಾಂ ರಾಜ್ಯದ ಯುವತಿಯೊಬ್ಬರಿಗೆ ಅನಸ್ತೇಷಿಯಾ ಚುಚ್ಚುಮದ್ದು ನೀಡದೇ ಕೇವಲ ಐ ವಿ ಸೆಡೇಷನ್ ಮೂಲಕ ಕ್ಲಿಷ್ಟಕರ ಕಿಡ್ನಿ ಕಲ್ಲು ನಿವಾರಣೆ ಶಸ್ತ್ರಚಿಕಿತ್ಸೆಯನ್ನ ಜಯನಗರದ ಯುನೈಟೆಡ್‌ ಆಸ್ಪತ್ರೆಯ ವೈದ್ಯರು ನೆರವೇರಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹುಟ್ಟಿನಿಂದಲೇ ಹೃದ್ರೋಗ ಸಮಸ್ಯೆ ಹೊಂದಿದ್ದ ಯುವತಿಯೊಬ್ಬಳು ಅತಿಯಾದ ಹೊಟ್ಟೆನೋವಿನೊಂದಿಗೆ ಜಯನಗರದಲ್ಲಿರುವ ಯುನೈಟೆಡ್‌ ಆಸ್ಪತ್ರೆಗೆ ಬಂದರು. ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆನೋವಿಗೆ ಮೂತ್ರಪಿಂಡದಲ್ಲಿ ಬೆಳೆದಿರುವ ಕಲ್ಲು ಕಾರಣ ಎಂದು ತಿಳಿಯಿತು. ಆದರೆ ಅವರು ಹೃದ್ರೋಗಿ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅರಿವಳಿಕೆ ಚುಚ್ಚುಮದ್ದನ್ನು (ಅನಸ್ತೇಷಿಯಾ) ಅವರಿಗೆ ನೀಡುವಂತಿರಲಿಲ್ಲ. ಹೀಗಾಗಿ ಆಸ್ಪತ್ರೆಯ ಪ್ರಧಾನ ಮೂತ್ರಶಾಸ್ತ್ರಜ್ಞ (ಯೂರಾಲಜಿಸ್ಟ್‌) ಹಾಗೂ ಆಸ್ಪತ್ರೆಯ ಕ್ಲಿನಿಕಲ್‌ ಎಕ್ಸಲೆನ್ಸ್‌ನ ನಿರ್ದೇಶಕರಾಗಿರುವ ಡಾ.ರಾಜೀವ್‌ ಬಾಶೆಟ್ಟಿ ನೇತೃತ್ವದಲ್ಲಿ ವಿಶೇಷವಾದ ESWL ಪ್ರಕ್ರಿಯೆಯನ್ನು ಬಳಸಿ ಮೂತ್ರದ ಕಲ್ಲನ್ನು ತೆಗೆಯುವುದು ಎಂದು ನಿರ್ಧರಿಸಲಾಯಿತು. ಆದರೆ ಇಲ್ಲಿ ಎದುರಾದ ಸವಾಲೆಂದರೆ ಆಕೆಯ ಮೂತ್ರಕೋಶದಲ್ಲಿದ್ದ ಕಲ್ಲು ದೊಡ್ಡ ಗಾತ್ರದ್ದಾಗಿತ್ತು. ಹೀಗಾಗಿ ಮೂತ್ರನಾಳದಲ್ಲಿ ಸ್ಟಂಟ್‌ ಹಾಕಲೇ ಬೇಕಾದ ಪರಿಸ್ಥಿತಿ ಇತ್ತು. ಹೃದಯ ಸಂಬಂಧಿ ಸಮಸ್ಯೆ ಈಗಾಗಲೇ ಇರುವುದರಿಂದ ಈ ಎಲ್ಲ ಪ್ರಕ್ರಿಯೆಗೆ ಅವಶ್ಯವಾದ ಯಾವುದೇ ರೀತಿಯ ಅರಿವಳಿಕೆಯನ್ನು ನೀಡುವಂತಿಲ್ಲ ಎಂದು ಹೃದ್ರೋಗ ತಜ್ಞರು ಮುನ್ನೆಚ್ಚರಿಕೆ ನೀಡಿದ್ದರು. ಅಲ್ಲದೆ, ಹೈ ರಿಸ್ಕ್‌ ಕೇಸ್‌ ಆಗಿದ್ದರಿಂದ ಈ ರೋಗಿಯ ಮೂತ್ರಪಿಂಡದ ಕಲ್ಲನ್ನು ತಗೆಯಲು ಬೇರೆ ಆಸ್ಪತ್ರೆಗಳಲ್ಲಿ ನಿರಾಕರಿಸಲಾಗಿತ್ತು.

