
ಜನವರಿ 4 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ “ಹುಲಿಕಲ್ ನಟರಾಜ್ ಅವರ ಕುರಿತಾದ “ಹುಲಿಹೆಜ್ಜೆ” ಅಭಿನಂದನ ಗ್ರಂಥ ಬಿಡುಗಡೆ ಕಾರ್ಯಕ್ರಮವು ಶ್ರೀ.ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮಿಯವರ ಸಾನಿದ್ಯದಲ್ಲಿ ನಡೆಯಿತು.
ಕಾರ್ಯಕ್ರಮದ ಉಧ್ಘಾಟಣೆಯನ್ನು
ಡಾ.ಎ.ಎಸ್.ಕಿರಣ್ ಕುಮಾರ್ , ಮಾಜಿ ಅಧ್ಯಕ್ಷರು, ಇಸ್ರೋ, ಭಾರತ ಸರ್ಕಾರ ಗೌರವ ಅಧ್ಯಕ್ಷರು, ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತು , ಮಾಡಿದರು.

ಉಧ್ಘಾಟನಾ ನುಡಿಯನ್ನು ಡಾ.ಎ.ಎಸ್.ಕಿರಣ್ ಕುಮಾರ್ ನುಡಿದರು. ಹಾಗೂ ಹುಲಿಕಲ್ ನಟರಾಜ್ 60ಕಿರುಚಿತ್ರ ಬಿಡುಗಡೆ ಮಾಡಲಾಯಿತು. ಡಾ.ಟಿ.ಎಸ್. ನಾಗಾಭರಣ, ನಿಕಟಪೂರ್ವ ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಟೀಸರ್ ಬಿಡುಗಡೆ ಮಾಡಿದರು.
ಮಾನ್ಯ, ಎನ್. ಸಂತೋಷ ಹೆಗ್ಡೆ, ಮಾಜಿ ಲೋಕಾಯುಕ್ತರು ಹುಲಿ ಹೆಜ್ಜೆ ಗ್ರಂಥ ಬಿಡುಗಡೆ ಮಾಡಿದರು. ಡಾ. ಕುಂ, ವೀರಭದ್ರಪ್ಪ, ಹೆಸರಾಂತ ಸಾಹಿತಿಗಳು ಗ್ರಂಥ ಕುರಿತು ನುಡಿದರು.
ಡಾ ಸಿ. ಸೋಮಶೇಖರ್ ಐ.ಎ.ಎಸ್, ಅಧ್ಯಕ್ಷರು ಕರ್ನಾಟಕಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ , ರವರಿಂದ ಹುಲಿಕಲ್ ನಟರಾಜ್ ಅಭಿನಚಿದನೆ ಮತ್ತು ಅನೇಕ ಗಣ್ಣ್ಯರು ಪಾಲ್ಗೊಂಡು ಕಾರ್ಯಕ್ರಮದ ರಂಗೇರಿಸಿದರು.

ಹುಲಿಹೆಜ್ಜೆ ಗ್ರಂಥ ಸಂಪಾದಕ ವಿ.ಟಿ.ಸ್ವಾಮಿ, ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪ್ರಮುಖರಾದ ಡಾ.ಶ್ರೀರಾಮಚಂದ್ರ ಕೆ.ಜೆ.ರಾವ್, ಹಂಪಿಕೆರೆ ರಾಜೇಂದ್ರ, ಇರ್ಷಾದ್ ಅಹಮದ್, ಡಾ.ಆನಂದಕುಲಕರ್ಣಿ, ಬಿ.ಡಿ.ರವಿಕುಮಾರ್, ಬಿ.ಸುರೇಶ್, ಮೊದಲಾದವರು ಮತ್ತು ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಸಾಹಿತ್ಯಾಸಕ್ತರು, ಡಾ.ಹುಲಿಕಲ್ ನಟರಾಜ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
City Today News – 9341997936