
ಈ ನಮ್ಮ ಹೇಳಿಕೆಗೆ ಲಗತ್ತಿಸಿರುವ ಕರಪತ್ರದಲ್ಲಿನ ವಿವರಗಳು ಸ್ವಯಂವೇದ್ಯವಾಗಿವೆ. ಈ ದೇಶದಲ್ಲಿನ ಅಮಾನುಷ ಜಾತಿಪದ್ಧತಿಯಿಂದಾಗಿ ಭಾರತದ ಮೂಲನಿವಾಸಿ ಜನಾಂಗಗಳು ಹೇಗೆ ಅಸ್ಪೃಶ್ಯರಾದರು, ಶೂದ್ರರಾದರು ಎಂಬ (who were the untourchables and shudras?) ಅಂಬೇಡ್ಕರ್ ಅವರ ಸಂಶೋಧನಾ ಬರಹಗಳು ಇತಿಹಾಸದಲ್ಲಿನ ಅನೇಕ ಸತ್ಯಾಸತ್ಯ ಸಂಗತಿಯನ್ನು ಬಯಲುಮಾಡಿವೆ. ಇತಿಹಾಸದಲ್ಲಿ ಮರೆಮಾಚಿದ್ದ ದಲಿತ ಜನಾಂಗವೊಂದರ ವೀರೋಚಿತ ಯುದ್ಧದ ವಿಜಯವೇ `ಭೀಮಕೋರೆಗಾಂವ್ ವಿಜಯೋತ್ಸವ’. ಇದು ಮಾಮೂಲಿ ಕೇವಲ ಎರಡು ಸೇನೆಗಳ ನಡುವೆ ಯುದ್ಧವಾಗಿರದೆ ಶೋಷಕ ಆಡಳಿತದ ವಿರುದ್ಧ ಗುಲಾಮಗಿರಿಯಲ್ಲಿನ ಶೋಷಿತರು ತಮ್ಮ ಸೈನಿಕರ ದಂಗೆಯ ಮೂಲಕ ವಿಮೋಚನೆ ಪಡೆದಂತಹ ಮಹಾದಿನ. ಅದು ನಡೆದದ್ದು ಮಹಾರಾಷ್ಟ್ರಾದ ಪೂನಾ ನಗದ ಹತ್ತಿರದಲ್ಲಿನ ಭೀಮಾ ನದಿಯ ದಡದಲ್ಲಿರುವ ಕೋರೆಗಾಂವ್ ಗ್ರಾಮದ ಬಯಲಲ್ಲಿ, 1818ರ ಡಿಸೆಂಬರ್ 31ರ ಇಡೀ ರಾತ್ರಿ ಪೇಳ್ವೆ ಜನವರಿ ಮತ್ತು ಮಹಾರ್ ಸೈನಿಕರ ಮಧ್ಯೆ ಯುದ್ಧವು ನಡೆದು 1ರ ಬೆಳ್ಳಿಗ್ಗೆ ಬೆಳಕು ಹರಿಯುವುದರೊಳಗೆ ಪೇಳ್ವೆಗಳ ಸೈನ್ಯ ಸೋತು 2ನೇ ಬಾಜೀರಯ ಯುದ್ಧಜಾಗದಿಂದ ಓಡಿಹೋದ ಅಂದಿನ ಬ್ರಿಟಿಷರು ಈ ಯುದ್ಧದಲ್ಲಿ ಹುತಾತ್ಮರಾದ ವೀರ ಮಹಾರ್ ಸೈನಿಕರ ಸ್ಪರಣೆಗಾಗಿ ನಿರ್ಮಿಸದ ಸ್ತೂಪವೇ ಕೋರೆಗಾವ್ ವಿಜಯಸ್ಥಂಭ . ಇದನ್ನು ಅಂಬೇಡ್ಕರ್‌ರು ಬ್ರಿಟಿಷ್ ಲೈಬ್ರರಿಯ ಗ್ರಂಥದಲ್ಲಿ ಸಂಶೋಧಿಸಿ ಪ್ರತಿ ಜನವರಿ ಒಂದರಂದು ವಿಜಯಸ್ಥಂಭಕ್ಕೆ ಹೋಗಿ ನಮನ ಸಲ್ಲಿಸುತ್ತಿದ್ದರು. ಈ ಐತಿಹಾಸಿಕ ಸತ್ಯವನ್ನು ಬಾಬಾಸಾಬೇಬರು ತಮ್ಮ ಬರಹಗಳಲ್ಲಿ ಬರೆದಿದ್ದರಿಂದ ಇಂದು ಕೋಟ್ಯಾಂತರ ಅಂಬೇಡ್ಕರ್ ಅಭಿಮಾನಿಗಳು ಜನವರಿ ಒಂದರಂದು ಕೋರೆಗಾಂವ್‌ಗೆ ತೆರಳಿ ಭೀವನಮನಗಳನ್ನು ಸಲ್ಲಿಸುತ್ತಾರೆ.

