ಪ್ರಜಾವಾಣಿ ದಿನಪತ್ರಿಕೆಯಲ್ಲಿ ಡಾ.ಬಿ.ಆರ್.‌ಅಂಬೇಡ್ಕರ್‌ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಪ್ರಕಟವಾದ ವರದಿಗೆ ನಿಗಮದ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸ್ಪಷ್ಟೀಕರಣ


ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ  ನಡೆದ ಪತ್ರಿಕಾಗೋಷ್ಟಿ

ಕೋವಿಡ್‌ ಹಿನ್ನಲೆಯ ನಂತರ 2020-21ನೇ ಸಾಲಿನಲ್ಲಿ ಫಲಾಪೇಕ್ಷಿಗಳಿಂದ 1,19,000ಕ್ಕೂ ಹೆಚ್ಚು ಅರ್ಜಿಗಳು ನಿಗಮಕ್ಕೆ ಎಲ್ಲಾ ಯೋಜನೆಗಳಡಿಯಲ್ಲಿ ಸ್ವೀಕೃತಗೊಂಡಿರುತ್ತವೆ. ಸದರಿ ವರ್ಷ ಸರ್ಕಾರ ನಿಗಧಿಪಡಿಸಿದ ಗುರಿಯು ಸ್ವೀಕರಿಸಿದ್ದ ಅರ್ಜಿಗಳಲ್ಲಿ ಶೇಕಡ 10% ಕ್ಕಿಂತ ಕಡಿಮೆ ನಿಗಧಿಸಿದ್ದು, ಈ ಸಂಬಂಧ ಶೇಕಡ 90% ಕ್ಕಿಂತ ಹೆಚ್ಚು ಅರ್ಜಿಗಳು ನಿಗಮದಲ್ಲಿ ಬಾಕಿ ಇದ್ದು ದಿನನಿತ್ಯ ಕಛೇರಿಗಳಿಗೆ ಅಲೆದಾಡುತ್ತಿದ್ದ ಫಲಾನುಭವಿಗಳನ್ನು ಗಮನಿಸಿದ ನಿಗಮದ ನಿರ್ದೇಶಕ ಮಂಡಳಿಯು ನಿಗಮದ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಪ್ರತ್ಯೇಕವಾಗಿ ನಿಗಮದ ಹಿಂದಿನ ವರ್ಷಗಳ ಲಾಭಾಂಶದಲ್ಲಿ 5000 ನೇರಸಾಲ ಯೋಜನೆಯಡಿ ನಿರ್ದೇಶಕರ ಮಂಡಳಿಯ ವಿಶೇಷ ಕೋಟಾ(ಪ್ಯಾಕೇಜ್)ವನ್ನು ಸೃಜಿಸಿ ಸೌಲಭ್ಯ ಕಲ್ಪಿಸಲು ನಿಗಮದ 226ನೇ ನಿರ್ದೇಶಕ ಮಂಡಳಿಯಲ್ಲಿ ವಿಷಯ ಸಂಖ್ಯೆ:06ರಲ್ಲಿ ಚರ್ಚಿಸಿ ನಿರ್ಣಯಿಸಿದಂತೆ ಸದರಿ ಯೋಜನೆಯನ್ನು ಅನುಷ್ಟಾನಗೊಳಿಸಲು ಕ್ರಮವಹಿಸಲಾಗುತ್ತಿದೆ.
ಸರ್ಕಾರದ ವಿವಿಧ ಸಚಿವರು, ಶಾಸಕರು ಹಾಗೂ ಕೆಲವು ಸಂಘ ಸಂಸ್ಥೆಗಳಿಂದ ನೇರವಾಗಿ ಅರ್ಜಿಗಳು ನಿಗಮಕ್ಕೆ ಸ್ವೀಕೃತವಾಗಿದ್ದು ಸದರಿ ಕೋರಿಕೆ ಆಧರಿಸಿ ನಿರ್ದೇಶಕ ಮಂಡಳಿಯು ನಿರ್ಣಯಿಸಿರುವಂತೆ ಮತ್ತು ಮಾನ್ಯ ಅಧ್ಯಕ್ಷರ ಸೂಚನೆ ಮೇರೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಂಜೂರಾತಿ ಆದೇಶವನ್ನು ನೀಡಿರುತ್ತಾರೆ. ಜಿಲ್ಲಾ ವ್ಯವಸ್ಥಾಪಕರು ಸದರಿ ಮಂಜೂರಾತಿ ಆದೇಶಗಳನ್ನು ಅನುಸರಿಸಿ ಕ್ಷೇತ್ರ ವ್ಯಾಪ್ತಿ ಪರಿಶೀಲಿಸಿ ವರದಿಯೊಂದಿಗಿನ ಶಿಫಾರಸ್ಸು ಮಾಡಿದ ಪ್ರಕರಣಗಳಿಗೆ ಜಿಲ್ಲಾ ವ್ಯವಸ್ಥಾಪಕರ ನಿಗಮದ ಸದರಿ ಯೋಜನೆಯ ಖಾತೆಗೆ ಅನುದಾನವನ್ನು ಆಂಗಿಂದಾಗೆ ಬಿಡುಗಡೆಗೊಳಿಸಿ ಯೋಜನೆಯನ್ನು ನಿಯಮಬದ್ಧವಾಗಿ ಅನುಷ್ಟಾನಗೊಳಿಸಲು ಸೂಚಿಸಲಾಗಿದೆ. ಈ ಸಂಬಂಧ ಈವರೆಗೆ ಜಿಲ್ಲಾ ವ್ಯವಸ್ಥಾಪಕರಿಂದ ಪರಿಶೀಲಿಸಿ ಶಿಫಾರಸ್ಸಾಗಿ ಪ್ರಸ್ತಾವನೆಗಳೊಂದಿಗೆ ಬಂದಿರುವ ರೂ:14.16 ಕೋಟಿ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆಗೊಳಿಸಲಾಗಿರುತ್ತದೆ. ದಿನಾಂಕ:20.12.2022 ರಂದು ಬೆಳಗಾವಿಯಲ್ಲಿ ನಿಗಮದ ಮಾನ್ಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸಲಾಗಿ ಬಿಡುಗಡೆಯಾದ ಅನುದಾನದಲ್ಲಿ ಶೇಕಡ 70% ರಷ್ಟು ಅಂದರೆ ಸುಮಾರು ರೂ:10.00 ಕೋಟಿಯಷ್ಟು ವಿವಿಧ ಜಿಲ್ಲೆಗಳಲ್ಲಿ ಖರ್ಚು ಮಾಡಿರುವುದು ಕಂಡುಬಂದಿದ್ದು, ಹಾಗೂ ಈ ಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಅನುಷ್ಟಾನಗೊಳಿಸಲು ಜಿಲ್ಲಾ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ. ದಿನಾಂಕ:22.12.2022ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಿಸಿರುವ ಅಂಶವು ಸತ್ಯಕ್ಕೆ ದೂರವಾಗಿದ್ದು, ಮೇಲೆ ಹೇಳೆಲಾದ ನಿಗಮವು ಸೃಜಿಸಿದ 5000 ನೇರಸಾಲ ಯೋಜನೆಯ ವಿಶೇಷ ಕೋಟಾದಡಿ 25.00 ಕೋಟಿಗಳಲ್ಲಿ ಈವರೆವಿಗೂ ಜಿಲ್ಲಾ ವ್ಯವಸ್ಥಾಪಕರು ಅನುಷ್ಟಾನಗೊಳಿಸುವ ವ್ಯವಸ್ಥೆಯಲ್ಲಿ ನೇರವಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ನನ್ನ ಭಾವಚಿತ್ರವನ್ನು ಹಾಕಿ “ಅಂಬೇಡ್ಕರ್‌ ನಿಗಮ: ₹ 25 ಕೋಟಿ ಅಕ್ರಮ” ಎಂದು ಬಿಂಬಿಸಿ ಪ್ರಕಟಿಸಿರುವ ಅಂಶವು ಸತ್ಯಕ್ಕೆ ದೂರವಾಗಿದ್ದು, ಯಾವುದೇ ಸತ್ಯಾಂಶಗಳಿಂದ ಕೂಡಿರುವುದಿಲ್ಲ, ಹಾಗೂ ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶಕ ಮಂಡಳಿಯ ನಿರ್ದೇಶನದಂತೆ ಕಾರ್ಯನಿರ್ವಹಿಸಿದ್ದು, ಸದರಿ ನಿರ್ದೇಶಕ ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿ ವ್ಯವಸ್ಥಾಪಕ ನಿರ್ದೇಶಕರು ಕರ್ತವ್ಯ ನಿರ್ವಹಿಸಿರುತ್ತಾರೆ ಹೊರೆತು ಇಲ್ಲ ವ್ಯಯಕ್ತಿವಾಗಿ ಯಾವುದೇ ತೀಮಾರ್ನಕ್ಕೆ ಆಸ್ಪಾದವಿರುವುದಿಲ್ಲವೆಂದು ಹಾಗು ತಪ್ಪು ಎಸಗಿರುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಮೇಲಿನ ಅಂಶಗಳನ್ನು ಗಮಿಸಿದಾಗಿ ಮಂಡಳಿಯು ನಿರ್ಧರಿಸಿ ನಿರ್ಣಯಿಸಿರುವಂತೆ ಕಾರ್ಯನಿರ್ವಹಿಸಲಾಗಿದೇ ಹೊರೆತು ಯಾವುದೇ ಕರ್ತವ್ಯ ಲೋಪ ಎಸಗಿರುವುದಿಲ್ಲ.
