
ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯ ವಿವರ :
ದೇಶ ಸೇವೆ ಮಾಡಿದ ದಿವಂಗತ ಮಾಜಿ ಸೈನಿಕ ಕ, ಲಕ್ಷ್ಮಣ್ ರಾವ್, ಧರ್ಮಪತ್ನಿ 92 ವರ್ಷದ ಶ್ರೀಮತಿ. ಕೆ. ನಿರ್ಮಲ ಬಾಯಿ ವಾಸ : ನಂ.4/586, ಕೆಂಪಯ್ಯ ಬ್ಲಾಕ್, ವೆಂಕಟರಂಗಪುರ, ಪ್ಯಾಲೇಸ್ ಗುಹಳ್ಳಿ, ಬೆಂಗಳೂರು – 560 003, (ಸೆಲ್ ನಂ.9900580761 / 9980875997) ಆದ ನನಗೆ ಬಿ.ಜೆ.ಪಿ. ಪಕ್ಷದ ಎ.ಎಚ್. ಆನಂದ್ ಎಂಬಾತನು ನನ್ನ ಸ್ವಯಾರ್ಜಿತ ಮನೆಯನ್ನು ರೂ.70 ಲಕ್ಷಗಳಿಗೆ ಖರೀದಿಸಿ, ರೂ.28 ಲಕ್ಷ ಹಣ ನೀಡಿ ಬಾಕಿ ರೂ.42 ಲಕ್ಷ ಕೊಡುವುದಾಗಿ ನಂಬಿಸಿ, ಆತನ ಹೆಸರಿಗೆ ನೋಂದಣಿಸಿ, ಲಿಟಿಗೇಶನ್ ಮುಚ್ಚಿ ಹಾಕಿ, ಎಸ್.ಬಿ.ಐ. ಬ್ಯಾಂಕಿನಲ್ಲಿ ಅಡಮಾನ ರೂ.50 ಲಕ್ಷ ಪಡೆದು, ಮನೆಯನ್ನು ಲಪಟಾಯಿಸಲು ನನಗೆ ಮೋಸ, ವಂಚನೆ, ಜೀವ ಬೆದರಿಕೆ, ಇತ್ಯಾದಿಗಳ ಬಗ್ಗೆ ಈ ಮೂಲಕ ಮನವಿ ಮಾಡಿರುವುದನ್ನು ತಾವುಗಳು ಗಮನಿಸಿ, ತಮ್ಮ ದಿನಪತ್ರಿಕೆ, ಮಾಧ್ಯಮ ಇತ್ಯಾದಿಗಳ ಮೂಲಕ ಸೂಕ್ತವಾಗಿ ಪ್ರಕಟಿಸಿ ನೊಂದ ನನಗೆ ನ್ಯಾಯ, ರಕ್ಷಣೆ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿಶ್ವಾಸವಿಟ್ಟು ಕೈಮುಗಿದು ವಿನಂತಿಸಿಕೊಳ್ಳುತ್ತೇನೆ.