ಈ ಹಿಲ್ಲೆಯಲ್ಲಿ ಈ ದಿನವನ್ನು ಸ್ವಾಭಿಮಾನಿ ಸಾಂಸ್ಕೃತಿಕ ಸಮಾವೇಶದ ಹೆಸರಿನಲ್ಲಿ 01.01.2022ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿದೆ. ದಲಿತ ಸಂಘಟನೆಗಳ ಒಂಟಿ ಆಶ್ರಯದಲ್ಲಿ ನಡೆಯುವ ಈ ಸಮಾವೇಶವನ್ನು ಅಗ್ನಿ ಶ್ರೀಧರ್ ಉದ್ಘಾಟಿಸುವರು. ಒಕ್ಕೂಟದ ಅಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಅವರು ಮುಖ್ಯ ಭಾಷಣ ಮಾಡುವರು. ಐ.ಪಿ.ಎಸ್.ಅಧಿಕಾರಿ ರವಿ ಚನ್ನಣ್ಣನವರ ಅವರು ಬರಹಗಾರ ವಿಠಲ್ ವಗ್ಗನ್ ರವರ ಸಂಶೋಧನಾ ಗ್ರಂಥ ‘ಭೀಮ ಕೋರೆಗಾಂವ್ ಮಹಾಯುದ್ಧ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡುವರು. ದಸಂಸದ ಅಶ್ವಥ್ ಅಂತೇಜ್ಯ ಅಧ್ಯಕ್ಷತೆ ವಹಿಸುವರು. ಚಿಂತಕ ಸುರೇಶ್ ಗೌತಮ್ ಆಶಯ ಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9.30ಕ್ಕೆ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಗೆ ಮಾಲರ್ಪಣೆ ಮಾಡಿ ಸಾಂಸ್ಕೃತಿಕ ತಂಡಗಳೊಂದಿಗೆ ಭೀಮಕೋರೇಗಾಂವ್ ವಿಜಯಸ್ಥಂಭದ ರಥದ ಮೆರವಣಿಗೆಯನ್ನು ಟೌನ್‌ಹಾಲ್‌ವೆರಗೂ ನಡೆಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿನ 5 ಸಾಧಕರಿಗೆ `ಭೀಮಸೇನಾನಿ’ ಪ್ರಶಸ್ತಿಕೊಡಮಾಡಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಅಶ್ವಥ್ ಅಂತೇಜ- ದಸಂಸ ಸಂಯೋಜಕರು , .ಅರ್.ಚಂದ್ರಶೇಖರ್ – ನಗರ ಜಿಲ್ಲಾ ಅಧ್ಯಕ್ಷರು, ಹಾಗೂ ನಾರಾಯಣ ಧಾಸ್ – ರಾಜ್ಯ ದಸಂಸ ಸಂಯೋಜಕರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.
City Today News – 9341997936