ಐರಾವತ ಮತ್ತು ಸಮೃದ್ಧಿ ಯೋಜನೆಗಳು 2018-19ನೇ ಸಾಲಿನಲ್ಲಿ ಅಂದಿನ ಸರ್ಕಾರವು ಜಾರಿಗೆ ತಂದು ಸರ್ಕಾರ ಸದರಿ ಯೋಜನೆಗಳಿಗೆ ಹೊರಡಿಸಿದ ನಿಯಮದಂತೆ ಆನ್‌ಲೈನ್‌ ಮೂಲಕ ಫಲಾಪೇಕ್ಷಿಗಳಿಂದ ಅರ್ಜಿ ಸ್ವೀಕಾರ ಮಾಡಿ, ಯೋಜನೆಗಳ ಅನುಷ್ಟಾನ ಸಂಬಂಧ E&Y (Ernst & Young LLP) ಸಂಸ್ಥೆ ತಾಂತ್ರಿಕ ಸಹಾಯ (Technical Support Unit) ಪಡೆಯುವ ಬಗ್ಗೆ ಸರ್ಕಾರದಿಂದ ನೇಮಕವಾದ ಸಂಸ್ಥೆ ಮೂಲಕ ನಿರ್ವಹಣೆ ಮಾಡಿ ಅನುಷ್ಟಾನಗೊಳಿಸಲಾಗುತ್ತಿತ್ತು.

E&Y (Ernst & Young LLP) ಸಂಸ್ಥೆಯು ಫಲಾಪೇಕ್ಷಿಗಳು ಆನ್‌ಲೈನ್‌ ಮೂಲಕ ಸಲ್ಲಿಸಲಾಗಿರುವ ಅರ್ಜಿಗಳನ್ನು ಮೆರಿಟ್‌ ಅಂಕಗಳ ಆಧಾರದ ಮೇಲೆ ಫಲಾಪೇಕ್ಷಿಗಳ ಪಟ್ಟಿಯನ್ನು ಜಿಲ್ಲೆಗಳಿಗೆ ಗುರಿ ನಿಗಧಿಪಡಿಸಿ ಜಿಲ್ಲಾ ವ್ಯವಸ್ಥಾಪಕರುಗಳಿಂದ ಅನುಷ್ಟಾನಗೊಳಿಸಲು ಕಳುಹಿಸಲಾಗಿತ್ತು.
2019-20ನೇ ಸಾಲಿನಲ್ಲಿ ಸರ್ಕಾರವು ಪತ್ರತ್ಯೇಕವಾಗಿ ಸಮೃದ್ಧಿ ಯೋಜನೆಗೆ 9.50 ಕೋಟಿ ಹಾಗೂ ಐರಾವತ ಯೋಜನೆಗೆ 28.00 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಸದರಿ ಅನುದಾನವು ಖರ್ಚಾಗದೇ ಉಳಿದಿದ್ದ ಹಿನ್ನೆಲೆಯಲ್ಲಿ, ನಿಗಮದ 228ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿರುವಂತೆ ಸದರಿ ಯೋಜನೆಗಳಲ್ಲಿ ಹೊಸದಾಗಿ ಅರ್ಜಿ ಸ್ವೀಕಾರ ಮಾಡುವ ಬದಲಿಗೆ ಈ ಹಿಂದಿನ ಸಾಲಿನಲ್ಲಿ ಸ್ವೀಕಾರ ಮಾಡಿ ಬಾಕಿ ಉಳಿದಿರುವ ಅರ್ಹ ಅರ್ಜಿಗಳ ಆಧಾರದ ಮೇಲೆ ಅನುಷ್ಟಾನಗೊಳಿಸಲು ನಿಗಮದ 228ನೇ ನಿರ್ದೇಶಕ ಮಂಡಳಿಯು ನೀಡಿದ ನಿರ್ಣಯದಂತೆ ಕ್ರಮವಹಿಸಿ, ನಿಗಮದ 226ನೇ ನಿರ್ದೇಶಕ ಮಂಡಳಿ ಸಭೆಯ ಹೆಚ್ಚುವರಿ ವಿಷಯ ಸಂಖ್ಯೆ;02 & 03ರಲ್ಲಿನ ಅಂಶಗಳಂತೆ, ಹಾಗೂ ನಿಗಮದ 227ನೇ ನಿರ್ದೇಶಕ ಮಂಡಳಿ ಸಭೆಯ ವಿಷಯ ಸಂಖ್ಯೆ;03 & 06ರಲ್ಲಿನ ಅಂಶಗಳಂತೆ, ಸದರಿ ಯೋಜನೆಗಳ ಅನುಷ್ಟಾನದ ಬಗೆಗಿನ ನಿರ್ಣಯದಂತೆ ಕ್ರಮವಹಿಸಲಾಗಿರುತ್ತದೆ.
