
ಸ್ವಾತಂತ್ರ ಪೂರ್ವಕ್ಕೂ ಮೊದಲು ಸ್ಥಾಪಿತವಾದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಮೈಸೂರು ವಿಶ್ವ ವಿದ್ಯಾನಿಲಯದ, ವಿಶೇಷ ಯೋಜನೆಯಡಿಯಲ್ಲಿ 2016ನೇ ಸಾಲಿನಲ್ಲಿ ಪ್ರಾರಂಭವಾದ ಈ ಸಂಸ್ಥೆಯ ಮೂಲ ಉದ್ದೇಶ ಯುವ ಪೀಳಿಗೆಯನ್ನು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಮತ್ತು ಹೊಸ ಹೊಸ ಅನ್ವೇಷಣೆಯನ್ನು ತಂದು ಕೃಷಿಕರ ಆರ್ಥಿಕ ಮಟ್ಟ ಸುಧಾರಿಸಬೇಕೆಂಬುದಾಗಿದೆ. ಈ ಸಂಸ್ಥೆಯು ಬಿ.ಎಸ್ಸಿ (ಹಾನರ್) ಕೃಷಿ ವಿಜ್ಞಾನ’ ಎಂಬ 4 ವರ್ಷಗಳ ಪದವಿ ಕೋರ್ಸನ್ನು ಪ್ರಾರಂಬಿಸಿ, ಸತಕವಾಗ 7 ವರ್ಷಗಳಿಂದ ಸುತ್ತಮುತ್ತಲಿನ ಗ್ರಾಮಿಣ ಬಾಗದ ವಿದ್ಯಾರ್ಥಿಗಳಿಗೆ ಅಷ್ಟೆ ಅಲ್ಲದ ಹೊರರಾಜ್ಯದ ವಿದ್ಯಾರ್ಥಿಗಳಿಗೂ ಸಹ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಣದ ಮೌಲ್ಯ, ಗುರಿ, ಉದ್ದೇಶ ಎಲ್ಲದರ ಬಗ್ಗೆ ಬೋದಿಸಲಾಗುತ್ತಿದೆ. ಈ ಸಂಸ್ಥೆಯಿಂದ ಈಗಾಗಲೇ 3 ವರ್ಷದ ವಿದ್ಯಾರ್ಥಿಗಳ ತಂಡ ತೇರ್ಗಡೆಯಾಗಿ ಹೊರನಡೆದಿದ್ದು, ಅನೇಕ ಉತ್ತಮ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲಿದ್ದು, ಉತ್ತಮ ವೇತನ ಪಡೆಯುತ್ತಿರುತ್ತಾರೆ.
ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಥಳೀಯ ಕೃಷಿ ಭಾಂದವರೊಂದಿಗೆ ಸಮಾಲೋಚನೆ ನಡೆಸಿ ಕೃಷಿ ವಿಷಯಗಳಲ್ಲಿ ತಾಂತ್ರಿಕತೆ ಹೇಗೆ ಆಳವಡಿಸಿಕೊಳ್ಳಬಹುದು ಎಂಬ ಮಾಹಿತಿ ನೀಡುತ್ತಿದ್ದು ಅವರಿಂದ ಸಲಹೆ ಸಹ ಪಡೆಯುತ್ತಿದ್ದು, ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಹಮ್ಮಿಕೊಂಡಿರುತ್ತದೆ. ರೀತಿಯ ಉಪಯೋಗಿ ಕಾರ್ಯಕ್ರಮವನ್ನು ಸಂಸ್ಥೆ
ಸಂಪೂರ್ಣ ಇಂಟರ್ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಅಗ್ರಿ ಸೈನ್ಸ್ ಮತ್ತು ಹಾರ್ಟಿಕಲ್ಟರ್ ಟೆಕ್ನಾಲಜಿ, ಮದ್ದೂರು ಹಾಯ್, ಮಂಡ್ಯ ಜಿಲ್ಲೆ ಈ ಸಂಸ್ಥೆಯು ನಿಯಮಾನುಸಾರ 5 ವರ್ಷಗಳು ಪೂರೈಸಿದ ನಂತರ ಸೆಪ್ಟೆಂಬರ್ 2021ರಿಂದ ICAR accreditation ಪ್ರಕ್ರಿಯೆ ಪ್ರಾರಂಬಿಸಿದ್ದು, ಅದರಂತೆ ಆ ಸಂಸ್ಥೆಯವರು ಎಲ್ಲಾ ಮಾಹಿತಿಯನ್ನು ಸಂಬಂದಪಟ್ಟ ದಾಖಲೆಗಳನ್ನು ಮೈಸೂರು ವಿಶ್ವ ವಿದ್ಯಾನಿಲಯದವರು ಮುಖಾಂತರ, ICAR accreditation ತಂಡಕ್ಕೆ ಪರಿಶೀಲನೆಗಾಗಿ ನೀಡಿರುತ್ತಾರೆ. ICAR ತಂಡವು ದಿನಾಂಕ:29/09/22 ಮತ್ತು 30/09/2022 ರಂದು ಸಂಸ್ಥೆಗೆ ಬೇಟಿ ನೀಡಿ, ಸಂಬಂಧಪಟ್ಟ ದಾಖಲೆಗಳನ್ನು ತಪಾಸಣೆ ಮಾಡಿ, ಕೃಷಿ ಪದವಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಹಾಗೂ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿರುವುದನ್ನು ಪರಿಗಣಿಸಿ ಸಂಸ್ಥೆಯನ್ನು ಶ್ಲಾಘಿಸಿರುತ್ತಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಡಾ.ಸಂಪೂರ್ಣ ನಾಯ್ಡು, ಡಾ.ಜ್ಞಾನೇಶ್, ಡಾ. ಪ್ರಕಾಶ್ ಮತ್ತು ಇಂದು ಶೇಖರ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು.
City Today News – 9341997936