
ಅಂತಾರಾಷ್ಟ್ರೀಯ ಪನೋರಮ ಚಲನಚಿತ್ರೋತ್ಸವ ಬೆಂಗಳೂರು ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರಿಕೆ – (ಐ ಪಿ ಎಫ್ ಎಫ್ ಬಿ)
ಸಂಸ್ಥೆ ಸಮಿತಿ: ಫಿಲ್ಮಾಹಾಲಿಕ್ ಫೌಂಡೇಶನ್
ಕಾರ್ಯಕ್ರಮ ದಿನಾಂಕ: ಡಿಸೆಂಬರ್ 17th & 18th 2022 ಶನಿವಾರ ಭಾನುವಾರ (ಸಮಯ 8:00 AM to 7:30 PM) ಸ್ಥಳ: ಕೊಂಡಜ್ಜಿ ಬಸಪ್ಪ ಭಾವನ (ಭಾರತ್ ಸೌಟ್ & ಗೈಡ್ಸ್ ಆವರಣ), ಬೆಂಗಳೂರು
“ಅಂತಾರಾಷ್ಟ್ರೀಯ ಪನೋರಮ ಚಲನಚಿತ್ರೋತ್ಸವ ಬೆಂಗಳೂರು ಕಾರ್ಯಕ್ರಮಕ್ಕೆ ಆಹ್ವಾನ – (ಐ ಪಿ ಎಫ್ ಎಫ್ ಬಿ)” ವನ್ನು ಡಿಸೆಂಬರ್ 17th & 18th 2022, ಶನಿವಾರ, ಭಾನುವಾರ ಕೊಂಡಜ್ಜಿ ಬಸಪ್ಪ ಭಾವನ (ಭಾರತ್ ಸೌಟ್ & ಗೈಡ್ಸ್ ಆವರಣ), ಬೆಂಗಳೂರಲ್ಲಿ ಫಿಲ್ಮಾಹಾಲಿಕ್ ಫೌಂಡೇಶನ್ ತಂಡದಿಂದ ಆಯೋಜಿಸುತ್ತಿದ್ದೇವೆ. ಅನೇಕ ದೇಶಗಳಲ್ಲಿ ತಯಾರಿಸಿದ ಚಿತ್ರ ನಿರ್ಮಾಪಕರ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಹೊಸ ತಲೆಮಾರಿನ ಚಲನಚಿತ್ರ ತಯಾರಕರಿಗೆ ಕಲಾತ್ಮಕ ಸೃಜನಶೀಲತೆಯನ್ನು ಪೋಷಿಸಿ ಮತ್ತು ಉತ್ತೇಜಿಸಿ ಅವರ ಚಲನಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸುವುದು. ಈ ಕಾರ್ಯಕ್ರಮಕ್ಕೆ ವರ್ಲ್ಡ್ ವೈಡ್ ಫಿಲ್ಡ್ ಚೇಂಬರ್ ಆಫ್ ಕಾಮರ್ಸ್ ಸಹಾಯ ಹಸ್ತ ನೀಡುತಿದ್ದಾರೆ..
ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರುತ್ತದೆ ಡಿಸೆಂಬರ್ ೧೬ ರೊಳಗೆ +919986384254 ಸಂಪರ್ಕಿಸಿ ವಾಟ್ಸಪ್ ಮುಖಾಂತರ ನೋಂದಾಯಿಸಿಕೊಳ್ಳಿ.
ಚಲನಚಿತ್ರೋತ್ಸವಕ್ಕೆ ನಾವು ಚಿತ್ರೋದ್ಯಮದವರನ್ನು ಸರ್ಕಾರಿ ಅಧಿಕಾರಿಗಳನ್ನು, ಅನೇಕ ಪ್ರಭಾವಿ ವ್ಯಕ್ತಿಗಳನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದೇವೆ.
ಉದ್ಘಾಟನಾ ಸಮಾರಂಭ ನಡೆಯಲಿದ್ದು, ನಂತರ ಆಯ್ಕೆ ಮಾಡಲಾದ ಚಿತ್ರಗಳ ಪ್ರದರ್ಶನ, ಚಿತ್ರ ಕಾರ್ಯಗಾರ ಹಾಗು ಪ್ರಶಸ್ತಿ ಮತ್ತು ಸನ್ಮಾನ ಸಮಾರಂಭ ಇರುತ್ತದೆ ಎಂದು ಆದಿತ್ಯ. ಆರ್.ಎ ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥಾಪಕ. ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News – 9341997936