ಇದೇ ಬೆಂಗಳೂರು ಉತ್ತರ, ಯಲಹಂಕ ಘಟಕದ ಬಿ.ಜೆ.ಪಿ. ಪಕ್ಷದ ಸಂಚಾಲಕ, ರಾಜಾನುಕುಂಟೆ ಪೆಟ್ರೋಲ್ ಬಂಕ್ ಮಾಲೀಕ, ಎ.ಎಚ್, ಆನಂದ್, ಸನ್.ಆಫ್. ಹನುಮಂತೇಗೌಡ, ಆತನ ಬ್ರೋಕರ್ ಪ್ಯಾಲೇಸ್ ಗುಟ್ಟಹಳ್ಳಿಯ ಶಿವಕುಮಾರ್ ಮತ್ತು ಜಯಬಾಲ ಇವರುಗಳು ನಾನು ವಾಸ ಮಾಡುತ್ತಿರುವ ಈ ಮೇಲೆ ತಿಳಿಸಿರುವ ಸ್ವಯಾರ್ಜಿತವಾದ ನನ್ನ ಮನೆಯನ್ನು ದಿನಾಂಕ :05-04-2014 ರಂದು ರೂ.70 ಲಕ್ಷಕ್ಕೆ ವ್ಯವಹಾರ ಮಾಡಿ ರೂ.15 ಲಕ್ಷ ಹಣವನ್ನು ಮುಂಗಡವಾಗಿ ನೀಡಿ ಬಾಕಿ ಉಳಿಕೆ ಹಣ ರೂ.55 ಲಕ್ಷ್ಮಿ ನೊಂದಣಿಯ ಸಮಯದಲ್ಲಿ ಕೊಡುವುದಾಗಿ ಭರವಸೆ ನೀಡಿ, ನಂಬಿಸಿ, ನಾನಾ ಕಷ್ಟಗಳಿಗೆ ಸಿಲುಕಿಸಿ ನನ್ನ ಅನಾರೋಗ್ಯಕ್ಕೆ ಕಾರಣರಾಗಿರುತ್ತಾರ.
ದಿನಾಂಕ : 01-08-2014 ಆಸ್ಪತ್ರೆಯಲ್ಲಿರುವಾಗ ನನಗೆ ಬಾಕಿ ರೂ.55 ಲಕ್ಷ ಹಣ ಕೊಡುವುದಾಗಿ ನಂಬಿಸಿ, ಮೊದಲೆ ತಯಾರು ಮಾಡಿದ ಕ್ರಯಪತ್ರಕ್ಕೆ ಓದಲು ಅವಕಾಶ ನೀಡದ ತುರ್ತು ನೆಪ ಹೇಳಿ ನನ್ನ ಸಹಿ ಪಡೆದು, ನೋಂದಣಿ ಶುಲ್ಕ, ಕ್ರಯಪತ್ರಗಳ ಶುಲ್ಕ, ಅದಾಯ ತೆರಿಗೆ ಇತ್ಯಾದಿ ಉಳಿಸುವ ಸಂಚು ಮಾಡಿ ನನ್ನ ಮನೆಯನ್ನು ಕೇವಲ ರೂ.28.70 ಲಕ್ಷಕ್ಕೆ ಆತನ ಹೆಸರಿಗೆ ನೋಂದಣಿ ಮಾಡಿಸಿ, ನಾನಾ ಸಬೂತು ಹೇಳಿ, ಕ್ಷಮೆಯಾಚಿಸಿ ಕೇವಲ ರೂ.13 ಲಕ್ಷ ಹಣ ನೀಡಿ ಬಾಕಿ ರೂ.42 ಲಕ್ಷ ಹಣ ಮಾರನೆಯ ದಿನ ಕೊಡುವುದಾಗಿ ಭರವಸೆ ನೀಡಿ ತಲೆ ತಪ್ಪಿಸಿಕೊಂಡಿರುತ್ತಾರೆ.
