ನಮ್ಮ ಸಂಸ್ಥೆಯಿಂದ ಈ ಹಿಂದೆ “ಅಟ್ಟಹಾಸ” ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿದ್ದು ಅಟ್ಟಹಾಸ ಚಿತ್ರವು ಜನ ಮನ್ನಣಿಯಗಳಿಸುವುದರ ಜೋತೆಗೆ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿತ್ತು.

ಪ್ರಸ್ತುತ ನಮ್ಮ ಸಂಸ್ಥೆಯ ವತಿಯಿಂದ ಅಟ್ಟಹಾಸ ಚಿತ್ರದ ಮುಂದುವರೆದ ಬಾಗ “ವೀರಪ್ಪನ್’ ಫಿಲಂ ಮತ್ತು ವಬ್ ಸರಣಿಯನ್ನು ಕನ್ನಡ ಭಾಷೆಯಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರಸ್ತುತ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರಿಕರಣವು ಭರದಿಂದ ಸಾಗಿದ್ದು, ಈಗಾಗಲೆ 95 ದಿನಗಳ ಚಿತ್ರೀಕರಣವನ್ನು ಮಾಡಿದ್ದವ
ಈ ಸರಣಿಯಲ್ಲಿ ಮೂಡಿಬರುತ್ತಿರುವ ದೃಶ್ಯಗಳು ನೈಜ್ಯತೆಯಿಂದ ಕೂಡಿದ್ದು, ಈ ಸರಣಿಯಲ್ಲಿ ವೀರಪ್ಪನ್ ನನ್ನು ಸೆರೆಹಿಡುಯುವ ಕಾರ್ಯಕ್ಕಾಗಿ ನಮ್ಮ ಪೋಲಿಸ್ ಅಧಿಕಾರಿಗಳು ತೋರಿದ ಧೈರ್ಯ ಹಾಗು ಸಾಹಸದ ಬಗ್ಗೆ ಸಂಪೂರ್ಣವಾಗಿ ತಿಳಿಸುವ ಪ್ರಯತ್ನ ಮಾಡುತಿದ್ದೇವೆ.
ಅದೇ ರೀತಿಯಲ್ಲಿ ವೀರಪ್ಪನ್ ಕಾರ್ಯಚರಣೆಯ ವೇಳೆ ಹುತಾತ್ಮರಾದ ‘ಶ್ರೀ ದಿನೇಶ್, ಶ್ರೀ ಜಗ್ಗನ್ನಾಥ್, ಶ್ರೀ ರಾಮಲಿಂಗು, ಶ್ರೀ ಹರಿಕೃಷ್ಣ, ಶ್ರೀ ಶಕೀಲ್ ಅಹಮದ್, ಶ್ರೀ ಗೋಪಲ್ ಹೊಸೂರ್ ರವರ ಮೇಲಾದ ಧಾಳಿ, ಪಾಲರ್ ಬ್ಲಾಸ್ಟ್” “ಡಾ.ರಾಜುಮಾರ್ ಹಾಗೆ ಮಿನಿಸ್ಟರ್ ನಾಗಪ್ಪ ರವರ ಅಪಹರಣ” ಇನ್ನು ಇತರ ಅಧಿಕಾರಿಗಳ ಕರ್ತವ್ಯದ ಬಗ್ಗೆ ಸಂಪೂರ್ಣವಾಗಿ ತೋರಿಸುತ್ತಿದ್ದವೆ.
ನಿಮ್ಮೆಲ್ಲಾರಿಗು ತಿಳಿದಿರುವ ಹಾಗೆ, ಒಂದು ಚಿತ್ರ ನಿರ್ಮಿಸುವಾಗ ನೂರಾರು ಅಡೆತಡೆಗಳು ಇದ್ದೆ ಇರುತ್ತವೆ, ಅದರಲ್ಲು ಈ ರೀತಿಯ ನೈಜ ಚಿತ್ರಗಳಿಗಂತು ಅಡೆ ತಡೆಗಳು ಸರವೇ ಸಾಮಾನ್ಯ,
ಈ ಹಿಂದೆ ನಮ್ಮ ಅಟ್ಟಹಾಸ ಚಿತ್ರದ ಚಿತ್ರಿಕರಣ ಹಾಗು ಬಿಡುಗಡೆ ಸಮಯದಲ್ಲು ಮುತ್ತುಲಕ್ಷ್ಮಿಯವರು ಚೆನ್ನೈ ಹೈ ಕೋರ್ಟ್ನಲ್ಲಿ ತಡೆ ತಂದಿದ್ದರು, ಅಲ್ಲಿ ತೀರ್ಪು ನಮ್ಮ ಪರವಾಗಿ ಆಗಿತ್ತು, ನಂತರ ಮುತ್ತುಲಕ್ಷ್ಮಿಯವರು ಸುಪ್ರೀಮ್ ಕೋರ್ಟ್ ಹೋದಾಗ, ಅಲ್ಲಿ ನಮಗೆ ರಾಜಿಯಾಗಬೇಕಾಯಿತು, ಹಾಗು ಮುತ್ತುಲಕ್ಷ್ಮಿಯವರಿಗೆ 25 ಲಕ್ಷಗಳನ್ನು ನೀಡಿರುತ್ತವೆ.
ಮೇಲ್ಕಂಡ ಸಂಸ್ಥೆಯ ನಿರ್ದೇಶಕ ಹಾಗೂ ನಿರ್ಮಾಪಕ ಎ.ಎಂ.ಆರ್.ರಮೇಶ್ ಆದ ನನ್ನ ನಿರ್ದೇಶನದ “VEERAPPAN – HUNGER FOR KILLING” ಫಿಲಂ ಮತ್ತು ವಬ್ ಸರಣಿಯ ಬಗ್ಗೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಯವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ದಾವ ಹೋಡಿ ಇದಕ್ಕೆ ಸ್ಸೇ ಮತ್ತು ತಡೆ ತಂದಿದ್ದರು.
ಈ ಬಗ್ಗೆ ದಿನಾಂಕ : 15.11.2022 ರಂದು ಸಿಟಿ ಸಿವಿಲ್ ಕೋರ್ಟ್ (ಸಷನ್ ಜಡ್, ಮೆಯೊ ಹಾಲ್ ಬೆಂಗಳೂರು) ನಲ್ಲಿ ತೀರ್ಪು ಹೊರಬಂದಿದ್ದು, ತೀರ್ಪಿನಲ್ಲಿ ಮುತ್ತುಲಕ್ಷ್ಮಿಯವರ ದಾವೆಯನ್ನು ವಜಾಗೊಳಿಸಿ ಎ.ಎಂ.ಅರ್ ಪಿಕ್ಚರ್ಸ್ ರವರ ಪರವಾಗಿ ತೀರ್ಪು ಹೋರಬಂದಿದೆ, ಯಾವುದೇ ಅಡೆತಡೆಯಿಲ್ಲದೇ ಫಿಲಂ ಮತ್ತು ವೆಬ್ ಸೀರೀಸ್’ಗೆ ಅನುಮತಿ ನೀಡಲಾಗಿದೆ ಎಂದು AMR ರಮೇಶ್ ಚಲನಚಿತ್ರ ನಿರ್ದೇಶಕ/ನಿರ್ಮಾಪಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936