ಮುಂದುವರೆದು, ಜಿಲ್ಲೆಗಳಲ್ಲಿ ಅನುಷ್ಟಾನಗೊಳ್ಳದೇ ಅನರ್ಹಗೊಂಡು ಜಿಲ್ಲಾ ವ್ವಸ್ಥಾಪಕರುಗಳಿಂದ ವರದಿಯಾದ ಐರಾವತ ಯೋಜನೆಯಡಿ 77 ಹಾಗೂ ಸಮೃದ್ಧಿ ಯೋಜನೆಯಡಿ 05 ಪ್ರಕರಣಗಳನ್ನು ರದ್ದುಗೊಳಿಸಿ ನಿಗಮದ 231ನೇ ನಿರ್ದೇಶಕ ಮಂಡಳಿ ಸಭೆಯ ನಿರ್ಣಯದಂತೆ, ಸದರಿ ಯೋಜನೆಗಳ ಅನುಷ್ಟಾನವನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಇದರಲ್ಲಿ ವ್ಯವಸ್ಥಾಪಕ ನಿರ್ದೇಶಕನಾದ ನಾನು ನಿಗಮದ ನಿರ್ದೇಶಕರ ಮಂಡಳಿ ಸಭೆಯ ನಿರ್ಣಯದಂತೆ ಕ್ರಮವಹಿಸಿದ್ದು ನೇರವಾಗಿ ಯಾವುದೇ ಪ್ರಕರಣಗಳನ್ನು ಆಯ್ಜೆ ಮಾಡಿ ಕ್ರಮವಹಿಸಿರುವುದಿಲ್ಲ.
ಗಂಗಾ ಕಲ್ಯಾಣ ಯೋಜನೆಯ 2015-16 ಮತ್ತು 2016-17ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಮೂಲಕ ಅನುಷ್ಟಾನಗೊಳಿಸಲಾಗುತ್ತಿದ್ದ ಪದ್ದತಿಯಲ್ಲಿ ಆಯ್ಕೆಯಾಗಿ ಕೆಲಸ ನಿರ್ವಹಿಸುತ್ತಿದ್ದ 10 ಗುತ್ತಿಗೆದಾರರಿಂದ VAT ಪದ್ದತಿಯಿಂದ GST ಪದ್ದತಿಗೆ ಕೇಂದ್ರ ಸರ್ಕಾರವು ಜಾರಿಗೆ ತಂದ ಹಿನ್ನಲೆಯಲ್ಲಿ ನಿಗಮವು ಕೆಲವು ಗುತ್ತಿಗೆದಾರರಿಂದ VAT ಮತ್ತು GST ವ್ಯತ್ಯಾಸದ ಮೊತ್ತವನ್ನು ಅವರ ಬಿಲ್‌ನಲ್ಲಿ ಕಡಿತಗೊಳಿಸಿ ಉಳಿದ ಬಿಲ್‌ ಮೊತ್ತವನ್ನು ಈ ಹಿಂದೆಯೆ ನಿಗಮದಿಂದ ಬಿಡುಗಡೆಗೊಳಿಸಿ ಪಾವತಿಸಲಾಗಿತ್ತು. ಆದರೆ, ಸದರಿ 10 ಗುತ್ತಿಗೆದಾರರಿಂದ GST ಪದ್ದತಿ ಪ್ರಾರಂಭಿಕ ಸಂದರ್ಭದಲ್ಲಿ ನಿಯಮಗಳ ಸ್ಪಷ್ಟತೆ ಕೊರತೆಯಿಂದ ತಡೆಯಿಡಿಯಲಾಗಿದ್ದ GST ವ್ಯತ್ಯಾಸದ ಮೊತ್ತವನ್ನು ನೀಡುವಂತೆ ನಿಗಮಕ್ಕೆ ಸದರಿ ಗುತ್ತಿಗೆದಾರರು ಕೋರಿದ್ದರೂ ಬಿಡುಗಡೆ ಮಾಡಿರುವುದಿಲ್ಲ. ಇದರ ವಿರುದ್ಧ ಸದರಿ ಗುತ್ತಿಗೆದಾರರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಮುಖ್ಯ ಪೀಠ ಹಾಗೂ ಧಾರವಾಡ ಪೀಠದಲ್ಲಿ ರಿಟ್‌ ಅರ್ಜಿ ಸಲ್ಲಿಸಿ ಸದರಿ ಪ್ರಕರಣದಲ್ಲಿ ಘನ ನ್ಯಾಯಾಲಯವು 02 ತಿಂಗಳ ಗಡವು ನಿಗಧಪಡಿಸಿ ನಿರ್ದೇಶಿಸಿ ಆದೇಶಿಸಿರುತ್ತದೆ. ಈ ಸಂಬಂಧ ಪದೇ ಪದೇ ಸದರಿ ಗುತ್ತಿಗೆದಾರರು ಕಛೇರಿಗೆ ಭೇಟಿ ನೀಡಿ ನ್ಯಾಯಾಲಯದ ಆದೇಶ ಪಾಲಿಸಿ ತಮ್ಮಿಂದ ತಡೆಯಿಡಿಯಲಾಗಿದ್ದ GST ವ್ಯತ್ಯಾಸದ ಮೊತ್ತವನ್ನು ಕೋರುತ್ತಿದ್ದ ಮೇರೆಗೆ ನಿಗಮದ ಕಾನೂನು ಕೋಶದ ಮುಖ್ಯಸ್ಥರಿಂದ ಅಭಿಪ್ರಾಯ ಮತ್ತು ನಿಗಮದ ಲೆಕ್ಕ ಪರಿಶೋಧಕರಿಂದ ಅಭಿಪ್ರಾಯ ಪಡೆದು ಸದರಿ ಅಭಿಪ್ರಾಯದಂತೆ ನಿಗಮದ 225ನೇ ನಿರ್ದೇಶಕ ಮಂಡಳಿಯಲ್ಲಿ ಪ್ರಸ್ತಾಪಿಸಿ ವಿಷಯದ ಗಂಭೀರತೆಯನ್ನು ಅರಿತ ನಿರ್ದೇಶಕ ಮಂಡಳಿಯ ನಿರ್ಣಯದಂತೆ ಕ್ರಮವಹಿಸಿ ವಾಣಿಜ್ಯ ತೆರಿಗೆ ಇಲಾಖೆಗೆ ಅಭಿಪ್ರಾಯ ಕೋರಿ ಪತ್ರ ವ್ಯವಹರಿಸಲಾಗಿ, ಸದರಿಯವರು ಯಾವುದೇ ಅಭಿಪ್ರಾಯ ನೀಡದೇ ನಿಗಮದ ಹಂತದಲ್ಲಿ ಕ್ರಮಕೈಗೊಳ್ಳಲು ತಿಳಿಸಿರುವುದರ ಮೇರೆಗೆ ಅದರಂತೆ ಮತ್ತೊಮ್ಮೆ ಸದರಿ ವಿಷಯದ ಬಗ್ಗೆ ನ್ಯಾಯಾಂಗ ನಿಂಧನೆಯ ಅರ್ಜಿ ದಾಖಲಿಸುವ ಸುಳಿವು ತಿಳಿದು ಬಂದಿದ್ದರಿಂದ ತಡೆಯಿಡಿಯಲಾಗಿದ್ದ GST ವ್ಯತ್ಯಾಸದ ಮೊತ್ತ ಪಾವತಿಸುವ ಸಂಬಂಧ ಈ ವಿಷಯದಲ್ಲಿ ಪರಿಣಿತರಾದ Registered Advocate and Tax Practitioner ರವರಾದ ವೈ.ಸಿ. ಶಿವಕುಮಾರ್‌, (Retired Additional Commissioner of Commercial Tax), ಇವರು ನೀಡಿದ ಕಾನೂನಿನ ಅಭಿಪ್ರಾಯದಂತೆ, ಅದರಂತೆ ಕ್ರಮವಹಿಸಿ ಸದರಿಯವರಿಗೆ ವಾಪಸ್‌ ನೀಡಲೇ ಬೇಕಾಗಿದ್ದ, ತಡೆಯಿಡಿಯಲಾದ GST ವ್ಯತ್ಯಾಸದ ಮೊತ್ತವಾದ 3.04 ಕೋಟಿಯಲ್ಲಿ ಶೇಕಡ 01% CGST ಮತ್ತು ಶೇಕಡ 01% SGST ಕಡಿತಗೊಳಿಸಿ ಪಾವತಿಸಿದ ಬಗ್ಗೆ ನಿಗಮದ 232ನೇ ನಿರ್ದೇಶಕ ಮಂಡಳಿ ಸಭೆ ಹೆಚ್ಚುವರಿ ವಿಷಯ ಸಂಖ್ಯೆ:09ರಲ್ಲಿ ಸದರಿ ವಿಷಯ ಚರ್ಚೆಸಿ ಸದರಿ ವಿಷಯಕ್ಕೆ ಅನುಮೋದಿನೆ ನೀಡಿತು.