ನೊಂದ ನಾನು ಪೊಲೀಸರಿಗೆ ದೂರು ಕೊಡುವುದಾಗಿ ಸೀರಿಯಸ್ ಆಗಿ ಎಚ್ಚರಿಕೆ ನೀಡಿದ ಕಾರಣ ದಿನಾಂಕ 11-09-2014 ರಂದು ಬಾಕಿ ರೂ.42 ಲಕ್ಷ ಹಣ ನನ್ನ ಸ್ವಾಧೀನಾನುಭವದಲ್ಲಿರುವ ಮನೆಯನ್ನು ಆತನ ಸ್ವಾಧೀನಕ್ಕೆ ಪಡೆಯುವಾಗ ಕೊಡುವುದಾಗಿ ಎ.ಎಚ್. ಆನಂದ್ ಮತ್ತು ಆತನ ಬೋಕರ್‌ಗಳು ಸಹಿ ಮಾಡಿರುವ ಕರಾರು ಪತ್ರಕ್ಕೆ, ಅನಾರೋಗ್ಯದಿಂದ ಹಾಸಿಗೆ ಹಿಡಿದ ನನ್ನ ಮನೆಯಲ್ಲಿ ನನ್ನ ಸಹಿಯನ್ನು ಪಡೆದು ಅದರಲ್ಲಿರುವ ಟೈಪಿಂಗ್ ತಪ್ಪುಗಳನ್ನು ತೋರಿಸಿ ಆನಂದ್ ಸಹಿ ಮಾಡಿಸಿ ತಂದುಕೊಡುವುದಾಗಿ ಬೋಕರ್‌ಗಳ ಮೂಲಕ ಪಡೆದುಕೊಂಡ ಹಿಂದಿರುಗಿಸದೆ ಕೇವಲ ನೋಟರಿ ಕಾಪಿ ನೀಡಿ ಮೋಸ ಮಾಡಿರುತ್ತಾರೆ. ಕರಾರು ಪತ್ರ ಇಲ್ಲಿಯತನಕ
ಇದರ ಬಗ್ಗೆ ಅನೇಕ ಬಾರಿ ಮನವಿ ಮಾಡಿ ಲೀಗಲ್ ನೋಟೀಸ್ ನೀಡಿದ ಕಾರಣ ನನ್ನ ಮೇಲೆ ದ್ವೇಷ, ಅಸೂಯೆ ಬೆಳೆಸಿ ನನ್ನ ಮನೆಯನ್ನು ಆತನಿಗೆ ಮೊದಲು ಒಪ್ಪಿಸಿ ನಂತರ ಬಾಕಿ ರೂ.42 ಲಕ್ಷ ಹಣ ಕೇಳಬೇಕೆಂದು ನನಗೆ ಧಮ್ಮಿ, ಜೀವ ಬೆದರಿಕೆ ಹಾಕಿರುತ್ತಾರೆ. ಈ ವಿಷಯದಲ್ಲಿ ನಾನು ಹಲವಾರು ಗಣ್ಯ ವ್ಯಕ್ತಿಗಳಿಗೆ ರಾಜಕೀಯ ಮುಖಂಡರುಗಳಿಗೆ ಇತರರಿಗೆ ದೂರು ನೀಡಿದಾಗ ನನ್ನ ಮನೆಯ ಬಾಗಿಲು
ಹೊಡೆದು ಅತಿಕ್ರಮ ಪ್ರವೇಶ ಮಾಡುವುದಾಗಿ ಹೆದರಿಸಿದಾಗ, ನನಗೆ ಪೋಲೀಸರ ರಕ್ಷಣೆ ಸಿಗಿದ ಕಾರಣ ಮಾನ್ಯ ನ್ಯಾಯಾಲಯಕ್ಕೆ ಮೊರೆ ಹೋದಾಗ ಅದರ ಆದೇಶದ ಪ್ರಕಾರ ಎ.ಎಚ್. ಆನಂದ್ ಮತ್ತು ಬ್ರೋಕರ್ ಗಳ ವಿರುದ್ಧ ವೈಯಾಲಿಕಾವಲ್ ಪೊಲೀಸರು ಕೂಲಂಕುಶ ವಿಚಾರಣೆ ನಡೆಸಿ, ಕ್ರಿಮಿನಲ್ ಕೇ 127/16, ಸಿ.ಸಿ. ನಂ.2915/19: ದಿನಾಂಕ: 08-08-2016 ಹಾಗೂ ದಿನಾಂಕ : 19-09-2022 ರಲ್ಲಿ ಕ್ರೈ ಕೇಸ್ ಎಫ್.ಐ.ಆರ್, ನಂ.114/22 ದಾಖಲಾಗಿರುತ್ತದೆ.
