
ಕುಂಬಾರರ ಸಂಘ ಬೆಂಗಳೂರು (ರಿ) ಕಲಾಸಿಪಾಳ್ಯ ಆಡಳಿತ ಮಂಡಳಿಯ ಸುಮಾರು 98.00 ಲಕ್ಷ ರೂಗಳ ಅವ್ಯವಹಾರದ ಬಗ್ಗೆ ಹಾಗೂ ಆಡಳಿತ ಮಂಡಳಿ ಹಾಗೂ ಸದಸ್ಯರಿಂದ ನನ್ನ ಹಾಗೂ ನನ್ನ ಸಹೊದ್ಯೋಗಿ ಶ್ರೀ ಆರ್.ಎಸ್.ಚಂದ್ರಶೇಖರ್ರವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೂಲಕ ಈ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಬಿ.ಎಸ್.ಬದ್ರಿಪ್ರಸಾದ್ ಆದ ನಾನು ಮೇಲ್ಕಂಡ ಸಂಘದ ಸದಸ್ಯ ಹಾಗೂ ಸಂಸ್ಥಾಪಕರಾದ ಬಿ.ವಿ.ಸಿದ್ದಪ್ಪರವರ ಮಗನಾಗಿದ್ದು ಆಡಳಿತ ಮಂಡಳಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ವಲಯ-2 ಇಲ್ಲಿಗೆ ದೂರು ನೀಡಿದ್ದು ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿ ದಿನಾಂಕ 10.11.2022ರಂದು ಸದರಿ ಕಛೇರಿಯಲ್ಲಿ ನನ್ನ ಮೇಲೆ ಆಡಳಿತ ಮಂಡಳಿಯ ಸದಸ್ಯರಾದ ಆರ್.ಶ್ರೀನಿವಾಸ್ (ಟೋಪಿ), ಎಸ್.ಗೋವಿಂದ್, ಸಿ.ಗಿರೀಶ್, ಪಿ.ಮುನಿರಾಜು (ಬಾಬು) ಮುನಿಸ್ವಾಮಿ ಒಡೆಯರ್, ಎಸ್. ನಾಗರಾಜ್, ಸೋಮಸುಂದರ್, ಸುರೇಶ್ ಹೆಚ್.ಎನ್ ಹಾಗೂ ಇನ್ನೂ ಮುಂತಾದ ಇವರ ಸಹಚರರುಗಳು, ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕುತ್ತಿಗೆಯನ್ನು ಚಾಕುವಿನಿಂದ ರಕ್ತಗಾಯ ಮಾಡಿರುತ್ತಾರೆ.

ಈ ಬಗ್ಗೆ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದಾಖಲಾಗಿರುತ್ತದೆ. 17.12.2022 ಈ ಮದ್ಯೆ ದಿನಾಂಕ ರಂದು ಸಂಘಕ್ಕೆ ಅಧ್ಯಕ್ಷರಾದ ಎಲ್.ಶ್ರೀನಿವಾಸ್ರವರನ್ನು ನೋಡಲು ಹೋದ ಸಂದರ್ಭದಲ್ಲಿ ಸಮಯ ಸುಮಾರು ಸಂಜೆ 6.30 ಗಂಟೆಗೆ ನನ್ನ ಮೇಲೆ ಮತ್ತೆ ಮೇಲ್ಕಂಡ ವ್ಯಕ್ತಿಗಳು ಏಕಾಏಕಿ ಹಲ್ಲೆ ಮಾಡಿ ಚಾಕುವಿನಿಂದ ಮನಬಂದಂತೆ ಇರಿದು ನನ್ನನ್ನು ಪ್ರಜ್ಞೆ ತಪ್ಪಿಸಿರುತ್ತಾರೆ. ಆ ಸಮಯದಲ್ಲಿ ನನ್ನ ಸಹಚರರಾದ ಆರ್.ಎಸ್. ಚಂದ್ರಶೇಖರ್ರವರು ತಡೆಯಲು ಬಂದಾಗ ಇವರಿಗೂ ಸಹಾ ಹೆಟ್ನಿಂದ ತಲೆಗೆ ಬಡಿದು ಅವರನ್ನು ಸಂಘದಿಂದ ಹೊರದಬ್ಬಿದರು. ನಂತರ ಕಲಾಸಿಪಾಳ್ಯ ಪೊಲೀಸರು ಬಂದು ನನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡಿರುತ್ತಾರೆ. ಆದರೆ ಇದುವರೆಗೂ ಪೊಲೀಸರು ಮೇಲ್ಕಂಡ ಆರೋಪಿಗಳನ್ನು ಬಂದಿಸಿರುವುದಿಲ್ಲ ಹಾಗೂ ಯಾವುದೇ ಕ್ರಮವನ್ನು ಜರುಗಿಸಿರುವುದಿಲ್ಲ. ಸದರಿ ಆರೋಪಿಗಳು ವ್ಯಾಪ್ತಿಯ ಸರಹದ್ದಿನಲ್ಲಿಯೇ ರಾಜಾರೋಷವಾಗಿ ಓಡಾಡುತ್ತಿದ್ದು ಪೊಲೀಸರು ಇವರುಗಳನ್ನು ಬಂದಿಸದೇ ಮೌನ ತಾಳಿರುವುದು ವಿಷಾಧನೀಯ ಸಂಗತಿಯಾಗಿರುತ್ತದೆ. ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕೂಲಂಕುಶವಾಗಿ ಚರ್ಚಿಸಿ ಕೂಡಲೇ ಆರೋಪಿಗಳನ್ನು ಬಂದಿಸಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕಾಗಿ ಹಾಗೂ ನಮ್ಮಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲು ಕೋರುತ್ತೇನೆ ಎಂದು ಬಿ.ಎಸ್.ಬದ್ರಿಪ್ರಸಾದ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936