ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಸ್ವಾಗತ ಸಮಿತಿ ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ೧೦-೧೨-೨೦೨೨ನೇ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕದ ಬೀಜದಕಟ್ಟೆಯ ಸಜ್ಜನ ಸಭಾಭವನದಲ್ಲಿ ನಡೆಯಲಿದೆ.

ಸಾಹಿತಿ ಹಾಗೂ ರಾಷ್ಟ್ರ ಪುಶಸ್ತಿ ಪುರಸ್ಕೃತ ಕೆ.ಆರ್.ಗಂಗಾಧರ ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅದ್ಧೂರಿ ಆತಿಥ್ಯವಹಿಸಲು ಡಾ. ಶಿವರಾಮ ಕಾರಂತ ಸಭಾಂಗಣ, ಪ್ರೊ ನಿಸಾರ್ ಅಹಮ್ಮದ್ ವೇದಿಕೆ ಸಜ್ಜಾಗಿದೆ. ಕನ್ನಡ ಭುವನೇಶ್ವರಿಯ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಯಲಿದ್ದು ಬೆಳಗ್ಗೆ ೮.೪೫ರಿಂದ ದೊಡಡ ಬೈಲೆ ರಸ್ತೆಯಿಂದ ಬೀಜದ ಕಟ್ಟೆ ಮಾರ್ಗವಾಗಿ ಸಜ್ಜನ ಸಭಾಭವನಕ್ಕೆ ಮೆರವಣಿಗೆ ಸಾಗಿ ಬರಲಿದ ಬಳಿಕ ಸಮ್ಮೇಳನಾಧ್ಯಕ್ಷ ಕೆ.ಆರ್. ಗಂಗಾಧರ ಅವರ ಸಮ್ಮುಖದಲ್ಲಿ ಹಿರಿಯ ವಿಮರ್ಶಕರಾದ ಎಸ್.ಆರ್.ವಿಜಯ್ ಶಂಕರ್ ಸಮ್ಮೇಳನದ ಉದ್ಘಾಟನ ನೆರವೇರಿಸಲಿದ್ದಾರೆ. ಸಚಿವ ಎಸ್. ಅಂಗಾರ ಸೇರಿದಂತೆ ಅನೇಕ ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದಲ್ಲಿ ಹಲವು ವಿಶೇಷತೆ
ಕನ್ನಡದ ಸಮ್ಮೇಳನ ಅಂದೇ ಒಂದು ವಿಶೇಷತೆ, ಅಂತೆಯೇ ಹಲವಾರು ವೈವಿದ್ಯಮಯ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ನಡೆಯಲಿದೆ. ಐದು ಕೃತಿಗಳು ಬಿಡುಗಡೆಗೊಳ್ಳಲಿವೆ. ಕವಿಗೋಷಿ ನಡೆಯಲಿದೆ. ತಾಲೂಕಿನ ಗಾಯಕರಿಂದ ಕನ್ನಡ ಗೀತ ಗಾಯನ ಮತ್ತು ಬಹುಮಾನ ವಿತರಣೆಯಾಗಲಿದ, ಅಗಲಿದ ಸಾಹಿತಿಗಳಿಗೆ ನುಡಿನಮನ ನಾಡು ನುಡಿ ವರ್ತಮಾನದ ಸವಾಲುಗಳು: ವಿಚಾರಗೋಷ್ಠಿ, ಸಮಾರೋಪ ಸಮಾರಂಭ ಕನ್ನಡ ಕಸ್ತೂರಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಉಮ್ಮರ್ ಬೀಜದಕಟ್ಟೆ ಅಧ್ಯಕ್ಷರು – ಸ್ವಾಗತ ಸಮಿತಿ, ಸುಳ್ಯ ತಾಲೂಕು ೨೬ನೇ ಕನ್ನಡ ಸಾಹಿತ್ಯ- ಸಮ್ಮೇಳನ, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News – 9341997936