ಇದರಿಂದ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು, ನನ್ನ ಮನೆಯನ್ನು ಲಪಟಾಯಿಸಲು ಪ್ರಭಾವಿತ ರಾಜಕೀಯ ವ್ಯಕ್ತಿಗಳ ಮೂಲಕ, ರಾಜಾನುಕುಂಟೆ ಎಸ್.ಬಿ.ಐ. ಬ್ಯಾಂಕ್, ಬ್ರಷ್ಟ ಅಧಿಕಾರಿಗಳ ಜೊತೆ ಶಾಮೀಲಾಗಿ ಅವರಿಗೆ ಹಣದಾಸೆ ನೀಡಿ ಲಿಟಿಗೇಷನ್ ಇದ್ದರೂ ಮುಚ್ಚಿ ಹಾಕಿ ಕಾನೂನು ವಿರುದ್ಧವಾಗಿ ನನ್ನ ಸ್ವಾಧೀನ ಅನುಭವದಲ್ಲಿರುವ ನನ್ನಮನೆಯನ್ನು ನನ್ನ ಅನುಮತಿ ಇಲ್ಲದ ಅಡವಿಟ್ಟು, ರೂ.50 ಲಕ್ಷ ಹಣಪಡೆದರೂ ನನಗೆ ಕೊಡಬೇಕಾದ ಬಾಕಿ ರೂ.42 ಲಕ್ಷ ಹಣ ನೀಡದೆ ಮನೆಯನ್ನು ಆತನ ವಶಕ್ಕೆ ಪಡೆಯದ ಮೋಸ ವಂಚನೆ, ಜೀವ ಬೆದರಿಕೆ ಇತ್ಯಾದಿ ಮುಂದುವರೆಸುತ್ತಿದ್ದಾನೆ.
ನನ್ನ ಸ್ವಾಧೀನದಲ್ಲಿರುವ ಮನೆ ವಿವಾದಾತ್ಮಕವಾಗಿರುವುದು ಗೊತ್ತಿದ್ದರೂ ವಿಚಾರಿಸದೆ ನನ್ನ ಮನೆಯನ್ನು ಅಡವಿಟ್ಟು, ಕಾನೂನು ಬಾಹಿರವಾಗಿ ಭೋಗ್ಯ ಸಾಲ ಕೊಟ್ಟಿರುವ ಬಗ್ಗೆ ರಾಜಾನುಕುಂಟೆ, ಬ್ಯಾಂಕ್ ಅಧಿಕಾರಿಗಳ ವಿರುದ್ಧ ಉನ್ನತ ಅಧಿಕಾರಿಗಳಿಗೆ ಓಂಬಡ್ಸ್ ಮನ್, ರಾಜ್ಯಪಾಲಕರಿಗೆ ಇತರರಿಗೆ ದೂರು ನೀಡಿದ್ದರೂ ಯಾರೂ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿದೆ ನನಗೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿ ನನ್ನ ಆರೋಗ್ಯ ಹದಗೆಟ್ಟಿರುವುದಕ್ಕೆ ಮುಖ್ಯ ಕಾರಣ ಸದರಿ ಎ.ಎಚ್.
