
ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಎನ್‌ಪಿಎಸ್ ಯೋಜನೆಯಡಿ ಬರುವ ರಾಜ್ಯ ಸರ್ಕಾರಿ ನೌಕರರನ್ನು ಹಾಗೂ ವಿವಿಧ ನಿಗಮ ಮಂಡಳಿಗಳ / ಸ್ವಯತ್ತ ಸಂಸ್ಥೆಗಳ/ಅನುದಾನಿತ ಸಂಸ್ಥೆಗಳ NPS ನೌಕರರನ್ನು ಪುತಿನಿಧಿಸುತ್ತಿದ್ದು, ದಿನಾಂಕ:01.04.2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕರರ ಸಂಧ್ಯಾಕಾಲದ ಬದುಕಿಗೆ ಭದ್ರತೆಯನ್ನು ತಂದುಕೊಡುವ ನಿಟ್ಟಿನಲ್ಲಿ ಹಾಗೂ ಈಗಾಗಲೇ ಮರಣ ಹೊಂದಿರುವ NPSಗೆ ಒಳವಡುವ ನೌಕರರ ಅವಲಂಬಿತ ಕುಟುಂಬಗಳಿಗೆ ಮತ್ತು NPS ಯೋಜನೆಯಡಿ ನಿವೃತ್ತಿ ಹೊಂದಿ ಕನಿಷ್ಠ ಪಿಂಚಣಿಯು ಇಲ್ಲದೇ ದಯನೀಯ ಜೀವನ ನಡೆಸುತ್ತಿರುವ NPS ನೌಕರರ ಬದುಕಿಗೆ ನ್ಯಾಯ ಒದಗಿಸುವ ಹಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಸಂಘವು NPS ಯೋಜನೆಯನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ಅನೇಕ ಹೋರಾಟಗಳನ್ನು ದಾಖಲಿಸಿದೆ. ಪ್ರಸ್ತುತ ರಾಜಸ್ಥಾನ, ಛತ್ತೀಸ್‌ಗಡ, ಜಾರ್ಖಂಡ್ ಮತ್ತು ದಿನಾಂಕ:19.10.2022 ಪಂಜಾಬ್ ರಾಜ್ಯಗಳಲ್ಲಿ NPS ಯೋಜನೆಯನ್ನು ರದ್ದುಪಡಿಸಿದ್ದು, ಪಸ್ತುತ ನಮ್ಮ ರಾಜ್ಯದಲ್ಲಿ ರದ್ದುಗೊಳಿಸುವಂತೆ ಕೋರಿ, ಅನೇಕ ಮನವಿಗಳನ್ನು ನೀಡಿದ್ದಾಗಿ ಸರ್ಕಾರವು ಸಂಘದ ಬೇಡಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಸಕರಾತ್ಮವಾಗಿ ಸ್ಪಂದಿಸಿರುವುದಿಲ್ಲ, ಆದ್ದರಿಂದ, ದಿನಾಂಕ:19.12.2022 ರಂದು ಫ್ರೀಡಂ ಪಾರ್ಕ್, ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿರುವುದಾಗಿ ಶಾಂತಾರಾಮ – ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News – 9341997936