“ಶುಕ್ಲಯಜುರ್ವೇದ ಕಾಣ್ವ ಸಮ್ಮೇಳನ” ಗುರು ಪರಂಪರೆಯ ವೇದಾಧ್ಯಯನದ ಮೂಲಕ ಸನಾತನಧರ್ಮವನ್ನು ಉಳಿಸಲು ವ್ಯವಸ್ಥೆರೂಪಿಸುವುದು

ಶ್ರೀ 1008 ವಿಧ್ಯಾ ಕಣ್ವ ವಿರಾಜತೀರ್ಥ ಶ್ರೀಪಾದಂಗಳವರು ಪೀಠಾಧಿಪತಿಗಳ ಅಧ್ಯಕ್ಷತೆಯಲ್ಲಿ ಇಂದು ಪ್ರಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಥಿ ವತಿಯಿಂದ ನಡೆಸಲಾಯಿತು.

ಪತ್ರಿಕಾ ಗೋಷ್ಠಿಯ ವಿವರ:

1) ಶ್ರೀ ಶುಕ್ಲಯಜುಃಶಾಖಾಟ್ರಸ್ಟ್ (ರಿ.) ಶ್ರೀ ಯಾಜ್ಞ ವಲ್ಕ್ಯಾಶ್ರಮ ಚಾಮರಾಜಪೇಟೆ, ಬೆಂಗಳೂರಿನಲ್ಲಿ 1910ರಲ್ಲಿ ಅನೇಕ ಗುರುಹಿರಿಯರ ಪ್ರೇರಣೆಯಿಂದ ಪ್ರಾರಂಭವಾಗಿ ಶಾಖೆಯ ಸಂಘಟನೆ ಹಾಗೂ ಗ್ರಾಮೀಣ ಪ್ರದೇಶದ ಮುಖ್ಯವಾಗಿ ಶಾಖೆಯ ಬಾಂಧವರ ವಿದ್ಯಾರ್ಜನೆಗೆ ಸಹಾಯ ಮಾಡಲು ಶಾಖಾ ಜೊತೆಗೆ ಬಹುಮುಖ್ಯವಾಗಿ ಶುಕ್ಲಯಜುರ್ವೇದ ವೇದ ಪಾಠಶಾಲೆಯನ್ನು ಪ್ರಾರಂಬಿಸುವುದರೊಂದಿಗೆ ಸನಾತನ ನಮ್ಮ ಶಾಖೆಯ ಮಾತೃ ಸಂಸ್ಥೆ ಎಂದೇ ಹಿಂದೂಧರ್ಮದ ರಕ್ಷಣೆ ಮಾಡಿ ನಮ್ಮ ಶಾಖೆಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಸ್ಥೆಯು ಇತ್ತೀಚೆಗೆ 2012ರಲ್ಲಿ ಘನತೆವೆತ್ತ ರಾಜ್ಯಪಾಲರಾದ ಶ್ರೀಹಂಸರಾಜ ಭಾರಧ್ವಾಜರನ್ನು ಆಹ್ವಾನಿಸಿ ಶತಮಾನೋತ್ಸವವನ್ನು ಆಚರಿಸಲಾಗಿದೆ.

2) ಶಾಲಿವಾಹನ ಶಕೆ, 1718 ನಳನಾಮ ಸಂವತ್ಸರದ ಮಾಘ ಶುದ್ಧ ಪಂಚಮಿಯಂದು 02-02-1797 ರಂದು ವಿಧ್ಯುಕ್ತವಾಗಿ ಕ್ರಮಪೂರ್ವಕ ಸನ್ಯಾಸ ದೀಕ್ಷೆಯನ್ನು ದೈವಾಂಶಸಂಭೂತರಾದ ಸುರಪುರದ ಶ್ರೀ ವೆಂಕಟೇಶಾಚಾರ್ಯರಿಗೆ ಮಾಧವತೀರ್ಥರೆಂದು ನಾಮಕರಣಮಾಡಿ ಶುಕ್ಲಯಜುರ್ವೇದಿಯ ಕಾಣ್ವಶಾಖಿಯರಿಗಾಗಿ ಶ್ರೀ ಕಣ್ವಮಠದ ಸ್ಥಾಪನೆಯನ್ನು ವೀರಘಟ್ಟ (ಹುಣಸಿಹೊಳೆ) ದಲ್ಲಿ ಸ್ಥಾಪಿಸಿದರು. ಮೊದಲ ಪೀಠಾಧೀಶ್ವರರಾದ ಶ್ರೀ ಮಾಧವತೀರ್ಥರ 12 ವರ್ಷಗಳ ಕಠಿಣ ತಪಸ್ಸಿನಿಂದ ಶ್ರೀಮಠವು ಅಭಿವೃದ್ಧಿಗೊಂಡು ಈವರೆಗೂ 14 ಶ್ರೀ ಪಾದಂಗಳವರಿ೦ದ ಮಠವು ಅನುಚಾನಿತವಾಗಿ ಅಭಿವೃದ್ಧಿಹೊಂದುತ್ತ ಬಂದಿರುತ್ತದೆ. ಪ್ರಸ್ತುತ ಶ್ರೀ ಶ್ರೀ 1008 ವಿಧ್ಯಾ ಕಣ್ವ ವಿರಾಜತೀರ್ಥ ಶ್ರೀಪಾದಂಗಳವರು ಪೀಠಾಧಿಪತಿಗಳು ಆಗಿರುತ್ತಾರೆ.