ಈ ಸಂಬಂಧ ಪತ್ರಿಕೆಯಲ್ಲಿ ಆರೋಪಿಸಿರುವಂತೆ ಯಾವುದೇ ನಿಯಮ ಉಲ್ಲಂಘನೆ ಮಾಡಿ ನಿಗಮಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವುದಿಲ್ಲ ಹಾಗೂ ಘನ ನ್ಯಾಯಾಲಯದ ಆದೇಶ ಪಾಲಿಸಿ ಬಹು ವರ್ಷಗಳಿಂದ ನಿಗಮದಲ್ಲಿ ಬಾಕಿ ಉಳಿದಿದ್ದ ಪ್ರಕರಣವನ್ನು ನಿಯಮಬದ್ಧವಾಗಿ ನಿರ್ದೇಶಕರ ಮಂಡಳಿಯ ನಿರ್ಣಯ ಪಡೆದು ಇರ್ತ್ಯಥ ಪಡಿಸಲಾಗಿದೇ ಹೊರೆತು ಯಾವುದೇ ಲೋಪವೆಸಗಿರುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಿಚ್ಚಿಸುತ್ತೇನೆ.
ಈ ಹಿಂದೆ, ಹಿಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವರು 3336 ನೇರಸಾಲ ಯೋಜನೆಯನ್ನು ಸರ್ಕಾರದ ವಿಶೇಷ ಪ್ಯಾಕೇಜ್‌ ಸೃಜಿಸಿ ಅನುಷ್ಟಾನಗೊಳಿಸಲು ಆದೇಶಿಸಲಾಗಿದ್ದು, ಈ ಸಂಬಂಧ ಸರ್ಕಾರದಿಂದ ನಿಗಮಕ್ಕೆ ಯಾವುದೇ ಅನುದಾನ ಬಿಡುಗಡೆಗೊಳಿಸದೇ ಆದೇಶಿಸಿರುತ್ತದೆ. ಇದ್ದರಿಂದ ನಿಗಮದ 226ನೇ ನಿರ್ದೇಶಕ ಮಂಡಳಿಯ ನಿರ್ದೇಶನದಂತೆ ನಿಗಮದಲ್ಲಿ ಲಭ್ಯವಿರುವ ಅನುದಾನದಲ್ಲಿ ಅನುಷ್ಟಾನಗೊಳಿಸಲು ಕ್ರಮವಹಿಸಲಾಗುತ್ತಿದೆ.
ದಿನಾಂಕ:30.08.2021ರಿಂದ ಡಾ.ಬಿ.ಆರ್.‌ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಈ ಹಿಂದೆ ನಿಗಮದಲ್ಲಿ ಬಹುತೇಕ ಯೋಜನೆಗಳು ಕೈಬರಹದ ಅರ್ಜಿಗಳನ್ನು ಆಹ್ವಾನಿಸಿ ಪಡೆದು ಅನುಷ್ಟಾನಗೊಳಿಸಲಾಗುತ್ತಿದ್ದ ಬಹುತೇಕ ಫಲಾನುಭವಿಗಳಿಗೆ ಯೋಜನೆಯಲ್ಲಿನ ಮಾಹಿತಿ ಕೊರತೆ, ಅನುಷ್ಟಾನದಲ್ಲಿನ ವಿಳಂಬ ಹಾಗೂ ಪಾರದರ್ಶಕತೆ ಇಲ್ಲದೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ಸಾಕಷ್ಟು ವ್ಯತಿರಿಕ್ತ ಭಾವನೆ ಮೂಡಿ ನಿಗಮವು ಸ್ಥಾಪನೆಗೊಂಡ ಉದ್ದೇಶ ನಿಗಧಿತ ಪ್ರಮಾಣದಲ್ಲಿ ಈಡೇರಿಸಲಾಗದ್ದನ್ನು ಗಮನಿಸಿದ ನಿಗಮದ ನಿರ್ದೇಶಕ ಮಂಡಳಿಯು ಈ ಕೆಳಕಂಡ ಪಾರದರ್ಶಕ ತಂತ್ರಾಂಶಗಳನ್ನು ಜಾರಿಗೆ ತಂದು ನಿಗಮವನ್ನು ಹೊಸ ದಿಕ್ಕಿನಡೆ ಸಾಗಲು ಸಾಧ್ಯವಾಗಿದೆ.
ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ ನಿಗಮದ ಫಲಾನುಭವಿಗಳಿಗೆ ಯೋಜನೆಗಳನ್ನು ತ್ವರಿತ ಮತ್ತು ಗುಣಾತ್ಮಾಕ ಸೇವೆಯನ್ನು (Quick and Quality service) ನೀಡುವ ನಿಟ್ಟಿನಲ್ಲಿ ಈ ಕೆಳಕಂಡ ತಂತ್ರಾಂಶಗಳನ್ನು ಜಾರಿಗೊಳಿಸಿಕೊಂಡು ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ನಿರ್ವಹಿಸಲು ಶ್ರಮಿಸುತ್ತಿದೆ.
ಕಳೆದ 01 ವರ್ಷ 02 ತಿಂಗಳಿಂದ ಡಾ.ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ಅವಧಿಯಲ್ಲಿ ಮಾನ್ಯ ಅಧ್ಯಕ್ಷರ ಸಹಕಾರದೊಂದಿಗೆ ಆಡಳಿತ ಸುಧಾರಣೆ ಹಾಗೂ ನಿಗಮದಲ್ಲಿ ಪಾರದರ್ಶಕತೆಯನ್ನು ತರುವಲ್ಲಿ ಈ ಕೆಳಕಂಡ ಪ್ರಮುಖ ಸುಧಾರಣಾ ಕ್ರಮಗಳನ್ನು ಆಗಿಂದಾಗಿಯೇ ನಡೆಸಲ್ಪಟ್ಟ ನಿಗಮದ ನಿರ್ದೇಶಕ ಮಂಡಳಿಯ ನಿರ್ಣಯಗಳಂತೆ ಅನುಷ್ಟಾನಗೊಳಿಸಲು ಈ ಕೆಳಕಂಡ ಪ್ರಮುಖ ಬದಲಾವಣೆಗಳನ್ನು ನಿಗಮದಲ್ಲಿ ಜಾರಿಗೆ ತರಲಾಗಿದೆ.
