
ಬೆಂಗಳೂರು. ಯಮನೂರಪ್ಪ ಮುಂಡಗೌಡನಾದ ನಾನು ಕೊಪ್ಪಳ ಜಿಲ್ಲೆಯ, ಗಂಗಾವತಿ ನಗರದ ಖಾಯಂ ನಿವಾಸಿಯಾಗಿದ್ದು ಹಾಗೂ ಕುರುಬ ಸಮುದಾಯದವನಾಗಿದ್ದು ನನ್ನ ಸ್ವಂತ ಉದ್ಯೋಗ ಕುರಿ ಸಾಕಾಣಿಕೆ ಆಗಿದ್ದು ನನ್ನ ಹಟ್ಟಿಗಳಲ್ಲಿ ಒಟ್ಟಾರೆ ಟಗರು ಕುರಿಗಳು 180 ಮರಿಗಳಿದ್ದು ಅದರಲ್ಲಿ 101 ಟಗರುಗಳನ್ನು ಗಾಲಿ ಜನಾರ್ಧನರೆಡ್ಡಿಯವರಿಗೆ ನನ್ನ ಸ್ವಚ್ಚೆಯಿಂದ ನೀಡಲು ಬದ್ಧವಾಗಿರುತ್ತೇನೆ. ಗಾಲಿ ಜನಾರ್ಧನರೆಡ್ಡಿಯ ಕಟ್ಟಿ ಅಭಿಮಾನಿ ಕೂಡಾ ಆಗಿರುತ್ತೇನೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಗಂಗಾವತಿಯಿಂದ ಸ್ಪರ್ಧಿಸುತ್ತಿದ್ದಾರೆಂಬ ಸುದ್ದಿ ಕೇಳಿ ಬಹಳಷ್ಟು ಸಂತೋಷ ಮತ್ತು ವರ್ಷಗೊಂಡು ಅವರ ರಾಜಕೀಯ ಭವಿಷ್ಯ ಉಜ್ವಲಗೊಳ್ಳಲೆಂದು ಹಾಗೂ ಗಂಗಾವತಿಯನ್ನು ದೇಶವಿದೇಶ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಖ್ಯಾತಿಗೊಳಿಸುತ್ತಾರೆಂದು ಭಾವಿಸಿ ಅಭಿಮಾನದಿಂದ 11 ಟೆಗರುಗಳನ್ನು ಕಾಣಿಕೆಯಾಗಿ ನೀಡುವುದನ್ನು ಹೊಸ ಪಕ್ಷನೋ ಯಾವುದಾದರೂ ಪಕ್ಷದಿಂದ ಗುರುತಿಸಿಕೊಂಡು ಘೋಷಿಸಿದ ಮೊದಲ ದಿನದಂದು | ಟಗರು ನೀಡಿ ಹಾಗೂ ನಾಮಪತ್ರ ಸಲ್ಲಿಸಿದ ದಿನದಂದು 10 ಟಗರು ನೀಡಲು ನಿರ್ಧರಿಸಿದ್ದೇನೆ ಎಂದು ಯಮನೂರಪ್ಪ ಮುಂಡಗೌಡ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಹನುಮೇಶ್ ಮತ್ತು ಹನುಮೇಶ್ ಮತ್ತು ಮಲ್ಲೇಶಪ್ಪ ವಕೀಲರು ಉಪಸ್ಥಿತಿಯಿದ್ದರು .
City Today News – 9341997936