
ಛಲವಾದಿ ಮಹಾಸಭಾ (ರಿ) ರಾಜ್ಯ ಸಮಿತಿಯು ಈ ಪತ್ರಿಕಾಗೋಷ್ಠಿಯ ಮುಖೇನ ತಿಳಿಯಪಡಿಸುವುದೇನೆಂದರೆ, ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛಲವಾದಿ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ಛಲವಾದಿ ಸಮುದಾಯದ ಹೆಮ್ಮೆಯ ನಾಯಕಿ, ವೀರವನಿತೆ ಒನಕೆ ಒಬ್ಬವ್ವನವರ ಜಯಂತಿ ಕಾರ್ಯಕ್ರಮವನ್ನು દ્ર ರಾಜ್ಯ ಸರ್ಕಾರವು ದಿನಾಂಕ : 18-12-2022, ಭಾನುವಾರದಂದು ಮಧ್ಯಾಹ್ನ 1.00 ಗಂಟೆಗೆ ನಿಗಧಿಪಡಿಸಿದ್ದು ಸದರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಛಲವಾದಿ ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ ಎಂದು ಇವರನ್ನು ವಿಶೇಷ ಆಹ್ವಾನಿತರು ಎಂದು ನಮೂದಿಸಲಾಗಿದೆ. ಇದರ ಬಗ್ಗೆ ಸ್ಪಷ್ಟನೆ ಕೊಡುವ ಸಲುವಾಗಿ ಮಾನ್ಯ ಉಚ್ಛ ನ್ಯಾಯಾಲಯದ W.P.No.14701/2022: 29-07-2022 33 17-08-20228 ಆದೇಶದನ್ವಯ ಛಲವಾದಿ ಮಹಾಸಭೆಗೆ ದಿನಾಂಕ : 07-08-2022 ರಂದು ಚುನಾವಣೆ ನಡೆದು ನಿವೃತ್ತ IAS ಅಧಿಕಾರಿ ಶ್ರೀ ಕೆ.ಶಿವರಾಮುರವರ ನೇತೃತ್ವದ ಕಾನೂನುಬದ್ಧ ಕಾರ್ಯಕಾರಿ ಸಮಿತಿಯು ರಚನೆಯಾಗಿ ರಾಜ್ಯಾದ್ಯಂತ ಛಲವಾದಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುತ್ತೇವೆ. ಆದಾಗ್ಯೂ ರಾಜ್ಯ ಉಚ್ಛ ನ್ಯಾಯಾಲಯದ W.P. No. 17272/2022ರ ದಿನಾಂಕ : 07-09-2022ರ ಆದೇಶದನ್ವಯ ಚುನಾವಣೆಯಲ್ಲಿ ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ. ಕುಮಾರ್ ಮತ್ತು ಹೆಚ್. ಅಣ್ಣಪ್ಪಸ್ವಾಮಿ ಹಾಗೂ ಸಂಗಡಿಗರು ಹೀನಾಯವಾಗಿ ಪರಾಜಿತಗೊಂಡಿರುತ್ತಾರೆ ಮತ್ತು ಹೀನಾಯವಾಗಿ ಸೋತಿರುವುದನ್ನು ಸಹಿಸಿಕೊಳ್ಳದೆ ದ್ವೇಷ ಮತ್ತು ಅಸೂಹೆಯಿಂದ ಮಾನ್ಯ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಚುನಾವಣೆ ತಕರಾರು ಪಿಟಿಷನ್ WP No. 17272/2022 ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯಾಗಿ ಮಾನ್ಯ ಉಚ್ಛ ನ್ಯಾಯಾಲಯವು ಚುನಾವಣಾ ತಕರಾರು ಅರ್ಜಿಯನ್ನು ವಜಾ ಗೊಳಿಸಿರುತ್ತಾರೆ.
ಈ ಮೇಲ್ಕಂಡ ವಿಷಯವು ತಿಳಿದುಕೊಂಡಿದ್ದರೂ ಸಹ ಚಿತ್ರದುರ್ಗ ಜಿಲ್ಲಾಡಳಿತವು ಸದರಿ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಅಧಿಕಾರವಿಲ್ಲದ ಅನಧಿಕೃತ ವ್ಯಕ್ತಿಗಳಾದ (1) ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ.ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ (2) ಹೆಚ್. ಅಣ್ಣಪ್ಪಸ್ವಾಮಿ, ಜಿಲ್ಲಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ ಮತ್ತು (3) ದಯಾನಂದ, ಉಪಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ ಎಂಬುವವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿ ಆಮಂತ್ರಣ ಪತ್ರದಲ್ಲಿ ಮುದ್ರಿಸಿ ರಾಜ್ಯಾದ್ಯಂತ ಪ್ರಕಟಣೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಹಾಗೂ ಶಿಷ್ಟಾಚಾರ ಉಲ್ಲಂಘನೆ ಮಾಡಿ ಚುನಾವಣೆಯಲ್ಲಿ ಪರಾಜಿತಗೊಂಡಿರುವ ವ್ಯಕ್ತಿಗೆ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಂದು ಮನ್ನಣೆ ನೀಡಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿರುವುದರಿಂದ ಜಿಲ್ಲಾಧಿಕಾರಿಗಳ ಮೇಲೆ ಈ ಕೂಡಲೇ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿರವರಲ್ಲಿ ಒತ್ತಾಯ ಮಾಡುತ್ತೇವೆ.
ಆದುದರಿಂದ ಮಾನ್ಯ ಮುಖ್ಯಮಂತ್ರಿಗಳು ಈಗಲಾದರೂ ಆಗಿರುವ ಪ್ರಮಾದವನ್ನು ಸರಿಪಡಿಸಿ ದಿನಾಂಕ : 18-12-2022 ರಂದು ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಅಧಿಕಾರವಿಲ್ಲದ ಅನಧಿಕೃತ ವ್ಯಕ್ತಿಗಳಾದ (1) ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ.ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ (2) ಹೆಚ್. ಅಣ್ಣಪ್ಪಸ್ವಾಮಿ, ಜಿಲ್ಲಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ ಮತ್ತು (3) ದಯಾನಂದ, ಉಪಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ, ಇವರುಗಳನ್ನು ಕೈಬಿಟ್ಟು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯುವಂತೆ ಛಲವಾದಿ ಮಹಾಸಭಾ(ರಿ)ವು ಆಗ್ರಹಿಸುತ್ತದೆ.
ಒಂದು ವೇಳೆ ಈ ಪ್ರಮಾದವನ್ನು ಸರಿಪಡಿಸದೇ ಕಾರ್ಯಕ್ರಮವನ್ನು ನಡೆಸಿದರೆ ಛಲವಾದಿ ಮಹಾಸಭಾದ ಎಲ್ಲಾ ಸದಸ್ಯರುಗಳು ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಎಸ್.ಕೆ.ಶಿವಕುಮಾರ್, ಎಸ್.ಸಿದ್ದರಾಜು ಮತ್ತು ಕೆ.ಪರಶುರಾಮ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು.
City Today News – 9341997936