ಜನವರಿ 4 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ

ಡಾ.ಹುಲಿಕಲ್ ನಟರಾಜ್ ಅವರ ಕುರಿತಾದ “ಹುಲಿಹೆಜ್ಜೆ” ಅಭಿನಂದನ ಗ್ರಂಥ ಬಿಡುಗಡೆ
ಬೆಂಗಳೂರು : ಡಿ-3)/ವೈಚಾರಿಕ ಹಾಗೂ ವೈಜ್ಞಾನಿಕ ಚಿಂತಕ ಡಾ.ಹುಲಿಕಲ್ ನಟರಾಜ್ ಅವರಿಗೆ 10 ವರ್ಷದ ತುಂಬಿದ ಈ ಸಂದರ್ಭದಲ್ಲಿ ಅವರ ಕುರಿತಾದ “ಹುಲಿಹೆಜ್ಜೆ” ಅಭಿನಂದನ ಗ್ರಂಥವನ್ನು ಜನವರಿ 4ರಂದು ಬುಧವಾರ ಬೆಳಗ್ಗೆ 10ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಇದರ ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಚಿಕ್ಕಹನುಮಂತೇಗೌಡ ಹೇಳಿದರು.

ಅವರು ಇಂದು ಇಲ್ಲಿನ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹುಲಿಕಲ್ ನಟರಾಜ್ ಕುರಿತಾಗಿ ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಚಿಂತಕರು ಬರೆದ ಲೇಖನಗಳನ್ನು ಸಂಗ್ರಹಿಸಿ “ಹುಲಿಹೆಜ್ಜೆ” ಎನ್ನುವ ಅಭಿನಂದನ ಗ್ರಂಥವನ್ನು ಹೊರತರಲಾಗಿದೆ. ಇಂದು ಬೆಳಗ್ಗೆ 10ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲ ದೇಶಿಕೇಂದ್ರ ಸ್ವಾಮಿಜಿಯವರು ವಹಿಸಲಿದ್ದು, ಖ್ಯಾತ ವಿಜ್ಞಾನಿ ಹಾಗೂ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ.ಎ.ಎಸ್.ಕಿರಣ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗಡೆಯವರು “ಹುಲಿಹೆಜ್ಜೆ’ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸಲಿದ್ದಾರೆ. ಹೆಸರಾಂತ ಸಾಹಿತಿ ಡಾ.ಕುಂ.ವೀರಭದ್ರಪ್ಪನವರು ಗ್ರಂಥಕುರಿತು ಮಾತನಾಡಲಿದ್ದಾರೆ. ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಹುಲಿಕಲ್ (1) ಕಿರುಚಿತ್ರ ಬಿಡುಗಡೆ ಮಾಡುವರು, ಗ್ರಂಥದ ಸಂಪಾದಕ ವಿ.ಟಿ.ಸ್ವಾಮಿ ದಿಕ್ಕೂಚಿ ಮಾತುಗಳನ್ನಾಡುವರು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖ ಹುಲಿಕಲ್ ನಟರಾಜ್ ಅವರ ಕುರಿತು. ಅಭಿನಂದಿಸಲಿದ್ದಾರೆ, ವೇದಿಕೆಯಲ್ಲಿ ಡಾ.ಹುಲಿಕಲ್ ನಟರಾಜ್, ಪ್ರಜಾಪ್ರಗತಿ ಎಸ್.ನಾಗಣ್ಣ, ಪವರ್ ಟಿ.ವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ವಿಸ್ತಾರ ಟಿ.ವಿಯ ಧರ್ಮೇಶ್, ರಾಜ್ ಟಿವಿಯ ಅರವಿಂದ್ ಸಾಗರ್, ವಿಜಯ ಟೈಮ್ಸ್ ನ ವಿಜಯಲಕ್ಷ್ಮೀ ಶಿಬರೂರು, ಪ್ರಮುಖರಾದ ವಿನಯಗೌಡ, ಡಾ.ಅಂಜನಪ್ಪ, ವೈ.ಎನ್.ಶಂಕರ್ ಗೌಡ, ಎಸ್.ಕೆ.ಉಮೇಶ್, ಪ್ರದೀಪ್ ಈಶ್ವರ್, ಮೊದಲಾದವರು ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಭರಣ ವಹಿಸಿಕೊಳ್ಳಲಿದ್ದಾರೆ.