ಇದನ್ನು ಸವಾಲಾಗಿ ಸ್ವೀಕರಿಸಿದ ಯುನೈಟೆಡ್‌ ಆಸ್ಪತ್ರೆಯ ವೈದ್ಯರು, ಅತಿಯಾದ ಹೊಟ್ಟೆ ನೋವು, ಸೋಂಕು ಹಾಗೂ ದೊಡ್ಡ ಕಲ್ಲಿನಿಂದ ಉಂಟಾಗುವ ಮೂತ್ರನಾಳದ ಹಾನಿಯನ್ನು ಪತ್ತೆಹಚ್ಚಿದರು. ಆಸ್ಪತ್ರೆಯ ಪ್ರಧಾನ ಅರಿವಳಿಕೆ ತಜ್ಞರಾದ ಡಾ. ಸಾಗರ್ ಶ್ರೀನಿವಾಸ್‌ ಈ ಸಮಸ್ಯೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದರು. ಅತಿಯಾದ ಹಾಗೂ ಅಪಾಯಕಾರಿಯಾದ ಈ ಪ್ರಕರಣವನ್ನು ನಿರ್ವಹಿಸಲು ಒಪ್ಪಿಕೊಂಡ ವೈದ್ಯರು ಕೇವಲ ಐ ವಿ ಸೆಡೇಷನ್, ನಿದ್ರೆಗೆ ಜಾರುವ (IV ಸೆಡೇಶನ್‌) ಔಷಧಿಯನ್ನು ನೀಡಿ ನಿರಂತರವಾಗಿ ಹೃದಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಾ ಚಿಕಿತ್ಸೆಗೆ ಅನುವು ಮಾಡಿಕೊಟ್ಟರು.

ನಂತರ ಡಾ.ರಾಜೀವ್‌ ಬಾ ಶೆಟ್ಟಿ ಅವರು ಡಿಜೆ ಸ್ಟೆಂಟಿಂಗ್‌ ಹಾಗೂ ESWL ಪ್ರಕ್ರಿಯೆಯ ಮೂಲಕ ರೋಗಿಯ ಮೂತ್ರಕೋಶದಲ್ಲಿದ್ದ ಕಲ್ಲನ್ನು ಯಶಸ್ವಿಯಾಗಿ ಹೊರತೆಗೆದರು. ಹಾಗೂ ಚಿಕಿತ್ಸೆಯುದ್ದಕ್ಕೂ ರೋಗಿಯ ಹೃದಯ ಸ್ಥಿತಿ ಸ್ಥಿರವಾಗಿರುವಂತೆ ನೋಡಿಕೊಳ್ಳಲಾಯಿತು.

ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ ಮುರುಡಾ ಮಾತನಾಡಿ, ʼಈ ಪ್ರಕರಣದಲ್ಲಿ ಸಣ್ಣ ತಪ್ಪೂ ಆಗುವಂತಿರಲಿಲ್ಲ. ಹೀಗಾಗಿ ಪ್ರತಿ ಹೆಜ್ಜೆಯಲ್ಲೂ ನಮ್ಮ ವೈದ್ಯತಂಡ ಅತ್ಯಂತ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿದ್ದು,. ರೋಗಿಯ ಆರೋಗ್ಯ ಸ್ಥಿತಿ ಚೇತರಿಕೆ ಕಾಣುತ್ತಿದೆʼ ಎಂದು ಹರ್ಷ ವ್ಯಕ್ತಪಡಿಸಿದರು.

ʼಆಸ್ಪತ್ರೆಯು ಸುಸಜ್ಜಿತವಾದ ICU ಹೊಂದಿರುವುದಲ್ಲದೆ ಇಂಥ ಸಂಕೀರ್ಣ ಪ್ರಕರಣಗಳನ್ನು ನಿಭಾಯಿಸಲು ಸಾಧ್ಯವಾಗುವಂಥ ತರಬೇತಿ ಪಡೆದ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ಹೊಂದಿದೆ. ಯಾವುದೇ ಆಸ್ಪತ್ರೆಗಳು ಒಪ್ಪದ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯನ್ನು ನೆರವೇರಿಸಿದ್ದು, ಇಂತಹ ಎಲ್ಲಾ ರೀತಿಯ ಕ್ಲಿಷ್ಟಕರ ಚಿಕಿತ್ಸೆ ಗಳನ್ನು ನೆರವೇರಿಸಲು ನಮ್ಮಆಸ್ಪತ್ರೆ ಸಜ್ಜಾಗಿದೆʼ ಎಂದು ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ.ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.