ಜಾಗೃತ ಕೋಶ- ಜಾಗೃತ ಕೋಶ ರಚಿಸಿ ನಿಗಮಕ್ಕೆ ಸ್ವೀಕಾರವಾಗುವ ಸಾರ್ವಜನಿಕ ದೂರುಗಳಿಗೆ ಕೂಡಲೇ ಸ್ಪಂದಿಸಿ ಕೆಲಸ ನಿರ್ವಹಿಸಲಾಗುತ್ತಿದೆ.
ಕಾನೂನು ಕೋಶ- ಕಾನೂನು ಕೋಶ ಸೃಜಿಸಿ ನಿವೃತ್ತ ಜಿಲ್ಲಾನ್ಯಾಯಾಧೀಶರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ನಿಗಮವು ಎದುರಿಸುತ್ತಿದ್ದ ಕಾನೂನಿನ ಅಡೆತಡೆಗಳನ್ನು ಸಮರ್ಕವಾಗಿ ನಿಭಾಯಿಸಲಾಗುತ್ತಿದೆ.
ಸಾಲ ಮರುಪಾವತಿ ಕೋಶ- ಸಾಲ ಮರುಪಾವತಿ ಕೋಶ ಸೃಜಿಸಿ ನಿಗಮವು ನೀಡಲಾಗಿರುವ ಸಾಲವನ್ನು ವಸೂಲಾತಿ ಮಾಡುವ ಸಂಬಂಧ ನಿಗಮವು ಬ್ಯಾಂಕ ಖಾತೆ ಹೊಂದಿರುವ ಬ್ಯಾಂಕ್‌ಗಳ ಸಹಯೋಗದೊಂದಿಗೆ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಕ್ರಮವಹಿಸಲಾಗುತ್ತಿದೆ.
ಇ-ಆಫೀಸ್‌- ನಿಗಮದ ಕೇಂದ್ರ ಕಛೇರಿಯಲ್ಲಿ ಪ್ರಪ್ರಥಮ ಭಾರಿಗೆ ಫೆಬ್ರವರಿ- 2022 ರಿಂದ ಇ-ಆಡಳಿತ ವ್ಯವಸ್ಥೆಯನ್ನು ನಿಗಮದಲ್ಲಿ ಜಾರಿಗೆ ತಂದು ಸರ್ಕಾರದ ತಂತ್ರಾಂಶವನ್ನು ಅಳವಡಿಸಿಕೊಂಡು ಸಂಪೂರ್ಣವಾಗಿ ಕಡತಗಳನ್ನು ಈ ತಂತ್ರಾಂಶದ ಮೂಲಕವೇ ನಿರ್ವಹಣೆ ಹಾಗೂ ವಿಲೇವಾರಿ ಮಾಡಲಾಗುತ್ತಿದ್ದು, ಸದರಿ ತಂತ್ರಾಂಶವನ್ನು ನಿಗಮದ ನಿರ್ದೇಶಕರ ಮಂಡಳಿಯ ನಿರ್ಣಯದಂತೆ ಎಲ್ಲಾ 30 ಜಿಲ್ಲಾ ಕಛೇರಿ ಹಾಗೂ 04 ವಿಭಾಗೀಯ ಕಛೇರಿಗಳಿಗೆ ಅನುಷ್ಟಾನಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಾರದರ್ಶಕ ಆಡಳಿತ ರೂಪುಗೊಳ್ಳುತ್ತದೆ.
ಕೇಂದ್ರೀಕೃತ ಕಣ್ಗಾವಲು ವ್ಯವಸ್ಥೆ- Center Surveillance System ಅಳವಡಿಸಿಕೊಂಡು ಕೇಂದ್ರ ಕಛೇರಿ ಒಳಪಟ್ಟು ಎಲ್ಲಾ 30 ಜಿಲ್ಲಾ ಹಾಗೂ 04 ವಿಭಾಗೀಯ ಕಛೇರಿಗಳನ್ನು ಕಣ್ಗಾವಲಿಗೊಳಪಡಿಸಿ ಸಾರ್ವಜನಿಕರಿಗೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ನೌಕರರು ಕಛೇರಿ ವೇಳೆಯಲ್ಲಿ ಲಭ್ಯವಿದ್ದು ಅವರ ಮನವಿ/ ಸಮಸ್ಯಗಳಿಗೆ ಸ್ಪಂದಿಸುವಂತೆ IT cell ಮೂಲಕ ನಿಗಾವಹಿಸಿ ಕಾರ್ಯನಿರ್ವಹಿಸಲಾಗುತ್ತಿದೆ.
ಮಂಜೂರಾತಿ ಆದೇಶಗಳಿಗೆ ಹಾಲೋಗ್ರಾಂ ವ್ಯವಸ್ಥೆ- ಮಂಜೂರಾತಿ ಆದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಗಟ್ಟಲು ಈ ವ್ಯವಸ್ಥೆ ಜಾರಿಗೊಳಿಸಿ ನನ್ನದೇ ಸಹಿಯನ್ನು ಫೋಜರಿ ಮಾಡಿ ಮಂಜೂರಾತಿ ಆದೇಶ ನೀಡಿರುವ ಸಂಬಂಧ ಎಂ.ಎಸ್‌ ಬಿಲ್ಡಿಂಗ್‌ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿ ಪ್ರಕರಣವು ತನಿಖಾ ಹಂತದಲ್ಲಿರುತ್ತದೆ.
ಜಿಲ್ಲಾ ವ್ಯವಸ್ಥಾಪಕ ಕಛೇರಿಗಳ ಹಾಗೂ ವಿಭಾಗೀಯ ಕಛೇರಿಗಳ ಕಟ್ಟಡ ನಿರ್ಮಾಣ- ನಿಗಮದ ಬಹುತೇಕ ಜಿಲ್ಲಾ ವ್ಯವಸ್ಥಾಪಕರ ಕಛೇರಿಗಳು ಬಾಡಿಗೆ ಕಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಲಭ್ಯವಿದ್ದ ನಿವೇಶನಗಳಲ್ಲಿ (ಶಿವಮೊಗ್ಗ, ಬೀದರ್‌, ಕೋಲಾರ, ಪೀಣ್ಯ ಬೆಂಗಳೂರು, ಮತ್ತು ಮಂಡ್ಯ) ಜಿಲ್ಲಾ ಕಛೇರಿಗಳ ಕಟ್ಟಡ ನಿರ್ಮಾಣ ಸಂಬಂಧ ನಿಗಮದ ನಿರ್ದೇಶಕರ ಮಂಡಳಿ ಸಭೆಯ ನಿರ್ಣಯದಂತೆ ಕಟ್ಟಡ ನಿರ್ಮಾಣ ಪ್ರಕ್ರಿಯಗಳು ಪ್ರಾರಂಭಿಸಲಾಗಿರುತ್ತದೆ.