ಸದರಿ ಎ.ಎಚ್. ಆನಂದ್ ಆತನ ಸ್ವಾರ್ಥಕ್ಕೆ ಹಣದಾಸೆಗೆ ಬಿ.ಜೆ.ಪಿ. ರಾಜಕೀಯ ದುರುಪಯೋಗ, ದರ್ಪ, ದೌರ್ಜನ್ಯ, ಗೂಂಡಾಗಿರಿ, ಪ್ರದರ್ಶಿಸಿದ ನ್ಯಾಯದ ದಾರಿ ತಪ್ಪಿಸಲು ಪೊಲೀಸರಿಗೆ ಸುಳ್ಳು, ತಪ್ಪು ಮಾಹಿತಿ, ತಿಳುವಳಿಕೆ ನೀಡಿ ನನ್ನನ್ನು ಬಲಿಪಶು ಮಾಡಿ, ಮನೆಯನ್ನು ಲಪಟಾಯಿಸಲು ಮಾಡುತ್ತಿರುವ ಕಪಟ, ಕುತಂತ್ರಗಳ ಬಗ್ಗೆ ಸದರಿ ಎ.ಎಚ್. ಅನಂದ್‌ನನ್ನು ಪಕ್ಷದಿಂದ ಉಚ್ಚಾಟನೆ ಶಿಸ್ತು ಕ್ರಮ ಜರುಗಿಸಿ ನೊಂದ ನನಗೆ ನ್ಯಾಯ, ರಕ್ಷಣೆ ದೊರಕಿಸಿ ಕೊಡಲು ಸಹಾಯ ಮಾಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ, ಬಿ.ಜೆ.ಪಿ. ಪಕ್ಷದ ಹಿರಿಯ ಮುಖಂಡರುಗಳಿಗೆ, ನಾಯಕರಿಗೆ ಅನೇಕ ಬಾರಿ ಮನವಿ ಮಾಡಿ ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗದೆ ಕಳೆದ 8 ವರ್ಷಗಳಿಂದ ಸುಮಾರು 1 ಕೋಟಿ ಹಣ ನಷ್ಟ ಮಾಡಿ ನನಗೆ ಮಾನಸಿಕ ಕಿರುಕುಳ, ಆರ್ಥಿಕ ಸಂಕಷ್ಟಗಳಿಂದ ನೊಂದ ನನಗೆ ತೀವ್ರ ಹೃದಯ, ಶ್ವಾಸಕೋಷ, ಅಘಾತವಾಗಿ ಜಯದೇವ ಆಸ್ಪತ್ರೆಯಲ್ಲಿ ದಿ : 09-12-2022 ರಿಂದ 14-12-2022 ವರೆಗೆ ಚಿಕಿತ್ಸೆ ಪಡೆದು ಈಗ ಬಂದಿರುತ್ತೇನೆ. ಈ ಅನಾಹುತಗಳಿಗೆ ಸದರಿ ಎ.ಎಚ್. ಆನಂದ್ ಮೂಲ ಕಾರಣ,
ಸದರಿ ಎ.ಎಚ್. ಆನಂದ್ ಆತನ ರಾಜಕೀಯ ದುರುಪಯೋಗ, ಮೋಸ, ಗೂಂಡಾಗಿರಿ ಇತ್ಯಾದಿ ಮುಚ್ಚಿ ಹಾಕಲು ನನಗೆ ಜೀವ ಬೆದರಿಕೆ ಹಾಕುತ್ತಿರುವ, ಅಮಾಯಕಳಾಗಿರುವ, ಈ ಮೇಲೆ ತಿಳಿಸಿರುವ ನನ್ನ ಗಂಭೀರ ಪರಿಸ್ಥಿತಿಯನ್ನು ತಾವುಗಳು ಬಹಿರಂಗಪಡಿಸಿ ಸಂಬಂಧಪಟ್ಟ ರಾಜಕೀಯ ವ್ಯಕ್ತಿಗಳ, ಗಣ್ಯವ್ಯಕ್ತಿಗಳ, ವಿರೋಧಪಕ್ಷದವರ ಸಾಮಾಜಿಕ ಹೋರಾಟಗಾರರ ಇತರರ ಮನದಟ್ಟಾಗುವಂತೆ ಗಮನ ಸೆಳೆದು ಅಮಾಯಕಳಾಗಿ ನೊಂದ ಮಾಜಿ ಸೈನಿಕರ ಪತ್ನಿ ಅನಾರೋಗ್ಯದಿಂದ ನರಳುತ್ತಿರುವ ನನಗೆ ನ್ಯಾಯ, ರಕ್ಷಣೆ, ತಾವುಗಳು ದೊರಕಿಸಿಕೊಡುವಿರೆಂದು ನಂಬಿರುತ್ತೇನೆ. ಈ ನನ್ನ ಮನವಿಗೆ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿರುತ್ತೇವೆ ಎಂದು ಶ್ರೀಮತಿ. ಕೆ. ನಿರ್ಮಲಬಾಯಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936