ಜೇನುಗೂಡು ಫಿಲಂಸ್ ನಿರ್ಮಾಣದಲ್ಲಿ ನಿರ್ಮಿಸಿರುವ “ವಾಸಂತಿ ನಲಿದಾಗ” ಚಿತ್ರ ಬಿಡುಗಡೆಯಾಗಿ ನಾಲ್ಕನೇ ವಾರಕ್ಕೆ ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಈ ಸಂತೋಷದ ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಇಂದಿನ ಈ ಪತ್ರಿಕಾ ಮೇಷಿ ಕರೆದಿದ್ದೇವೆ.

ಬೆಂಗಳೂರು ಹಾಗೂ ರಾಜ್ಯಾದ್ಯಂತ ನಮ್ಮ ಚಲನಚಿತ್ರ ಪ್ರದರ್ಶನಗೊಂಡು ಎಲ್ಲ ಕುಟುಂಬದ ಮನೆ ಮಾತಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.
ಚಿತ್ರದ ತಾರಾ ಗಣದಲ್ಲಿ ಪಪಥಮವಾಗಿ ನಾಯಕ ನಟನಾಗಿ ರೋಹಿತ್ ಶ್ರೀಧರ್, ನಾಯಕಿಯರಾಗಿ ಭಾವನ ಶ್ರೀನಿವಾಸ್, ಜೀವಿತ ವಸಿಷ್ಠ, ಸಾಯಿ ಕುಮಾರ್, ಸುಧಾರಾಣಿ,ಸಾಧು ಕೋಕಿಲ ಪಾವಗಡ ಮಂಜು, ವಿನೋದ್ ಗೊಬ್ಬರಗಾಲ, ಮಿಮಿಕ್ರಿ ಗೋಪಿ, ರಘುಪತಿ ಭಟ್ ಮುಂತಾದವರು ಮುಖ್ಯ ಭೂಮಿಯಲ್ಲಿದ್ದಾರೆ.
ಕನ್ನಡ ಚಲನಚಿತ್ರರಂಗ ಇತ್ತೀಚಿಗೆ ಅತ್ಯಂತ ಸಂಕಷ್ಟದಲ್ಲಿದ್ದು ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ, ಚಿತ್ರಮಂದಿರಗಳ ಬಾಡಿಗೆ, ಕಟ್ಟೆ,ಲಾಗದ ಆರ್ಥಿಕ ಪರಿಸ್ಥಿತಿಯಿಂದ ಬಹುತೇಕ ನಿರ್ಮಾಪಕರು ಕಂಗಾಲಾಗಿದ್ದಾರೆ ಆದರೂ ನಮ್ಮ ವಾಸಂತಿನಲಿದಾಗ ಚಿತ್ರ ಕನ್ನಡ ಜನತೆ ಹಾಗೂ ನಿಮ್ಮೆಲ್ಲರ ಸಹಕಾರದಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಉತ್ತಮ ಸದಭಿವೃದ್ಧಿಯ ಚಲನಚಿತ್ರ ಇನ್ನು ಹೆಚ್ಚಿನ ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳಲು ಮಾಧ್ಯಮದವರ ಸಹಕಾರ ಅತ್ಯಗತ್ಯ. ನಮ್ಮ ಚಲನಚಿತ್ರದ ಬಗ್ಗೆ ಹೆಚ್ಚಿನ ಪುಚಾರ ಕೊಟ್ಟು ನಾಡಿನ ಜನತೆಗೆ ತಲುಪಿಸಲು ನೆರವಾಗಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿಯನ್ನು ಜೇನುಗೂಡು ಶ್ರೀಧರ್ ಪತ್ರಿಕಾ ಗೋಷ್ಠಿಯಲ್ಲಿ ಮಾಡಿದರು.
City Today News – 9341997936