“ಸೇವಾ ಚೇತನ – 2022” ಬೃಹತ್ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರ

“ಸೇವಾ ಚೇತನ – 2022” ದಿನಾಂಕ 03.12.2022, ಶನಿವಾರ ಬೆಳಿಗ್ಗೆ 7.00ರಿಂದ

ಬಂಟರ ಸಂಘ ಬೆಂಗಳೂರು ಚಾರಿಟೇಬಲ್ ಸಂಸ್ಥೆಯಾಗಿದ್ದು, ನಿರಂತರವಾಗಿ ಸಮಾಜಮುಖ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ದಿನಾಂಕ 03.12.2022 ಶನಿವಾರದಂದು ವೈದ್ಯಕೀಯ ಸಮಿತಿ ಮತ್ತು ಸಮಾಜ ಸೇವಾ ಸಮಿತಿಯು ಆಯೋಜಿಸಿರುವ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಪ್ರತಿಷ್ಠಿತ ಆಸ್ಪತ್ರೆಗಳ ಸಹಯೋಗದೊಂದಿಗೆ ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣೆ ಮತ್ತು ಉಚಿತ ಶ್ರವಣ ಯಂತ್ರ ಹಾಗೂ ಕೃತಕ ಕೈ-ಕಾಲು ಜೋಡಣೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆರೋಗ್ಯ ಕ್ಷೇತ್ರದ ಯೋಜನೆಯನ್ವಯ ಫಲಾನುಭವಿಗಳಿಗೆ ಉಚಿತ ಸಲಕರಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ.ಸಿ.ಇ.ಜಿ. (ಇ-ಆಡಳಿತ ಕೇಂದ್ರ) ಮತ್ತು ಸಿ.ಎಸ್.ಸಿ. (ಸಾಮಾನ್ಯ ಸೇವಾ ಕೇಂದ್ರ) ಬೆಂಗಳೂರು ಇವರ ಸಹಕಾರದೊಂದಿಗೆ ಆಧಾರ್ ಮತ್ತು ಪಾನ್‌ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ, ಹಿರಿಯ ನಾಗರೀಕರ ಗುರುತಿನ ಚೀಟಿ /Senior Citizen Card, ಆಯುಷ್ಮಾನ್ ಕಾರ್ಡ್, ಪಡಿತರ ಚೀಟಿ ಸೇರ್ಪಡೆ ಮತ್ತು ತಿದ್ದುಪಡಿ, ಚುನಾವಣಾ ಗುರುತಿನ ಚೀಟಿ/Voter ID ಮುಂತಾದ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ, ಕರ್ನಾಟಕ ಸರಕಾರದ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡೆಗಳ ಮಾಜಿ ರಾಜ್ಯ ಸಚಿವರಾದ ಶ್ರೀ ಪ್ರವೋದ್ ಮಧ್ವರಾಜ್, ರಾಜಸ್ಥಾನ್‌, ಜೈಪುರ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್, ಡಾ| ನಂದ ಕಿಶೋರ್ ಆಳ್ವರವರು ಭಾಗವಹಿಸಲಿದ್ದಾರೆ ಎಂದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಎಂ. ಮುರಲೀಧರ ಹೆಗ್ಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.