ಜಿಲ್ಲಾ ಕಛೇರಿಗಳ ನಿವೇಶನ ಗುರುತಿಸಿ ಖರೀದಿಸುವ ಬಗ್ಗೆ- ಹಾಸನ ಮತ್ತು ಚಾಮರಾಜನಗರ ಸ್ವಂತ ಜಿಲ್ಲಾ ವ್ಯವಸ್ಥಾಪಕರ ಕಛೇರಿಯ ಕಟ್ಟಡವಿದ್ದು 21 ಜಿಲ್ಲೆಗಳಲ್ಲಿ ನಿವೇಶನವಿಲ್ಲದೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕೆಲಸ ನಿರ್ವಹಿಸುತ್ತಿವೆ. ಈ ಸಂಬಂಧ ಸಂಬಂಧಿಸಿದ ಜಿಲ್ಲಾ ವ್ಯವಸ್ಥಾಪಕರುಗಳೊಂದಿಗೆ ಚರ್ಚಿಸಿ ಸಂಬಂಧಿಸಿದ ಅಭಿವೃದ್ಧಿ ಪ್ರಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಸಹಕಾರದೊಂದಿದೆ 14 ಜಿಲ್ಲಗಳಲ್ಲಿ ನಿವೇಶನಗಳನ್ನು ಶೇಕಡ 50% ರಿಯಾಯಿತಿ ದರದಲ್ಲಿ ನಿಗಮಕ್ಕೆ ಖರೀದಿಸಿ ಸೃಜಿಸುವ ಕಾರ್ಯ ಪ್ರಗತಿಯಲ್ಲಿದೆ.
Daily Accounts Management Sysytem(DAMS)- ನಿಗಮವು ವ್ಯವಹರಿಸುತ್ತಿರುವ ಬ್ಯಾಂಕ್‌ಗಳ ಸಹಯೋಗದೊಂದಿಗೆ DAMS(Dashboard) ಸೃಜಿಸಲಾಗಿದ್ದು ನಿಗಮದ ಕೇಂದ್ರ ಕಛೇರಿ ಮತ್ತು ಜಿಲ್ಲಾ ಕಛೇರಿಗಳನ್ನು ಒಳಗೊಂಡಂತೆ ಅನುದಾನದ ವೆಚ್ಚ ಮತ್ತು ಬಾಕಿ ಬಗ್ಗೆ ದಿನನಿತ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಇದರಿಂದ ನಿಗಮದಲ್ಲಿ ಆರ್ಥಿಕ ಶಿಸ್ತು ರೂಪುಗೊಂಡು ಹಣಕಾಸಿನ ದುರುಪಯೋಗಳನ್ನು ಕಳೆದ 01 ವರ್ಷದಿಂದ ತಹಬಂದಿಗೆ ತರಲಾಗಿದೆ.
ಆನ್‌ಲೈನ್ ಬಿಲ್ಲಿಂಗ್‌ ವ್ಯವಸ್ಥೆ(Spatika)- Spatika ತಂತ್ರಾಂಶವನ್ನು ಅಳವಡಿಸಿಕೊಂಡು ಪಾರದರ್ಶಕವಾಗಿ ಕೇಂದ್ರ ಕಛೇರಿ ಹಾಗೂ ಜಿಲ್ಲಾ ಕಛೇರಿಗಳಲ್ಲಿ ಆನ್‌ಲೈನ್‌ ಬಿಲ್ಲಿಂಗ್ ವ್ಯವಸ್ಥೆ ಮೂಲಕ ಗುತ್ತಿಗೆದಾರರು ಮತ್ತು ಸರಬರಾಜುದಾರರಿಗೆ ನಿಗಧಿತ ಕಾಲಮಿತಿಯೊಳಗೆ ಆನ್‌ಲೈನ್‌ ಮೂಲಕ ಬಿಲ್‌ ಪಾವತಿಸಲು ಕ್ರಮ ವಹಿಸಲಾಗುತ್ತಿದೆ.
ಕೌಶಲ್ಯ ಅಭಿವೃದ್ಧಿ ತರಬೇತಿ- 04 ವಿಭಾಗ ಹಾಗೂ ಕೇಂದ್ರ ಕಛೇರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 6th sense ಸಂಸ್ಥೆ ಮೂಲಕ ತರಬೇತಿ ಕಾರ್ಯಗಾರ ನಡೆಸಿ ಹೆಚ್ಚಿನ ಕಾರ್ಯಕ್ಷಮತೆಯಿಂದ ಕೆಲಸ ಮಾಡಲು ಅನುವು ಮಾಡಲಾಗಿದೆ.
CUG sim (Closed user group)ನೀಡಿರುವುದು- CUG sim ನೀಡಿ ನಿಗಮದ ಅಧಿಕಾರಿಗಳಲ್ಲಿ ಶಿಸ್ತು ಹಾಗೂ ನಿಗಮದ ಯೋಜನೆಗಳನ್ನು ಪಾರದರ್ಶಕವಾಗಿ ಆಪ್‌ ಮತ್ತು google forms ಗಳನ್ನು ಅಭಿವೃದ್ಧಿಪಡಿಸಿಕೊಂಡು ಜಿಲ್ಲಾ ವ್ಯಾಪ್ತಿಯ ಮಾಹಿತಿಗಳನ್ನು ತಂತ್ರಾಂಶಗಳ ಮೂಲಕ ಸಂಗ್ರಹಿಸಲಾಗುತ್ತಿದ್ದು, ಫಲಾನುಭವಿಗಳಿಗೆ (ಡಿಬಿಟಿ) ತಲುಪಿಸುವ ಮೂಲಕ ನಿಗಮದ ಯೋಜನೆಗಳನ್ನು ಪಾರದರ್ಶಕವಾಗಿ ಅನುಷಾನಗೊಳಿಸಲು ಇದು ಸಹಕಾರಿಯಾಗಿದೆ.
2022-23ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯನ್ನು DBT(Direct Benefit Transfer) ಮೂಲಕ ಜಾರಿ- DBT(Direct Benefit Transfer) ಮೂಲಕ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಟಾನಗೊಳಿಸುವಲ್ಲಿ ನಿಗಮವು ಇತರೆ ಎಲ್ಲಾ ನಿಗಮಗಳಿಗೆ ಮಾದರಿಯಾಗಿ ಗಂಗಾ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಪಾರದರ್ಶಕತೆಯಿಂದ ಬ್ಯಾಂಕ್‌ಗಳ ಸಹಯೋಗದೊಂದಿಗೆ ತಂತ್ರಾಂಶಗಳನ್ನು ಸಿದ್ದಪಡಿಸಿಕೊಂಡು ಅನುಷ್ಟಾನ ರೂಪುಗೊಂಡಿದೆ.
ಭೂ ಒಡೆತನ ಯೋಜನೆಯ ಅನುಷ್ಟಾನ- ಭೂ ಒಡೆತನ ಯೋಜನೆಯನ್ನು ಇನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ದೃಷ್ಟಿಯಿಂದ ಕಳೆದ 10 ವರ್ಷದ ಫಲಾನುಭವಿಗಳನ್ನು ಮರುಪರಿಶೀಲನೆಗೆ ಒಳಪಡಿಸಿ 01 ತಿಂಗಳ ಮಾಸಾಚರಣೆ ನಡೆಸಿ

ರಾಜ್ಯವ್ಯಾಪಿ ಪರಿಶೀಲನೆಗೆ ಒಳಪಡಿಸಿ ಪತ್ತೆಯಾದ 50 ಕ್ಕೂ ಹೆಚ್ಚು ಪ್ರಕರಣಗಳನ್ನು ಪುನಃ ಫಲಾನುಭವಿಗಳಿಗೆ ಬಿಡಿಸಿಕೊಡಲಾಗಿರುತ್ತದೆ(ರಾಯಚೂರು ಮತ್ತು ಮಂಡ್ಯ).
