‘ಮಧ್ಯಮ ವ್ಯಾಯೋಗ’ ನಾಟಕ ಪ್ರದರ್ಶನ ಮತ್ತು ಕವನ ಸಂಕಲನ ಬಿಡುಗಡೆ ಸಮಾರಂಭ 3.12.22 ಶನಿವಾರ ಸಂಜೆ 4 ಗಂಟೆಗೆ ನಯನ ಸಭಾಂಗಣದಲ್ಲಿ

ಪರಂಪರಾ ಕಲ್ಬರಲ್ ಫೌಂಡೇಶನ್ ವತಿಯಿಂದ ಇದೇ ಶನಿವಾರ 3.12.22ರಂದು ಸಂಜೆ 4 ಗಂಟೆಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಮಹಿಳೆಯರೇ ಅಭಿನಯಿಸಿರುವ ‘ಮಧ್ಯಮ ವ್ಯಾಯೋಗ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ನಂತರ ನಡೆಯುವ ಸಮಾರಂಭದಲ್ಲಿ ಸದ್ಗುರು ಬಾಬು ಅವರ ‘ಗಗನಕೊಂದು ಕಾವ್ಯಗುಚ್ಚ’ ಕವನ ಸಂಕಲನ ಬಿಡುಗಡೆಯಾಗಲಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ, 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಡಾ. ದೊಡ್ಡರಂಗೇಗೌಡ ಕೃತಿ ಬಿಡುಗಡೆ ಮಾಡುವರು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಭೈರಮಂಗಲ ರಾಮೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಕೃತಿ ಪರಿಚಯ ಮಾಡುವರು. ಪರಂಪರಾ ಸಂಸ್ಥೆಯ ಅಧ್ಯಕ್ಷ ಜಿ.ಪಿ.ರಾಮಣ್ಣ ಪ್ರಾಸ್ತಾವಿಕ ನುಡಿಗಳಾಡುವರು. ಪ್ರಕಾಶಕ ಡಾ.ಎಂ.ಬೈರೇಗೌಡ ಮತ್ತು ಕೃತಿಕಾರ ಸದ್ಗುರು ಬಾಬು ಉಪಸ್ಥಿತರಿರುವರು ಎಂದು ಪರಂಪರಾ ಕಲ್ಬರಲ್ ಫೌಂಡೇಶನ್ (ರಿ.) ಪರವಾಗಿ ಜಿ.ಪಿ.ರಾಮಣ್ಣ
ಅಧ್ಯಕ್ಷರು ತಿಳಿಸಿದರು.
City Today News – 9341997936