ವಾಸವಿ ಕಾಂಡಿಮೆಂಟ್ಸ್ ಸಜ್ಜನ್ ರಾವ್ ಸರ್ಕಲ್, ಬೆಂಗಳೂರು

ಬಸವನಗುಡಿ ನ್ಯಾಷನಲ್ ಮೈದಾನದಲ್ಲಿ ಆರಂಭವಾಗುತ್ತಿದೆ ಅವರೇಕಾಯಿ ಮೇಳ
ಬೆಂಗಳೂರಿನ ಮಂದಿಗೆ ಶ್ರೀ ವಾಸವಿ ಕಾಂಡಿಮೆಂಟ್ಸ್‌ನ ಪರಿಚಯ ಇದ್ದೇ ಇರುತ್ತದೆ. ರುಚಿಕಟ್ಟು, ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೆ ಹೆಸರು ವಾಸಿಯಾದ ವಾಸವಿ ಕಾಂಡಿಮೆಂಟ್ಸ್ ಕಳೆದ ಇಪ್ಪತ್ತು ವರ್ಷಗಳಿಂದ ವಿನೂತನವಾದ ಸಾಹಸ-ಪ್ರಯೋಗವನ್ನು ಮಾಡುತ್ತಾ ಅದರಲ್ಲಿ ಅಮೋಘ ಯಶಸ್ಸು ಕಂಡಿದೆ.

ಅದೇನೆಂದರೆ ಕಳೆದ ಇಪ್ಪತ್ತೊಂದು ವರ್ಷಗಳಿಂದ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್‌ನಲ್ಲಿ ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಅವರೇಕಾಯಿ ಮೇಳವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಅವರೇಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರಾ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಕಟ್ಟಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಬಹಗಳಷ್ಟು ಜನ ಈ ವಾರ್ಷಿಕ ಅವರೇಕಾಯಿ ಮೇಳಕ್ಕಾಗಿ ಕಾತರಿಸುವಂತಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 2023ರ ಜನವರಿ 5ರಿಂದ 10ರತನಕ ಈ ಅದ್ಧೂರಿ ಮೇಳ ನಡೆಯಲಿದ್ದು, ಎಂದಿನಂತೆ ಬೆಳಿಗ್ಗೆ 10ರಿಂದ 10ರ ತನಕ ಅಂಗಡಿ ತೆರೆದಿರುತ್ತದೆ. ಸಂಜೆ 3ರಿಂದ ರಾತ್ರಿ 10ರ ತನಕ ಮಾತ್ರ ವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿಗಳು ದೊರೆಯಲಿವೆ.

ಮಾಗಡಿ ತಾಲೂಕಿನಲ್ಲಿ ರೈತರು ಬೆಳೆದ ಅವರೇಕಾಯಿಯನ್ನು ‘ವಾಸವಿ ಕಾಂಡಿಮೆಂಟ್ಸ್’ ನೇರವಾಗಿ ಖರೀದಿಸುತ್ತದೆ. ಇಲ್ಲಿ ಯಾವುದೇ ಮಧ್ಯವರ್ತಿಗಳ ಪುವೇಶವಿಲ್ಲದೇ, ನೇರವಾಗಿ ಬೆಳಗಾರರ ಮನೆಬಾಗಿಲಿಗೇ ಹೋಗಿ ಅವರೇಕಾಯಿ ಖರೀದಿಸುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಲಾಭಕ್ಕಿಂತ ಹೆಚ್ಚು ಮೊತ್ತ ಕೈಸೇರುತ್ತದೆ. ಇದರಿಂದ ಕಷ್ಟಪಟ್ಟು ಅವರೇಕಾಯಿ ಬೆಳೆದ ರೈತಬಾಂಧವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಹೊಂದಿ ಸಂತೃಪ್ತರಾಗುತ್ತಿದ್ದಾರ. ವರ್ಷದಿಂದ ವರ್ಷಕ್ಕೆ ಅವರೇಕಾಯಿ ಖರೀದಿಯೂ ಹೆಚ್ಚಳವಾಗುತ್ತಲೇ
ಇದೆ. ಕಷ್ಟಪಟ್ಟು ಅವರೇಕಾಯಿ ಬೆಳೆದ ರೈತರನ್ನು ಸನ್ಮಾನಿಸುವ ಕಾರ್ಯಕ್ರಮವೂ ಸಹ ನರವೇರಲಿದೆ.
ಈ ಬಾರಿ ಕೂಡಾ ಖರೀದಿದಾರರು ಜೊಮ್ಯಾಟೋ ಮತ್ತು ಡಂಗ್ಸ್ ಮುಂತಾದ ಆನ್ ಲೈನ್ ಮೂಲಕವೂ ಪದಾರ್ಥಗಳನ್ನು ಖರೀದಿಸಬಹುದಾಗಿದೆ. ಮಳಿಗೆಯ ಸದಸ್ಯರು ಹ್ಯಾಂಡ್ ಗೌಸ್, ಮಾಸ್ಕ್ ಸೇರಿದಂತೆ ಸಂಪೂರ್ಣ ಮುಂಜಾಗ್ರತೆ ವಹಿಸಿದ್ದಾರೆ. ಜೊತೆಗೆ ಅಂಗಡಿಗೆ ಬರುವವರಿಗಾಗಿ ಸ್ಯಾನಿಟೈಸೇಷನ್ ಬೂತ್ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ. ಎಂದು ಶ್ರೀಮತಿ ಗೀತಾ ಶಿವಕುಮಾರ್, ಮಾಲೀಕರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News – 9341997936