ಡಿ-ದರ್ಜೆ ನೌಕರರು ಹಾಗೂ ವಾಹನ ಚಾಲಕರಿಗೆ ಸಮವಸ್ತ್ರ ವಿತರಣೆ- ನಿಗಮದ ಎಲ್ಲಾ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ-ದರ್ಜೆ ಮತ್ತು ವಾಹನ ಚಾಲಕರಿಗೆ ಸಮವಸ್ತ್ರ ವಿತರಿಸಿ, ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದಿಸಿ ಶಿಸ್ತಿನಿಂದ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ದೌರ್ಜನ್ಯ- ಸುಮಾರು ವರ್ಷದಿಂದ ನೆಲಗುದ್ದಿಗೆ ಬಿದ್ದಿದ್ದ 12 ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸಿ ಸಮಸ್ಯಯನ್ನು ಬಗೆಹರಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಕೋಶ- ಮಾಹಿತಿ ತಂತ್ರಜ್ಞಾನ ಕೋಶವನ್ನು ಸೃಜಿಸಿ ಹೊಸ ತಂತ್ರಾಂಶಗಳ ಮೂಲಕ ನಿಗಮದ ಯೋಜನೆಗಳ ಅನುಷ್ಟಾನ ಮತ್ತು ಕಛೇರಿ ನಿರ್ವಾಹಣೆ ಮಾಡುವ ಪ್ರಕ್ರಿಯೆಯನ್ನು ಸದರಿ ಮಾಹಿತಿ ತಂತ್ರಜ್ಞಾನ ಕೋಶದಲ್ಲಿ ಅಳವಡಿಸಿಕೊಂಡು (CSS, DAMS, CUG, e-office, e-attendance, e-billing) ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ ನಿಗಮದಲ್ಲಿ ಈ ಹಿಂದೆ ನಡೆಯುತ್ತಿದ್ದ ಆರ್ಥಿಕ ದುರುಪಯೋಗಗಳನ್ನು ತಡೆಗಟ್ಟುವಲ್ಲಿ ನಿಗಮವು ಸಂಪೂರ್ಣವಾಗಿ ಕಳೆದ 01 ವರ್ಷದಿಂದ ಸಫಲವಾಗಿ ಕೆಲಸ ನಿರ್ವಹಿಸುತ್ತಿದೆ.
ಅಧಿಕಾರಿ/ನೌಕರರಿಗೆ ಬಯೋಮೆಟ್ರಕ್‌ ಹಾಜರಾತಿ ವ್ಯವಸ್ಥೆ- ನಿಗಮದ ಕೇಂದ್ರ ಕಛೇರಿ, ಎಲ್ಲಾ ಜಿಲ್ಲಾ ಕಛೇರಿಗಳು ಮತ್ತು ವಿಭಾಗೀಯ ಕಛೇರಿಗಳಲ್ಲಿ e-attendance ತಂತ್ರಾಂಶ ಅಳವಡಿಸಿಕೊಂಡಿರುವುದರಿಂದ ಅಧಿಕಾರಿಗಳು, ಸಿಬ್ಬಂದಿ ಮತ್ತು ನೌಕರರುಗಳಲ್ಲಿ ಸಮಯ ಪ್ರಜ್ನೆ ಹೆಚ್ಚಿಸಿ ಪಾರದರ್ಶಕ ಆಡಳಿತಕ್ಕೆ ಹೆಚ್ಚು ಒತ್ತು ನೀಡಲು ನಿಗಾವಹಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಈ ಮೂಲಕ ಅಧಿಕಾರಿಗಳಲ್ಲಿ ಕಾರ್ಯಕ್ಷಮತೆ, ಸಮಯೆ ಪ್ರಜ್ಬೆ ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಿ ಉತ್ತಮ ಆಡಳಿತವನ್ನು ನೀಡಲಾಗುತ್ತಿದೆ.

ಈ ಎಲ್ಲಾ ಪಾರದರ್ಶಕ ತಂತ್ರಾಂಶದ ಅಳವಡಿಕೆಯಿಂದ ನಿಗಮದ ಕಾರ್ಯಕ್ಷಮತೆ, ಕಛೇರಿಗಳಲ್ಲಿನ ಶಿಸ್ತು, ಅಧಿಕಾರಿ ಮತ್ತು ನೌಕರರಲ್ಲಿನ ಹೊಣೆಗಾರಿಗೆ, ಕಛೇರಿಗಳಲ್ಲಿ ಆರ್ಥಿಕ ದುರ್ನಡತೆ, ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದಂತಹ ಪ್ರಕರಣಗಳು ವರದಿಯಾಗದಂತೆ ನಿಗಾವಹಿಸಿ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ನೌಕರರು ಶಿಸ್ತಿನಿಂದ ಸಾರ್ವಜನಿಕರಿಗೆ ಸ್ಪಂದಿಸಿ ಸರ್ಕಾರದ ಮತ್ತು ನಿಗಮದ ಯೋಜನೆಗಳನ್ನು ಹೆಚ್ಚಿನ ಪಾರದರ್ಶಕತೆಯಿಂದ ಅನುಷ್ಟಾನಗೊಳಿಸಲು ಸಾಧ್ಯವಾಗಿದೆ.
ಆದರೆ, ಈ ಎಲ್ಲಾ ಬದಲಾದ ಸನ್ನಿವೇಶ ಮತ್ತು ಪಾರದರ್ಶಕ ಆಡಳಿತಕ್ಕೆ ಹೊಂದಿಕೊಳ್ಳಲಾಗದ ಕೆಲವೇ ಕಲವು ನಿಗಮದ ದುಷ್ಟ ಅಧಿಕಾರಿಗಳು ಕೆಲವು ಸಂಘ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಕೈಜೋಡಿಸಿ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ದಿನಾಂಕ:29.10.2022ರಲ್ಲಿ ನನ್ನನ್ನು ಡಾ.ಬಿ.ಆರ್.ಅಂಬೇಡ್ಕರ್‌‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಿಂದ ನನ್ನನ್ನು ವರ್ಗಾಯಿಸಿ ಸದರಿ ಹುದ್ದೆಗೆ ಶ್ರೀ ಕೆ.ಎನ್.‌ಸುರೇಶ್‌ ನಾಯಕ್‌, ಅಪರ ನಿರ್ದೇಶಕರು (ಮಾರುಕಟ್ಟೆ), ಪ್ರಭಾರ ನಿರ್ದೇಶಕರು, ಕೇಂದ್ರೀಯ ತರಬೇತಿ ಸಂಸ್ಥೆ, ಕರ್ನಾಕಟ ಸಹಕಾರ ಹಾಲು ಮಹಾಮಂಡಳಿ ನಿಯಮಿತ, ಬೆಂಗಳೂರು ಇವರನ್ನು ನೇಮಿಸಲ್ಪಟ್ಟಿತು.
ಆದರೆ, ಡಾ.ಬಿ.ಆರ್.‌ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಐ.ಎ.ಎಸ್‌, ಐ.ಪಿ.ಎಸ್‌, ಐ.ಎಫ್.ಎಸ್‌ ಹಾಗೂ ಕೆ.ಎ.ಎಸ್(ಆ.ಶ್ರೇ) ಅಧಿಕಾರಿಗಳಿಗೆ ಮಾತ್ರ ಅರ್ಹತೆಯಿರುತ್ತದೆ.