ಶುಕ್ಲಯಜುರ್ವೇದ ಕಾಣ್ವ ಸಮ್ಮೇಳನದ ಮುಖ್ಯ ಉದ್ದೇಶಗಳು,

1) ಕರ್ನಾಟಕರಾಜ್ಯ ಹಾಗೂ ರಾಷ್ಟ್ರಾದ್ಯಂತ ಇರುವ ಶುಕ್ಲಯಜುರ್ವೇದದ ಶಾಖಾ ಬಾಂಧವರನ್ನು ಸಂಘಟನೆಗೊಳಿಸಿ ಪರಸ್ಪರ ಸಂಪರ್ಕ ಬೆಳೆಸುವುದು.

2) ಮುಖ್ಯವಾಗಿ ಶ್ರೀ ಯಾಜ್ಞವಲ್ಕರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಎಲ್ಲ ಜನಸಾಮಾನ್ಯರಿಗೆ ತಲುಪಿಸುವುದು.

3) ಗುರು ಪರಂಪರೆಯ ವೇದಾಧ್ಯಯನದ ಮೂಲಕ ಸನಾತನಧರ್ಮವನ್ನು ಉಳಿಸಲು ವ್ಯವಸ್ಥೆರೂಪಿಸುವುದು.

ಪ್ರದೇಶದ ಆರ್ಥಿಕವಾಗಿ ಹಿ೦ದುಳಿದ 4) ಗ್ರಾಮೀಣ ಪ್ರದೇಶದ ಸರ್ಕಾರದಿ೦ದ ಸಿಗುವ ಶಾಖಾ ಬಾಂಧವರಿಗೆ ಸವಲತ್ತುಗಳನ್ನು ಪಡೆಯಲು ಸರ್ಕಾರದೊಂದಿಗೆ ಸ೦ಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುವುದು.

5) ನಗರ ಹಾಗೂ ಗ್ರಾಮೀಣ ಪ್ರದೇಶದ ನಿರುದ್ಯೋಗಯುವಕ-ಯುವತಿಯರಿಗೆ ಸ್ವಉದ್ಯೋಗ ಕಲ್ಪಿಸಿಕೊಳ್ಳಲು ಹಾಗೂ ವಿದ್ಯಾರ್ಜನೆಗೆ ಸರ್ಕಾರ ಹಾಗೂ ನಮ್ಮ ಸ೦ಘದಿಂದ ನೆರವು ಕಲ್ಪಿಸುವುದು.

6) ಗ್ರಾಮೀಣ ಭಾಗದಿಂದ ವಿದ್ಯಾರ್ಜನೆಗಾಗಿ ಬೆಂಗಳೂರು ಮಹಾನಗರಕ್ಕೆ ಬರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಸತಿ ನಿಲಯ ವ್ಯವಸ್ಥೆ ಕಲ್ಪಿಸುವುದು.

7) ಪ್ರತಿಜಿಲ್ಲಾ ಕೇಂದ್ರಗಳಲ್ಲಿ ಸ೦ಘಟನೆ ಸಲುವಾಗಿ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು .ವಿ. ವೇಣುಗೋಪಾಲ ಕೃಷ್ಣ ರವರು -ಅಧ್ಯಕ್ಷರು & ಎಲ್. ಪುರುಷೋತ್ತಮ್ ರವರು – ಕಾರ್ಯದರ್ಶಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಟ್ರಸ್ಟ್ ನ ವತಿಯಿಂದ ಲಕ್ಷ್ಮೀಕಾಂತ್ ರವರು,ಕಿಷಣ್ ರಾವ್ ಕುಲ್ಕರ್ಣಿ ರವರು,ಚಂದ್ರಶೇಖರ್ ರವರು,ಜಗಳೂರು ಲಕ್ಷ್ಮನ್ ರಾವ್ ರವರು ಹಾಗೂ ಬದರಿನಾಥ್ ಶರ್ಮ ಉಪಸ್ಥಿತಿಯಿದ್ದರು.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.