
ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ.ಬಸವರಾಜ ಬೊಮ್ಮಾಯಿರವರು ಸರ್ಕಾರಿ ನೌಕರರ ವೇತನ/ಭತ್ಯೆ ಹಾಗೂ ಸರ್ಕಾರಿ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಗಾಗಿ ಮಾನ್ಯ ಶ್ರೀ.ಸುಧಾಕರ್ ರಾವ್, ಭಾ.ಆ.ಸೇ (ನಿ)ರವರ ಅಧ್ಯಕ್ಷತೆಯಲ್ಲಿ 7ನೇ ವೇತನಾ ಆಯೋಗವನ್ನು ರಚನೆ ಮಾಡಿರುವುದ್ದಕ್ಕೆ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರಸಂಘದಿಂದ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತದೆ.

ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ “ನಗದು ರಹಿತ ಆರೋಗ್ಯ ಭಾಗ್ಯ” ಯೋಜನೆಯನ್ನು ಅನುಷ್ಟಾನಗೊಳಿಸಬೇಕೆಂದು ಸರ್ಕಾರಕ್ಕೆ ಸುಮಾರು ವರ್ಷಗಳಿಂದಲೂ ಒತ್ತಾಯ ತಂದರು 2 ಸಹ ಇದುವರೆವಿಗೂ ಅನುಷ್ಟಾನಗೊಳಿಸಿರುವುದಿಲ್ಲ. ಆದುದರಿಂದ ಮಾನ್ಯ ಮುಖ್ಯ ಮಂತ್ರಿಗಳು ನೀಡಿದ ಭರಸವಸೆಯಂತೆ ಕೂಡಲೇ “ನಗದು ರಹಿತ ಆರೋಗ್ಯ ಭಾಗ್ಯ” ಯೋಜನೆಯನ್ನು ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಕೂಡಲೇ ಜಾರಿಗೊಳಿಸಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಸಾವಿರಾರು ಸರ್ಕಾರಿ ನೌಕರರು ಸೇವೆಯಿಂದ ನಿವೃತ್ತ ನೌಕರರಿದ್ದಾರೆ. ಅವರಿಗೂ ಹಾಗೂ ಕುಟುಂಬ ಪಿಂಚಣಿದಾರರಿಗೆ/ ಹಿರಿಯ ನಾಗರೀಕರಿಗೆ ಮತ್ತು ಸಾರ್ವಜನಿಕರಿಗೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಇಂಡಸ್ಟ್ರಿಯಲ್ 2 ಟೌನ್, ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:-14-12-2022ರಂದು ಬೆಳಗ್ಗೆ 10.00ರಿಂದ ಸಂಜೆ 4.00 ಗಂಟೆಯವರೆಗೆ “ಸರ್ಕಾರಿ ನೌಕರರ ಭವನದ ಸಭಾಂಗಣ, ಕಬ್ಬನ್ ಉದ್ಯಾನವನದಲ್ಲಿ “ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಿರುವುದ್ದರಿಂದ, ಸರ್ಕಾರಿ ನಿವೃತ್ತ ನೌಕರರು/ಕುಟುಂಬ ಪಿಂಚಣಿದಾರರು/ ಹಿರಿಯ ನಾಗರೀಕರು ಹಾಗೂ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು, ಸಂಘವು ಕೋರುತ್ತದೆ.
City Today News – 9341997936