ಸದರಿ ವರ್ಗಾವಣೆಯಲ್ಲಿ ನನೆಗೆ ಯಾವುದೇ ಸ್ಥಳ ನಿಯುಕ್ತಿಗೊಳಿಸದೇ, ನಿಯಮಕ್ಕೆ ವಿರುದ್ಧವಾಗಿ ನಿಗಮದ ವ್ಯವಸ್ಥಾಪಕ ಹುದ್ದೆಗೆ ಅರ್ಹರಲ್ಲದ ವ್ಯಕ್ತಿಯನ್ನು ನಿಯೋಜಿಸಿ ಆದೇಶಿಸಿದ್ದ ವಿರುದ್ಧ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಮೊರೆಹೋಗಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ರಿಟ್‌ ಮನವಿ ಆದೇಶದಂತೆ ಗಡವು ನೀಡಿ ಆದೇಶಿಸಿದಂತೆ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ನನ್ನ ವರ್ಗಾವಣೆಯನ್ನು ರದ್ದುಪಡಿಸಿ ನನ್ನನ್ನು ಸದರಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಮುಂದುವರೆಸಿ ಆದೇಶಿಸಿರುತ್ತೆದೆ. ಆ ಪ್ರಕಾರ ಸದರಿ ಹುದ್ದೆಗೆ ದಿನಾಂಕ:13.12.2022ರಂದು ವರದಿ ಮಾಡಿಕೊಂಡು ಮುಂದುವರೆದು ಕೆಲಸ ನಿರ್ವಹಿಸುತ್ತಿದ್ದೇನೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕನಾಗಿ ಸುಮಾರು 01 ವರ್ಷ 02 ತಿಂಗಳಿಂದ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿರುವ ನಾನು ಸಾರ್ವಜನಿಕರಿಗೆ ಸ್ಪಂದಿಸಿ ನಿಗಮಕ್ಕೆ ಯಾವುದೇ ಆರ್ಥಿಕ ನಷ್ಟವಾಗದಂತೆ ಹೆಚ್ಚು ಒತ್ತು ನೀಡಿ ಸರ್ಕಾರ ಮತ್ತು ಸರ್ಕಾರರೇತರ ಸಂಸ್ಥೆಗಳಲ್ಲಿ ಪ್ರಸ್ತುತ ಲಭ್ಯವಿರುವ ತಂತ್ರಾಂಶಗಳನ್ನು ಅಳವಡಿಸಿಕೊಂಡು ನಿಗಮದ ಅಧಿಕಾರಿ ಮತ್ತು ನೌಕರರ ಕೆಲಸ ಕಾರ್ಯಗಳನ್ನು ನಿಯಂತ್ರಣಕ್ಕೆ ತಂದು ಕಾರ್ಯ ನಿರ್ವಹಿಸುತ್ತಿದ್ದು, ಪುನಃ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿ ಮುಂದುವರೆದಿರುವುದನ್ನು ಸಹಿಸಲಾಗದ ಕೆಲವೇ ಕೆಲ ಅಧಿಕಾರಿಗಳು ಕೆಲ ಸಂಘಟನೆ ಮುಖಂಡರುಗಳ ಜೊತೆ ಕೈಜೋಡಿಸಿ ನನ್ನ ವಿರುದ್ಧ ಸಂಚು ರೂಪಿಸಿದ್ದು, ನಿಗಮದ ನಿರ್ದೇಶಕ ಮಂಡಳಿಯ ವ್ಯಾಪ್ತಿಯೊಳಗೆ ಸರ್ಕಾರ, ಸಾರ್ವಜನಿಕ ಹಾಗೂ ನಿಗಮದ ಹಿತದೃಷ್ಟಿಯಿಂದ, ನಿಯಬದ್ಧವಾಗಿ ನಿರ್ಧರಿಸಿ ನಿರ್ಣಯಸಿರುವ ಕೆಲವು ನಿಗಮದ ನಿರ್ಧಾರಗಳನ್ನು ಅನವಶ್ಯಕವಾಗಿ ನಿಯಮ ಭಾಹೀರವೆಂದು ಬಿಂಬಿಸಿ ಸುಳ್ಳು ಆರೋಪ ಹೊರಿಸಿ ಸರ್ಕಾರಕ್ಕೆ, ನಿಗಮಕ್ಕೆ ಮತ್ತು ನನ್ನ ವೈಯಕ್ತಿಕವಾಗಿ ನನ್ನ ವಿರುದ್ಧ ಸಾರ್ವಜನಿಕರಲ್ಲಿ ಕೆಟ್ಟ ಹೆಸರು ತರುವ ಉದ್ದೇಶದಿಂದ ಸಂಚು ರೂಪಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಸದರಿ ದೂರಿಗೆ ಸಂಬಂಧಿಸಿದಂತೆ ಈಗಾಗಲೇ ಮಾನ್ಯ ಸರ್ಕಾರದ ಕಾರ್ಯದರ್ಶಿಗಳು 15 ದಿನಗಳಲ್ಲಿ ವಿವರಣೆ ಸಲ್ಲಿಸಲು ದಿನಾಂಕ:05.11.2022ರ ಪತ್ರದಲ್ಲಿ ಸೂಚಿಸಿದಂತೆ ದಿನಾಂಕ:07.11.2022ರಂದು ಖುದ್ದು ಪಡೆದು, ನಿಗಧಿತ ಅವಧಿಯೊಳಗೆ ದಿನಾಂಕ:21.11.2022ರಂದು ದೃಡೀಕೃತ ದಾಖಲೆಗಳೊಂದಿಗೆ ಸಂಪೂರ್ಣ ವಿವರಣೆಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಆದರೆ, ಕಾಲಕಾಲಕ್ಕೆ ನಿಗಮದ ನಿರ್ದೇಶಕ ಮಂಡಳಿಯ ಸಭೆ ಕರೆದು ಮಂಡಳಿಯಲ್ಲಿ ಮಂಡಿಸಿ, ಮಂಡಳಿಯ ಅಧಿಕಾರ ವ್ಯಾಪ್ತಿಗೊಳಪಟ್ಟು ತೆಗೆದುಕೊಂಡ ನಿಗಮದ ನಿರ್ಣಯಗಳನ್ನು ತಪ್ಪಾಗಿ ಬಿಂಬಿಸಿ ಪ್ತಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರ ಮತ್ತು ನಿಗಮವು ಮುಜುಗರಕ್ಕೆ ಒಳಗಾಗುವಂತೆ ಮಾಡಿರುತ್ತಾರೆ.
ಆದ್ದರಿಂದ, ದಿನಾಂಕ:22.12.2022ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಆರೋಪಿಸಿ ಪ್ರಕಟಿಸಲಾಗಿರುವ “ಅಂಬೇಡ್ಕರ್‌ ನಿಗಮ: ₹ 25 ಕೋಟಿ ಅಕ್ರಮ” ಎಂಬ ಶೀರ್ಷಿಕೆಯಡಿ ನನ್ನ ಭಾವಚಿತ್ರದೊಂದಿಗೆ ಪ್ರಕಟವಾಗಿರುವ ಅಂಶಗಳು ಸತ್ಯಕ್ಕೆ ದೂರವಾದವು ಎಂದು ಡಾ.ಬಿ.ಆರ್.‌ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಸುರೇಶ್ ಕುಮಾರ್, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾಗೋಷ್ಟಿ ಮೂಲಕ ಸ್ಪಷ್ಟೀಕರಣ ನೀಡಿದರು.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.