ಈ ಒಂದು ದಿನದ ಕಾರ್ಯಕ್ರಮದಲ್ಲಿ ಹಲವು ಗೋಷ್ಠಿಗಳನ್ನು ಏರ್ಪಡಿಸಿದ್ದು ಮಧ್ಯಾಹ್ನ 2 ಗಂಟೆಗೆ ಸಾಮಾಜಿಕ ಚಿಂತನೆ ಮತ್ತು ಹುಲಿಕಲ್ ಏರ್ಪಡಿಸಿರುವ ಗೋಷ್ಠಿಯಲ್ಲಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಪಾಧ್ಯಕ್ಷರಾದ ಡಾ.ಜಿ.ಎಸ್.ಶ್ರೀಧರ್ ಅವರು ಅಧ್ಯಕ್ಷತೆ ವಹಿಸಿಲಿದ್ದು, ವೇದಿಕೆಯಲ್ಲಿ ಪ್ರಧಾನ ಮಂತ್ರಿ ಕಚೇರಿಯ ಉಪಕಾರ್ಯದರ್ಶಿ ಡಾ.ಕಾರ್ತಿಕ್ ಹೆಗಡೆ ಕಟ್ಟಿ, ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿ.ರೂಪಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ.ಕೆ.ಎನ್.ಅನುರಾಧ, ವಿವಿಧ ಇಲಾಖೆಯ ಪ್ರಮುಖ ಅಧಿಕಾರಿಗಳಾದ ಗಂಗೂಬಾಯಿ ಮಾನಕ, ಕೆ.ಎ.ದಯಾನಂದ, ಡಾ.ಹೆಚ್.ನಟರಾಜ್, ಡಾ.ಸತೀಶ್ ಕುಮಾರ್ ಹೊಸಮನಿ, ಕಾಂತಾರ ಚಿತ್ರದ ನಾಯಕ ನಟಿ ಕುಮಾರಿ ಸಪ್ತಮಿ ಗೌಡ, ಜಿ.ಎಸ್.ರಾಜಶೇಖರಯ್ಯ, ಕೆ.ಜಿ.ರಾವ್, ಹಂಪಿಕೆಗೆ ರಾಜೇಂದ್ರ, ಆರ್.ಬಿಳೆಶಿವಾಲೆ, ಮೊದಲಾದವರು ಉಪಸ್ಥಿತರಿರುವರು.
ಸಂಜೆ 4ಗಂಟೆಗೆ ನಡೆಯುವ ಹುಲಿಹೆಜ್ಜೆ” ಅಭಿನಂದನ ಗ್ರಂಥದ ಸಂವಾದದಲ್ಲಿ ಕುವಿವಿ ಕುಲಪತಿಗಳಾದ ಪ್ರೋ.ಬಿ.ಪಿ ವೀರಭದ್ರಪ್ಪ ವಿಷಯ ಮಂಡಿಸಲಿದ್ದಾರೆ, ಮಾಜಿ ಸಚಿವರಾದ ಎಸ್.ಕೆ.ಕಾಂತಾ ಅಧ್ಯಕ್ಷತೆ ವಹಿಸುವರು, ಈ ಸಂದರ್ಭದಲ್ಲಿ, ಡಾ.ಸಿ.ಆರ್.ಚಂದ್ರಶೇಖರ್, ಸಾಹಿತಿ, ಬಿ.ಟಿ.ಲಿಲತಾ ನಾಯಕ್, ಡಾ.ಕೆ.ಷರೀಫಾ ಡಾ.ಮೈತ್ರಿಣಿ, ಗದಿಗೆಪ್ಪಗೌಡ, ದ.ರಾ.ಪುರೋಹಿ೮ ಕೆ.ವೆಂಕಟೇಶ್, ಡಾ.ಎಸ್.ಮಂಗಳಮೂರ್ತಿ, ತಿಪಟೂರು ಸಿ.ಶಿವಲಿಂಗಯ್ಯ, ಡಾ.ಹೆಚ್.ಎನ್.ತೇಜಯತಿನ್, ಕೆ.ಪಿ.ಲಕ್ಷ್ಮೀನಾರಾಯಣ, ಬಿ.ಎಂ.ಇರ್ಷಾದ್ ಉಪಸ್ಥಿತರಿರುವರು. ಅಹಮದ್, ಎಂ.ಕೆ.ಶ್ರೀನಿವಾಸರೆಡ್ಡಿ, ಕೆ.ಎನ್.ವೆಂಕಟೇಶ್, ಹಾಗೂ ಮೊದಲಾದವರು.
ಈ ದಿನ ಬೆಳಗ್ಗೆ 9.30ಕ್ಕೆ ಕುಮಾರಿ ಕೃತಿಕ, ತನುಶ್ರೀ, ದೀಪ್ತಿ ಸಂತೋಷ್, ಜಾನಪದ ಸೊಗಡು ರೇಣುಕಾ ಪ್ರಸಾದ್ ಮುಂತಾದವರು ಸುಗಮ ಸಂಗೀತಾ ಕಾರ್ಯಕ್ರಮವನ್ನು ನಡೆಸಿಕೊಡುವರು ಹಾಗೂ ಸಂಜೆ 6ಕ್ಕೆ ಇಂದುಮತಿ ಸಾಲಿಮಠ ಇವರಿಂದ ಹಾಸ್ಯಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಸಾಹಿತ್ಯಾಸಕ್ತರು, ಡಾ.ಹುಲಿಕಲ್ ನಟರಾಜ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ, ಹುಲಿಹೆಜ್ಜೆ ಗ್ರಂಥ ಸಂಪಾದಕ ವಿ.ಟಿ.ಸ್ವಾಮಿ, ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪ್ರಮುಖರಾದ ಡಾ.ಶ್ರೀರಾಮಚಂದ್ರ ಕೆ.ಜೆ.ರಾವ್, ಹಂಪಿಕೆರೆ ರಾಜೇಂದ್ರ, ಇರ್ಷಾದ್ ಅಹಮದ್, ಡಾ.ಆನಂದಕುಲಕರ್ಣಿ, ಬಿ.ಡಿ.ರವಿಕುಮಾರ್, ಬಿ.ಸುರೇಶ್, ಮೊದಲಾದವರು ಉಪಸ್ಥಿತರಿದ್ದರು.
City Today News – 9341997936